ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್
ಠಾಣೆ ಗುನ್ನೆ ನಂ 211/2015 ಕಲಂ. 87 Karnataka Police Act.
ದಿನಾಂಕ. 17-10-2015 ರಂದು 04-40 ಪಿ.ಎಂ.ಕ್ಕೆ ಆಗಳಕೇರ ಗ್ರಾಮದ ದುರುಗಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ
ಜೂಜಾಟ ಆಡುತ್ತಿರುವಾಗ ಕಾಲಕ್ಕೆ ಶ್ರೀ. ಜಯಪ್ರಕಾಶ
ಪಿ.ಎಸ್.ಐ. ಮುನಿರಾಬಾದ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ
ಮಾಢಿ ಇಸ್ಪೇಟ ಜೂಜಾಟ ಆಡುತ್ತಿರುವ ಆರೋಪಿತರಿಂದ ಒಂದು ಬರಕಾ, 52 ಇಸ್ಪೇಟ ಎಲೆಗಳು ಮತ್ತು
ಜೂಜಾಟದ ನಗದು ಹಣ 12500=00 ರೂ. ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ
ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2)
ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 219/2015
ಕಲಂ. 279, 337, 338, 304(ಎ)
ಐ.ಪಿ.ಸಿ:.
ದಿನಾಂಕಃ-17-10-2015 ರಂದು ಮದ್ಯಾಹ್ನ 14-15 ಗಂಟೆಗೆ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ
ಬಂದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದವರ ಬಗ್ಗೆ ವಿಚಾರ ಮಾಡಿ ನಂತರ
ಪ್ರತ್ಯೇಕ್ಷ ಸಾಕ್ಷಿ ಸಂಕಲ್ ಲಾಲ್ ತಂದಿ ಗಣೇಶ ಮಲ್ಜಿ ವಯಾ-30, ಸಾ. ಕಾರಟಗಿ ರವರು ಒಂದು ಪಿರ್ಯಾದಿಯನ್ನು
ಬರೆಯಿಸಿ ಕೊಟ್ಟಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ. ಪಿರ್ಯಾದಿದಾರರು ಕಾರಟಗಿಯ
ನವಲಿ ರೋಡಿನ ಪಕ್ಕದಲ್ಲಿ ಗುಣೇಶ ಟೇಕ್ಸ್ ಟೈಲ್ಸ್ ಅಂತಾ ಅಂಗಡಿ ಮಾಡಿಕೊಂಡಿದ್ದು ಸದರಿಯವರ ಅಂಗಡಿಗೆ
ಬಳ್ಳಾರಿಯ ಖಾದರ ಭಾಷ ತಂದಿ ಜಲೀಲ್ ಸಾಬ ಈತನು ಇಂದು ದಿನಾಂಕ-17-10-2015 ರಂದು ಬೆಳಿಗ್ಗೆ ಬಳ್ಳಾರಿಯಿಂದ
ಬಟ್ಟೆ ತೆಗೆದುಕೊಂಡು ಬಂದು ಪಿರ್ಯಾದಿದಾರರ ಅಂಗಡಿಗೆ ಒಪ್ಪಿಸಿ ವಾಪಾಸ್ ಬಳ್ಳಾರಿಗೆ ಹೋಗಲೆಂದು ನವಲಿ
ರಸ್ತೆಯಲ್ಲಿ ಕರಿಯಪ್ಪ ತಾತನ ಗುಡಿಯ ಹತ್ತಿರ ನಡೆದುಕೊಂಡು ರಸ್ತೆಯ ಎಡಭಾಗದಲ್ಲಿ ಹೋರಟಿದ್ದಾಗ್ಗೆ
ಆರೋಪಿ ಬಸವರಾಜ ತಂದಿ ರುದ್ರಪ್ಪ ಮಡಿವಾಳರ ಈತನು ತನ್ನ ಟಿ.ವಿ.ಎಸ್. ವಿಕ್ಟರ್ ಮೋಟಾರ್ ಸೈಕಲ್ ನಂ
ಕೆ.ಎ-37 ಜೆ-6535 ನೆದ್ದನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ
ನಡದುಕೊಂಡು ಹೋರಟಿದ್ದ ಖಾದರ ಭಾಷಾ ಈತನಿಗೆ ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಖಾದರಬಾಷಾ ಈತನಿಗೆ
ಗಂಭೀರ ಸ್ವರೂಪದ ಗಾಯಗಳಾಗಿರುತ್ತವೆ ಹಾಗೂ ಮೋಟಾರ್ ಸೈಕಲ್ ಚಾಲಕ ಬಸವರಾಜನಿಗೂ ಸಹ ಸಾಧಾ ಸ್ವರೂಪದ
ಗಾಯಗಳಾಗಿರುತ್ತವೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ ಠಾಣೆಗೆ ಸಾಯಂಕಾಲ
16-00 ಕ್ಕೆ ಬಂದು ಪಿರ್ಯಾದಿಯ ಸಾರಾಂಶದ ಮೇಲಿಂದ ಕಾರಟಗಿ ಪೊಲೀಸ ಠಾಣಾ ಗುನ್ನೆ ನಂಬರ್- 219
/ 2015 ಕಲಂ- 279,
337, 338 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
ನಂತರ ಸದರಿ ಪ್ರ.ವ.ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದು ಇರುತ್ತದೆ. ನಂತರ ಸದರಿ ಪ್ರಕರಣದಲ್ಲಿ ತೀವ್ರವಾಗಿ
ಗಾಯಗೊಂಡಿದ್ದ ಖಾದರ ಭಾಷಾ ತಂದಿ ಜಲೀಲ್ ಸಾಬ ಸಾ. ಬಳ್ಳಾರಿ ಈತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು
ಬಳ್ಳಾರಿಯ ವಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಇತ್ತು ನಂತರ ಇಂದು ದಿನಾಂಕ-17-10-2015 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ
ಬಳ್ಳಾರಿಯ ಕಾಂಟೋನ್ಮೆಂಟ್ ಓ.ಪಿ ಠಾಣೆಯಿಂದ, ಸದರಿ ಪ್ರರಕಣದಲ್ಲಿ ಗಾಯಗೊಂಡಿದ್ದ ಖಾದರ
ಭಾಷಾ ತಂದಿ ಜಲೀಲ್ ಸಾಬ ಸಾ. ಬಳ್ಳಾರಿ ಈತನು ಬಳ್ಳಾರಿಯ ವೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾಗ್ಗೆ ಗುಣಮುಖನಾಗದೆ ಇಂದು ದಿನಾಂಕ-17-10-2015 ರಂದು ಸಾಯಂಕಾಲ 5-30 ಗಂಟೆಯ ಅವಧಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಪೋನ್ ಮೂಲಕ
ಮಾಹಿತಿ ಕಳುಹಿಸಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 315/2015
ಕಲಂ. 279, 338 ಐ.ಪಿ.ಸಿ.
ದಿನಾಂಕ:- 17-10-2015
ರಂದು ರಾತ್ರಿ 7:30 ಗಂಟೆಗೆ ಗಂಗಾವತಿ ಓಂ
ಸಾಯಿ ಆರ್ಥೋಪೆಡಿಕ್ & ಟ್ರಾಮ ಆಸ್ಪತ್ರೆಯಿಂದ ಅಪಘಾತದ ಬಗ್ಗೆ
ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ಮಂಜುನಾಥ ತಂದೆ ಗೋಪಾಲ, ವಯಸ್ಸು 29
ವರ್ಷ, ಜಾತಿ: ಮಾದಿಗ ಉ: ಮೆಕಾನಿಕ್
