ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 310/2015 ಕಲಂ 87 Karnataka Police Act.
ದಿನಾಂಕ:- 10-10-2015 ರಂದು ಸಂಜೆ
6:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ
ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ಇಂದು ದಿನಾಂಕ:- 10-10-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದೇವಘಾಟದಲ್ಲಿ ಸಾರ್ವಜನಿಕ
ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ
ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 110, 129, 160, 180,
323, 358 ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ
ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲಗಳಲ್ಲಿ ಠಾಣೆಯಿಂದ ಸಂಜೆ 4:00 ಗಂಟೆಗೆ ಹೊರಟು ದೇವಘಾಟ್ ಹತ್ತಿರ ವಾಹನಗಳನ್ನು ನಿಲ್ಲಿಸಿ ಎಲ್ಲರೂ
ನಡೆದುಕೊಂಡು ಹೊರಟು ನೋಡಲಾಗಿ ಮಾವಿನ ತೋಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ
ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು
ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 4:30 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 7 ಜನರು ಸಿಕ್ಕಿ ಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಭರಮಪ್ಪ ತಂದೆ ಹನುಮಂತಪ್ಪ, 24 ವರ್ಷ, ಭಜಂತ್ರಿ, ಸಾ: ಮುರಾರಿ
ಕ್ಯಾಂಪ್-ಗಂಗಾವತಿ (2) ಶರಣಪ್ಪ ತಂದೆ ಮಲ್ಲಪ್ಪ, 27 ವರ್ಷ, ಲಿಂಗಾಯತ, ಉ: ಗುಮಾಸ್ತ ಸಾ: ವಿರುಪಾಪೂರು-ಗಂಗಾವತಿ (3) ಶೇಖ್ ಅಬ್ದುಲ್ ತಂದೆ ಮಹಿಬೂಬ ಸಾಬ, 27 ವರ್ಷ, ಮುಸ್ಲೀಂ ಉ: ಅಕ್ಕಸಾಲಿಗ ಸಾ: 1ನೇ ವಾರ್ಡ-ಶ್ರೀರಾಮನಗರ (4) ಮಹ್ಮದ್ ತಂದೆ ಅಲಿ ಸಾಬ ವಯಸ್ಸು 23 ವರ್ಷ, ಚಾಲಕ ಸಾ: ಕಿಲ್ಲಾ
ಏರಿಯಾ-ಗಂಗಾವತಿ (5) ಮೌಲಾಸಾಬ ತಂದೆ ಮಸ್ತಾನಸಾಬ, 19 ವರ್ಷ, ಚಾಲಕ ಸಾ: ಗುಂಡಮ್ಮ
ಕ್ಯಾಂಪ್-ಗಂಗಾವತಿ (6) ಖಾಜಾ ಮೈನುದ್ದೀನ್ ತಂದೆ ಮಜೀದ ಸಾಬ, 47 ವರ್ಷ, ಕಾಯಿಪಲ್ಲೆ ವ್ಯಾಪಾರ ಸಾ: 4ನೇ ವಾರ್ಡ-ಗಂಗಾವತಿ (7) ಹನುಮ ತಂದೆ ರಾಮಣ್ಣ 19 ವರ್ಷ, ಜೋಗೇರ, ಉ: ಪೈಪ್ ರಿಪೇರ ಸಾ: ಜೋಗೇರ
ಓಣಿ-ಗಂಗಾವತಿ ಅಂತಾ ತಿಳಿಸಿದರು.
ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 1,100-00 ಗಳು, 52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಬರಕಾ ಜಪ್ತು ಮಾಡಲಾಯಿತು. ಈ ಬಗ್ಗೆ ಸಂಜೆ 4:30 ರಿಂದ 5:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 6:00 ಗಂಟೆಗೆ ಠಾಣೆಗೆ ವಾಪಸ್ ಬಂದು ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು
ಸಲ್ಲಿಸಿದ್ದು ಇರುತ್ತದೆ” ಅಂತಾ ಸಾರಾಂಶ ಇದ್ದು ಸದರಿ
ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು ಕಾರಣ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ
ಅನುಮತಿ ಪಡೆದು ಸಂಜೆ 6:30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 310/2015 ಕಲಂ
87 ಕೆ.ಪಿ. ಕಾಯ್ದೆ ಅಡಿ ದಾಖಲು ಮಾಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 249/2015 ಕಲಂ 143, 147, 343, 323, 324, 506, 506 ಸಹಿತ 149 ಐ.ಪಿ.ಸಿ:.
