Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, October 2, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 189/2015  ಕಲಂ 78(3) Karnataka Police Act:.
ದಿ: 01-10-2015 ರಂದು 6-30 ಪಿ.ಎಂ. ಕ್ಕೆ ಫಿರ್ಯಾದಿದಾರರಾದ ಶ್ರೀ ಸತೀಶ ಪಾಟೀಲ ಪಿ.ಐ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿ: 01-10-2015 ರಂದು 5-00 ಪಿ.ಎಂ. ಕ್ಕೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಭಾಗ್ಯನಗರದ  ಪಾನಘಂಟಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೋಗಿ, ನಮೂದು ಆರೋಪಿತರು ಕೂಡಿಕೊಂಡು ಜನರಿಗೆ 1=00 ರೂಪಾಯಿಗೆ 80=00 ರೂಪಾಯಿ ಯಾರ ಅದೃಷ್ಟ ಹಚ್ಚಿರಿ ಅಂತಾ ಕೂಗುತ್ತಾ ಓ.ಸಿ. ಮಟಕಾ ನಂಬರ್ ಬರೆದುಕೊಡುತ್ತಿದ್ದವರ ಮೇಲೆ ದಾಳಿ ಮಾಡಿ ಹಿಡಿದುಕೊಂಡಿದ್ದು, ಸದರಿ ಆರೋಪಿತರಿಂದ 1] 2100=00 ಮಟಕಾ ಜೂಜಾಟದ ನಗದು ಹಣ, 2] ಒಂದು ಮಟಕಾ ಪಟ್ಟಿ 3] ಒಂದು ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು, ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸ್ವೀಕೃತ ಮಾಡಿಕೊಂಡು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 7-30 ಪಿ.ಎಂ. ಕ್ಕೆ ಕೊಪ್ಪಳ ನಗರ ಠಾಣೆ ಗುನ್ನೆ ನಂ: 189/2015 ಕಲಂ: 78 [3] ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 97/2015  ಕಲಂ 78(3) Karnataka Police Act:.
ದಿನಾಂಕ: 01-10-2015 ರಂದು ಸಂಜೆ 5-30 ಗಂಟೆ ಸುಮಾರಿಗೆ ಶ್ರೀ. ಶಂಕರಗೌಡ ಎ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ವಾಪಸ್ ಠಾಣೆಗೆ ಬಂದು ಒಂದು ವರದಿ ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿತನನ್ನು ಮುಂದಿನ ಕ್ರಮ ಕುರಿತು ಒಪ್ಪಿಸಿದ್ದು, ಸದರಿ ವರದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿ ನೋಡಲಾಗಿ, ಅದರ ಸಾರಾಂಶವೆನೆಂದರೆ, ಇಂದು ದಿನಾಂಕ: 01-10-2015 ರಂದು ಮದ್ಯಾಹ್ನ 3-45 ಗಂಟೆಗೆ ಆರೋಪಿತನಾದ ಶಿವಲಿಂಗಯ್ಯ ತಂದೆ ಸಿದ್ದಯ್ಯ ಮಠದ ವಯ 25 ವರ್ಷ ಜಾ: ಜಂಗಮ ಉ: ಕೂಲಿ ಕೆಲಸ ಸಾ: ಬಿಸರಳ್ಳಿ ತಾ:ಜಿ: ಕೊಪ್ಪಳ ಇವನು ಬಿಸರಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆಯಾದ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ ಶ್ರೀ. ಶಮಕರಗೌಡ ಎ.ಎಸ್.ಐ. ಅಳವಂಡಿರವರು ತಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 1,250-00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ವಾಪಸ್ ಠಾಣೆಗೆ ಬಂದು ಆರೋಪಿನ ಮೇಲೆ ಕ್ರಮ ಕುರಿತು ಹಾಜರಪಡಿಸಿದ್ದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಬೇವೂರ ಪೊಲೀಸ್ ಠಾಣೆ ಗುನ್ನೆ.ನಂ. 67/2015  ಕಲಂ 279, 337, 304(ಎ) ಐ.ಪಿ.ಸಿ:.
ದಿನಾಂಕ : 08.09.2015 ರಂದು ಬೆಳಗಿನ ಜಾವ 4 :30 ಗಂಟೆ ಸುಮಾರಿಗೆ  ಹೊಸಪೇಟ ಕುಷ್ಟಗಿ ಎನ್ ಹೆಚ್ 50 ರಸ್ತೆಯ ಮೇಲೆ ಬರುವ ಗುನ್ನಾಳ ಸೀಮಾದಲ್ಲಿ ಆರೋಪಿತನು ತಾನು ನಡೆಸುತ್ತಿದ್ದ ಮಹೆಂದ್ರ ಪಿಕಪ್ ವಾಹನ ಕೆಎ 10/1776 ನೆದ್ದನ್ನು ಹೊಸಪೇಟ ಕಡೆಯಿಂದ ಕುಷ್ಟಗಿ ಕಡೆಗೆ ನಡೆಸಿಕೊಂಡು ಹೋಗುವ ಕಾಲಕ್ಕೆ ಆಕಸ್ಮೀಕವಾಗಿ ವಾಹನದ ಮುಂದಿನ ಟಯರ್ ಬರ್ಸ್ಟ ಆಗಿದ್ದರಿಂದ ವಾಹನವು ನಿಂತ್ರಣವಾಗದೆ ರಸ್ತೆಯ ಬಲಕ್ಕೆ ಜಗ್ಗಿ ಡಿವೈಡರ್ ಗೆ ಟಕ್ಕರ ಆಗಿ ವಾಹನವು ಎಡ ಮಗ್ಗಲಾಗಿ ಪಲ್ಟಿಯಾಗಿ ಬಿದ್ದರಿಂದ ವಾಹನದಲ್ಲಿದ್ದ ಪಿರ್ಯಾದಿ ಮುನವರ ಪಾಷಾ, ವಾಹನದ ಚಾಲಕ ಸೈಯದ್ ಅಬ್ದುಲ್  ಮೋಯಿಜ್ ಹಾಗೂ ನಾಗರಾಜ  ಇವರಿಗೆ ಸಾದಾ ಹಾಗೂ ಭಾರಿ ರಕ್ತಗಾಯ, ಒಳಪೆಟ್ಟುಗಳಾಗಿದ್ದು ಇರುತ್ತದೆ. ಸದರಿಯವರೆಲ್ಲರೂ ಚಿಕಿತ್ಸೆಗಾಗಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅಂದೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಹೋಗಿ ಚಿಕತ್ಸೆ ಪಡೆದಿದ್ದು ಇರುತ್ತದೆ. ಸದರಿ ಗಾಯಾಳು ಪೈಕಿ ನಾಗರಾಜ ಅಮವಾಸ್ಯೆ ಇವನು ಕೆ,ಆರ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಸದರಿಯವನು ಇಲ್ಲಿ 3-4 ದಿನ ಚಿಕಿತ್ಸೆ ಪಡೆದುಕೊಂಡಿದ್ದು ಇವನ ಸ್ಥೀತಿ ಗಂಭೀರವಾಗಿರುತ್ತದೆ ಅಂತಾ ವೈದ್ಯರು ತಿಳಿಸಿದ್ದರಿಂದ ಸದರಿ ಭಾರಿ ಗಾಯಗೊಂಡಿದ್ದ ನಾಗರಾಜ ಇವನನ್ನು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಆಗುವದಿಲ್ಲಾ ಅಂತಾ ತಿಳಿದು ಸದರಿಯವನನ್ನು ದಿನಾಂಕ : 12.09.2015 ರಂದು ಆಸ್ಪತ್ರೆಯಿಂದ ಡಿಸಚಾರ್ಜ ಮಾಡಿಸಿಕೊಂಡು ಅಂಬುಲೇನ್ಸದಲ್ಲಿ ಪುನಃ ಕೆ,ಆರ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕಾಲಕ್ಕೆ ರಸ್ತೆಯ ಮದ್ಯದಲ್ಲಿ ಮದ್ಯಾಹ್ನ  3:00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಸದರಿಯವನ ಮೃತ ದೇಹವನ್ನು ಮೈಸೂರಿನ ಎನ್ ಆರ್ ಮೊಹಲ್ಲಾ ರುದ್ರಭೂಮಿಯಲ್ಲಿ ಹೂತು ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿ ಪಿರ್ಯಾದಿ ಸಾರಾಂಶಧ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4) ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 101/15 ಕಲಂ: 143, 147, 148, 323, 324, 354(ಎ), 504, 506 ಸಹಿತ 149 ಐ.ಪಿ.ಸಿ:.
ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಹಾಜರ ಪಡಿಸಿದ್ದರ ಸಾರಾಂಸವೇನೆಂದರೆ. ಫಿರ್ಯಾದಿಯ ಮಗನು ಈ ಹಿಂದೆ ಗಣೇಶನ ಹಬ್ಬದಲ್ಲಿ ಹುಡಗರು ಸಂಗಡ ಬಾಯಿಮಾಡಿದಾಗ ತಿಳಿಹೇಳಿದ್ದು ಆದರೆ ಆರೋಪಿ ನಂ: 1 ರವರು ವಿನಾಃಕಾರಣ ಜಗಳ ತೆಗೆದು ವೈಶ್ಯಮ್ಯ ಬೆಳಿಸಿದ್ದು ನಂತರ ಇಂದು ಫಿರ್ಯಾದಿ ಮುಂಜಾನೆ 10-00 ಗಂಟೆಗೆ ಚಹದ ಅಂಗಡಿಗಡ ಚಹಕುಡಿಯಲು ಹೋದಾಗ ಅಲ್ಲಿ ಚಹದ ಅಂಗಡಿಯಲ್ಲಿ ಕುಳಿತ ಆರೋಪಿ 1 ಈತನು ಫಿರ್ಯದಿ ಸಂಗಡ ಜಗಳ ತೆಗೆದು ಅವಾಚ್ಯವಾಗಿ ಬೈದಿದ್ದು ಆಗ ಆರೊಪಿ 2 ರಿಂದ 5 ರವರು ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ನಂತರ ಫಿರ್ಯದಿ ಮನೆಗೆ ಹೊಗುವಾಗ ಆತನ ಮನೆಯವರು ಎದುರಿಗೆ ಬಂದಾಗ ಪುನಃ ಆರೋಪಿ 1 ರಿಂದ 6 ರವರು ಕೈಯಲ್ಲಿ ಕಟ್ಟಿಗೆ ಬಡಿಗೆಗಳನ್ನು ಹಿಡಿದುಕೊಂಡು ಹೊಗಿ ಫಿರ್ಯದಿಯನ್ನು ಹಾಗೂ ಅವರ ಮನೆಯವರನ್ನು ಕಟ್ಟಿಗೆ ಬಡಿಗೆ ಯಿಂದ ಹಾಗೂ ಕೈಯಿಂದ ಹೊಡೆದು ಅವಾಚ್ಯ ಬೈದಾಡಿ ಜೀವದ ಬೆದರಿಕೆ ಹಾಕಿ ಫಿರ್ಯದಿಯ ಹೆಂಡತಿಯ ಸೀರೆ ಸೆರಗು ಹಿಡುದ ಎಳೆದಾಡಿ ಅವಮಾನ ಮಾಡಿದ್ದು ಇರುತ್ತದೆ ಅಂತಾ ಫಿರ್ಯಾದಿ ಇರುತ್ತದೆ.
5) ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 102/15 ಕಲಂ: 143, 147, 148, 141, 323, 324, 355 ಸಹಿತ 149 ಐ.ಪಿ.ಸಿ:.
ದಿನಾಂಕ: 01-010-2015 ರಂದು ಸಾಯಂಕಾಲ 17-30 ಗಂಟೆಗೆ ಠಾಣೆಗೆ ಹಾಜರಾಗಿ ಲೀಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ದಿನಾಂಕ: 29-009-2015 ರಂದು ತಮ್ಮೂರಲ್ಲಿಯ ಶಿವಮೂರ್ತೆಪ್ಪ ಪುಜಾರ ರವರ ಚಹದ ಅಗಡಿಯಲ್ಲಿ ಚಹಕುಡಿಯುತ್ತಿದ್ದಾಗ  ರೋಪಿ ನಂ: 1 ರಿಂದ 8 ರವರಗಿನವರು. ಅಕ್ರಮ ಕೂಟ ರಚಿಸಿಕೊಂಡು ಬಂದು ಅದರಲ್ಲಿ ಆರೋಪಿ ಶಿವಪ್ಪ ಈತನು ತನ್ನ ಕೈಯಲ್ಲಿ ಕಬ್ಬಿಣದ ರಾಡು ಹಿಡಿದುಕೊಂಡು ಬಂದು ಮಲ್ಲಪ್ಪನಿಗೆ ಹೊಡೆದು ಗಾಯಮಾಡಿದನು ಮತ್ತು ಆರೋಪಿ ಈರಪ್ಪ, ಹೊನ್ನಪ್ಪ, ರಂಗಪ್ಪ, ವರು ಬಡಿಗೆಯಿಂದ ಯಲ್ಲಪ್ಪ ತನಿಗೆ ಬಡದು ಗಾಯ ಮಾಡಿದರು. ಶಾಂತವ್ವ, ಪಕೀರವ್ವ, ಹನಮವ್ವ, ಸಾವಿತ್ರವ್ವ ರವರು ಸೇರಿ ಫಿರ್ಯಾದಿಗೆ ಚಪ್ಪಲಿಯಿಂದ ಕೈಯಿಂದ ಹೊಡೆದು ಹಾಗೂ ಕೆಳಗೆ ಕೆಡವಿ, ಕಾಲಿನಿಂದ ಒದ್ದು ದುಖಃಪಾತ ಗೊಳಿಸಿದ್ದು ಇರುತ್ತದೆ ಅಂತಾ ಫಿರ್ಯಾದಿ ಇರುತ್ತದೆ.

0 comments:

 
Will Smith Visitors
Since 01/02/2008