ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 308/2015 ಕಲಂ 78(3) Karnataka Police Act.
ದಿನಾಂಕ:- 08-10-2015 ರಂದು ರಾತ್ರಿ 8:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿ ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:-08-10-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಹಿರೇಬೆಣಕಲ್ ಗ್ರಾಮದಲ್ಲಿ ಖಾಸೀಂಸಾಬ ಎಂಬುವನ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಎ.ಎಸ್.ಐ. ನಾಗರಾಜ, ಪಿ.ಸಿ. 129, 160, 361,
366, 323 ಎ.ಪಿ.ಸಿ. 77 ಇವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 6:30 ಗಂಟೆಗೆ ಹೊರಟು ದಾಸನಾಳ ಬ್ರಿಡ್ಜ್ ದಾಟಿದ ನಂತರ ಜೀಪ್ನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ಹೊಸ ಹಿರೇಬೆಣಕಲ್ ಗ್ರಾಮದ ಖಾಸೀಂಸಾಬ ಎಂಬುವನ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಮೋಸದ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 7:00 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನನ್ನು ವಿಚಾರಿಸಲಾಗಿ ಅವನು ತನ್ನ ಹೆಸರು ಖಾಸೀಂಸಾಬ ತಂದೆ ದಾದಾ ಹುಸೇನಸಾಬ ವಯಸ್ಸು: 37 ವರ್ಷ ಜಾತಿ: ಮುಸ್ಲಿಂ, ಉ: ವ್ಯವಸಾಯ, ಸಾ: ಹೊಸಹಿರೇಬೆಣಕಲ್, ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 1280/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ನಂತರ ಅವನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ? ಅಂತಾ ವಿಚಾರಿಸಲು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದನು. ಈ ಬಗ್ಗೆ ಸಂಜೆ 7:00 ರಿಂದ 7:30 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತನೊಂದಿಗೆ ಠಾಣೆಗೆ ವಾಪಸ್ ಬಂದಿದ್ದು, ಸದರಿ ಆರೋಪಿತನ ವಿರುದ್ಧ ಕಲಂ 78(3) ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಕಲಂ 78(3) ಕೆ.ಪಿ. ಆ್ಯಕ್ಟ್ ಅಡಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಕಾರಣ ಖಾಸೀಮಸಾಬ ಈತನ ವಿರುದ್ಧ
ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 216/2015
ಕಲಂ 482, 483, 485, 486,
488, 489 ಐ.ಪಿ.ಸಿ:.
ದಿನಾಂಕಃ-08-10-2015 ರಂದು
ಸಾಯಂಕಾಲ 7-05 ಗಂಟೆಗೆ ಕೋರ್ಟ ಸಿಬ್ಬಂದಿ ಪಿ.ಸಿ 164 ರವರು ಮಾನ್ಯ ನ್ಯಾಯಾಲಯದ ಉಲ್ಲೇಖ ಪ್ರಕರಣ
ಸಂಖ್ಯೆ 177/2015 ನೆದ್ದನ್ನು ತಂದು ಹಾಜರ ಪಡಿಸಿರುವುದನ್ನು ಸ್ವೀಕರಿಸಿಕೊಂಡಿದ್ದು ಅದರ
ಸಾರಾಂಶದಲ್ಲಿ ಪಿರ್ಯಾದಿದಾರರು 1996 ರಿಂದ ಶ್ರೀ ರಾಘವೇಂದ್ರ ರೈಸ್ ಮೀಲ್ ಅಂತಾ ಮಾಡಿಕೊಂಡು
ವ್ಯವಹಾರ ಮಾಡಿಕೊಂಡಿದ್ದು ಇವರು ತಮ್ಮ ವ್ಯವಹಾರಕ್ಕಾಗಿ ಶ್ರೀ ರಾಘವೇಂದ್ರ ದೇವರ ಭಾವ ಚಿತ್ರದ ಶ್ರೀ
ರಾಘವೇಂದ್ರ ಬ್ರ್ಯಾಂಡ್ ಹೊಂದಿದ್ದು ಇರುತ್ತದೆ. ಈ ಭಾವ ಚಿತ್ರವನ್ನು ತಮ್ಮ ರೈಸ್ ಮೀಲ್ ದಲ್ಲಿ
ತಯಾರಿಸುವ ಅಕ್ಕಿಯನ್ನು ಹಾಕುವ ಪ್ಲಾಸ್ಟೀಕ್ ಚೀಲದ ಮೇಲೆ ಹಾಕಿಕೊಂಡು ವ್ಯವಹಾರ
ಮಾಡಿಕೊಂಡಿರುತ್ತಾರೆ. ಈ ಹೆಸರಿನಿಂದ ಮಾರ್ಕೆಟಿನಲ್ಲಿ ಒಳ್ಳೆ ಹೆಸರು ಮಾಡಿದ್ದು ಇರುತ್ತದೆ.
ಮತ್ತು ಈ ಹೆಸರು ಟ್ರೇಡ್ ಮಾರ್ಕ್ ನ್ನು ಹೊಂದಿ ಅದರ ನಂ T.m. No 789253 ಅಂತಾ ಇದ್ದು ಇದು ನೊಂದಣಿ
ಇರುತ್ತದೆ. ಅದೇ ರೀತಿ ಆರೋಫಿತರು ತಮ್ಮ ಶ್ರೀ ವರಲಕ್ಷ್ಮೀ ರೈಸ್ ಇಂಡಸ್ಟ್ರೀಜ್ ದಲ್ಲಿ ತಯಾರಿಸುವ
ಅಕ್ಕಿ ಪಾಕಿಟ್ ಮೇಲೆ ಬೃಂದಾವನ ಬ್ರಾಂಡ್ ಅಂತಾ ಹೆಸರು ಇಟ್ಟು ಕೊಂಡು ಇದರ ಮೇಲೂ ಅನಧಿಕೃತವಾಗಿ
ಶ್ರೀ ರಾಘವೇಂದ್ರ ದೇವರ ಭಾವ ಚಿತ್ರವನ್ನು ಹಾಕಿಕೊಂಡು ವ್ಯವಹಾರ ಮಾಡಿ ಗ್ರಾಹಕರಲ್ಲಿ ಕನ್
ಪ್ಯೂಜ್ ಮಾಡುತ್ತಿದ್ದಾರೆ ಇದರಿಂದ ಪಿರ್ಯಾದಿದಾರರ ವ್ಯವಹಾರಕ್ಕೆ ತೊಂದರೆ ಯಾಗಿರುತ್ತದೆ. ಅಂತಾ
ಮುಂತಾಗಿ ಇರುವ ಪಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 214/2015
ಕಲಂ 279, 337, 338
ಐ.ಪಿ.ಸಿ:.
ದಿನಾಂಕಃ-08-10-2015 ರಂದು
ಮದ್ಯಾಹ್ನ 13-05 ಕ್ಕೆ ಪಿರ್ಯಾದಿದಾರರಾದ ಶ್ರೀ Veresha S/o Bhemappa Gonuvar R/o Ravinagara villege Devegouda Badavane
ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ಹಾಜರುಪಡಿಸಿದ್ದು
ಅದರ ಸಾರಾಂಶವೆನಂದರೆ ಪಿರ್ಯಾದಿದಾರರು ಮತ್ತು ಅವರ ತಂದೆ Bheemappa S/o
Hanumanthappa Gonuvar ಇವರು ದೇವೆಗೌಡ ಬಡಾವಣೆಯಿಂದ
ಮರ್ಲಾನಹಳ್ಳಿ ಕಡೆಗೆ ತಮ್ಮ ಕೆಲಸದ ನಿಮಿತ್ಯ ಇಂದು ದಿನಾಂಕಃ-08-10-2015 ರಂದು ಬೆಳಿಗ್ಗೆ 9-00
ಗಂಟೆಗೆ ಗಂಗಾವತಿ ರಾಯಚೂರು ರಸ್ತೆಯಲ್ಲಿ ನಡೆದುಕೊಂಡು ಹೋರಟಿದ್ದಾಗ್ಗೆ ಆರೋಪಿ CH Ramarao ಈತನು ತನ್ನ M/c No KA37W1687 ನೆದ್ದನ್ನು ಅತೀ ವೇಗ
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಗೆ ನಡೆದುಕೊಂಡು ಹೋರಟಿದ್ದ Bheemappa ನಿಗೆ ಟಕ್ಕರ ಕೊಟ್ಟು ಅಪಘಾತ ಪಡಿಸಿ ತಾನು ಮೋಟಾರ್ ಸೈಕಲ್ ಸಮೇತ ಬಿದ್ದಿದ್ದರಿಂದ Bheemappa
ನಿಗೆ ಮತ್ತು ಆರೋಪಿ CH Ramarao ಇಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗಿರುತ್ತವೆ ಇವರನ್ನು ಚಿಕಿತ್ಸೆ ಕುರಿತು ದಾಖಲು
ಮಾಡಿರುತ್ತೇನೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ
ಕೈಗೊಂಡೆನು.
0 comments:
Post a Comment