Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, November 9, 2015

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆನಂ. 217/2015 ಕಲಂ. 79, 80 Karnataka Police Act:.
ದಿನಾಂಕ: 08-11-2015 ರಂದು ರಾತ್ರಿ 08:45 ಗಂಟೆಯ ಸುಮಾರಿಗೆ 10 ಜನರು ಆರೋಪಿತರು ಅಮೀನಪೂರ ಒಣಿಯ ಸೈಯೆದ್ ಸಾಧಿಕ್  ಇವರ ಮನೆಯಲ್ಲಿ ವಿದ್ಯುತ್ ಬೆಳಕಿನಲ್ಲಿ ಪಣಕ್ಕೆ ನಗದು ಹಣ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರಾದ ಸತೀಶ ಎಸ್ ಪಾಟೀಲ ಪಿ. ಕೊಪ್ಪಳ ನಗರ ರವರು ದಾಳಿ ಮಾಡಿ 20,620/-  ರೂ. ನಗದು ಹಣ, 2] 52 ಇಸ್ಪೇಟ್ ಎಲೆಗಳು ಅಂ.ಕಿ. ಇಲ್ಲಾ.3] 11 ಮೊಬೈಲ್ ಫೋನಗಳು 4] ಒಂದು ಬೆಡ್ ಶೀಟ್ ,ಕಿ ಇಲ್ಲಾಮುದ್ದೇಮಾಲುಗಳನ್ನು ಜಫ್ತು ಮಾಡಿಕೊಂಡು 10 ಜನ ಜೂಜುಕೋರರನ್ನು ವಶಕ್ಕೆ ತಗೆದುಕೊಂಡು ಪಂಚನಾಮೆಯನ್ನು ರಾತ್ರಿ 08:45 ಗಂಟೆಯಿಂದ 09:45 ಗಂಟೆಯವರಗೆ ಪೂರೈಸಿ ಕೊಂಡು ಬಂದು ಸದರಿ ಜೂಜುಕೊರರ ವಿರುದ್ದ ಕಾನೂನು ರೀತಿ ಕ್ರಮ ಜರಗಿಸುವ ಕುರಿತು ಫಿರ್ಯಾದಿಯನ್ನು ಸಲ್ಲಿಸಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 112/2015 ಕಲಂ. 87 Karnataka Police Act:.
ದಿನಾಂಕ: 08-11-2015 ರಂದು ಸಾಯಂಕಾಲ 5-55 ಗಂಟೆಯ ಸುಮಾರಿಗೆ ಸಾಲಭಾವಿ ಗ್ರಾಮದಲ್ಲಿರುವ ಮುದುಕಪ್ಪ ಮೂಲಿಮನಿ ಇವರ ಶೇಡ್ಡಿನ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 2 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 1,000=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಸೀಮೆಂಟ್ ಪ್ಲಾಸ್ಟೀಕ್ ಚೀಲ ಅಂ.ಕಿ. ಇಲ್ಲ. ಇವುಗಳು ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 113/2015 ಕಲಂ. 87 Karnataka Police Act:.
ದಿನಾಂಕ: 08-11-2015 ರಂದು ರಾತ್ರಿ 11-20 ಗಂಟೆಯ ಸುಮಾರಿಗೆ ದಮ್ಮೂರು ಗ್ರಾಮದಲ್ಲಿ ಬರುವ ಮರಿಯಪ್ಪ ಜರಕುಂಟಿ ಇವರ ಹೋಟಲ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 9 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3,250=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಬರಕಾ ಪ್ಲಾಸ್ಟೀಕ್ ಚೀಲ ಅಂ.ಕಿ. ಇಲ್ಲ. ಇವುಗಳು ಸಿಕ್ಕಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.260/2015 ಕಲಂ 87 Karnataka Police Act:.
ಇಂದು ದಿ : 08-11-15 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಚಿಲವಾಡಗಿ ಗ್ರಾಮದ ಬಸ್ ನಿಲ್ಧಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 1400=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.261/2015 ಕಲಂ 87 Karnataka Police Act:.
ದಿ : 08-11-15 ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಚಾಮಲಾಪೂರ ಗ್ರಾಮದ ಶ್ರೀ ಹನುಮಂತ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 3850=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
6) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.262/2015 ಕಲಂ 87 Karnataka Police Act:.
ದಿ : 09-11-15 ರಂದು 00-10 ಎ.ಎಮ್ ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಗಿಣಿಗೇರಿ ಗ್ರಾಮದ ಮಂಜುಶ್ರೀ ಟಾಕೀಜ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 4250=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
7) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ.236/2015 ಕಲಂ 279, 337, 338 ಐ.ಪಿ.ಸಿ:.
ದಿನಾಂಕ 08-11-2015 ರಂದು ರಾತ್ರಿ 22-20 ಗಂಟೆಗೆ ಫಿರ್ಯಾದಿದಾರರಾದ ವೆಂಕಟಸಿಂಗ್ ತಂದಿ ರಾಮ ಸಿಂಗ್ ರಜಪೂತ ವಯಾ-40 ವರ್ಷ ಜಾ. ರಜಪೂತ ಸಾ. ಯರಡೋಣ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನಂದರೆ, ಪಿರ್ಯಾದಿದಾರರ ಸಂಬಂದಿಕರಾದ ಮನಮೋಹನ ಸಿಂಗ್ ತಂದಿ ಗುಂಡು ಸಿಂಗ್ ಹಜೇರಿ ಸಾ. ಬೀಜಾಪುರ ಈತನು ದಿನಾಂಕ_- 07-11-2015 ರಂದು ಕಾರಟಗಿಯಲ್ಲಿ ನಮ್ಮ ಸಂಬಂದಿಕರನ್ನು ಮಾತನಾಡಿಸಿಕೊಂಡು ಬರಲೆಂದು ಮೋಟಾರ್ ಸೈಕಲ್ ನಂ ಕೆ.-37 ವಾಯ್ 8602 ನೆದ್ದರಲ್ಲಿ ಹಾಗೂ ಮಾನಸಿಂಗ್ ತಂದಿ ಪ್ರತಾಪ್ ಸಿಂಗ್ ರಜಪೂತ ಸಾ. ಯರಡೋಣ ಈತನು ಕೂಡಾ ಮೋಟಾರ್ ಸೈಕಲ್ ನಂ ಕೆ.-37 ಡಬ್ಲು-9224 ನೆದ್ದರಲ್ಲಿ ಸತೀಶ ತಂದಿ ವೆಂಕಟೇಶ ಹುನಗುಂದ ಸಾ. ಯರಡೋಣ ಈತನಿಗೆ ಕರೆದುಕೊಂಡು ಕಾರಟಗಿಗೆ ಹೋಗಿ ವಾಪಾಸ್ ಯರಡೊಣ ಕಡೆಗೆ ದಿನಾಂಕ:-08-11-2015 ರಂದು ರಾತ್ರಿ 1-00 ಗಂಟೆಯಿಂದ 1-30 ಗಂಟೆಯ ಅವಧಿಯಲ್ಲಿ ಮಾನಸಿಂಗ್ ಈತನು ತನ್ನ ಮೋಟಾರ್ ಸೈಕಲ್ ನಂ ಕೆ.-37 ಡಬ್ಲೂ 9224 ನೆದ್ದರ ಮೇಲೆ ಸತೀಶನಿಗೆ ಕರೆದುಕೊಂಡು ಯರಡೋಣ ಕಡೆಗೆ ಗಂಗಾವತಿ ರಾಯಚೂರು ರೋಡಿನ ಮರ್ಲಾನಹಳ್ಳಿಯ ರಡ್ಡಿ ಕ್ಯಾಂಪ್ ಹತ್ತಿರ ಬರುತ್ತಿರುವಾಗ್ಗೆ ಹಿಂದುಗಡೆ ತನ್ನ ಮೋಟಾರ್ ಸೈಕಲ್ ನಂ  ಕೆ.-37 ವಾಯ್-8602 ನೆದ್ದನ್ನು ಚಲಾಯಿಸಿಕೊಂಡು ಬರುತ್ತಿದ್ದ ನಮೋಹನ್ ಸೀಂಗ್ ತಂದಿ ಗುಂಡು ಸೀಂಗ್ ಈತನು ಮೋಟಾರ್ ಸೈಕಲ್ ನ್ನು ಅತೀ ವೇಗ ಅಜಾಗುರುಕತೆಯಿಂದ ವಾಹನದ ಅಂತರವನ್ನು ಕಾಯ್ದುಕೊಳ್ಳದೇ ಚಾಲಾಯಿಸಿಕೊಂಡು ಬಂದು ಮಾನಸಿಂಗ ಈತನು ಚಲಾಯಿಸಿಕೊಂಡು ಹೋರಟಿದ್ದ ಮೋಟಾರ್ ಸೈಕಲ್ ಹಿಂದೆ ಹಾಕಲು ಹೋಗಿ ಆತನ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟು ಅಪಗಾತ ಪಡಿಸಿದ್ದರಿಂದ ಸತೀಶನಿಗೆ ಎಡಗಾಲು ಮೋಣಕಾಲು ಕೆಳಗೆ ಗಂಭಿರ ರಕ್ತ ಗಾಯ ಹಾಗೂ ಮೂಳೆ ಮೂರಿತವಾಗಿದ್ದು , ತಲೆಗೆ ಮುಖಕ್ಕೆ ಬಾರಿ ರಕ್ತಗಾಯವಾಗಿತ್ತು ಮಾನಸಿಂಗ್ನಿಗೆ ತಲೆಗೆ, ಸೊಂಟಕ್ಕೆ ಹಣೆಗೆ ರಕ್ತ ಗಾಯ ಮತ್ತು ಎಡತೊಡಗೆ ಮೂಳೆ ಮೂರಿತ ಒಳಪೆಟ್ಟಾಗಿತ್ತು ಅಪಗಾತ ಪಡಿಸಿದ ಮೋನಮೋಹನ್ ಸಿಂಗ್ ಈತನಿಗೆ ಹಣೆಗೆ ಬಲಪಕ್ಕಡಿಗೆ, ರಕ್ತ ಗಾಯ ಹಾಗೂ ತೆರಿಚಿದ ಗಾಯವಾಗಿದ್ದವು ಅಪಘಾತದಲ್ಲಿ ಗಾಯಗೊಂಡ ಮೂರು ಜನರಿಗೆ ಚಿಕಿತ್ಸೆ ಗಾಗಿ  ವ್ಯವಸ್ಥೆ ಮಾಡಿ ಈಗ ತಡವಾಗಿ ಠಾಣೆಗೆ ಬಂದು ನೀಡಿರುತ್ತೇನೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
8) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ.191/2015 ಕಲಂ 279, 337, 338 ಐ.ಪಿ.ಸಿ:.

ದಿನಾಂಕ: 08-11-2015 ರಂದು 04-00 ಪಿ.ಎಂ ಗಂಟೆಗೆ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಪಿರ್ಯಾದಿ ಯಲ್ಲನಗೌಡ ತಂದೆ ಬುಡ್ಡನಗೌಡ ಭೀಮನಗೌಡ್ರು ವಯಾ 50 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ವಣಗೇರಿ ರವರ ಹೇಳಿಕೆ ಪಿರ್ಯಾದಿಯ ಸಾರಾಂಶವೇನೆಂದರೆ ಇಂದು ದಿನಾಂಕ: 08-11-2015 ರಂದು ಮುಂಜಾನೆ ತಾನು ತನ್ನ ಮಗ ಶಿವನಗೌಡ ಇಬ್ಬರೂ ವಣಗೇರಾ ಸೀಮಾದಲ್ಲಿ ಇರುವ ತಮ್ಮ ಹೊಲದಲ್ಲಿ ಕೆಲಸ ಮಾಡಲು ಮುಂಜಾನೆ ಹೋಗಿದ್ದು ಮದ್ಯಾಹ್ನ 02-00 ಗಂಟೆಯ ವರೆಗೆ ಹೊಲದಲ್ಲಿ ಕೆಲಸ ಮಾಡಿ ನಂತರ ಊಟಕ್ಕಾಗಿ ಪಿರ್ಯಾಧಿಯು ಊರಿಗೆ ಬಂದಿದ್ದು ಆತನ ಮಗನು ಹೊಲದಲ್ಲಿಯೇ ಇದ್ದು ಪಿರ್ಯಾದಿಯು ಮನೆಯಲ್ಲಿ ಊಟ ಮಾಡಿ ಮತ್ತೆ ಹೋಲಕ್ಕೆ ಹೋಗುತ್ತಿರುವಾಗ ತನ್ನ ಮೊಮ್ಮಗ ವಿರುಪಾಕ್ಷಿ  ವಯಾ 7 ವರ್ಷ ಈತನು ತಾನು ಬರುತ್ತೇನೆ ಅಂತಾ ಹಟ ಮಾಡಿದ್ದಕ್ಕೆ ಮದ್ಯಾಹ್ನ 03-00 ಗಂಟೆಯ ಸುಮಾರಿಗೆ ಕುಷ್ಟಗಿ-ಇಲಕಲ ಎನ್,ಹೆಚ್-50 ರಸ್ತೆಯ ಮೇಲೆ ವಣಗೇರಾ ಸೀಮಾದಲ್ಲಿ ಟೋಲನಾಕದ ಹತ್ತಿರ ತಾನು ಮುಂದೆ ಮುಂದೆ ಹೋಗುತ್ತಿದ್ದು ಹಿಂದೆ ಪಿರ್ಯಾದಿಯ ಮೊಮ್ಮಗನು ಬರುತ್ತಿದ್ದು ಹಿಂದಿನಿಂದ ಕುಷ್ಟಗಿ ಕಡೆಯಿಂದ ಮೋಟಾರ ಸೈಕಲ್ ನಂ: ಕೆ.ಎ-37 ವಾಯ್- 7952 ನೇದ್ದರ ಸವಾರನಾದ ಕುಮಾರ ತಂದೆ ಶರಣಪ್ಪ ಚವ್ಹಾಣ ಸಾ: ಬೋದೂರತಾಂಡ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಹಿಂದಿನಿಂದ ವಿರುಪಾಕ್ಷಿ ಈತನಿಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ವಿರುಪಾಕ್ಷಿ ಈತನಿಗೆ ಎಡಗಾಲು ಮೊಣಕಾಲು ಕೆಳಗೆ ಮುರಿದಂತಾಗಿ, ಎಡಚೆಪ್ಪೆಗೆ, ಎಡಬೆನ್ನು, ತುಟಿಗೆ ತೆರೆಚಿದ ಗಾಯಾವಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

0 comments:

 
Will Smith Visitors
Since 01/02/2008