ದಿ:10-10-2015
ರಂದು 10-30 ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ದಾದಾಪೀರ ಗೊನೆಗೊಂಡಲ. ಸಾ: ಕಿನ್ನಾಳ
ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೇ, ಫಿರ್ಯಾದಿದಾರರು
ಕಿನ್ನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತದ ಸಂಘದಲ್ಲಿ
ಶೇರುದಾರಾಗಿರುತ್ತಾರೆ. ಅದೇ ಗ್ರಾಮದ ಸಿದ್ದಲಿಂಗಪ್ಪ ಲಕ್ಕುಂಡಿ ಎಂಬುವವರು ಸದರಿ ಸಂಘದ
ಸಿಬ್ಬಂದಿಯಾದ ಶ್ರೀಪಾದರಾವ್ ದೇಶಪಾಂಡೆ ಹಾಗೂ ಇತರರಿಂದ ಹಲ್ಲೆಗೊಳಗಾಗಿದ್ದು ಸದರಿ ಸಿಬ್ಬಂದಿಯವರ
ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು ಸದರಿ ಕೇಸಿನಲ್ಲಿ ಫಿರ್ಯಾದಿದಾರರು
ಸಾಕ್ಷಿದಾರರಾಗಿದ್ದು ಮಾನ್ಯ ನ್ಯಾಯಾಲಯದ ಸಿಸಿ ನಂ: 87/15 ನೇದ್ದರಲ್ಲಿ
ಫಿರ್ಯಾದಿಗೆ ಸಂಘದ ಸಿಬ್ಬಂದಿಯವರ ವಿರುದ್ದ ಸಾಕ್ಷಿ ನುಡಿಯದಂತೆ ಆರೋಪಿತರು ಬೆದರಿಕೆ ಹಾಕಿದ್ದು, ಅಲ್ಲದೇ
ಆರೋಪಿತರು ಫಿರ್ಯಾದಿಗೆ ಸಂಘದಲ್ಲಿ ಸಾಲ ಕೊಡದೇ ಇದ್ದುದರಿಂದ ಸಿಟ್ಟು ಇಟ್ಟುಕೊಂಡು ಆರೋಪಿತರು
ನಿನ್ನೆ ದಿ:09-10-2015 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ
ಸಂಘದ ಕಚೇರಿ ಮುಂದೆ ರಸ್ತೆಯಲ್ಲಿ ಇವರುಗಳು ಬಂದು ಫಿರ್ಯಾದಿಗೆ ಅಡ್ಡಗಟ್ಟಿ ನಿಲ್ಲಿಸಿ ಲೇ
ಬೋಳಿಮಗನೇ, ನಿನಗೆ ಎಷ್ಟು ದೈರ್ಯ ನಮ್ಮ ಸಂಘದ ಕುರಿತು ಎಲ್ಲಾ ಮಾಹಿತಿಯನ್ನು ಕೇಳಿ
ನಮಗೆ ತೊಂದರೆ ಕೊಡುವ ಉದ್ದೇಶದಿಂದ ಅಲ್ಲದೇ ಸಂಘದಲ್ಲಿ ನಾವು ಮಾಡಿರುವ ಅವ್ಯವಹಾರವನ್ನು
ಬಯಲಿಗೆಳೆಯುವ ಉದ್ದೇಶದಿಂದಾ ಮೇಲಾಧಿಕಾರಿಗಳಲ್ಲಿ ಮತ್ತು ಇತರರಲ್ಲಿ ದೂರು ಕೊಡುತ್ತಿಯಾ ಅಂತಾ
ಜಗಳ ತೆಗೆದು ಅಲ್ಲದೆ ಕೋರ್ಟಿನಲ್ಲಿ ನಡೆಯುವ ಕೇಸಿನಲ್ಲಿ ತಮ್ಮ ವಿರುದ್ದ ಸಾಕ್ಷಿ ನುಡಿಯುತ್ತಿಯಾ
’ನಿನಗೆ ಒಂದು ಗತಿ ಕಾಣಿಸುತ್ತೇವೆ. ಅಂತಾ ಜಗಳ ತೆಗೆದು ಕೈಗಳಿಂದ ಹಲ್ಲೆ ಮಾಡಿದ್ದು ಅಲ್ಲದೇ
ಕೈಯಿಂದ ಮುಷ್ಟಿ ಮಾಡಿ ಹೊಟ್ಟೆಗೆ ಹೊಡೆದಿದ್ದು, ಅಲ್ಲದೇ ಕಾಲಿನಿಂದ
ಒದ್ದು ಜೀವದ ಬೆದರಿಕೆ ಹಾಕಿರುತ್ತಾರೆ. ಕಾರಣ ಸದರಿ 1] ವಿರೇಶ
ತಾವರಗೇರಿ. 2] ಶ್ರೀಪಾದರಾವ್ ದೇಶಪಾಂಡೆ, 3] ಚಂದ್ರಶೇಖರ
ಕುದರಿಮೋತಿ, 4] ಸತೀಶ ಕುಲಕರ್ಣಿ ಹಾಗೂ 5] ಮಹಾದೇವಯ್ಯ ಹಿರೇಮಠ.
ಎಲ್ಲರೂ ಸಾ: ಕಿನ್ನಾಳ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ
ಕೊಪ್ಪಳ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment