ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ
ಪೊಲೀಸ್ ಠಾಣೆ ಗುನ್ನೆ ನಂ. 218/2015 ಕಲಂ. 87 Karntaka Police Act.
ದಿನಾಂಕ-11-10-2015 ರಂದು ಸಾಯಂಕಾಲ 8-40 ಗಂಟೆಯ ಸುಮಾರಿಗೆ ಪಿ.ಎಸ್.ಐ ಸಾಹೇಬರು
ಇಸ್ಪೀಟ್ ಜೂಜಾಟದ ಮೂಲ ಪಂಚನಾಮೆ ಒಂದು ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ ಇಂದು
ದಿನಾಂಕಃ- 11-10-2015 ರಂದು ಸಾಯಂಕಾಲ 6-35 ಗಂಟೆಯ ಸುಮಾರಿಗೆ ಕಾರಟಗಿಯ ಶುಭ ಎಂಟರ್ ಪ್ರೈಜಸ್ ಹಿಂದುಗಡೆ ಸಾರ್ಜಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ.ಸಾಹೇಬರು ಸಿಬ್ಬಂದಿಗಳು
ಜೊತೆಯಲ್ಲಿದ್ದ ಪಂಚರ ಸಮಕ್ಷದಲ್ಲಿ ದಾಳಿ ಮಾಡಲು 10 ಜನ ಆರೋಪಿತನ್ನು ಮತ್ತು ಅವರ ಕಡೆಯಿಂದ
ಒಟ್ಟು ನಗದು ಹಣ ರೂ.14100/- ಮತ್ತು 52 ಇಸ್ಪೀಟ್ ಎಲೆಗಳು ಒಂದು ಹಳೆ ಬರಕಾವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡ ಬಗ್ಗೆ ಮುಂತಾಗಿ ಇದ್ದ ವರದಿಯ
ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 69/2015
ಕಲಂ 417, 376, 504, 506
ಐ.ಪಿ.ಸಿ ಮತ್ತು 3(1)(10) ಎಸ್.ಎಸಿ/ಎಸ್.ಟಿ ಕಾಯ್ದೆ:.
ಫಿರ್ಯಾದಿ ಮತ್ತು ಆರೋಪಿತನು ಒಂದೆ ಗ್ರಾಮದವರಿದ್ದು ಆರೋಪಿತನು ಈಗ್ಗೆ ಸುಮಾರು
7 ವರ್ಷಗಳಿಂದ ಫಿರ್ಯಾದಿ ದಾರಳನ್ನು ಮದುವೆಯಾಗುತ್ತೇನೆ ಅಂತಾ ಬಲವಾಗಿ ನಂಬಿಸಿ ಪ್ರೀತಿಸುತ್ತಾ ಅವಾಗಿನಿಂದ ರಾತ್ರಿ ವೇಳೆಯಲ್ಲಿ ಆಗಾಗ ಹಿರೆವಂಕಲಕುಂಟ ಗ್ರಾಮದ ಸರಕಾರ ಹಿರಿಯ ಪ್ರಾಥಮೀಕ ಶಾಲೆಯ ಆವರಣದ ಹತ್ತಿರ ಹಾಗೂ ಊರ ಪಕ್ಕದ ಹೋಲದಲ್ಲಿ ಕರೆದುಕೊಂಡು ಹೋಗಿ ಫಿರ್ಯಾದಿದಾರಳು ಬೇಡ ಅಂದರು ಬಲವಂತವಾಗಿ ಸಂಬೋಗ ಮಾಡಿದ್ದು ಅಲ್ಲದೆ ಆರೋಪಿತನು ಫಿರ್ಯಾದಿದಾರಳಿಗೆ ಈ ವಿಷಯವನ್ನು ನೀನು ಯಾರಿಗೂ ಹೇಳಬೇಡ ನೀನಗೆ ನಾನೆ ಮದುವೆಯಾಗುತ್ತೇನೆ ಅಂತಾ ನಂಬಿಸಿ ಮೋಸ ಮಾಡುತ್ತಾ ಆಗಾಗ ಫಿರ್ಯಾದಿದಾರಳೊಂದಿಗೆ ದೈಹಿಕ ಸಂಪರ್ಕ ಮಾಡುತ್ತಾ ಬಂದಿದ್ದನು. ಈಗ್ಗೆ ಸುಮಾರು ಒಂದು ವರ್ಷಗಳ ಹಿಂದೆ ಫಿಯರ್ಾದಿ ಮತ್ತು ಆರೋಪಿತರು ಇಬ್ಬರೂ ದೈಹಿಕ ಸಂಪರ್ಕ ಹೊಂದುತ್ತಿರುವ ಬಗ್ಗೆ ಅವರ ಮನೆಯವರಿಗೆ ವಿಷಯ ಗೊತ್ತಾಗಿದ್ದು ಇರುತ್ತದೆ. ಮತ್ತು ಈಗ್ಗೆ ಸುಮಾರು ಒಂದು ತಿಂಗಳದ ಹಿಂದೆ ಆರೋಪಿತನು ಪುನಾ: ಫಿರ್ಯಾದಿದಾರಳಿಗೆ ಅದೆ ಶಾಲೆಯ ಆವರಣದ ಹತ್ತಿರ ರಾತ್ರಿ ಕರೆದುಕೊಂಡು ಹೋಗಿ ಬಲವಂತವಾಗಿ ಸಂಭೂಗ ಮಾಡಿದ್ದು ಇರುತ್ತದೆ. ಈಗ್ಗೆ ಸುಮಾರು
15 ದಿವಸಗಳ ಹಿಂದೆ ಫಿರ್ಯಾದಿ ದಾರಳು ಆರೋಪಿತನ ಮನೆಗೆ ಹೋಗಿ ಆರೋಪಿತನಿಗೆ `` ನೀನು ನನಗೆ ಮದುವೆ ಮಾಡಿಕೊ ಈ ವಿಷಯ ಈಗಾಗಲೇ ಎಲ್ಲಾರಿಗೂ ಗೊತ್ತಾಗಿದೆ ಅಂತಾ ಕೇಳಿದಾಗ ಅದಕ್ಕೆ ಆರೋಪಿತನು ಈಗಾಗಲೆ ನನಗೆ ಮದುವೆಯಾಗಿರುತ್ತದೆ. ನೀನು ಕೀಳು ಜಾತಿಯ ಮಾದಿಗ ಜನಂಗಾಕ್ಕೆ ಸೇರಿದವಳಿದ್ದು ನಾನು ಕುರುಬ ಜನಾಂಗಕ್ಕೆ ಸೇರಿದ್ದು ನಾನು ನಿನಗೆ ಮದುವೆ ಮಾಡಿಕೊಳ್ಳುವದಿಲ್ಲಾ ನೀನು ಏನುಮಾಡಿಕೊಳ್ಳುತ್ತಿ ಹೋಗಲೆ ಮಾದಿಗ ಸೂಳೆ ಇನ್ನೂಮುಂದೆ ಈ ವಿಷಯವನ್ನು ಊರಾಗ ಯಾರಿಗಾದರೂ ಹೇಳಿದರೆ, ನಿನ್ನ ಜೀವಸಹಿತಿ ಬಿಡುವದಿಲ್ಲಾ ನಿನ್ನನ್ನು ಮುಗಿಸಿಬಿಡುತ್ತೇನೆ '' ಅಂತಾ ಜೀವದ ಬೆದರಿಕೆ ಹಾಕಿದ್ದು. ನಂತರ ಫಿಯರ್ಾದಿದಾರಳು ಅಳುತ್ತಾ ತಮ್ಮ ಮನೆಗೆ ಬಂದು ಮನೆಯವರಿಗೆ ವಿಷಯ ತಿಳಿಸಿದಾಗ ಅವಳ ಮನೆಯವರು ಅವಳನ್ನು ಬೇವೂರಗೆ ಕರೆದುಕೊಂಡು ಬಂದು ಈ ವಿಷಯವನ್ನು ತಮ್ಮ ಸಮಾಜದ ಹಿರಿಯರಿಗೆ ಘಟನೆಯ ಬಗ್ಗೆ ತಿಳಿಸಿ ವಿಚಾರಿಸಿ ನಂತರ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಂಶದ ಮೇಲಿಂದ ಪ್ರಕಣದ ದಾಖಲಿಸಿಕೊಂಡಿದ್ದು ಇರುತ್ತದೆ.
