1) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆನಂ.
115/2015 ಕಲಂ. 87 Karnakata Police Act:.
ದಿನಾಂಕ: 11-11-2015 ರಂದು ರಾತ್ರಿ 9-20 ಗಂಟೆಯ ಸುಮಾರಿಗೆ ಯಲಬುಗರ್ಾ- ವಜ್ರಬಂಡಿ ರಸ್ತೆ ಮೇಲೆ ಬರುವ ಜಿ.ಜರಕುಂಟಿ ಗ್ರಾಮದ ಕ್ರಾಸ್ ಹತ್ತಿರ ರಸ್ತೆ ದಕ್ಷಿಣ ಬಾಗದಲ್ಲಿರುವ ಸಾರ್ವಜನಿಕ ರಸ್ತೆ ಮೇಲೆ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 6 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 2,300=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಪ್ಲಾಸ್ಟೀಕ್ ಬರಕಾ ಅಂ.ಕಿ. ಇಲ್ಲ. ಇವುಗಳು ಸಿಕ್ಕಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆನಂ.
117/2015 ಕಲಂ. 87 Karnakata Police Act:.
ದಿನಾಂಕ- 12-11-2015 ರಂದು ರಾತ್ರಿ 7-55 ಗಂಟೆ ಸುಮಾರಿಗೆ
ಆರೋಪಿತರೆಲ್ಲರೂ ತುಮ್ಮರಗುದ್ದಿ ಗ್ರಾಮದಲ್ಲಿಯ ಶಂಕ್ರಯ್ಯ ಕೆಂಭಾವಿಮಠ ಇವರ ಮನೆಯ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಬೀದಿ ದೀಪದ ಬೆಳಕಿನಡಿಯಲ್ಲಿ ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ
ಸಹಾಯದಿಂದ ಅಂದರ-ಬಾಹರ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿಯಲು 04 ಜನರು
ಸಿಕ್ಕಿಬಿದ್ದಿದ್ದು, ಇನ್ನೂ 03 ಜನರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿಬಿದ್ದ ಆರೋಪಿತರ
ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 1,170-00 ರೂ. ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಹಳೇ
ಪ್ಲಾಸ್ಟೀಕ್ ಸಿಮೇಂಟ್ ಚೀಲ ಅಂ.ಕಿ. ಇಲ್ಲ ಇವುಗಳು ಸಿಕ್ಕಿದ್ದು ಇರುತ್ತದೆ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆನಂ.
118/2015 ಕಲಂ. 87 Karnakata Police Act:.
ದಿನಾಂಕ: 13-11-2015 ರಂದು ಬೆಳಗಿನ ಜಾವ 0035 ಗಂಟೆಯ ಸುಮಾರಿಗೆ ಹಗೇದಾಳ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 8 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 6,100=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಪ್ಲಾಸ್ಟೀಕ್ ಬರಕಾ ಅ.ಕಿ. ಇಲ್ಲ. ಇವುಗಳು ಸಿಕ್ಕಿದ್ದು ಇರುತ್ತದೆ.
4) ಕುಕನೂರ ಪೊಲೀಸ್ ಠಾಣೆ ಗುನ್ನೆನಂ. 150/2015 ಕಲಂ. 87
Karnakata Police Act:.
ದಿನಾಂಕ: 13-11-2015 ರಂದು 1-30 ಎಎಂಕ್ಕೆ ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ 1-40 ಎಎಂಕ್ಕೆ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 5 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 12-00 ಎಎಂಕ್ಕೆ ತಳಬಾಳ ಗ್ರಾಮದ ಮಸೀದಿ ಮುಂದಿನ ಸಾರ್ವಜನಿಕ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ
ತೊಡಗಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ
ಒಂದು ಪ್ಲಾಸ್ಟಿಕ್ ಚೀಲ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 800/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಕುಕನೂರ ಪೊಲೀಸ್ ಠಾಣೆ ಗುನ್ನೆನಂ. 151/2015 ಕಲಂ. 87
Karnakata Police Act:.
ದಿನಾಂಕ: 13-11-2015 ರಂದು 3-20 ಎಎಂಕ್ಕೆ ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ 3-30 ಎಎಂಕ್ಕೆ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 4 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ
2-15 ಎಎಂಕ್ಕೆ ತಳಕಲ್ ಗ್ರಾಮದ ಸರ್ಕಾರಿ ಶಾಲೆಯ ಮುಂದಿನ
ಸಾರ್ವಜನಿಕ ರಸ್ತೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ
ಒಂದು ಪ್ಲಾಸ್ಟಿಕ್ ಚೀಲ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 700/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 239/2015 ಕಲಂ.279, 304(ಎ) ಐ.ಪಿ.ಸಿ ಮತ್ತು
187 ಐ.ಎಂ.ವಿ. ಕಾಯ್ದೆ.
ದಿನಾಂಕ : 12-11-2015 ರಂದು ರಾತ್ರಿ
8-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಶಂಬನಗೌಡ ತಂದಿ ದೊಡ್ಡನಗೌಡ ಜಿನ್ನದ
ವಯಾ-35 ವರ್ಷ ಜಾ- ಲಿಂಗಾಯತ ಉ- ವ್ಯಾಪಾರ ಸಾ- ಜಾಲಿಹಾಳ ತಾ- ಸಿಂಧನೂರ
ಹಾ.ವ. ಕಾರಟಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ನಾನು ಕಾರಟಗಿಯ ಬಸವೇಶ್ವರನಗರದ ಕ್ರಾಸ್
ಹತ್ತಿರ ಆರ್.ಜಿ. ರೋಡ್ ಕಾರಟಗಿಯ ಪಕ್ಕದಲ್ಲಿ ಶುಭ ಕ್ಯಾನ್ವಸಿಂಗ್ ಅಂಗಡಿಯನ್ನು
ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ನನಗೆ ಕಾರಟಗಿ ದಲಾಲಿ ವ್ಯಾಪಾರಸ್ಥರ
ಪರಿಚಯ ನನಗೆ ಇರುತ್ತದೆ. ಅದರಂತೆ ಮುದಕನಗೌಡ ತಂದಿ ಹನಮನಗೌಡ ಕುಡ್ಲೂರ್
ವಯಾ- 32 ವರ್ಷ ಸಾ- ಕಾರಟಗಿ ಇತನು ಪರಿಚಯ ಇದ್ದು ಸದರಿ ಮುದಕನಗೌಡನು ಇತನು
ತಾವರಗೇರಿಯಲ್ಲಿ ಶ್ರೀ ಗೌರಿ ಟ್ರೇಡಿಂಗ್ ಕಂಪನಿ ಇದರ ಮಾಲೀಕರಿದ್ದು ಸದರಿಯವರು
ಕಾರಟಗಿ ಮತ್ತು ತಾವರಗೇರಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಭತ್ತದ ವ್ಯಾಪಾರ ಹಾಗೂ ಕಾಳು
ಕಡಿ ವ್ಯಾಪಾರ ಮಾಡಿಕೊಂಡಿದ್ದರಿಂದ ಆತನ ಪರಿಚಯ ನನಗೆ ಇರುತ್ತದೆ. ಸದರಿ ಮುದಕನಗೌಡ
ಇತನು ಇಂದು ದಿನಾಂಕ- 12-11-2015 ರಂದು ತಾನು ತನ್ನ ಪ್ಯಾಶನ್ ಪ್ರೋ ಮೊಟಾರ್ ಸೈಕಲ್
ನಂಬರ್- ಕೆ.ಎ- 37 / ವಿ- 3578 ನೇದ್ದರ ಮೇಲೆ ಎಲ್.ವಿ.ಟಿ. ರೈಸ್ ಮಿಲ್ಲಿಗೆ ಹೊಗಿ ಬರುವದಾಗಿ
ಹೇಳಿ ಹೊಗಿದ್ದನು. ಆತನು ಎಲ್.ವಿ.ಟಿ. ರೈಸ್ ಮಿಲ್ಲಿನಲ್ಲಿ ಕೆಲಸ ಮುಗಿಸಿಕೊಂಡು
ವಾಪಾಸ್ ಕಾರಟಗಿಯ ಕಡೆಗೆ ಕಾರಟಗಿಯ ಶ್ರೀ ಲಕ್ಷ್ಮೀ ವೇ ಬ್ರಿಡ್ಜ ಮುಂದುಗಡೆ ತನ್ನ ಸೈಡಿನ್ಲಲಿ
ಬರುತ್ತಿರುವಾಗ್ಗೆ ಕಾರಟಗಿಯ ಕಡೆಯಿಂದ ಲಾರಿ ನಂ- ಕೆ.ಎ- 16- ಬಿ- 2011 ನೇದ್ದರ ಲಾರಿಯ
ಚಾಲಕ ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತನ್ನ ಲಾರಿಯನ್ನು ಯರ್ರಾಬಿರ್ರಿಯಾಗಿ
ಓಡಿಸಿಕೊಂಡು ಬಂದು ಯಾವುದೇ ಸಿಗ್ನಲ್ ಕೊಡೆ ಒಮ್ಮಿಂದೊಮ್ಮೆಲೆ ಲಕ್ಷ್ಮೀ ವೇ ಬ್ರಿಡ್ಜ
ಕಡೆಗೆ ಬಲಕ್ಕೆ ತಿರವಿಕೊಂಡು ಮುದಕನಗೌಡನ ಮೊಟಾರ್ ಸೈಕಲ್ಲಿಗೆಟಕ್ಕರ್ ಕೊಟ್ಟು ಆತನ
ಕಾಲಿನ ಮೇಲೆ ಲಾರಿಯ ಮುಂದಿನ ಗಾಲಿ ಹಾಯ್ದಿದ್ದರಿಂದ ಮುದಕನಗೌಡನ ರಡೂ ಕಾಲೂಗಳಿಗೆ ಗಂಭೀರಗಾಯ
ಹಾಗೂ ಒಳಪೆಟ್ಟುಗಳಾಗಿ ಮೂಳೆ ಮುರಿತವಾಗಿದ್ದು ಈ ಅಪಘಾತವಾದ ನಂತರ ಲಾರಿಯ ಚಾಲಕ ತನ್ನ
ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೊದನು ಈ ಅಪಘಾತವಾದಾಗ್ಗೆ ಸಾಯಂಕಾಲ 5-00 ಗಂಟೆಯಾಗಿತ್ತು.
ಈ ಅಪಘಾತವನ್ನು ಅಲ್ಲಿಯೇ ಇದ್ದ ನಾನು ಹಾಗೂ ಗಾದಿಲಿಂಗಪ್ಪ ಮಲ್ಲಿಕಾರ್ಜುನ ಬುನ್ನಟ್ಟಿ,
ಹಾಗೂ ಇತರರು ನೋಡಿರುತ್ತಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುದಕನಗೌಡ ಇತನಿಗೆ
ಚಿಕಿತ್ಸೆಗಾಗಿ ಕಾರಟಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ
ಬಳ್ಳಾರಿಗೆ ಕರೆದುಕೊಂಡು ಹೊಗುವಾಗ್ಗೆ ಕಾರಟಗಿ ದಾಟಿ ಹೊಗುವಾಗ್ಗೆ ಸಾಯಂಕಾಲ 6-00
ಗಂಟೆಗೆ ಮುದಕನಗೌಡ ಇತನು ಗುಣಮುಖನಾಗದೆ ಮೃತಪಟ್ಟಿದ್ದರಿಂದ ಆತನ ಶವವನ್ನು ಪುನ: ಸರಕಾರಿ ಆಸ್ಪತ್ರೆ
ಕಾರಟಗಿಗೆ ತಂದು ಶವಗಾರದಲ್ಲಿ ಹಾಕಿ ಈಗ ತಮ್ಮಲ್ಲಿಗೆ ಬಂದು ಫಿರ್ಯಾದಿ ನೀಡಿರುತ್ತೇನೆ
ಅಂತಾಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
7) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 193/2015 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ: 12-11-2015 ರಂದು
ರಾತ್ರಿ 7-15 ಗಂಟೆಗೆ ಸರ್ಕಾರಿ ಆಸ್ಪತ್ರ ಕುಷ್ಟಗಿಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ
ಬೇಟಿ ನೀಡಿ ಗಾಯಾಳುವಿನ ಹೆಂಡತಿಯಾದ ರೇಣಮ್ಮ ಗಂಡ ಯಲ್ಲಪ್ಪ ಆಡಿನ ಇವರ
ಹೇಳಿಕೆ
ಪಿರ್ಯಾಧಿಯನ್ನು ಪಡೆದುಕೊಂಡು ವಾಪಸ ಠಾಣೆ ರಾತ್ರಿ 8-15 ಗಂಟೆಗೆ ಬಂದು ಸದರ ಫಿರ್ಯಾದಿಯ ಸಾರಾಂಶವೆನೆಂದರೆ
ದಿನಾಂಕ : 12-11-2015 ರಂದು ಮುಂಜಾನೆ 9-00 ಗಂಟೆಗೆ ಬ್ಯಾಲಿಹಾಳ
ಸೀಮಾದಲ್ಲಿರುವ ತಮ್ಮ ಹೊಲದಲ್ಲಿ ಕೆಲಸ ಮಾಡಲು ಹೋಗಿದ್ದು ನಂತರ ಸಾಯಂಕಾಲ 6-00 ಗಂಟೆ ಸುಮಾರಿಗೆ ಗಜೇಂದ್ರಗಡ-ಕುಷ್ಟಗಿ
ರಸ್ತೆಯ ಮೇಲೆ ವಾಪಾಸ್ ಊರಿಗೆ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಚೋಳೆ ಹನಮಗೌಡ ಮದಲಗಟ್ಟಿ ಸಾ :
ಬ್ಯಾಲಿಹಾಳ ರವರ ಹೊಲದ ಹತ್ತಿರ ಬರುತ್ತಿರುವಾಗ ಹಿಂದಿನಿಂದ ಅಂದರೆ ಗಜೇಂದ್ರಗಡ ಕಡೆಯಿಂದ ಒಂದು
ಕಾರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿದಾರರ
ಗಂಡನಿಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಸದರಿ ಅಪಘಾತದಲ್ಲಿ ಆತನಿಗೆ ಬಲಗಡೆ ಕಣ್ಣಿನ ಹುಬ್ಬಿನ
ಹತ್ತಿರ ರಕ್ತ ಗಾಯವಾಗಿದ್ದು ಬಾವು ಬಂದಿರುತ್ತದೆ. ಬಲಗಾಲ ಮೊಣಕಾಲ ಕೆಳಗಡೆ ಮುರಿದಂತಾಗಿ ಭಾರಿ ಗಾಯವಾಗಿದ್ದು
ಎಡಗೈ ಮುಂಗೈ ಹತ್ತಿರ ತೆರಚಿದ ಗಾಯವಾಗಿದ್ದು ಇರುತ್ತದೆ. ಆಗ ಅದೇ ಸಮಯಕ್ಕೆ ಬ್ಯಾಲಿಹಾಳ ಗ್ರಾಮದ
ಭರಮಗೌಡ ಪಾಟೀಲ ಇತನು ಹೊಲದಿಂದ ಬಂದಿದ್ದು ಆತನು ಕಾರ ನಂಬರ ನೋಡಲು ಕೆ.ಎ-04/ಎಂ.ಹೆಚ್-2170
ಅಂತಾ ಇದ್ದು ಇದು ಮಾರುತಿ ಸುಜಕಿ ಕಾರ ಆಗಿರುತ್ತದೆ. ಇದರ ಚಾಲಕನ ಹೆಸರು ವಿಚಾರಿಸಲಾಗಿ ಡಾ. ಪ್ರಶಾಂತ
ಗುಗ್ಗರಿ ಸಾ : ಗುಳೇದಗುಡ್ಡ ಹಾಲಿವಸ್ತಿ ಕೆರೋಡಿ ಆಸ್ಪತ್ರೆ ಹತ್ತಿರ ಬಾಗಲಕೋಟ ಅಂತಾ ಗೊತ್ತಾಯಿತು.
ನಂತರ ಯಲ್ಲಪ್ಪ ಇತನನ್ನು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಪಿರ್ಯಾದಿದಾರರು ಮತ್ತು
ಭರಮಗೌಡ ಪಾಟೀಲ ಇಬ್ಬರೂ ಕೂಡಿ ಸರ್ಕಾರಿ ಆಸ್ಪತ್ರೆ ಕುಷ್ಟಗಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ
ಅಂತಾ
ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:193/2015 ಕಲಂ 279,337,338 ಐ.ಪಿ.ಸಿ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment