1) ಗಂಗಾವತಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 244/2015 ಕಲಂ. 341, 504, 506, 323, 324, ಸಹಿತ 34 ಐ.ಪಿ.ಸಿ:.
ದಿನಾಂಕ 31-10-2015 ರಂದು ರಾತ್ರಿ 11-30 ಗಂಟೆಗೆ ಮಹ್ಮದ್ ತಂದೆ ಮಾಬುಸಾಬ್ ಮನಿಯಾರ್, ವಯಸ್ಸು 25 ವರ್ಷ ಜಾ: ಮುಸ್ಲಿಂ, ಉ: ವ್ಯಾಪಾರ, ಸಾ: ಉಪ್ಪಾರ ಓಣಿ ಗಂಗಾವತಿ.
ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ
ಸಾರಂಶವೇನೆಂದರೆ, ಫಿರ್ಯಾಧಿದಾರನು
ಆರೋಪಿ ಲತೀಪ್ ಇವನಿಗೆ ಆಗಾಗ ಸಾವಿರ ಎರಡು ಸಾವಿರದಂತೆ 8 ಸಾವಿರ ರೂಪಾಯಿಗಳನ್ನು ಈಗ್ಗೆ 1 ವರ್ಷದ
ಹಿಂದೆ ಕೈಗಡ ಸಾಲವನ್ನು ಕೊಟ್ಟಿದ್ದು ಸದರಿ ಹಣವನ್ನು ಸಾಯಂಕಾಲ ಕೇಳಿದ್ದು ಸದರಿ ಆರೋಪಿತನು ಇಂದು
ದಿನಾಂಕ: 31-10-2015 ರಂದು ರಾತ್ರಿ 9-30 ಗಂಟೆ ತಮ್ಮ ಅಣ್ಣಂದಿರಾದ ಶಕೀಲ್ ಮತ್ತು ಚಾಂದು ಇವರೊಂದಿಗೆ
ಬಂದು ಫಿರ್ಯಾದಿಯು ಜಂಬಣ್ಣ ಶಾಲೆಯ ಹತ್ತಿರ ಹೋಗುತ್ತಿದ್ದಾಗ ಆರೋಪಿ ಶಕೀಲ್ ಇವನು ಫಿರ್ಯಾದಿಗೆ ತಡೆದು
ನಿಲ್ಲಿಸಿ ಲೇ ಸೂಳೇ ಮಗನೆ ನಮ್ಮ ತಮ್ಮನಿಗೆ 3 ಸಾವಿರ ಸಾಲವನ್ನು ಕೊಟ್ಟು 8 ಸಾವಿರ ಕೊಟ್ಟೀನಿ ಕೊಡು
ಅಂತಾ ನಮ್ಮ ತಮ್ಮನಿಗೆ ಹೋಡಿತೀಯನಲೇ ಸೂಳೇ ಮಗನೆ ಇವತ್ತು ನಿನ್ನ ಜೀವಸಹಿತ ಬಿಡುವುದಿಲ್ಲಾ ಅಂತಾ ಅವಾಚ್ಯವಾಗಿ
ಬೈದು ಜೀವ ಬೆದರಿಕೆ ಹಾಕಿ ಫಿರ್ಯಾದಿಗೆ ಕೈಯಿಂದ ಮೈ-ಕೈಗೆ ಹೊಟ್ಟೆಗೆ ಹೊಡೆ-ಬಡೆ ಮಾಡಿ ಯಾವುದೋ ಒಂದು
ವಸ್ತುವನ್ನು ತೆಗೆದುಕೊಂಡು ಎಡ ತೋಳಿನ ಹತ್ತಿರ ಗೀರಿ ರಕ್ತಗಾಯ ಮಾಡಿರುತ್ತಾರೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಕೊಪ್ಪಳ ನಗರ ಪೊಲೀಸ್
ಠಾಣಾ ಗುನ್ನೆ ನಂ. 212/2015 ಕಲಂ 420, 423, 465, 468, 471, 504, 506 ಐ.ಪಿ.ಸಿ:.
ದಿ:10-08-2015 ರಂದು 3-00 ಪಿ.ಎಮ್ ಕ್ಕೆ ಮಾನ್ಯ ಜೆ,ಎಮ್.ಎಫ್.ಸಿ ಘನ ನ್ಯಾಯಾಲಯ ಕೊಪ್ಪಳದಿಂದಾ
ಖಾಸಗಿ ಫಿರ್ಯಾದಿ ಸಂ: /2015 .ಎಲ್.ಟಿ ನಂ: 1250/2015. ದಿ: 04-08-2015. ನೇದ್ದನ್ನು ಕೊಪ್ಪಳ
ಗ್ರಾಮೀಣ ಠಾಣಯ ಗುನ್ನೆ ನಂ: 198/15 ರಂತೆ ಪ್ರಕರಣ ದಾಖಲಿಸಿಕೊಂಡು ಹದ್ದಿಯ ಆಧಾರದ ಮೇಲೆ ವರ್ಗಾವಣೆಯಾಗಿ
ನಮ್ಮಲ್ಲಿಗೆ ಬಂದಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಫಿರ್ಯಾದಿದಾರರು ಓಜನಹಳ್ಳಿ ಗ್ರಾಮದ
ನಿವಾಸಿಯಾಗಿದ್ದು ಆರೋಪಿಯು ಸಹ ಅದೇ ಗ್ರಾಮದ ವ್ಯಕ್ತಿಯಾಗಿದ್ದು ಹೀಗಾಗಿ ಆರೋಪಿತನು ಫಿರ್ಯಾದಿಗೆ
ಸರ್ಕಾರದಿಂದಾ ತಿಂಗಳ ಮಾಶಾಸನ ಮಾಡಿಸುವುದಾಗಿ ಸುಳ್ಳು ಹೇಳಿ ದಿ:24-03-2008 ರಂದು ಬೆಳಿಗ್ಗೆ ಕೊಪ್ಪಳಕ್ಕೆ
ಫಿರ್ಯಾದಿಗೆ ಕರೆದುಕೊಂಡು ಬಂದು ತಹಶೀಲದಾರ ಕಾರ್ಯಾಲಯದ ಹತ್ತಿರ ಕೂಡ್ರಿಸಿ ನಂತರ ಉಪನೊಂದಣಾಧಿಕಾರಿಗಳ
ಕಚೇರಿಗೆ ಹೋಗಿ ಆರೋಪಿತನು ಫಿರ್ಯಾದಿದಾರರ ಹೆಸರಿನಲ್ಲಿದ್ದ ಕವಲೂರ ಸೀಮಾದ ಜಮೀನು ಸರ್ವೇ ನಂ:766/ಆ
ವಿಸ್ತೀರ್ಣ 5.15 .ಗುಂ ಜಮೀನನ್ನು ಕಬಳಿಸಬೇಕೆಂಬ ಉದ್ದೇಶದಿಂದಾ ಖೊಟ್ಟಿ ಖರೀದಿ ಪತ್ರವನ್ನು ತಯಾರಿಸಿಕೊಂಡು
ಹೋಗಿ ಮಾಶಾಸನದ ದಾಖಲೆಗಳು ತಯಾರಿ ಆಗಿವೆ ಸಹಿ ಮಾಡು ಅಂತಾ ಫಿರ್ಯಾದಿಗೆ ರಜಿಸ್ಟರ್ ಆಫೀಸ್ ಗೆ ಕರೆದುಕೊಂಡು
ಹೋಗಿ ಸಹಿ ಮಾಡಿಸಿ ಫೋಟೊ ತೆಗೆಯಿಸಿ ಫಿರ್ಯಾದಿಯ ಹೆಸರಿನಲ್ಲಿದ್ದ ಜಮೀನನ್ನು ತನ್ನ ಹೆಸರಿನಲ್ಲಿ ನೊಂದಣಿ
ಮಾಡಿಸಿಕೊಂಡು ನಂತರ ಖಾತೆ ಬದಲಾವಣೆ ಮಾಡಿಸಿಕೊಂಡು ಫಿರ್ಯಾದಿಗೆ ಮೋಸ ಮಾಡಿ ಜಮೀನನ್ನು ಬೇರೆಯವರಿಗೆ
ಮಾರಾಟ ಮಾಡಿರುತ್ತಾನೆ. ಫಿರ್ಯಾದಿದಾರರು ಆರೋಪಿತನಿಗೆ ಕೇಳಲು ಹೋದರೆ ನಿಮ್ಮ ಜಮೀನು ನನ್ನ ಬಳಿ ಇಲ್ಲಾ
ನಾನು ಯಾರಿಗೂ ಯಾವ ಕಾನೂನಿಗೂ ಅಂಜುವುದಿಲ್ಲ. ಅಂತಾ ಹೇಳಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ
ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment