Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, October 3, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ  ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 245/2015  ಕಲಂ 87 Karnataka Police Act:.
ದಿ:02.10.15 ರಂದು 5 ¦.JA ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಹಳೆಗೊಂಢಬಾಳ ಗ್ರಾಮದ ವಿರುಪಾಕ್ಷಪ್ಪ ಕೊಣಿ ಇವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 2950=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 170/2015  ಕಲಂ  341, 323, 504, 506 ಐ.ಪಿ.ಸಿ:.

ದಿನಾಂಕ 02-10-2015 ರಂದು ಬೆಳಿಗ್ಗೆ 10-15 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಮಲ್ಲವ್ವ ಗಂಡ ನಿಂಗಪ್ಪ ಕುರಿಯರ ವಯಾ; 27 ವರ್ಷ ಜಾತಿ : ಕುರುಬರು ಉಹೊಲಮನೆ ಕೆಲಸ ಸಾ: ಕಂದಗಲ್ ತಾ; ಹುನಗುಂದ ಹಾ:ವಸ್ತಿ: ಬಿಜಕಲ್ ತಾ; ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರಳು ಈಗಾಗಲೇ ತನ್ನ ಗಂಡ ನಿಂಗಪ್ಪ ಇತನ ಮೇಲೆ ಇಲಕಲ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಕಲಿಸಿದ್ದು, ಇದು ಸದ್ಯ ಹುನಗುಂದ ಕೊರ್ಟನಲ್ಲಿ ವಿಚಾರಣೆಯಲ್ಲಿರುತ್ತದೆ. ಹಾಗೂ ತನ್ನ ಜೀವನಾಂಶಕ್ಕಾಗಿ ಕುಷ್ಟಗಿ ಕೊರ್ಟನಲ್ಲಿ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ವಿಚಾರಣೆಗಾಗಿ ದಿನಾಂಕ: 30-09-2015 ರಂದು ಮುದ್ದತ್ತು ಇದ್ದು ಆ ಮುದ್ದತ್ತಿಗಾಗಿ ಕೋರ್ಟಗೆ ಹಾಜರಾಗಲು ಬಂದಿದ್ದು ನನ್ನಂತೆಯೇ ನನ್ನ ಗಂಡನು ಬಂದಿದ್ದು ಕೋರ್ಟನಲ್ಲಿ ಮುದ್ದತ್ತಿಗೆ ಹಾಜರಾಗಿ ಮುಂದಿನ ಮುದ್ದತ್ತು ದಿನಾಂಕ ಕೊಟ್ಟಿದ್ದು ನಂತರ ನನ್ನ ತವರು ಮನೆ ಊರಾದ ಬಿಜಕಲ್ ಗೆ ಹೋಗಲು ಶ್ರೀ ಬಸವೇಶ್ವರ ಸರ್ಕಲ್ ನಲ್ಲಿ ನಿಂತಿದ್ದು  ಹಿಂದಿನಿಂದ ನನ್ನ ಗಂಡ ನಿಂಗಪ್ಪನು ಬಂದು ಒಮ್ಮಿಂದೊಮ್ಮೆಲೆ ಸಿಟ್ಟಿಗೆ ಬಂದು ಲೇ ಬೊಸುಡಿ ನಿನ್ನ ಸಲುವಾಗಿ ನಾನು ಕೋರ್ಟು ಕಛೇರಿ ಅಲೆಯಬೇಕಾಗಿದೆ ಅಂತಾ ಅಂದವನು ಫಿರ್ಯಾದಿದಾರಳನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ  ನನ್ನ ಮೇಲಿದ್ದ ಕೇಸುಗಳನ್ನು ವಾಪಾಸ್ ತೆಗೆದುಕೊಳ್ಳದಿದ್ದರೆ ನಿನ್ನ ಜೀವ ತೆಗೆಯುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿ ತಲೆಯ ಕೂದಲು ಹಿಡಿದು ಬಗ್ಗಿಸಿ ಬೆನ್ನಿಗೆ ಹೋಡೆದನು. ಆಗ ಚಿರಾಡಲು ನಮ್ಮೂರಿನವರಾದ ಹನಮಂತಪ್ಪ ಛಲವಾದಿ ಕುಂಟೆಪ್ಪ ತಳವಾರ ಮತ್ತು ಮುದುಕಪ್ಪ ತೋಟದ ಇವರೆಲ್ಲರೂ ನೋಡಿ ಜಗಳ ಬಿಡಿಸಿದರು. ಫಿರ್ಯಾದಿದಾರಳು ಹಿರಿಯರನ್ನು ವಿಚಾರಿಸಿ ಈಗ ತಡವಾಗಿ ಬಂದು ಫಿರ್ಯಾದಿ ನೀಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.

0 comments:

 
Will Smith Visitors
Since 01/02/2008