ಸಾ: ಚಿಕ್ಕ ರಾಂಪೂರು ತಾ: ಗಂಗಾವತಿ ಇವರು ತಮ್ಮ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಸಂಗಾಪೂರು ಗ್ರಾಮದಲ್ಲಿ ಮೋಟಾರ ಸೈಕಲ್ ರಿಪೇರಿ
ಮಾಡುವ ಗ್ಯಾರೇಜ್ ಇಟ್ಟುಕೊಂಡು ಮೆಕಾನಿಕ್ ಕೆಲಸ ಮಾಡಿಕೊಂಡಿದ್ದು, ಇಂದು ದಿನಾಂಕ:- 17-10-2015 ರಂದು ಮಧ್ಯಾಹ್ನ 2:00 ಗಂಟೆಗೆ ಆನಂದ ಎಂಬುವವರು ತಮ್ಮ ಬಜಾಜ್ XCD
ಮೋಟಾರ ಸೈಕಲ್ ನಂ: ಕೆ.ಎ-37/ ಕ್ಯೂ-6833
ನೇದ್ದನ್ನು ರಿಪೇರಿ ಮಾಡುವ ಕುರಿತು ನನ್ನ ಹತ್ತಿರ ಬಿಟ್ಟು
ಹೋಗಿದ್ದರು. ಅದಕ್ಕೆ ಬೇಕಾಗುವ ಸಾಮಾನುಗಳನ್ನು ತೆಗೆದುಕೊಂಡು ಬರಲು ಅದೇ ಮೋಟಾರ ಸೈಕಲ್ ಮೇಲೆ ನಾನು
ಮತ್ತು ನನ್ನ ಸ್ನೇಹಿತ ವಡಿವೇಲು ತಂದೆ ಸೆಲ್ವರಾಜ, ವಯಸ್ಸು 22
ವರ್ಷ, ಜಾತಿ: ಮಾದಿಗ ಉ: ಕೂಲಿ ಕೆಲಸ
ಸಾ: ಚಿಕ್ಕ ರಾಂಪೂರು ಇಬ್ಬರೂ ಕೂಡಿಕೊಂಡು ಸಂಗಾಪೂರದಿಂದ ಗಂಗಾವತಿಗೆ ಬಂದು ಸಾಮಾನುಗಳನ್ನು
ತೆಗೆದುಕೊಂಡು ವಾಪಸ್ ಸಂಗಾಪೂರಕ್ಕೆ ಹೋಗುತ್ತಿರುವಾಗ ವಡಿವೇಲು ಈತನು ಮೋಟಾರ ಸೈಕಲ್
ನಡೆಯಿಸುತ್ತಿದ್ದು, ನಾನು ಹಿಂಭಾಗದಲ್ಲಿ ಕುಳಿತದ್ದೆನು. ಸಂಜೆ 5:00 ಗಂಟೆಯ ಸುಮಾರಿಗೆ ಸಂಗಾಪೂರು
ಸೀಮಾದಲ್ಲಿ ಹೋಗುತ್ತಿರುವಾಗ ವಡಿವೇಲು ಈತನು ಮೋಟಾರ ಸೈಕಲ್ ನ್ನು ಅತೀ ಜೋರಾಗಿ ಮತ್ತು ತೀವ್ರ
ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಹೊರಟಿದ್ದರಿಂದ ರಸ್ತೆಯಲ್ಲಿ ಅಡ್ಡವಾಗಿ ಎಮ್ಮೆಗಳು ಬಂದಿದ್ದರಿಂದ ವೇಗ ನಿಯಂತ್ರಿಸಲು ಆಗದೇ
ಸ್ಕಿಡ್ ಆಗಿ ಬಿದ್ದಿದ್ದು, ಇದರಿಂದ ನನ್ನ ಎಡಗಾಲ ಮೊಣಕಾಲ
ಚಿಪ್ಪಿಗೆ ತೀವ್ರ ಗಾಯವಾಗಿ, ಎಡಭುಜಕ್ಕೆ ಒಳಪೆಟ್ಟಾಯಿತು. ವಡಿವೇಲಿಗೆ ಸಣ್ಣ ಪುಟ್ಟ ಗಾಯವಾದವು. ನಂತರ ನನ್ನ ಸ್ನೇಹಿತ ನಾಗರಾಜನಿಗೆ ಫೋನ್ ಮಾಡಿ ಕರೆಯಿಸಿ ಯಾವುದೋ
ಒಂದು ಆಟೋದಲ್ಲಿ ನನ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು
ಮಾಡಿರುತ್ತಾನೆ. ಕಾರಣ ಈ ಅಪಘಾತ ಮಾಡಿದ
ಮೋ.ಸೈ. ಚಾಲಕ ವಡಿವೇಲು ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಮುಂತಾಗಿ
ನೀಡಿದ ಹೇಳಿಕೆ ಪಡೆದುಕೊಂಡು ರಾತ್ರಿ 8:15 ಗಂಟೆಗೆ ಠಾಣೆಗೆ ವಾಪಸ್ ಬಂದು
ಹೇಳಿಕೆ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 315/2015 ಕಲಂ 279,
338 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
0 comments:
Post a Comment