ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ
ನಗರ ಪೊಲೀಸ್ ಠಾಣೆ ಗುನ್ನೆ ನಂ. 194/2015 ಕಲಂ. 78(3) Karntaka Police Act.
ದಿನಾಂಕ: 13-10-2015 ರಂದು ಮದ್ಯಾಹ್ನ 01-00 ಗಂಟೆಗೆ ಫಕೀರಮ್ಮ ಮ.ಪಿ.ಎಸ್.ಐ
ಕೊಪ್ಪಳ ನಗರ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ ಫಿರ್ಯಾದಿಯೊಂದಿಗೆ ಆರೋಪಿ ಸಮೇತ ಮುದ್ದೆಮಾಲು,
ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸದರ ಫಿರ್ಯಾದಿಯ ಸಾರಾಂಶ ಏನೆಂದರೆ, ಇಂದು
ದಿ: 13-10-2015 ರಂದು ಮುಂಜಾನೆ 11-30 ಗಂಟೆಗೆ ಕೊಪ್ಪಳ ನಗರದ ನೌಕರರ ಭವನದ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಆರೋಪಿತನಾದ ಮುರಳಿಧರ ತಂದೆ ಯೆಂಕೊಬರಾವ್ ಮಾಲಿ ಪಾಟೀಲ್ ವಯಾ: 45 ವರ್ಷ ಜಾ: ಬ್ರಹ್ಮಣ
ಉ: ವ್ಯವಸಾಯ ಸಾ: ವಣರ್ೆಕರ ಚಾಳ ಕೊಪ್ಪಳ. ಇತನು ಜನರ ಗುಂಪಿನಲ್ಲಿ ನಿಂತುಕೊಂಡು ಜನರಿಗೆ ಯಾರ ಅದೃಷ್ಟ
ನಸೀಬದ ಜೂಜಾಟ 1-00 ರೂಪಾಯಿಗೆ 80-00 ರೂಪಾಯಿ ಬರುತ್ತದೆ ಅಂತಾ ಕೂಗುತ್ತಾ ಹಣ ಪಡೆದುಕೊಳ್ಳುತ್ತಿದ್ದು,
ಮಟಕಾ ನಂಬರಗಳ ಚೀಟಿ ಬರೆದುಕೊಡುತ್ತಿರುವ ಕಾಲಕ್ಕೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮುಂಜಾನೆ
11-30 ಗಂಟೆಯ ವೇಳೆಗೆ ದಾಳಿ ಮಾಡಿದಾಗ ಆರೋಪಿ ಮುರಳಿಧರ ತಂದೆ ಯೆಂಕೊಬರಾವ್ ಮಾಲಿ ಪಾಟೀಲ್ ಇತನು ಸಿಕ್ಕಿದ್ದು
ಇತನಿಂದ 1] 1150=00 ರೂ. ನಗದು ಹಣ. 2] ಒಂದು ಬಾಲ್ಪೆನ್. ಅಂಕಿ ಇಲ್ಲಾ. 3] ಒಂದು ಮಟಕಾ ಅಂಕಿ ಸಂಖ್ಯೆ
ಬರೆದ ಮಟಕಾ ಪಟ್ಟಿ ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು, ತಾನು ಬರೆದ ಮಟಕಾ ಚೀಟಿಯನ್ನು
ಶಿವರೆಡ್ಡಿ ಸಾ: ಬೆಂಕಿ ನಗರದ ಕೊಪ್ಪಳ ತಿಳಿಸಿರುತ್ತಾನೆ. ಕಾರಣ ಸದರಿ ಆರೋಪಿತರ ಮೇಲೆ ಸೂಕ್ತ ಕಾನೂನು
ಕ್ರಮ ಜರುಗಿಸುವಂತೆ ಫಿರ್ಯದಿಯೊಂದಿಗೆ ಆರೋಪಿ, ಮುದ್ದೇಮಾಲು, ಮೂಲ ಪಂಚನಾಮೆಯನ್ನು ಹಾಜರಪಡಿಸಿದ ಮೇರೆಗೆ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
0 comments:
Post a Comment