3) ತಾವರಗೇರಾ ಪೊಲೀಸ್
ಠಾಣೆ ಗುನ್ನೆ ನಂ. 96/2015 ಕಲಂ 323, 324, 504, 506 ಸಹಿತ
149 ಐ.ಪಿ.ಸಿ:.
ದಿನಾಂಕ:
11-10-2015 ರಂದು ರಾತ್ರಿ 09-30
ಗಂಟೆಗೆ ಫಿರ್ಯಾದಿದಾರರಾದ ಶ್ರೀ ನಾಗಪ್ಪ ತಂದೆ ಸಣ್ಣ ಹನುಮಪ್ಪ ತಳವಾರ ವಯ: 38 ವರ್ಷ, ಜಾತಿ: ವಾಲ್ಮೀಕಿ, ಉ:ಒಕ್ಕಲುತನ, ಸಾ: ಲಿಂಗದಹಳ್ಳಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ನಮೂದಿತ ಅರೋಪಿತರು ಫಿಯರ್ಾದಿದಾರರ ಸಂಬಂಧಿಕರಿದ್ದು 2015 ನೇ ಸಾಲಿನ ಗ್ರಾ.ಪಂ ಚುನಾವಣೆಯಲ್ಲಿ ಫಿರ್ಯಾದಿದಾರರ ತಮ್ಮ ಸಣ್ಣೆಪ್ಪ ಈತನು ಸದಸ್ಯ ಸ್ಥಾನಕ್ಕೆ ಸ್ಪದರ್ಿಸಿದ್ದು ಆರೋಪಿತರ ಪೈಕಿ ಅಮರೇಶ್ ಈತನು ಕೂಡ ಸ್ಪದರ್ಿಸಿದ್ದು ಚುನಾವಣೆಯಲ್ಲಿ ಸಣ್ಣೆಪ್ಪ ಈತನು ಗೆಲುವು ಸಾಧಿಸಿದಾಗಿನಿಂದ ಎರಡು ಮನೆಯವರಿಗೂ ದ್ವೇಷ ಬೆಳೆದಿದ್ದು, ಅದೇ ದ್ವೇಷದಿಂದ ಇಂದು ಸಂಜೆ 07-00 ಗಂಟೆ ಫಿಯರ್ಾದಿದಾರರು ತಮ್ಮೂರಿನ ಅಗಸಿ ಕಟ್ಟೆಯ ಹತ್ತಿರ ಇದ್ದಾಗ ಆರೋಪಿತರ ಪೈಕಿ ಹನುಮಪ್ಪ ಈತನು ಬಂದು ಫಿಯರ್ಾದಿದಾರರೊಂದಿಗೆ ಜಗಳ ತೆಗೆದು ಅವಾಚ್ಯ ಬೈದು ಹೊಡೆಬಡೆ ಮಾಡಿದ್ದು, ಅಲ್ಲಿಗೆ ಬಂದು ಆತನ ಮಕ್ಕಳು ಕೂಡ ಫಿಯರ್ಾದಿದಾರರಿಗೆ ಹೊಡೆಬಡೆ ಮಾಡಿದ್ದು ಇರುತ್ತದೆ. ನಂತರ ಜಗಳವನ್ನು ನೋಡಿ ಗ್ರಾಮದ ಯಮನೂರ ತಂದೆ ನಾಗಪ್ಪ ಮಾದರ ಹಾಗೂ ಅಮರೇಶ್ ತಂದೆ ಮುದುಕಪ್ಪ ಬೆಂಕಿ ಇವರು ಬಿಡಿಸಿ ಕಳಿಸಿದ್ದು ಫಿಯರ್ಾದಿದಾರರು ಮನೆಗೆ ಹೋಗುತ್ತಿರುವಾಗ ಹನುಮಪ್ಪ ತಳವಾರ ಈತನು ಹಿಂದಿನಿಂದ ಬಂದು ಕೊಡಲಿ ತುಂಬಿನಿಂದ ಫಿಯರ್ಾದಿದಾರರ ತಲೆಗೆ ಹೊಡೆದು ಭಾರಿ ಸ್ವರೂಪದ ಗಾಯಗೊಳಿಸಿ ಜೀವದ ಬೇದರಿಕೆ ಹಾಕಿದ್ದು ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 96/2015 ಕಲಂ: 323, 324, 504,
506, ರೆ/ವಿ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದೆ.
0 comments:
Post a Comment