1) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆನಂ. 114/2015 ಕಲಂ. 87
Karnakata Police Act
ದಿನಾಂಕ: 11-11-2015 ರಂದು ಸಾಯಂಕಾಲ
5-25 ಗಂಟೆ ಸುಮಾರಿಗೆ ಯಲಬುರ್ಗಾ ಪಟ್ಟಣದಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಮುಂದುಗಡೆ
ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ
ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 4 ಜನರು
ಸಿಕ್ಕಿ ಬಿದ್ದಿದ್ದು ಇರುತ್ತದೆ. ಇನ್ನೂ 03 ಜನರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ
ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3,300=00 ರೂಪಾಯಿ
ನಗದು ಹಣ, 52 ಇಸ್ಪೀಟ
ಎಲೆಗಳು, ಒಂದು ಹಳೆ
ಪ್ಲಾಸ್ಟೀಕ್ ಬರಕಾ ಅಂ.ಕಿ. ಇಲ್ಲ. ಇವುಗಳು ಸಿಕ್ಕಿದ್ದು ಸದರಿ ಆರೋಪಿತರ
ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆನಂ. 115/2015 ಕಲಂ. 87
Karnakata Police Act.
ದಿನಾಂಕ:
11-11-2015 ರಂದು ರಾತ್ರಿ 9-20 ಗಂಟೆಯ ಸುಮಾರಿಗೆ ಯಲಬುರ್ಗಾ- ವಜ್ರಬಂಡಿ ರಸ್ತೆ ಮೇಲೆ ಬರುವ ಜಿ.ಜರಕುಂಟಿ
ಗ್ರಾಮದ ಕ್ರಾಸ್ ಹತ್ತಿರ ರಸ್ತೆ ದಕ್ಷಿಣ ಬಾಗದಲ್ಲಿರುವ ಸಾರ್ವಜನಿಕ ರಸ್ತೆ ಮೇಲೆ ಆರೋಪಿತರೆಲ್ಲರೂ
ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ
ದಾಳಿ ಮಾಡಿ ಹಿಡಿದಿದ್ದು 6 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ
ಮತ್ತು ಕಣದಲ್ಲಿದ್ದ ಒಟ್ಟು 2,300=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಪ್ಲಾಸ್ಟೀಕ್
ಬರಕಾ ಅಂ.ಕಿ. ಇಲ್ಲ. ಇವುಗಳು ಸಿಕ್ಕಿದ್ದು ಇರುತ್ತದೆ ಸದರ ಪಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 108/2015 ಕಲಂ.323,
504, ಸಹಿತ 34 ಐ.ಪಿ.ಸಿ. ಹಾಗೂ ಕಲಂ. 3(1),(10) ಎಸ್.ಸಿ./ಎಸ್.ಟಿ. ಕಾಯ್ದೆ -1989.
ದಿನಾಂಕ 11-11-2015 ರಂದು ರಾತ್ರಿ 10-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಸೋಮಪ್ಪ ತಂದೆ ಹನುಮಪ್ಪ ಗೌಂಡಿ ವಯ: 30 ವರ್ಷ, ಜಾತಿ: ಭೋವಿ, ಉ: ಗ್ರಾಮ ಪಂಚಾಯತಿ ಅದ್ಯಕ್ಷರು ಲಿಂಗದಹಳ್ಳಿ ಸಾ: ಗುಡ್ಡದ ಹನಮಸಾಗರ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾಧಿ ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾಧಿದಾರರು ಇಂದು ರಾತ್ರಿ 08-00 ಗಂಟೆ ಸುಮಾರಿಗೆ ತಮ್ಮೂರಿನ ಯಂಕಪ್ಪ ಹುಬ್ಬಳ್ಳಿ ರವರ ಚಹಾದಂಗಡಿಗೆ ಚಹಾ ಕುಡಿಯಲು ಹೋಗಿದ್ದು ಆ ಹೋಟೆಲಿನಲ್ಲಿ ಫಿರ್ಯಾಧಿದಾರರಿಗಿಂತ ಮುಂಚೆಯೇ ಇದ್ದ ವಾಟರಮನ್ ಶಿವನಗೌಡ ಪಾಟೀಲ ಈತನು ಫಿರ್ಯಾಧಿದಾರರ ಹತ್ತಿರ ಬಂದು ತನಗೆ ಪಗಾರ ಮಾಡಿಲ್ಲ ಅಂತಾ ಜಗಳ ತೆಗೆದು ಫಿರ್ಯಾಧಿದಾರರ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಲೇ ವಡ್ಡ ಸೂಳೆ ಮಗನೇ ನಿಂದು ಬಹಳ ಆಗಿದೆ ಅಂತಾ ಬೈದಾಡಿ, ಕೈಯಿಂದ ಹೊಡೆಬಡೆ ಮಾಡಿದ್ದು, ಅಷ್ಟರಲ್ಲಿ ಬಾಯಿ ಮಾತಿನ ಶಬ್ದ ಕೇಳಿ ಅಲ್ಲಿಗೆ ಬಂದ ಶಿವನಗೌಡನ ಹೆಂಡತಿ ಶಂಕ್ರಮ್ಮ ಈಕೆಯು ಒಮ್ಮಿಂದೋಮೆಲೆ ಫಿರ್ಯಾಧಿದಾರರಿಗೆ ಕೈಯಿಂದ ಕಪಾಳಕ್ಕೆ ಹಾಗೂ ಮೈ, ಕೈಗೆ ಹೊಡೆಬಡೆ ಮಾಡಿದ್ದು, ಆಗ ಅದೇ ಗ್ರಾಮದ ಯಮನೂರ ತಂದೆ ಸಿದ್ದಪ್ಪ ಬಂಗಲೇರ್, ಬಸವರಾಜ ತಂದೆ ಗಿಡ್ಡಪ್ಪ ಬನ್ನಿಗೋಳ, ಶ್ಯಾಮಣ್ಣ ತಂದೆ ಕುಂಟೆಪ್ಪ ಗೊಲ್ಲರ್ ರವರು ಜಗಳ ನೋಡಿ ಬಿಡಿಸಿಕೊಂಡಿದ್ದು ಇರುತ್ತದೆ. ಕಾರಣ ಸದರಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ವಗೈರೆ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 252/2015 ಕಲಂ.
87 Karnakata Police Act
ದಿನಾಂಕ 11-11-2015 ರಂದು 18-30 ಗಂಟೆಗೆ ಆರೋಪಿತರು ಗಂಗಾವತಿ ನಗರದ ಅಮರಭಗತ್ ಸಿಂಗ್ ನಗರದ ಸರಕಾರಿ ಕಿರಿಯ
ಪ್ರಾಥಮಿಕ ಶಾಲೆ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಇಸ್ಪೇಟ್ ಜೂಜಾಟ ಆಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ ರೂ. 6,100-00 ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ 18-30
ಗಂಟೆಯಿಂದ 19-30 ಗಂಟೆಯವರೆಗೆ
ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಸದರಿ
ಪ್ರಕರಣವು ಎನ್.ಸಿ. ಸ್ವರೂಪದ ಪ್ರಕರಣವಾಗಿದ್ದರಿಂದ ಈ ಬಗ್ಗೆ ಪ್ರಕರಣ ದಾಖಲಿಸಲು ಮಾನ್ಯ
ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 20-30 ಗಂಟೆಗೆ ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆನಂ. 265/2015 ಕಲಂ. 279, 338 304(ಎ) ಐ.ಪಿ.ಸಿ.
ದಿ:11-11-15
ರಂದು ರಾತ್ರಿ 8-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ರಾಮಕೃಷ್ಣ ಇಲ್ಲೂರ ಸಾ:
ಹಿರೇಸಿಂದೋಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೇ, ಇಂದು
ದಿ:11-11-15 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಮೃತ ವೆಂಕೋಬಪ್ಪ ಇವರು ಕೊಪ್ಪಳದಲ್ಲಿ
ಹಬ್ಬದ ನಿಮಿತ್ತ ಹೂ ಹಣ್ಣು ತರಲು ಅಂತಾ ತಮ್ಮ ಟಿವಿಎಸ್. ಮೋಟಾರ ಸೈಕಲ್ ನಂ: ಕೆಎ-37/ಕ್ಯೂ-9860
ನೇದ್ದನ್ನು ಓಡಿಸಿಕೊಂಡು ಕೊಪ್ಪಳ ಸಿಂದೋಗಿ ರಸ್ತೆಯ ಗುನ್ನಳ್ಳಿ ಕ್ರಾಸ್ ಹತ್ತಿರ ಕೊಪ್ಪಳ ಕಡೆಗೆ
ಬರುತ್ತಿದ್ದಾಗ ಅದೇವೇಳೆಗೆ ಎದುರುಗಡೆ ಅಂದರೆ ಕೊಪ್ಪಳ ಕಡೆಯಿಂದ ಟಾಟಾ ಎಸ್ ನಂ:
ಕೆಎ-26/2158 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ
ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಕರ್ವಿಂಗ್ ನ್ನು ಗಮನಿಸದೇ ಓಡಿಸಿಕೊಂಡು ಬಂದು ಮೋಟಾರ ಸೈಕಲ್
ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಈ ಅಪಘಾತದಲ್ಲಿ ಮೋಟಾರ ಸೈಕಲ್ ಸವಾರನಿಗೆ ಭಾರಿ
ರಕ್ತಗಾಯಗಳಾಗಿದ್ದು, ಅಲ್ಲದೇ ಅಪಘಾತ ಮಾಡಿದ ಚಾಲಕ ಮಂಜುನಾಥ ಇತನಿಗೆ ಮತ್ತು ಟಾಟಾ ಎಸಿ ಕ್ಲೀನರ್ ಸುರೇಶ ಇವರಿಗೆ
ಭಾರಿ ಗಾಯಗಳಾಗಿದ್ದು ಅದೆ. ನಂತರ ಗಾಯಗೊಂಡಿದ್ದ ಮೋಟಾರ ಸೈಕಲ್ ಸವಾರ್ ವೆಂಕೋಬಪ್ಪ ಹಾಗು ಇತರೆ
ಇಬ್ಬರಿಗೆ 108 ಅಂಬುಲೆನ್ಸ ದಲ್ಲಿ ಕೊಪ್ಪಳಕ್ಕೆ ಕರೆತಂದು ಸಂಜೆ 5-30 ಕ್ಕೆ ಸೇರಿಸಿದಾಗ
ಪರೀಕ್ಷಿಸಿದ ವೈದ್ಯರು ಮೋಟಾರ ಸೈಕಲ್ ಸವಾರ ವೆಂಕೋಬಪ್ಪ ಇವರು ಬ್ರಾಟ್ ಡೆಡ್ ಅಂತಾ ಹೇಳಿದ್ದು
ಇರುತ್ತದೆ. ಕಾರಣ ಸದರಿ ಅಪಘಾತ ಮಾಡಿದ ಟಾಟಾ ಎಸಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ
ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
6) ಕುಷ್ಠಗಿ ಪೊಲೀಸ್ ಠಾಣೆ ಗುನ್ನೆನಂ. 192/2015 ಕಲಂ.
279, 304(ಎ) ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ
ಇಂದು ದಿನಾಂಕ: 11-11-2015
ರಂದು ಸಂಜೆ 05-00 ಗಂಟೆಗೆ ಹುಲ್ಲಪ್ಪ ತಂದೆ ಸಕ್ರಪ್ಪ ವಾಲೀಕಾರ ರವರು ನೀಡಿದ ಲಿಖಿತ ಫಿರ್ಯಾದಿಯನ್ನು ಹಾಜರುಪಡಿದ್ದು
ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ: 11-11-2015 ರಂದು ಫಿರ್ಯಾದಿಯ ತಮ್ಮನಾದ ಭೀಮಪ್ಪ ಈತನು ಇಂದು ದೀಪಾವಳಿ ಅಮವಾಸ್ಯೆ ಇದ್ದ ಕಾರಣ
ಹಬ್ಬದ ಸಲುವಾಗಿ ಕೊಪ್ಪಳದಿಂದ ಪಿರ್ಯಾದಿದಾರರ ಊರಿಗೆ ತನ್ನ ಹಿರೋ ಹೊಂಡಾ ಫ್ಯಾಷನ್ ಪ್ರೋ ಮೋಟಾರ್
ಸೈಕಲ್ ನಂ. ಕೆ.ಎ.37/ ವಿ-0101 ನೇದ್ದರಲ್ಲಿ ಬರುತ್ತಿದ್ದಾಗ ಕುಷ್ಟಗಿ-ಹನಮಸಾಗರ ರಸ್ತೆಯಲ್ಲಿ ಮಲಕಾಪೂರ
ಕ್ರಾಸ್ ಮತ್ತು ಹೊಸಳ್ಳಿ ಕ್ರಾಸ್ ಮಧ್ಯದಲ್ಲಿ ಮಧ್ಯಾನ್ಹ 04-00 ಗಂಟೆ ಸುಮಾರಿಗೆ ಹನಮಸಾಗರ ಕಡೆಯಿಂದ
ಒಂದು ಜೀಪ್ ಚಾಲಕನು ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಭೀಮಪ್ಪನಿಗೆ
ಟಕ್ಕರ್ ಮಾಡಿದ್ದರಿಂದ ಆತನು ತನ್ನ ಗಾಡಿಯೊಂದಿಗೆ ಕೆಳಗೆ ಬಿದ್ದಿದ್ದು ಅದರಿಂದ ಆತನ ಹಿಂದೆಲೆಗೆ ಭಾರಿ
ರಕ್ತಗಾಯವಾಗಿದ್ದು ಮತ್ತು ಎಡಗಡೆ ಮುಖಕ್ಕೆ ರಕ್ತ ಗಾಯವಾಗಿದ್ದು ಹಾಗೂ ಮೂಗು, ಕಿವಿ ಮತ್ತು ಬಾಯಿ
ಯಿಂದ ರಕ್ತ ಬಂದಿದ್ದು ಸದರಿಯವನು ತನಗಾದ ಗಾಯಗಳಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು, ನಂತರ ನೋಡಲಾಗಿ
ಅಪಘಾತಪಡಿಸಿದ ಕಮಾಂಡರ್ ಜೀಪ್ ಅಪಘಾತಪಡಿಸಿದ ಸ್ಥಳದಿಂದ ಸ್ವಲ್ಪ ದೂರ ಮುಂದೆ ಹೋಗಿ ನಿಂತಿದ್ದು ಅದರ
ನಂ. ಕೆ.ಎ.37/ಎನ್-6006 ಇದ್ದು ಅದರ ಚಾಲಕನ ಹೆಸರು ವಿಚಾರಿಸಲಾಗಿ ಮಲ್ಲಿಕಾರ್ಜುನ ತಂದೆ ವೀರಭದ್ರಪ್ಪ
ನಾಯಕವಾಡಿ ಸಾ.ಕುಷ್ಟಗಿ ಅಂತಾ ಗೊತ್ತಾಯಿತು, ಅಪಘಾತಪಡಿಸಿದ ಸದರಿ ಜೀಪ್ ಚಾಲಕನು ತನ್ನ ವಾಹನವನ್ನು
ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದರಿ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
0 comments:
Post a Comment