ದಿನಾಂಕ 10-11-2015 ರಂದು 07-30 ಪಿ.ಎಂ.ಸುಮಾರಿಗೆ ಹೊಸಪೇಟೆ - ಕುಷ್ಟಗಿ ಎನ್.ಹೆಚ್.13
ಒನ್ ವೇ ರಸ್ತೆಯ ಮೇಲೆ ಮೃತ ಖಾಜಾಸಾಬನು ಕುಕನಪಳ್ಳಿ ಕಡೆಯಿಂದ ತನ್ನ ಮೋ.ಸೈ.ನಂ.ಕೆ.ಎ.37/ ವಾಯ್ 0820 ನೇದ್ದರಲ್ಲಿ ನಾಮಕಲ್ಲ ಡಾಬಾ ಮುಂದೆ
ಹೋಗುತ್ತಿರುವಾಗ ಎದರುಗಡೆಯಿಂದ ರಾಂಗ ರೂಟಿನಲ್ಲಿ ಮೋ.ಸೈ.ನಂ.ಕೆ.ಎ.04/ಟಿ.ಡಬ್ಲು 570 ನೇದ್ದರ ಚಾಲಕನು ಅತೀ ವೇಗ ಅಲಕ್ಷತನದಿಂದ
ರಾಂಗ್ ರೂಟಿನಲ್ಲಿ ಮೋ.ಸೈನ್ನು ಚಲಾಯಿಸಿಕೊಂಡು ಬಂದು ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ
ಖಾಜಾಸಾಬನಿಗೆ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿರುತ್ತಾನೆಂದು ಮತ್ತು ಆರೋಪಿತನು ಓಡಿ
ಹೋಗಿರುತ್ತಾನೆಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 263/2015 ಕಲಂ. 279 ಐ.ಪಿ.ಸಿ:.
ದಿ: 10-11-2015 ರಂದು ರಾತ್ರಿ 9-15 ಗಂಟೆಯ ಸುಮಾರಿಗೆ
ಫಿರ್ಯಾದಿದಾರರಾದ ಅಪ್ಪಾಜಿ ತಂದೆ ಸೂರ್ಯರಾವ್ ಸಾ: ಗಾಂಧಿನಗರ ತಾ: ಸಿಂಧನೂರ. ಇವರು ಠಾಣೆಗೆ
ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಇಂದು ದಿ: 10-11-15 ರಂದು
ಮದ್ಯಾಹ್ನ 2-50 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಕಾರ್ ನಂ: ಕೆಎ-36/ಎನ್-2461 ನೇದ್ದನ್ನು
ಓಡಿಸಿಕೊಂಡು ಬಂದು ಗಿಣಿಗೇರಿ ಗ್ರಾಮದ ರೇಲ್ವೇ ಗೇಟ್ ಹತ್ತಿರ ರೇಲ್ವೇ ಗೇಟ್ ಹಾಕಿದ್ದರಿಂದ ಕಾರ್
ನ್ನು ನಿಲ್ಲಿಸಿದ್ದು ನಂತರ ಮುಂದೆ ಹೋಗಬೇಕೆನ್ನುವಷ್ಟರಲ್ಲಿ ಹಿಂದಿನಿಂದ ಲಾರಿ ನಂ: ಕೆಎ-05/ಎಇ-4539 ನೇದ್ದರ
ಚಾಲಕನು ಕಾರಿಗೆ ನಿಗದಿತ ಅಂತರ ಕಾಪಾಡದೇ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಓಡಿಸಿಕೊಂಡು
ಬಂದು ಫಿರ್ಯಾದಿಯ ಕಾರಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಕಾರಣ ಸದರಿ ಲಾರಿ ಚಾಲಕ
ಮೈಬೂಬ ಮಕಂದಾರ ಸಾ: ಕೊಪ್ಪಳ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ
ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 176/2015 ಕಲಂ. 448,
323, 324, 354, 504, 506 ಐ.ಪಿ.ಸಿ:.
