Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, October 8, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 156/2015  ಕಲಂ 143, 147, 447, 323, 324, 504, 506 ಸಹಿತ 149 ಐ.ಪಿ.ಸಿ:.
ನಿನ್ನೆ ದಿನಾಂಕ 06-10-2015 ರಂದು ಸಂಜೆ 7-00 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಬಂದ ಮೇರೆಗೆ ಶ್ರೀ ನಾಗನಗೌಡ ಸಿಹೆಚ್ಸಿ 38 ರವರು ಕೊಪ್ಪಳ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳನ್ನು ನೋಡಿ ನಂತರ ಫಿರ್ಯಾಧಿದಾರಳಾದ ಮರಿಯಮ್ಮ ತಂದೆ ಹನುಮಂತಪ್ಪ ಕರಡೋಣ ವಯ.20 ವರ್ಷ ಜಾ.ಕುರುಬರು .ಕೂಲಿಕೆಲಸ ಸಾ.ಸಿರವಾರ ತಾ.ಗಂಗಾವತಿ ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ದಿವಸ 07-10-2015 ರಂದು ಸಂಜೆ 5-00 ಗಂಟೆಗೆ ಬಂದಿದ್ದು ಸದರಿ ಹೇಳಿಕೆ ಫಿರ್ಯಾಧಿಯ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 06-10-2015 ರಂದು ಫಿಯರ್ಾದಿದಾರಳು ತಮ್ಮ ಗ್ರಾಮಕ್ಕೆ ಹೊಂದಿಕೊಂಡು ಗ್ರಾಮದ ಸೀಮಾದಲ್ಲಿ ಬರುವ ತಮ್ಮ ಹೊಲದಲ್ಲಿ ಸಜ್ಜೆ ಬೆಳೆಯಲ್ಲಿ ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತನ್ನ ತಂಗಿಯಾದ ಹಂಪಮ್ಮ ಈಕೆಯೊಂದಿಗೆ ಕಸ ತೆಗೆಯುತ್ತಾ ಹೊಲದ ಕೇಸ್ ಈಗ ಗಂಗಾವತಿಯಿಂದ ಧಾರವಾಡಕ್ಕೆ ಹೋಗಿದ್ದು ಅಲ್ಲಿ ಯಾವಾಗ ಮುಗಿಯುತ್ತದೆಯೋ ಎನೋ ಹೊಲದಲ್ಲಿ ಖಾಲಿ ದುಡಿಯುವಂತಾಗಿದೆ ಅಂತಾ ಮಾತನಾಡಿಕೊಳ್ಳುತ್ತಿದ್ದಾಗ ಅಲ್ಲಿಯೇ ಹತ್ತಿರದಲ್ಲಿರುವ ತಮ್ಮ ಮನೆಯಲ್ಲಿದ್ದ ಆರೋಪಿತರು ಕೂಡಿಕೊಂಡು ತಮ್ಮ ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಹೊಲದಲ್ಲಿ ಬಂದು ಏಕಾಏಕಿಯಾಗಿ ಲೇ ಸೂಳೆಯರೇ ಏನು ಮಾತನಾಡಿಕೊಳ್ಳುತ್ತಿರಿ ನಿಮ್ಮದು ಬಹಳ ಆಗಿದೆ ಅಂದವರೇ ಕಟ್ಟಿಗೆಯಿಂದ, ಕೈಯಿಂದ ಬಡಿದು, ಕಾಲಿನಿಂದ ಒದ್ದಿದ್ದು ಇದರಿಂದಾಗಿ ನನ್ನ ಎಡಗೈ ಮೊಳಕೈ ಹತ್ತಿರ ಮತ್ತು ಬಲಗಾಲಿನ ಮೋಳಕಾಲಿನ ಮೇಲೆ ರಕ್ತ ಗಾಯ ಹಾಗೂ  ಎದೆಗೆ. ಹೊಟ್ಟೆಗೆ ಒಳಪೆಟ್ಟುಗಳನ್ನುಟು ಮಾಡಿದ್ದು ಮತ್ತು ತನ್ನ ತಂಗಿಗೆ ಎದೆಗೆ ಮತ್ತು ಹೊಟ್ಟೆಗೆ ಒಳಪೆಟ್ಟುಗಳನ್ನುಂಟು ಮಾಡಿದ್ದರಿಂದ ನಾವು ಅಲ್ಲಿಯೇ ಬಿದ್ದಿದ್ದು ನಂತರ ನಮಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆಯನ್ನು ಹಾಕಿ ಹೋಗಿರುತ್ತಾರೆ. ನಂತರ ನಾವು ಚಿಕಿತ್ಸೆ ಕುರಿತು ನನ್ನ ತಮ್ಮನಾದ ಮರಿಸ್ವಾಮಿ ಇತನೊಂದಿಗೆ ಕನಕಗಿರಿಗೆ ಬರುವಷ್ಟರಲ್ಲಿ ನನ್ನ ಅಣ್ಣನಾದ ದೇವಪ್ಪ ಈತನು ಫೋನ್ ಮೂಲಕ ಕೊಪ್ಪಳಕ್ಕೆ ಹೋಗಲು ತಿಳಿಸಿದ್ದರಿಂದ ಅಲ್ಲಿಂದ ಹೊರಟು ಕೊಪ್ಪಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿದ್ದು ಇರುತ್ತದೆ. ಕಾರಣ ನಮ್ಮನ್ನು ಬೈದು, ಹೊಡಿಬಡಿ ಮಾಡಿ ಜೀವಬೆದರಿಕೆಯನ್ನು ಹಾಕಿದ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ವಿನಂತಿಯಿರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 213/2015  ಕಲಂ 379 ಐ.ಪಿ.ಸಿ:.
ದಿನಾಂಕ :07-10-2015 ರಂದು ಬೆಳಗ್ಗೆ 10-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರಿ ಉಮೇಶ ತಂದಿ ದೊಡ್ಡಬಸಪ್ಪ ಯರಡೋಣಿ ವಯ-38 ವರ್ಷ ಜಾ-ಲಿಂಗಯತ ಉ-ಕೃಷಿ ಸಾ-ತಿಮ್ಮಾಪೂರ ತಾ- ಗಂಗಾವತಿ ಜಿ-ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ ನಾನು ನನ್ನ ವೈಯಕ್ತಿಕ ಕೆಲಸದ ಸಲುವಾಗಿ ಹಿರೋ ಹೊಂಡಾ ಸಿ.ಡಿ. ಡಾನ್ ಮೊಟಾರ್ ಸೈಕಲ್ಲನ್ನು ಹೊಸಪೇಟೆಯ ಶೋ ರೂಮಿನಲ್ಲಿ ಸನ್-2005 ನೇ ಸಾಲಿನಲ್ಲಿ ಖರಿದಿಸಿ ನಂತರ ಆರ್.ಟಿ.ಓ. ಕೊಪ್ಪಳ ರವರಲ್ಲಿ ನೊಂದಣಿ ಮಾಡಿಸಿದ್ದು ಅದರ ನಂ-ಕೆ.ಎ-37/ಕೆ-5444 ಅಂತಾ ಇದ್ದು ಅದನ್ನು ನಾನು ನನ್ನ ವೈಯಕ್ತಿಕ ಕೆಲಸದ ಸಲುವಾಗಿ ಉಪಯೊಗಿಸುತ್ತಿದ್ದು ಸದರಿ ಮೊಟಾರ್ ಸೈಕಲ್ಲನ್ನು ದಿನಾಂಕ 06-10-2015 ರಂದು ಸಾಯಂಕಾಲ ನಮ್ಮೂರಿನಿಂದ ಕಾರಟಗಿಗೆ ಬಂದು ಕಾರಟಗಿಯಲ್ಲಿ ನಮ್ಮ ಸಂಭಂದಿಕನಾದ ಪಂಪನಗೌಡ ತಂದೆ ಸಂಗನಗೌಡ ಇವರ ಮನೆಯ ಮುಂದುಗಡೆ ಸಾಯಂಕಾಲ 7-30 ಗಂಟೆಯ ಸುಮಾರಿಗೆ ನಿಲ್ಲಿಸಿ ನಾವು ಮನೆಯಲ್ಲಿ ಮಾತನಾಡುತ್ತಾ ಕುಳಿತುಕೊಂಡಿದ್ದೆವು ನಾವು ಮಾತುಕತೆ ಮುಗಿಸಿಕೊಂಡು ನಮ್ಮೂರಿಗೆ ಹೊಗಲೆಂದು ರಾತ್ರಿ 8-30 ಗಂಟೆಯ ಸುಮಾರಿಗೆ ಮನೆಯಿಂದ ಹೊರಗಡೆ ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ನನ್ನ Hero Honda CD DAWAN  KA-37 K-5444 , Rs- 25,000=00, chassis no-05B27F11579 Engine No-05B27E18920 ನೇದ್ದನ್ನು ಕಳ್ಳತನ ಮಾಡಿಕೊಂಡು ಹೊಗಿದ್ದು ನಾವು ಕಾರಟಗಿಯಲ್ಲಿ ಹಾಗೂ ಇತರ ಕಡೆಗೆ ಹುಡುಕಾಡಲು ಇಲ್ಲಿಯ ವರೆಗೂ ಸಿಗದ್ದರಿಂದ ಈಗ ತಡವಾಗಿ ತಮ್ಮಲ್ಲಿಗೆ ಬಂದು ಫಿರ್ಯಾದಿಯನ್ನು ಕೊಟ್ಟಿದ್ದು ಇರುತ್ತದೆ. ಕಾರಣ ಸದರಿ ಕಳ್ಳತನ ವಾದ ನನ್ನ ಮೊಟಾರ್ ಸೈಕಲ್ಲನ್ನು ಹುಡಕಿ ಕೊಡಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 175/2015  ಕಲಂ  110 (ಇ) ಮತ್ತು (ಜಿ) ಸಿ.ಆರ್.ಪಿ.ಸಿ:.

ದಿನಾಂಕ 07-10-2015 ರಂದು ನಾನು ಕುಷ್ಟಗಿ ಪಟ್ಟಣದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಕುಷ್ಟಗಿ ಪಟ್ಟಣದ ಎನ್.ಹೆಚ್-50  ಕ್ರಾಸ್ ಹತ್ತಿರ ತಾವರಗೇರಾ ರೋಡ ಜೆ.ಬಿ  ಬೋರವೆಲ್ ಮುಂದುಗಡೆ ಸಾವರ್ಜನಿಕ ಸ್ಥಳದಲ್ಲಿ ರಾತ್ರಿ 8-15 ಗಂಟೆಗೆ ಬಂದಾಗ ಇಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಹೋಗಿ ಬರುವ ಜನರಿಗೆ  ಅಸಭ್ಯವಾಗಿ ವರ್ತಿಸುತ್ತಾ ಯಾವ ಸೂಳೇ ಮಕ್ಕಳೂ ನಮಗೆ ಏನು ಮಾಡುತ್ತಾರೆ ಅಂತಾ ಅವಾಚ್ಯ ಶಬ್ದಳಿಂದ ಬೈದಾಡುತ್ತಾ ಅಲ್ಲದೆ ಯಾವ ಸರಕಾರ ಏನು ಮಾಡುತ್ತದೆ ಅಂತಾ ಬೈದಾಡುತ್ತಾ ಇದ್ದಾಗ ನಾನು ಅವನಿಗೆ ಈ ರೀತಿ ಮಾಡುವದು ಸರಿಯಲ್ಲಾ ಸುಮ್ಮನೆ ಹೋಗಿ ಅಂತಾ ಎಚ್ಚರಿಸಿದರೂ ಸಹ ಸದರಿಯವನು ತನ್ನ ವರ್ತನೆಯನ್ನು ಹಾಗೆಯೇ ಮುಂದುವರೆಸಿದ್ದರಿಂದ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ತನ್ನ ಹೆಸರು ಮಾರುತಿ ತಾಯಿ ಹುಲಿಗೆಮ್ಮ ಹಲಗಿ ವಯಾ: 30 ವರ್ಷ  ಜಾತಿ: ಹಿಂದೂ ಮಾದಿಗ ಉ:ವ್ಯಾಪಾರ  ಸಾ: ಕಂದಕೂರು  ಅಂತಾ ತಿಳಿಸಿದ್ದು ಸದರಿಯವರನ್ನು ಹಾಗೆಯೇ ಬಿಟ್ಟಲ್ಲಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ ಸಂಭವವಿದ್ದು ಮತ್ತು ಶಾಂತವಿದ್ದ ವಾತಾವರಣವನ್ನು ಕದಡುವ ಸ್ವಭಾವದವನು ಅಂತಾ  ಕಂಡು ಬಂದಿದ್ದರಿಂದ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ರಾತ್ರಿ 8-30 ಗಂಟೆಗೆ ಬಂದು ಠಾಣಾ ಗುನ್ನೆ ನಂ 175/2015 ಕಲಂ 110 [ಇ] [ಜಿ] ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008