ದಿನಾಂಕ 08-11-2015 ರಂದು ರಾತ್ರಿ 22-20 ಗಂಟೆಗೆ ಫಿರ್ಯಾದಿದಾರರಾದ ವೆಂಕಟಸಿಂಗ್ ತಂದಿ ರಾಮ ಸಿಂಗ್ ರಜಪೂತ ವಯಾ-40 ವರ್ಷ ಜಾ. ರಜಪೂತ ಸಾ. ಯರಡೋಣ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನಂದರೆ, ಪಿರ್ಯಾದಿದಾರರ ಸಂಬಂದಿಕರಾದ ಮನಮೋಹನ ಸಿಂಗ್ ತಂದಿ ಗುಂಡು ಸಿಂಗ್ ಹಜೇರಿ ಸಾ. ಬೀಜಾಪುರ ಈತನು ದಿನಾಂಕ_- 07-11-2015 ರಂದು ಕಾರಟಗಿಯಲ್ಲಿ ನಮ್ಮ ಸಂಬಂದಿಕರನ್ನು ಮಾತನಾಡಿಸಿಕೊಂಡು ಬರಲೆಂದು ಮೋಟಾರ್ ಸೈಕಲ್ ನಂ ಕೆ.ಎ-37 ವಾಯ್ 8602 ನೆದ್ದರಲ್ಲಿ ಹಾಗೂ ಮಾನಸಿಂಗ್ ತಂದಿ ಪ್ರತಾಪ್ ಸಿಂಗ್ ರಜಪೂತ ಸಾ. ಯರಡೋಣ ಈತನು ಕೂಡಾ ಮೋಟಾರ್ ಸೈಕಲ್ ನಂ ಕೆ.ಎ-37 ಡಬ್ಲು-9224 ನೆದ್ದರಲ್ಲಿ ಸತೀಶ ತಂದಿ ವೆಂಕಟೇಶ ಹುನಗುಂದ ಸಾ. ಯರಡೋಣ ಈತನಿಗೆ ಕರೆದುಕೊಂಡು ಕಾರಟಗಿಗೆ ಹೋಗಿ ವಾಪಾಸ್ ಯರಡೊಣ ಕಡೆಗೆ ದಿನಾಂಕ:-08-11-2015 ರಂದು ರಾತ್ರಿ 1-00 ಗಂಟೆಯಿಂದ 1-30 ಗಂಟೆಯ ಅವಧಿಯಲ್ಲಿ ಮಾನಸಿಂಗ್ ಈತನು ತನ್ನ ಮೋಟಾರ್ ಸೈಕಲ್ ನಂ ಕೆ.ಎ-37 ಡಬ್ಲೂ 9224 ನೆದ್ದರ ಮೇಲೆ ಸತೀಶನಿಗೆ ಕರೆದುಕೊಂಡು ಯರಡೋಣ ಕಡೆಗೆ ಗಂಗಾವತಿ ರಾಯಚೂರು ರೋಡಿನ ಮರ್ಲಾನಹಳ್ಳಿಯ ರಡ್ಡಿ ಕ್ಯಾಂಪ್ ಹತ್ತಿರ ಬರುತ್ತಿರುವಾಗ್ಗೆ ಹಿಂದುಗಡೆ ತನ್ನ ಮೋಟಾರ್ ಸೈಕಲ್ ನಂ ಕೆ.ಎ-37 ವಾಯ್-8602 ನೆದ್ದನ್ನು ಚಲಾಯಿಸಿಕೊಂಡು ಬರುತ್ತಿದ್ದ ನಮೋಹನ್ ಸೀಂಗ್ ತಂದಿ ಗುಂಡು ಸೀಂಗ್ ಈತನು ಮೋಟಾರ್ ಸೈಕಲ್ ನ್ನು ಅತೀ ವೇಗ ಅಜಾಗುರುಕತೆಯಿಂದ ವಾಹನದ ಅಂತರವನ್ನು ಕಾಯ್ದುಕೊಳ್ಳದೇ ಚಾಲಾಯಿಸಿಕೊಂಡು ಬಂದು ಮಾನಸಿಂಗ ಈತನು ಚಲಾಯಿಸಿಕೊಂಡು ಹೋರಟಿದ್ದ ಮೋಟಾರ್ ಸೈಕಲ್ ಹಿಂದೆ ಹಾಕಲು ಹೋಗಿ ಆತನ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟು ಅಪಗಾತ ಪಡಿಸಿದ್ದರಿಂದ ಸತೀಶನಿಗೆ ಎಡಗಾಲು ಮೋಣಕಾಲು ಕೆಳಗೆ ಗಂಭಿರ ರಕ್ತ ಗಾಯ ಹಾಗೂ ಮೂಳೆ ಮೂರಿತವಾಗಿದ್ದು , ತಲೆಗೆ ಮುಖಕ್ಕೆ ಬಾರಿ ರಕ್ತಗಾಯವಾಗಿತ್ತು ಮಾನಸಿಂಗ್ನಿಗೆ ತಲೆಗೆ, ಸೊಂಟಕ್ಕೆ ಹಣೆಗೆ ರಕ್ತ ಗಾಯ ಮತ್ತು ಎಡತೊಡಗೆ ಮೂಳೆ ಮೂರಿತ ಒಳಪೆಟ್ಟಾಗಿತ್ತು ಅಪಗಾತ ಪಡಿಸಿದ ಮೋನಮೋಹನ್ ಸಿಂಗ್ ಈತನಿಗೆ ಹಣೆಗೆ ಬಲಪಕ್ಕಡಿಗೆ, ರಕ್ತ ಗಾಯ ಹಾಗೂ ತೆರಿಚಿದ ಗಾಯವಾಗಿದ್ದವು ಅಪಘಾತದಲ್ಲಿ ಗಾಯಗೊಂಡ ಮೂರು ಜನರಿಗೆ ಚಿಕಿತ್ಸೆ ಗಾಗಿ ವ್ಯವಸ್ಥೆ ಮಾಡಿ ಈಗ ತಡವಾಗಿ ಠಾಣೆಗೆ ಬಂದು ನೀಡಿರುತ್ತೇನೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ದಿನಾಂಕ- 10-11-2015 ರಂದು ಬೆಳಗ್ಗೆ 8-30 ಗಂಟೆಯ ಸುಮಾರಿಗೆ ಈ ಪ್ರಕರಣದ ಫಿರ್ಯಾದಿದಾರರಾದ ಶ್ರೀ ವೆಂಕಟಸಿಂಗ್ ತಂದಿ ರಾಮಸಿಂಗ್ ರಜಪೂತ ಸಾ- ಯರಡೋಣಾ ಇವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದುಕೊಟ್ಟಿದ್ದೇನೆಂದರೆ, ಸದರ್ ಪ್ರಕರಣದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಎಸ್.ಡಿ.ಎಮ್. ಧಾರವಾಡದಲ್ಲಿ ಸೇರಿಕೆ ಮಾಡಿದ್ದ ಈ ಪ್ರಕರಣದ ಗಾಯಾಳು ಸತೀಶ ತಂದಿ ವೆಂಕಟಸಿಂಗ್ ಹುನಗುಂದ ಇತನು ಗುಣಮುಖನಾಗದೆ ಇಂದು ದಿನಾಂಕ- 10-11-2015 ರಂದು ಬೆಳಗ್ಗೆ 06-00 ಗಂಟೆಯ ಸುಮಾರಿಗೆ ಎಸ್.ಡಿ.ಎಮ್. ಆಸ್ಪತ್ರೆ ಧಾರವಾಡದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಂತೋಷಸಿಂಗ್ ಇವರು ಪೋನ್ ಮಾಡಿ ಮಾಹಿತಿ ತಿಳಿಸಿದ್ದರಿಂದ ತಮ್ಮಲ್ಲಿಗೆ ಬಂದು ಈ ಬಗ್ಗೆ ಲಿಖಿತವಾಗಿ ಬರೆದುಕೊಟ್ಟಿರುತ್ತೇನೆ ಅಂತಾ ಬರೆದುಕೊಟ್ಟಿದ್ದು ಇರುತ್ತದೆ. ಕಾರಣ ಸದರ್ ಪ್ರಕರಣದಲ್ಲಿ ಗಾಯಾಳು ಸತೀಶ ಇತನು ಮೃತಪಟ್ಟಿದ್ದರಿಂದ ಸದರ್ ಪ್ರಕರಣದಲ್ಲಿ ಕಲಂ-
304(ಎ) ಐ.ಪಿ.ಸಿ. ನೇದ್ದನ್ನು ಅಳವಡಿಸಿಕೊಳ್ಳಲು
ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದು ಇರುತ್ತದೆ.
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 104/2015 ಕಲಂ. 279,
304(ಎ) ಐ.ಪಿ.ಸಿ:.
ದಿನಾಂಕ: 09-11-2015 ರಂದು ಬೆಳಗ್ಗೆ
11-30 ಗಂಟಗೆ ಪಿರ್ಯಾದಿದಾರಾದ ವೀರೇಶ ತಂದೆ ಸೂಗೀರಪ್ಪ ಡಾವಣಗೇರೆ ಸಾ: ಬಿಸರಳ್ಳಿ ಇವರ ಒಂದು ಲಿಖಿತ
ಪಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಾಂಶವೇನೆಂರೆ ಬಿಸರಳ್ಳಿ- ಬೆಟಗೇರಿ ಕಾಮಗಾರಿಕೆಯಲ್ಲಿ ಮೇಸ್ತ್ರಿ
ಅಂತಾ ಕೆಲಸಾ ಮಾಡಿಕೊಂಡಿರುತ್ತಾರೆ ಸದರಿಕಾಮಗಾರಿಕೆಯನ್ನು ಭರಮಪ್ಪ ತಂದಿ ಜಗ್ಗಪ್ಪ ಜೋಗಿ ಇವರು ಗುತ್ತಿಗೆಯನ್ನು
ಪಡೆದುಸದರಿ ಕಾಮಗಾರಿಕೆ ಸಲುವಾಗಿ ನಮ್ಮೂರು ಪ್ರಾಣೇಶಪ್ಪ ಪೊಜಾರ ಇವರ ಹೊಲದಲ್ಲಿ ಕಾಮಗಾರಿಕೆಗೆ ಸಂಬಂದಿಸಿದ
ವಸ್ತುಗಳನ್ನು ಅಲ್ಲಿ ಅಂಗ್ರಹಿಸಿಸದ್ದು ಸದರಿ ಕಾಮಗಾರಿಕೆಯಲ್ಲಿ ಕೆಲಸ ಮಡುತ್ತಿರುವ ಅಲ್ಲಿಯೇ ಶೆಡ್ಡನ್ನು
ಹಾಕಿಕೊಂಡು ವಾಸವಾಗಿರುತ್ತಾರೆ ಸದರಿ ಕಾಮಗಾರಿಕೆ ಕೆಲಸಕ್ಕಾಗಿ ನಮ್ಮ ಗುತ್ತಿಗೆದಾರರಾದ ಭರಮಪ್ಪ ಇವರು
ತಮಗೆ ಪರಿಚಯಸ್ತನಾದ ನಾಗಪ್ಪ @ ನಾಗರಾಜ ತಂದಿ ರಾಮಣ್ಣ ಜೋಗಿ ವಯ: 26 ವರ್ಷ ಸಾ: ಎಂ. ತಿಮ್ಮಪುರ ತಾ: ರಾಮದುರ್ಗ ಬೆಳಗಾವಿ ಜಿಲ್ಲೆಯವರನ್ನು
ಹಾಗೂ ಇತರರನ್ನು ಕಾಮಗಾರಕೆಯ ಕೆಲಸಕ್ಕೆ ಕರೆದುಕೊಂಡು ಬಂದು ಕೆಲಸ ಮಾಡುತ್ತಿರುವ ಇಂದು ದಿನಾಂಕ:
09-11-2015 ಬೆಳಗ್ಗೆ ರಸ್ತೆ ಕಮಗಾರಿಕೆ ನಾಗಪ್ಪನನ್ನು ತಾನು ನಡೆಸುತ್ತಿದ್ದ ಟ್ಯಾಕ್ಟರ ನಂ: ಕೆ.ಎ.23
ಟಿ-9656 ಟ್ರಾಲಿ. ನಂ: ಕೆ.ಎ.23 ಟಿ-9653 ಇದರಲ್ಲಿ ಮರ್ಮನ್ನು ತುಂಬಿಕೊಂಡು ಬಂದು ಶೆಡ್ಡಿನಲ್ಲಿ
ನಾಷ್ಟಾವನ್ನು ಮಾಡಿಕೊಂಡು ಸದರಿ ಮರ್ಮನ್ನು ತುಂಬಿಕೊಂಡು ಟ್ಯಾಕ್ಟರನಲ್ಲಿ ಶೆಡ್ಡಿನಿಂದ ಚೆಲಾಯಿಸಿಕೊಂಡು
ಹೊಗುತ್ತಿದ್ದಾಗ ಟ್ಯಾಕ್ಟರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಮದ ನಡೆಸಿಕೊಂಡು ಹೋಗಿ ರಸ್ತೆಯ
ದಿಬ್ಬವನ್ನು ಒಮ್ಮಲೆ ಹತ್ತಿಸಿದಾಗ ಇಂಜಿನ್ ಮುಖ ಮೆಲೆತ್ತಿ ಟ್ರಾಲಿಯ ಮೇಲೆ ಹಿಮ್ಮುಕವಗಿ ಬಿದ್ದಿದ್ದರಿಂದ
ಅಲ್ಲಿ ಡೋಜರ್ ಕೆಲಸ ಮಾಡಿತ್ತಿದ್ದ ಕಶಪ್ಪ ಈತನು ಡೋಜರ್ ತೆಗೆದುಕೊಂಡು ಬಂದು ಟ್ಯಾಕ್ಟರ್ ಇಂಜಿನನ್ನು
ಸೀದಾ ಮಡಿ ನೋಡಲು ನಾಗಪ್ಪನಿಗೆ ತಲೆಯ ಹಿಂದೆ ಬಲಗಡೆ ಬಾಯಿ ಹತ್ತಿರ ಬಲ ಕಿವಿಯ ಹತ್ತಿರ ಬಾರಿ ಸ್ವರೂಪದ
ರಕ್ತಗಾಯವಾಗಿ ರಕ್ತ ಸೋರುತ್ತಿತ್ತು ಅಲ್ಲದೆ ಮೂಗಿನಲ್ಲಿ ರಕ್ತಸಹ ಬರುತ್ತಿತ್ತು ನಂತರ ಆತನಿಗೆ ಟ್ಯಾಕ್ಟರ್
ನಿಂದ ಕೆಳಗೆ ತೆಗೆದು ಹಾಕಿ ಉಪಚರಿಸಿ 108 ವಾಹನಕ್ಕೆ ಪೋನ್ ಮಡಿದೆವು ಅಷ್ಟರಲ್ಲಿ ನಾಗಪ್ಪನನ್ನು ಬಿಕ್ಕಿ
ಬಿಕ್ಕಿ ಸ್ಥಳದಲ್ಲಿಯೇ ಮೃತ ಮೃತ ಪಟ್ಟನು ಆಗ ಸಮಯ 09-30 ಗಂಟೆ ಆಗಿರಬಹುದು ನಾಗಪ್ಪ @ ನಾಗರಾಜ ಜೋಗಿ
ಸಾ: ತಿಮ್ಮಪುರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಸಾರಾಂಶದ ಮೇಲಿಂದ ಪ್ರಕರಣ
ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 79/2015 ಕಲಂ. 279,
338 ಐ.ಪಿ.ಸಿ:.
ದಿನಾಂಕ :.09.11.2015 ರಂದು ರಾತ್ರಿ 7
:45 ಗಂಟೆ ಸುಮಾರಿಗೆ ಕುಷ್ಟಗಿ - ಹೊಸಪೇಟ್ ಎನ್ಹೆಚ್ 50 ರಸ್ತೆಯ ಮೆಲೆ ಮ್ಯಾದನೇರಿ ಕ್ರಾಸ್ದಲ್ಲಿ
ಆರೋಪಿತನು ತಾನು ನಡೆಸುತ್ತಿದ್ದ ಲಾರಿ ನಂ ಎಂ.ಹೆಚ್. 20 ಟಿ.ಸಿ 2529 ನೆದ್ದನ್ನು ಕುಷ್ಟಗಿ ಕಡೆಯಿಂದ
ಹೊಸಪೇಟ್ ಕಡೆಗೆ ಹೋಗುವಾಗ ಮುಂದೆ ಹೊರಟಿದ್ದ ಪಿರ್ಯಾದಿ ಲಾರಿ ನಂ ಟಿ.ಎನ್.34
ಡಬ್ಲೂ-3701 ನೇದ್ದಕ್ಕೆ ಅಂತರವನ್ನು ಕಾಪಾಡದೆ ಮ್ಯಾದನೇರಿ ಕ್ರಾಸ್ ಹತ್ತಿರ ರೋಡ ಹಂಪ್ಸ್ದಲ್ಲಿ ನಿಧಾನವಾಗಿ
ಚಲಾಯಿಸುವಾಗ ಪಿರೋಪಿತನು ಅತಿ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಹಿಂದಿನಿಂದ ಒಮ್ಮಿಂದೊಮ್ಮೆಲ್ಲೆ
ಪಿಯರ್ಾದಿಯ ಲಾರಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಸದರಿ ಅಪಘಾತದಲ್ಲಿ ಆರೋಪಿತನಿಗೆ ಭಾರಿ ಸ್ವರೂಪದ
ರಕ್ತಗಾಯ ಹಾಗೂ ಒಳಪೆಟ್ಟುಗಳಾಗಿದ್ದು ಇರುತ್ತದೆ, ನಂತರ ಪಿರ್ಯಾದಿದಾರನು ಆರೋಪಿತನಿಗೆ ಚಿಕಿತ್ಸೆ
ಕುರಿತು ಇಲಕಲ್ ಮಹಾಂತೇಶ ಅಕ್ಕಿ ಆಸ್ಪತ್ರಗೆ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿ ಇಂದು ದಿನಾಂಕ
:10.11.2015 ರಂದು ತಡವಾಗಿ ಠಾಣೆಗೆ ಬಂದು ಪಿರ್ಯಾಧಿ ನೀಡಿದ್ದು ಇತ್ಯಾದಿ ಪಿರ್ಯಾದಿ ಸಾರಾಂಶದ ಮೇಲಿಂದ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 334/2015 ಕಲಂ 143, 147, 148, 448, 323, 324, 354, 504, 506 ಸಹಿತ 149
ಐ.ಪಿ.ಸಿ:.
ದಿನಾಂಕ:- 09-11-2015 ರಂದು ಬೆಳಿಗ್ಗೆ 9:00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ
ಕಾಮಾಕ್ಷಿ ಗಂಡ ದ್ಯಾವಣ್ಣ ಕನ್ನಾಳ, ವಯಸ್ಸು 25 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: 1ನೇ ವಾರ್ಡ-ಚಿಕ್ಕಜಂತಕಲ್ ತಾ: ಗಂಗಾವತಿ ಇವರು ಠಾಣೆಗೆ
ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ದಿನಾಂಕ:- 05-11-2015 ರಂದು
ರಾತ್ರಿ 7:20 ಗಂಟೆಯ ಸುಮಾರಿಗೆ ನಾನು ನನ್ನ ಮನೆಯ ಮೇಲೆ ವಿದ್ಯುತ್ ಧೀಪದ ಸಲುವಾಗಿ (1) ರಮೇಶ
ತಂದೆ ಯಂಕಣ್ಣ ವಯಸ್ಸು: 25 ವರ್ಷ ಈತನು ನನ್ನೊಂದಿಗೆ ಜಗಳ ಮಾಡಿದ್ದಕ್ಕೆ ಇತರೆ 8 ಜನರು ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ನಮ್ಮ
ಮನೆಯ ಹತ್ತಿರ ಬಂದು ಯಾಕೇ ನಮ್ಮ ಮನೆಯ ಮುಂಭಾಗ ಇರುವ ಲೈಟಿನ ಕಂಬಕ್ಕೆ ಕಟ್ಟಿಗೆಯಿಂದ
ಬಡಿಯುತ್ತಿಯಾ ಸೂಳೆ ಅಂತಾ ಅವಾಚ್ಯವಾಗಿ ಬೈದಾಗ ಯಾಕೇ ಬೈಯುತ್ತೀರಿ ಅಂತಾ ಹೇಳಲು “ ಅದನ್ನೇನು ಕೇಳುತ್ತೀಯಾ ಸೂಳೆ ರಂಡೆ ” ಎಂದು ಅವಾಚ್ಯವಾಗಿ ಬೈದು ಮೈಕೈ ಮುಟ್ಟಿ ಎಳೆದಾಡಿ ಹೊಡೆಬಡೆ
ಮಾಡುತ್ತಿರುವಾಗ ಅಲ್ಲಿಯೇ ಇದ್ದ ನನ್ನ ಗಂಡ ದ್ಯಾವಣ್ಣ ತಂದೆ ಭೀಮಣ್ಣ ಕನ್ನಾಳ 30 ವರ್ಷ, ಮಾವ ನಿಂಗಪ್ಪ ತಂದೆ ಹನುಮಂತಪ್ಪ ಉಳ್ಳಿಮುದ್ದಿ 50 ವರ್ಷ ಹಾಗೂ
ಅತ್ತೆಯಾದ ಗಂಗಮ್ಮ ಗಂಡ ಭೀಮಣ್ಣ ಕನ್ನಾಳ 60 ವರ್ಷ ಇವರುಗಳು ಬಂದು ಯಾಕೇ ಈ ರೀತಿ ಮಾಡುತ್ತೀರಿ
ಅಂತಾ ಹೇಳಲು ಅವರಿಗೂ ಸಹ ಎಲ್ಲರೂ ಸೇರಿಕೊಂಡು ಮೇಲೆ ತೋರಿಸಿದವರು ಕೂಡಿಕೊಂಡು ಕಲ್ಲು ಮತ್ತು
ಕಟ್ಟಿಗೆ ತೆಗೆದುಕೊಂಡು ಹೊಡಿ-ಬಡಿ ಮಾಡಿದ್ದು, ಇವರಲ್ಲಿ ರಮೇಶ, ಸುರೇಶ, ದ್ಯಾವಣ್ಣ ಇವರುಗಳು
ಕಟ್ಟಿಗೆಗಳನ್ನು ಹಿಡಿದುಕೊಂಡಿದ್ದು ಗೊಂದ್ಲೆಪ್ಪ, ಉಮಾದೇವಿ ಹುಲಿಗೆಮ್ಮ, ಇವರುಗಳು ಕಲ್ಲುಗಳನ್ನು ಹಿಡಿದುಕೊಂಡಿದ್ದರು. ನಂತರ ನಾನು ಪುನ: ಈ
ಜಗಳವನ್ನು ಬಿಡಿಸಲು ಹೋದಾಗ ಅನಸೂಯಾ ಮತ್ತು ಸರೋಜ ಇವರುಗಳು ನನ್ನ ಕೂದಲನ್ನು ಮತ್ತು ಕುತ್ತಿಗೆ
ಹಿಡಿದು ಎಳೆದಾಡಿದ್ದು ಅಲ್ಲದೇ ಎಲ್ಲರೂ ಸೇರಿ ನನಗೆ ಅವಾಚ್ಯವಾಗಿ ನಿನೇನು ಬಿಡಿಸಲು ಬರುತ್ತೀಯಾ
ರಂಡೆ ಎಂದು ಬೈದು ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಆಗ
ಈ ಜಗಳವನ್ನು ನೋಡಿ ನಮ್ಮ ಮನೆಯ ಹತ್ತಿರದವರಾದ (1) ತಿಮ್ಮಣ್ಣ ತಂದೆ ಹನುಮಂತಪ್ಪ 32 ವರ್ಷ (2)
ದ್ಯಾವಮ್ಮ ಗಂಡ ನಾಗಪ್ಪ ಮ್ಯಾಗಡಿ, 50 ವರ್ಷ (3) ಅಂಭಣ್ಣ ತಂದೆ ಹುಲಗಪ್ಪ 28 ವರ್ಷ ಇವರುಗಳು ಬಂದು ಬಿಡಿಸಿಕೊಂಡರು.
ಇದರಿಂದಾಗಿ ನನಗೆ ಕುತ್ತಿಗೆ ಸೊಂಟಕ್ಕೆ ಒಳಪೆಟ್ಟಾಗಿದ್ದು ಇದೆ. ಈ ಜಗಳದಲ್ಲಿ ನನ್ನ
ಕುತ್ತಿಗೆಯಲ್ಲಿದ್ದ ತಾಳಿ ಸರ ಮತ್ತು ನನ್ನ ಅತ್ತೆಯ ಬೋರಮಳ ಸರ ಹರಿದು ಬಿದ್ದಿದ್ದು ಇರುತ್ತದೆ.
ನಂತರ ನಾನು ಮತ್ತು ಅತ್ತೆ, ಮಾವ ಮೂರು ಜನರು ಎಲ್ಲರೂ ಸೇರಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು
ಚಿಕಿತ್ಸೆ ಕುರಿತು ದಾಖಲಾಗಿದ್ದು ಇರುತ್ತದೆ. ನನ್ನ ಗಂಡನಿಗೆ ಯಾವುದೇ ಚಿಕಿತ್ಸೆ
ಪಡೆದುಕೊಂಡಿರುವದಿಲ್ಲಾ. ಈ ಬಗ್ಗೆ ನಾವು ಯಾವುದೇ ದೂರು ಬೇಡ ಅಂತಾ ಸುಮ್ಮನಿರಲು ನಿನ್ನೆ ದಿವಸ
ಉಮಾದೇವಿ ಎಂಬುವಳು ನಮ್ಮ ವಿರುದ್ದ ದೂರು ನೀಡಿದ್ದರಿಂದ ನಾವು ಮನೆಯವರು ಚರ್ಚಿಸಿ ದೂರು ಕೊಡಲು
ತೀರ್ಮಾನಿಸಿ ಇಂದು ತಡವಾಗಿ ದೂರು ಸಲ್ಲಿಸಿರುತ್ತೇನೆ. ಕಾರಣ ನನಗೆ ಮತ್ತು ನನ್ನ ಗಂಡ, ಮತ್ತು ಅತ್ತೆ, ಮಾವನಿಗೆ ಹೊಡೆಬಡೆ ಮಾಡಿ ಗಾಯಗೊಳಿಸಿ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಮೇಲ್ಕಂಡ 9 ಜನರ ವಿರುದ್ದ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲೀಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡೆನು.
0 comments:
Post a Comment