ದಿನಾಂಕ 10-11-2015 ರಂದು ರಾತ್ರಿ 9-15 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ
ಫಿಯರ್ಾದಿಯನ್ನು ಹಾಜರ್ ಪಡಿಸಿದ್ದು ಅದರ ಸಾರಂಶವೇನೆಂದರೆ, ನಿನ್ನೆ ದಿನಾಂಕ :-09/11/15 ರಂದು ರಾತ್ರಿ
8-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗಳಾದ ಸಾವಿತ್ರಮ್ಮ ಇವಳೊಂದಿಗೆ ಮನೆಯಲ್ಲಿದ್ದಾಗ ಆ ಸಮಯದಲ್ಲಿ
ನನ್ನ ಗಂಡನ ಅಣ್ಣನ ಮಗನಾದ ಹನಮಂತರಾಯ ಈತನು ನಮ್ಮ ಮನೆಯೋಳಗೆ ಬಂದು ಲೇ ಬೋಸುಡಿ ಅಂತಾ ಅನ್ನುತ್ತಾ
ಆಸ್ತಿ ಕೇಳಾಕ ಹೋಗಿದ್ದಿ ಏನಲೇ ಸೂಳೇ ಆ ಜಾಗ ನಮಗೆ ಸೇರಿದ್ದು ಅದನ್ನು ಯಾವುದೇ ಕಾರಣಕ್ಕೂ ಮನೆ ಕಟ್ಟಲು,
ತರ ತೆಗೆಯುವದಕ್ಕೆ ಬಿಡುವುದಿಲ್ಲ ಅನ್ನುತ್ತಾ ಕಪಾಳಕ್ಕೆ ಜೊರಾಗಿ ಹೊಡೆದನು. ಹಾಗೂ ನನ್ನ ಬಲಗೈ ತೋರು
ಬೆರಳನ್ನು ಹಿಡಿದುಕೊಂಡು ಗಟ್ಟಿಯಾಗಿ ತಿರುವಿದನು. ಮತ್ತು ನನ್ನ ಸೀರೆ ಹಿಡಿದು ಎಳೆಯುತ್ತಾ ರೋಡಿಗೆ
ಕರೆದುಕೊಂಡು ಬಂದನು. ಬಿಡಿಸಲು ಬಂದ ನನ್ನ ಮಗಳಿಗೆ ಸಹಾ ಕೈಯಿಂದ ಹೊಡೆದು ಜೀವದ ಬೇದರಿಕೆ ಹಾಕಿ ಹೋದನು
ಈ ವಿಷಯವನ್ನು ನಮ್ಮ ಸಂಬಂಧಿಕೊರೊಂದಿಗೆ ವಿಚಾರಿಸಿ ಈ ದಿನ ತಡವಾಗಿ ಬಂದು ಗಣಕೀಕೃತ ಮಾಡಿದ ಫಿರ್ಯಾದಿ ನೀಡಿದ್ದು ಅದೆ. ಕಾರಣ ನಾನು ಮತ್ತು ನನ್ನ ಮಗಳೊಂದಿಗೆ ಮನೆಯಲ್ಲಿದ್ದಾಗ ನನ್ನ ಸೀರೆ ಹಿಡಿದು
ಎಳೆದು ಅವಮಾನ ಮಾಡಿ ಬಲಗೈ ಹೆಬ್ಬರಳಿಗೆ ಗಾಯ ಮಾಡಿ ಕೈಯಿಂದ ಕಪಾಳಕ್ಕೆ ನನಗೆ ಮತ್ತು ನನ್ನ ಮಗಳಿಗೆ
ಹೊಡೆದು ಜೀವ ಬೆದರಕೆ ಹಾಕಿದ ಹನುಮಂತರಾಯ ತಂದೆ ಬಸಪ್ಪ
ನಾರಾಯಣಪುರ ಸಾ: ಹುಲಿಹೈದರ ಈತನ ಮೇಲೆ ಕೇಸ್ ಮಾಡಲು ವಿನಂತಿ. ಅಂತಾ ಇದ್ದ ಫಿರ್ಯಾಧಿಯ ಸಾರಾಂಶದ ಮೇಲಿಂದ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment