ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್
ಠಾಣೆ ಗುನ್ನೆ ನಂ. 204/2015 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 09-10-2015 ರಂದು ಸಾಯಂಕಾಲ 07-00 ಗಂಟಿಯಿಂದ 07-30 ಗಂಟೆ ಅವಧಿಯೊಳಗೆ
ಫಿರ್ಯಾದಿದಾರರ ಅಳಿಯ ಮಂಜಪ್ಪನು ಗುಡದಳ್ಳಿ ಗ್ರಾಮದಲ್ಲಿ ಇರುವಾಗ ಕೊಪ್ಪಳ ಗಂಗಾವತಿ ರಸ್ತೆಯ
ಮೇಲೆ ಯಾವುದೋ ವಾಹನ ಚಾಲಕನು ಮಂಜಪ್ಪನಿಗೆ ಅಪಘಾತ ಮಾಡಿ ಹೋಗಿದ್ದರಿಂದ ಮಂಜಪ್ಪನ ಎಡ ಬುಜಕ್ಕೆ
ಸೊಂಟಕ್ಕೆ ಗಾಯಗಳಾಗಿ ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 246/2015 ಕಲಂ 279 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿ-09.10.2015
ರಂದು 12.45 ಪಿ.ಎಂ ಕ್ಕೆ
ಫಿರ್ಯಾದಿದಾರರಾದ ಶ್ರೀ ಹುಚ್ಚಪ್ಪಯ್ಯ ತಂದೆ ರಾಮಸ್ವಾಮಿ ದಿಗಂಬರಮಠ, ಲಾರಿ ನಂ-ಕೆ.ಎ-25/ಬಿ5698 ನೇದ್ದರ ಚಾಲಕ, ಸಾ: ಸಾರವಾಡ,
ತಾ;ಜಿ:ವಿಜಯಪುರ ಇವರು ಠಾಣೆಗೆ
ಹಾಜರಾಗಿ ಗಣಕಿಕೃತ ದೂರನ್ನು ನಿಡಿದ್ದು ಅದರ ಸಾರಾಂಶವೆನೆಂದರೆ ದಿನಾಂಕ-08.10.2015 ರಂದು ಬೆಳಗಿನಜಾವ 04.45 ಗಂಟೆಯ ಸುಮಾರಿಗೆ ಕುಷ್ಟಗಿ-ಹೊಸಪೇಟಿ
ರಾಷ್ಟ್ರೀಯ ಹೆದ್ದಾರಿ-50 ರ ಮೆತಗಲ್ಲ ಹತ್ತಿರ ಚಳ್ಳಿಕೆರಿ ಕಡೆ ಹೋಗುತ್ತಿರುವಾಗ ರೋಡ್ ಹಂಪ್ಸದಲ್ಲಿ
ನಾನು ನಿದಾನವಾಗಿ ಬ್ರೇಕರ್ ಲೈಟ್ ಸಿಗ್ನಲ್ ಹಾಕಿಕೊಂಡು ರೋಡ್ ಹಂಪ್ಸ್ ದಾಟಿಸುತ್ತಿದ್ದಾಗ
ಹಿಂದಿನಿಂದ ಲಾರಿ ನಂ-ಕೆಎ-16/ಸಿ-2247 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಲಕ್ಷತನದಿಂದ ಓಡಿಸಿ ನಿಗದಿತ ಅಂತರ
ಕಾಪಾಡದೇ ನನ್ನ ಲಾರಿ ಹಿಂಬಾಗಕ್ಕೆ ಟಕ್ಕರ ಕೊಟ್ಟು ಅಪಘಾತಪಡಿಸಿ ತನ್ನ ಲಾರಿಯನ್ನು ಬಿಟ್ಟು
ಚಾಲಕನು ಓಡಿ ಹೋಗಿದ್ದು, ಚಾಲಕನನ್ನು ನೋಡಿದಲ್ಲಿ ಗುರುತಿಸುತ್ತೇನೆ. ಸದರಿ ಅಪಘಾತಪಡಿಸಿದ ಲಾರಿ
ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿದ ದೂರಿನ ಮೇಲಿಂದ ಠಾಣಾ ಗುನ್ನ ನಂ-246/2015 ಕಲಂ-279
ಐಪಿಸಿ ಹಾಗೂ 187 ಐಎಂವಿ ಕಾಯ್ದೆ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment