Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, October 7, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 100/2015  ಕಲಂ 78(3) Karnataka Police Act.
ದಿನಾಂಕ: 06-10-2015 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಶ್ರೀ. ಶಂಕರಗೌಡ ಎ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ವಾಪಸ್ ಠಾಣೆಗೆ ಬಂದು ಒಂದು ವರದಿ ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿತನನ್ನು ಮುಂದಿನ ಕ್ರಮ ಕುರಿತು ಒಪ್ಪಿಸಿದ್ದು, ಸದರಿ ವರದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿ ನೋಡಲಾಗಿ, ಅದರ ಸಾರಾಂಶವೆನೆಂದರೆ, ಇಂದು ದಿನಾಂಕ: 06-10-2015 ರಂದು ಮದ್ಯಾಹ್ನ 1-00 ಗಂಟೆಗೆ ಆರೋಪಿತನಾದ ಸಿದ್ದಪ್ಪ ತಂದೆ ಯಲ್ಲಪ್ಪ ಬನ್ನಿಕೊಪ್ಪ  ವಯ 70 ವರ್ಷ ಜಾ: ಕುರಬರ ಉ: ಕೂಲಿ ಕೆಲಸ ಸಾ: ಬಿಸರಳ್ಳಿ ತಾ:ಜಿ: ಕೊಪ್ಪಳ ಇವನು ಬಿಸರಳ್ಳಿ ಗ್ರಾಮದ ಶ್ರೀ ದುರ್ಗಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆಯಾದ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ ಶ್ರೀ. ಶಂಕರಗೌಡ ಎ.ಎಸ್.ಐ. ಅಳವಂಡಿರವರು ತಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 835=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ವಾಪಸ್ ಠಾಣೆಗೆ ಬಂದು ಆರೋಪಿತನ ಮೇಲೆ ಕ್ರಮ ಕುರಿತು ಹಾಜರಪಡಿಸಿದ್ದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 191/2015  ಕಲಂ 78(3) Karnataka Police Act.
ದಿ: 06-10-2015 ರಂದು 6-45 ಪಿ.ಎಂ. ಕ್ಕೆ ಫಿರ್ಯಾದಿದಾರರಾದ ಶ್ರೀ ಸತೀಶ ಪಾಟೀಲ ಪಿ.ಐ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿ: 06-10-2015 ರಂದು 5-00 ಪಿ.ಎಂ. ಕ್ಕೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಗವಿಮಠದ ಕೆರೆಯ ದಂಡೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಕೂಡಿಕೊಂಡು ಜನರಿಗೆ 1=00 ರೂಪಾಯಿಗೆ 80=00 ರೂಪಾಯಿ ಯಾರ ಅದೃಷ್ಟ ಹಚ್ಚಿರಿ ಅಂತಾ ಕೂಗುತ್ತಾ ಓ.ಸಿ. ಮಟಕಾ ನಂಬರ್ ಬರೆದುಕೊಡುತ್ತಿದ್ದವರ ಮೇಲೆ ದಾಳಿ ಮಾಡಿ ಹಿಡಿದುಕೊಂಡಿದ್ದು, ಸದರಿ ಆರೋಪಿತರಿಂದ 1] 640=00 ಮಟಕಾ ಜೂಜಾಟದ ನಗದು ಹಣ, 2] ಒಂದು ಮಟಕಾ ಪಟ್ಟಿ 3] ಒಂದು ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ದಾಳಿ ಕಾಲಕ್ಕೆ ಸಿಕ್ಕ ಆರೋಪಿತರು ಮಟಕಾ ಪಟ್ಟಿಯನ್ನು ಸುಧಾಕರ ಹೊಸಮನಿ ಸಾ: ಸಜ್ಜಿ ಓಣಿ ಹಾಗೂ ಪರಶುರಾಮ ಗಿಣಗೇರಿ ಸಾ: ಅಂಬೇಡ್ಕರ ನಗರ ಇವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಆದ್ದರಿಂದ ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸ್ವೀಕೃತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 304/2015  ಕಲಂ  87 Karnataka Police Act.
ದಿನಾಂಕ:- 06-10-2015 ರಂದು ಸಂಜೆ 6:00  ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.  ಇಂದು ದಿನಾಂಕ:- 06-10-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಡಾಣಾಪೂರು ಗ್ರಾಮದ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಹಾಗೂ ಸಿಪಿಐ ಗಂಗಾವತಿ ಗ್ರಾಮೀಣ ವೃತ್ತ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 180, 110, 160, 97, 358, 323, 429, 131, 129, 361, 363, 277 ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲಳಲ್ಲಿ ಠಾಣೆಯಿಂದ ಸಂಜೆ 4:00 ಗಂಟೆಗೆ ಹೊರಟು ಡಾಣಾಪೂರು ಊರ ಮುಂದೆ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 4:30 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 6 ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1)  ರಾಮಣ್ಣ ತಾಯಿ ಯಲ್ಲಮ್ಮ ಡಂಬರು, ವಯಸ್ಸು 42 ವರ್ಷ, ಕೂಲಿ ಕೆಲಸ ಸಾ: ಡಾಣಾಪೂರು (2) ಸುರೇಶ ತಂದೆ ಸಣ್ಣಪ್ಪ ಉಪ್ಪಾರ, 28 ವರ್ಷ, ವ್ಯವಸಾಯ ಸಾ: ಡಾಣಾಪೂರು (3) ಶರಣಯ್ಯ ತಂದೆ ಅಮರಯ್ಯ, ಹಿರೇಮಠ, ವಯಸ್ಸು 29 ವರ್ಷ, ವ್ಯವಸಾಯ ಸಾ: ಡಾಣಾಪೂರು (4) ಮಲ್ಲಯ್ಯ ತಂದೆ ಕರೆಕಣ್ಣು ಹನುಮಂತ ಚೆಲವಾದಿ, 35 ವರ್ಷ, ಕೂಲಿ ಕೆಲಸ ಸಾ: ಡಾಣಾಪೂರು (5) ಮಲ್ಲಿಕಾರ್ಜುನ ತಂದೆ ಬಸಣ್ಣ ಮರಳಿ, ವಯಸ್ಸು 54 ವರ್ಷ, ಲಿಂಗಾಯತ ಉ: ವ್ಯವಸಾಯ ಸಾ: ಡಾಣಾಪೂರು (6) ಯಂಕಣ್ಣ ತಂದೆ ಬಾಳಪ್ಪ ಗೊಂಡಬಾಳ, ವಯಸ್ಸು 65 ವರ್ಷ, ಉಪ್ಪಾರ ಉ: ಕೂಲಿ ಕೆಲಸ ಸಾ: ಡಾಣಾಪೂರು ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 1,450-00 ಗಳು, 52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು. ಈ ಬಗ್ಗೆ ಸಂಜೆ 4:30 ರಿಂದ 5:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 6:00 ಗಂಟೆಗೆ ಠಾಣೆಗೆ ವಾಪಸ್ ಬಂದು ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ ” ಅಂತಾ ಸಾರಾಂಶ ಇದ್ದು  ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು ಕಾರಣ  ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಸಂಜೆ 6:30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 304/2015 ಕಲಂ 87 ಕೆ.ಪಿ. ಕಾಯ್ದೆ ಅಡಿ ದಾಖಲು ಮಾಡಿದ್ದು ಇರುತ್ತದೆ.
4) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 225/2015  ಕಲಂ 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 504, 506 ಐ.ಪಿ.ಸಿ :.
ದಿನಾಂಕ 06-10-2015 ರಂದು 1800 ಗಂಟೆಗೆ  ಶ್ರೀ ಆರ್. ಬದರೀನಾಥ ತಂದೆ ಶಿವಯ್ಯ ಶೆಟ್ಟಿ, ವಯಸ್ಸು 59 ವರ್ಷ, ಜಾ: ವೈಶ್ಯ, ಉ: ವ್ಯಾಪಾರ, ಸಾ: ಓ.ಎಸ್.ಬಿ. ರಸ್ತೆ, 13ನೇ ವಾರ್ಡ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರು ಈಗ್ಗೆ 5 ವರ್ಷಗಳ ಹಿಂದೆ ಗಂಗಾವತಿ ನಗರದ ಜಯನಗರದಲ್ಲಿರುವ ಆರೋಪಿ ಶಶಿಧರಸ್ವಾಮಿ ತಂದೆ ಅಯ್ಯಸ್ವಾಮಿ ಇವರ ಹತ್ತಿರ 1,00,000 ರೂ. ಗಳನ್ನು ಸಾಲವಾಗಿ  ಪಡೆದುಕೊಂಡಿದ್ದು, ಸದರಿ ಸಾಲಕ್ಕೆ ಆಧಾರವಾಗಿ ಸಹಿ ಮಾಡಿದ ನಾಲ್ಕು ಖಾಲಿ ಚೆಕ್, ಒಂದು ಪ್ರಾಮಿಸರಿ ನೋಟ್ ಪಡೆದುಕೊಂಡಿದ್ದು ಫಿರ್ಯಾದಿದಾರರು 100 ರೂ. ಗಳಿಗೆ 15 ರೂ. ಗಳ ಬಡ್ಡಿಯಂತೆ ಪ್ರತಿ ತಿಂಗಳಿಗೆ ರೂ. 15,000/- ಗಳ ಪ್ರಕಾರ ಎರಡು ವರ್ಷ ಅಂದರೆ ರೂ. 3,60,000/- ಗಳನ್ನು ಕಟ್ಟಿದರೂ, ಅವರಿಗೆ ಮಾಹಿತಿ ಇಲ್ಲದಂತೆ ಅವರು ಕೊಟ್ಟ ಖಾಲಿ ಚೆಕ್ ನಲ್ಲಿ ರೂ. 7,00,000-00 ಗಳನ್ನು ತುಂಬಿ ಬ್ಯಾಂಕಿನಲ್ಲಿ ಹಾಕಿ ಅದು ಊರ್ಜಿತವಾಗದೇ ಇರುವುದರಿಂದ ಅವರ ವಿರುದ್ಥ ಸುಳ್ಳು ಫಿರ್ಯಾದಿಯನ್ನು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ್ದು, ಅದರ ಸಿ.ಸಿ. ನಂ. 186/2013 ಇರುತ್ತದೆ.  ಕಾರಣ ದಿನಾಂಕ 05-10-2015 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿದಾರರು ಆರೋಪಿ ಮನೆಗೆ ಹೋಗಿ ಕೇಳಿದಾಗ ಆರೋಪಿಯು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
5) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 305/2015  ಕಲಂ 279, 337 ಐ.ಪಿ.ಸಿ:.
ದಿನಾಂಕ:- 06-10-2015 ರಂದು ರಾತ್ರಿ 8:15 ಗಂಟಗೆ ಫಿರ್ಯಾದಿದಾರರಾದ ರಾಜೇಂದ್ರಕುಮಾರ ತಂದೆ ಸೋಹನಚಂದ್ ವಯಸ್ಸು 70 ವರ್ಷ, ಜಾತಿ: ಲಿಂಗಾಯತ ಉ: ಕಿರಾಣಿ ವ್ಯಾಪಾರ ಸಾ: ಮನೆ ನಂ: 3, ಮಂಜುನಾಥ ಚಿತ್ರ ಮಂದಿರ ಹತ್ತಿರ, ಗಿಣಿಗೇರಾ ತಾ: ಕೊಪ್ಪಳ.  ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. "ನಾನು ಗಿಣಿಗೇರಾ ಗ್ರಾಮದ ನಿವಾಸಿ ಇದ್ದು ಕಿರಾಣಿ ವ್ಯಾಪಾರ ಮಾಡಿಕೊಂಡಿರುತ್ತೇನೆ.  ನಿನ್ನೆ ದಿನಾಂಕ:-  05-10-2015 ರಂದು ಮಧ್ಯಾಹ್ನ 1:00  ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಂಗಿಯ ಮಗಳಾದ ಶ್ರೀಮತಿ ಲಕ್ಷ್ಮೀದೇವಿ ಗಂಡ ಮಲ್ಲೇಶ ಬಗನಾಳ, ವಯಸ್ಸು 45 ವರ್ಷ, ಲಿಂಗಾಯತ ಸಾ: ಗಿಣಿಗೇರಾ ಇಬ್ಬರೂ ಕೂಡಿಕೊಂಡು ಲಕ್ಷ್ಮೀದೇವಿಯ ಟಿ.ವಿ.ಎಸ್. ಎಕ್ಸೆಲ್ ಸೂಪರ ಹೆವಿ ಡ್ಯೂಟಿ ಮೋಟಾರ ಸೈಕಲ್ ನಂಬರ್: ಕೆ.ಎ-37/ ವೈ-7098 ನೇದ್ದರಲ್ಲಿ ಗಿಣಿಗೇರಾದಿಂದ ಮಂತ್ರಾಲಯಕ್ಕೆ ಹೊರಟೆವು.  ದೇವರ ದರ್ಶನ ಮಾಡಿಕೊಂಡು ಇಂದು ದಿನಾಂಕ:- 06-10-2015 ರಂದು ಮಧ್ಯಾಹ್ನ 12:30 ಗಂಟೆಗೆ ಮಂತ್ರಾಲಯದಿಂದ ಹೊರಟೆವು. ಮೋಟಾರ ಸೈಕಲನ್ನು ನಾನು ನಡೆಯಿಸುತ್ತಿದ್ದು, ಲಕ್ಷ್ಮೀದೇವಿ ಹಿಂಭಾಗದಲ್ಲಿ ಕುಳಿತಿದ್ದಳು.  ನಾವು ಸಂಜೆ 6:30 ಗಂಟೆಯ ಸುಮಾರಿಗೆ ಸಿಂಧನೂರು-ಗಂಗಾವತಿ ಮುಖ್ಯ ರಸ್ತೆಯಲ್ಲಿ ಜಂಗಮರ ಕಲ್ಗುಡಿ ಗ್ರಾಮದ ಹೊಸಕೇರಾ ಕ್ರಾಸ್ ಹತ್ತಿರ ಬರುತ್ತಿರುವಾಗ ನಮ್ಮ ಬಲಗಡೆಯಿಂದ ಅಂದರೆ ಹೊಸಕೇರಾ ರಸ್ತೆ ಕಡೆಯಿಂದ ಒಂದು ಟಿಪ್ಪರ್ ಲಾರಿ ಚಾಲಕನು ತನ್ನ ಟಿಪ್ಪರನ್ನುಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು.  ಇದರಿಂದ ನಾವು ಕೆಳಗೆ ಬಿದ್ದಿದ್ದು, ನನಗೆ ಯಾವುದೇ ಗಾಯಗಳಾಗಲಿಲ್ಲಾ.  ಲಕ್ಷ್ಮೀದೇವಿಗೆ ತಲೆಗೆ ಮತ್ತು ಮೊಣಕಾಲಿಗೆ ಒಳಪೆಟ್ಟಾದವು.  ಅವಳಿಗೆ ವಾಂತಿ ಸಹ ಆಗಿರುತ್ತದೆ.  ಅಪಘಾತ ಮಾಡಿದ ಟಿಪ್ಪರ್ ನೋಡಲು ಅದರ ನಂಬರ್: ಕೆ.ಎ-07/ 7624 ಅಂತಾ ಇದ್ದು, ಚಾಲಕನ ಹೆಸರು ವಿಚಾರಿಸಲು ಸೈಯ್ಯದ್ ಮಹೆಬೂಬ ತಂದೆ ಸೈಯ್ಯದ್ ಹುಸೇನ್ ಸಾಬ ಸಾ: ಕೊರ್ರಮ್ಮ ಕ್ಯಾಂಪ್ (ಬಸವನದುರ್ಗ) ಅಂತಾ ತಿಳಿಸಿದನು.  ನಂತರ ನಾನು ಮತ್ತು ಲಕ್ಷ್ಮೀದೇವಿ ಯಾವುದೋ ಒಂದು ವಾಹನದಲ್ಲಿ ಅಲ್ಲಿಂದ ಪೊಲೀಸ್ ಠಾಣೆಗೆ ಬಂದಿರುತ್ತೇವೆ. ನನಗೆ ಯಾವುದೇ ಪೆಟ್ಟಾಗದ ಕಾರಣ ನಾನು ಆಸ್ಪತ್ರೆಗೆ ಹೋಗಲು ಇಚ್ಛಿಸುವುದಿಲ್ಲಾ.  ಲಕ್ಷ್ಮೀದೇವಿಗೆ ಆಸ್ಪತ್ರೆಗೆ ಕಳುಹಿಸಲು ವಿನಂತಿ.  ಕಾರಣ  ಈ ಅಪಘಾತ ಮಾಡಿದ ಟಿಪ್ಪರ್ ಚಾಲಕ  ಸೈಯ್ಯದ್ ಮಹೆಬೂಬ ಈತನ ವಿರುದ್ಧ  ಕಾನೂನು ಕ್ರಮ ಜರುಗಿಸಲು ವಿನಂತಿ."ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ  ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
6) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 174/2015  ಕಲಂ 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.

ದಿನಾಂಕ: 06-10-2015 ರಂದು ಬೆಳಗಿನ ಜಾವ 1-45 ಗಂಟೆಗೆ ಹೈ ವೇ ಕರ್ತವ್ಯದಲ್ಲಿದ್ದ ಎ.ಎಸ್.ಐ. ಬಸವರಾಜ ರವರು ನೀಡಿದ ಗಣಕೀಕರಣ ಫಿರ್ಯಾದಿಯನ್ನು ಹಾಜರುಪಡಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ: 05-10-2015 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಇಲಕಲ್ -ಕುಷ್ಟಗಿ ಎನ್.ಹೆಚ್.-50 ರಸ್ತೆ ಸಾಯಿ ಸ್ಟೀಲ್ ಹತ್ತಿರ ಟ್ರಕ್ ಲಿಬೈ  ಎದುರುಗಡೆ ರಸ್ತೆಯ ಮೇಲೆ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮೋ. ಸೈ. ನಂ: ಕೆ.ಎ-37/ಯು-9111 ನೇದ್ದರ ಸವಾರನಿಗೆ ಅಪಘಾತಪಡಿಸಿ ಅಪಘಾತದಲ್ಲಿ ಮೃತ ಶ್ಯಾಮಣ್ಣ ಇತನು ಮೃತಪಟ್ಟಂತೆ ಕಂಡು ಬಂದಿದ್ದು ನಂತರ ಮೃತ ದೇಹವನ್ನು ಎನ್.ಹೆಚ್.ಎ.ಐ. ವಾಹನದಲ್ಲಿ ಸರ್ಕಾರಿ ಆಸ್ಪತ್ರೆ ಕುಷ್ಟಗಿಗೆ ತಂದು ಹಾಕಿದ್ದು ವೈದ್ಯಾಧಿಕಾರಿಗಳು ನೋಡಿ ಸದರಿಯವನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು ನಂತರ ಶವಗಾರ ಕೋಣೆಯಲ್ಲಿ ಮೃತ ದೇಹವನ್ನು ಹಾಕಿ ವಾಪಾಸ ಠಾಣೆಗೆ  ಬಂದು ಫಿರ್ಯಾದಿಯನ್ನು ಸಲ್ಲಿಸಿದ್ದು ಸದರಿ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 174/2015 ಕಲಂ: 279,304(ಎ)  ಐ.ಪಿ.ಸಿ ಮತ್ತು 187 ಐ.ಎಂ.ವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

0 comments:

 
Will Smith Visitors
Since 01/02/2008