1) ಕೊಪ್ಪಳ
ನಗರ ಪೊಲೀಸ್ ಠಾಣೆ ಗುನ್ನೆ ನಂ. 211/2015 ಕಲಂ. 78(3) Karnataka Police Act:.
ದಿನಾಂಕ 30.10.2015 ರಂದು ಸಾಯಂಕಾಲ 7:00 ಗಂಟೆಗೆ ಕೊಪ್ಪಳ ನಗರದ ಪಾನಘಂಟಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಇತನು 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಇದು ನಶೀಬದ ಆಟ ಅಂತಾ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೇದ ಚೀಟಿಯನ್ನು ಬರೇದುಕೊಡುತ್ತಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಕಿ ದಾಳಿ ಮಾಡಿ ಅವನಿಂದ ನಗದು ಹಣ 790=00 ರೂ , ಮಟಕಾ ನಂಬರ ಬರೇದ ಚೀಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡಿದ್ದು ಇರುತ್ತದೆ. ಆರೋಪಿ ನಂ 02 ಇತನು ಮಟಕಾ ನಂಬರ ಪಟ್ಟಿಯನ್ನು ತೆಗೆದುಕೊಳ್ಳುತ್ಯಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 109/2015
ಕಲಂ 363 ಐ.ಪಿ.ಸಿ:.
ಪಿರ್ಯಾದಿದಾರರ ಮೊಮ್ಮಗನಾದ ಕುಮಾರ ಹಡಪದ ವಯ- 13 ವರ್ಷ ಇತನು ದಿನಾಂಕ- 23-09-2015 ರಂದು
ಯಲಬುರ್ಗಾ ಪೊಲೀಸ್ ಠಾಣೆಯಿಂದ ರಕ್ಷಣೆ ಮಾಡಿ ಕೊಪ್ಪಳ ಬಾಲಕರ ಬಾಲಮಂದಿರಕ್ಕೆ ಸೇರಿಕೆ ಮಾಡಿದ್ದು
ನಂತರ ಅಲ್ಲಿಂದ ದಿನಾಂಕ- 17-10-2015 ರಂದು ಬಾಲಕರ ಬಾಲಮಂದಿರ ಕೊಪ್ಪಳದಿಂದ ತಪ್ಪಿಸಿಕೊಂಡು
ಯಲಬುರ್ಗಾ ಪಟ್ಟಣದ ಶಿವಮೂರ್ತಪ್ಪ ಹಡಪದ ರವರಿಗೆ ಸಿಕ್ಕಿದ್ದು ನಂತರ ಅವರು ಮೂಲಕ ಪಿರ್ಯಾದಿದಾರರ
ಮನೆಗೆ ಬಂದಿದ್ದು ನಂತರ ದಿನಾಂಕ- 18-10-2015 ರಂದು ಬೆಳಿಗ್ಗೆ 05-30 ಗಂಟೆಯ ಸುಮಾರಿಗೆ
ಪಿರ್ಯಾದಿದಾರರು ಮನೆಯಲ್ಲಿ ಮಲಗಿಕೊಂಡಿದ್ದಾಗ ಪಿರ್ಯಾದಿರಾರರಿಗೆ ಹೇಳದೆ ಕೇಳದೆ ಪಿರ್ಯಾದಿದಾರರ
ಮನೆಯಿಂದ ಕಾಣೆಯಾಗಿದ್ದು ಇರುತ್ತದೆ. ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಲಾಗಿ
ಪತ್ತೆಯಾಗಿರುವದಿಲ್ಲ. ಕಾಣೆಯಾದ ಬಾಲಕನ ತಾಯಿ ತೀರಿಕೊಂಡಿದ್ದು ಮತ್ತು ತಂದೆಯು ಕೂಡ ಮಾನಸಿಕ
ಅಸ್ವಸ್ಥನಿರುತ್ತಾನೆ. ನನ್ನ ಮೊಮ್ಮಗ ಕುಮಾರ ಇತನು ಕಾಣೆಯಾಗಿದ್ದು ಕಾರಣ ಮಾನ್ಯರು ಕುಮಾರನನ್ನು ಪತ್ತೆ
ಮಾಡಿಕೊಡಬೇಕು ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶವಿರುತ್ತದೆ. ಕುಮಾರ ಇತನ ಚಹರೆಪಟ್ಟಿ ಈ
ಕೆಳಗಿನಂತೆ ಇರುತ್ತದೆ. ಎತ್ತರ : 128 ಸೆಂಟಿ ಮೀಟರ, ತೂಕ 31 ಕೆ,ಜಿ, ಮೈಕಟ್ಟು: ದಪ್ಪನೆ ಮೈಕಟ್ಟು, ದುಂಡು ಮುಖ, ಮೈಬಣ್ಣ : ಗೋಧಿ ಮೈ ಬಣ್ಣ, ಭಾಷೆ : ಕನ್ನಡ ಮಾತನಾಡುತ್ತಾನೆ
ಮತ್ತು ಮಾನಸಿಕ ಅಸ್ವಸ್ಥನಾಗಿರುವ ಸ್ವಭಾವದ ಲಕ್ಷಣಗಳನ್ನು ಹೊಂದಿರುತ್ತಾನೆ. ಧರಿಸಿದ ಬಟ್ಟೆಗಳು : ನೀಲಿ ಆಪ್ ಪ್ಯಾಂಟ ಮತ್ತು ಹಳದಿ ಬಣ್ಣದ ಅಂಗಿ (ಶರ್ಟ) ಅಂತಾ ಮುಂತಾಗಿ
ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment