ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ
ಪೊಲೀಸ್ ಠಾಣೆ ಗುನ್ನೆ ನಂ. 205/2015 ಕಲಂ. 87 Karntaka Police Act.
ದಿನಾಂಕ 14-10-2015 ರಂದು ಸಂಜೆ 05-00 ಗಂಟೆ ಸುಮಾರಿಗೆ ಮುನಿರಾಬಾದ ಠಾಣಾ ವ್ಯಾಪ್ತಿಯ
ಹುಲಗಿ ಸೀಮಾದ ಶುಗರ ಫ್ಯಾಕ್ಟರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ ಅಂದರ ಬಹರ ಜೂಜಾಟ
ನಡೆದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ. ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಹಿಡಿದು 6 ಜನ ಆರೋಪಿತರು
ಸಿಕ್ಕಿದು ಅವರಿಂದ 5560 ರೂ.ನಗದುಹಣ ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತು ಮಾಡಿ ಮೂಲ ಪಂಚನಮೆ
ಹಾಗೂ ಪಿರ್ಯದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2) ಕೊಪ್ಪಳ ನಗರ ಪೊಲೀಸ್
ಠಾಣೆ ಗುನ್ನೆ ನಂ. 197/2015 ಕಲಂ. 498(ಎ), 323, 504, 506, ಸಹಿತ 34 ಐ.ಪಿ.ಸಿ. ಮತ್ತು 3, 4 & 6 ವರದಕ್ಷಿಣೆ ನಿಷೇಧ ಕಾಯ್ದೆ:.
ದಿ: 14-10-2015 ರಂದು ರಾತ್ರಿ 10-00 ಗಂಟೆಗೆ ಸುಮಾರಿಗೆ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾಧಿ ಎಲ್.ಟಿ. ನಂ: 1417/15 ದಿ: 18-09-15 ನೇದ್ದರಲ್ಲಿಯ ನಮೂದಿಸಿದ ಸಾರಾಂಶವೇನೆಂದರೆ, ಫಿರ್ಯಾದಿದಾರಳಾಧ ಶ್ರೀಮತಿ ಶ್ವೇತಾ ಇವಳು ದಿ: 16-05-2010 ರಂದು ಉಮೇಶ ರೆಡ್ಡಿ ನೇದ್ದವರನ್ನು ಮದುವೆಯಾಗಿದ್ದು, ಮದುವೆಯಾದಾಗಿನಿಂದ ಆರೋಪಿ ಹಾಗೂ ತಿಮ್ಮಾರೆಡ್ಡಿ, ರೇಣುಕಾ ರೆಡ್ಡಿ ನೇದ್ದವರು ಫಿರ್ಯಾದಿದಾರಳಿಗೆ ವರದಕ್ಷಿಣೆ ಹಣ ತರುವಂತೆ ಮತ್ತು ತನಗೆ ನೌಕರಿ ಕೊಡಿಸಿ ಮಗಳ ಹೆಸರಿನಲ್ಲಿ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುವಂತೆ ಒತ್ತಾಯಿಸುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಕೈಯಿಂದ ಹೊಡಿ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಅದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 253/2015 ಕಲಂ. 279, 338, 304(ಎ) ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:14-10—2015 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರಾಧ ಶರಣಪ್ಪ ಒಕ್ಕಲಿಗೇರ. ಸಾ: ಕಲ್ಲತಾವರಗೇರಾ ತಾ:ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೇ, ಇಂದು ದಿ:14-10-15 ರಂದು
ಮಧ್ಯಾಹ್ನ ತಮ್ಮ ಮನೆಯಲ್ಲಿ ತನ್ನ ತಾಯಿ ಯ ತಿಥಿ ಕಾರ್ಯಕ್ರಮ ಇದ್ದುದರಿಂದ ಫಿರ್ಯಾದಿದಾರರು
ತಮ್ಮ ಊರಿಂದ ಗಿಣಿಗೇರಿಗೆ ಹೋಗಿ ತಮ್ಮ ಟಿವಿಎಸ್ ಮೋಟಾರ ಸೈಕಲ್ ನಂ:
ಕೆಎ-25/ವಿ-7571 ನೇದ್ದರ ಮೇಲೆ ತಮ್ಮ ಅತ್ತೆ ಕಸ್ತೂರೆಮ್ಮ ಮತ್ತು ಮಾವ ಗಂಗಾಧರ ಇವರಿಗೆ
ಗಿಣಿಗೇರಿಯಿಂದ ಕೂಡ್ರಿಸಿಕೊಂಡು ತಮ್ಮೂರಿಗೆ ಅಂತಾ ಕರೆದುಕೊಂಡು ಹೋಗುವಾಗ ಗಿಣಿಗೇರಿ ದಾಟಿ
ಸುಮಾರು 1 ಕಿ.ಮೀ ಅಂತರದಲ್ಲಿ ತನ್ನ ಮಾವ ಮೂತ್ರವಿಸರ್ಜನೆ ಮಾಡುವುದಾಗಿ ಹೇಳಿದ್ದರಿಂದ
ಫಿರ್ಯಾಧಿಯು ತನ್ನ ಗಾಢಿಯನ್ನು ರಸ್ತೆಯ ಎಡಬದಿಗೆ ನಿಲ್ಲಿಸಿ ಮೂತ್ರವಿಸರ್ಜನೆ ಮಾಡಿ ಗಾಡಿಯ
ಹತ್ತಿರ ಬಂದಾಗ ಅದೇವೇಳೆಗೆ ಭೀಮನೂರ ಕಡೆಯಿಂದ ಟ್ರ್ಯಾಕ್ಟರ್ ಇಂಜನ್ ನಂ: ಜಿ44059 ಹಾಗೂ
ಟ್ರೇಲರ್ ಚೆಸ್ಸಿ ನಂ: 05 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರಿಯನ್ನು
ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ
ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ರಾಂಗ್ ಸೈಡ ಬಂದು
ಫಿರ್ಯಾದಿಯ ಮೋಟರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ಅದರ ಚಾಲಕನು ವಾಹನ ಬಿಟ್ಟು ಓಡಿ
ಹೋಗಿದ್ದು ಆಗ ಫಿರ್ಯಾದಿಯ ಮಾವ ಗಂಗಾಧರನಿಗೆ ತಲೆಗೆ, ಮುಖಕ್ಕೆ, ಮತ್ತು
ಬಲಕೈಗೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ
ಕಸ್ತೂರೆಮ್ಮ ಇವರಿಗೆ ಸಹ ಬಾಯಿಗೆ ಭಾರಿ
ಪೆಟ್ಟಾಗಿ ಹಲ್ಲುಗಳು ಮುರಿದಿರುತ್ತವೆ. ಅಲ್ಲಲ್ಲಿ ಭಾರಿ ಒಳಪೆಟ್ಟಾಗಿದ್ದು, ಫಿರ್ಯಾದಿದಾರನು
ಗಾಯಗೊಂಡಿದ್ದ ಇಬ್ಬರಿಗೆ ಗಿಣಿಗೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅಲ್ಲಿಂದ
ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಸೇರಿಸಿದ್ದು, ಜಿಲ್ಲಾ ಆಸ್ಪತ್ರೆಯ ವೈದ್ಯರು
ಹೆಚ್ಚಿನ ಉಪಚಾರಕ್ಕೆ ಗಂಗಾಧರನಿಗೆ ಕಿಮ್ಸ ಹುಬ್ಬಳ್ಳಿಗೆ ರೆಫರ ಮಾಢಿದ್ದರಿಂದ ಆತನಿಗೆ
ಹುಬ್ಬಳ್ಳಿಗೆ ಕರೆದುಕೊಂಡು ಹೋಗುವಾಗ ಮಾರ್ಗದ ಲಕ್ಕುಂಡಿ ಹತ್ತಿರ ರಾತ್ರಿ 8-00 ಗಂಟೆಗೆ
ಮೃತಪಟ್ಟಿದ್ದಾನೆ. ಮೃತನ ಶವವನ್ನ ಅದೇ ಅಂಬುಲೆನ್ಸ ದಲ್ಲಿ ವಾಪಾಸ್ ಕೊಪ್ಪಳ ಜಿಲ್ಲಾ ಸರಕಾರಿ
ಆಸ್ಪತ್ರೆಗೆ ತಂದು ಇಟ್ಟಿದ್ದು ಇರುತ್ತದೆ. ಕಾರಣ ಸದರಿ ಟ್ರ್ಯಾಕ್ಟರ್ ಚಾಲಕನ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಮೇಲ್ಕಂಡಂತೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment