Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, November 14, 2015

1) ಬೇವೂರ ಪೊಲೀಸ್ ಠಾಣೆ ಗುನ್ನೆನಂ. 85/2015 ಕಲಂ. 87 Karnakata Police Act:.
ದಿನಾಂಕ:-13-11-2015 ರಂದು ಸಾಯಂಕಾಲ 5-00 ಗಂಟೆೆ ಸುಮಾರಿಗೆ ಮಂಗಳೂರ ಗ್ರಾಮದ ಶ್ರೀ ಮಂಗಳೇಶ್ವರ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಸೇರಿ ಇಸ್ಪಟ್ ಜೂಜಾಟ ಆಡುತ್ತಿರುವ ಕಾಲಕ್ಕೆ ಮಾನ್ಯ ಸಿ.ಪಿ.ಐ ಸಾಹೇಬರು ಹಾಗೂ ಪಿಎಸ್ಐ ಸಾಹೇಬರು ಹಾಗೂ ಠಾಣೆಯ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ ನಾಲ್ಕು ಜನರು ಆರೋಪಿತರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಇಸ್ಪಟ್ ಜೂಜಾಟದ ನಗದು ಹಣ 4510/- ರೂ ಹಾಗೂ ಪಣಕ್ಕೆ ಹಚ್ಚಿದ ಹಣ 510/- ರೂಪಾಯಿಗಳು ಹಿಗೆ ಒಟ್ಟು 5020/- ರೂಪಾಯಿಗಳು ಮತ್ತು  52 ಇಸ್ಪಟ್ ಎಲೆಗಳನ್ನು ಹಾಗೂ ಹಾಸಿದ ಒಂದು ಹಳೆ ಗೊಣಿ ಚೀಲವನ್ನು ಜಪ್ತ ಮಾಡಿಕೊಂಡಿದ್ದು ಮತ್ತು ಸಿಕ್ಕಿಬಿದ್ದ 04 ಜನ ಆರೋಪಿತರೊಂದಿಗೆ ಸಿಪಿಐ ಯಲಬುಗರ್ಾ ರವರು ಠಾಣೆಗೆ ಬಂದು ಪಂಚನಾಮೆಯೊಂದಿಗೆ ತಮ್ಮ ವರದಿ ಸಲ್ಲಿಸಿದ ಆಧಾರದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆನಂ. 233/2015 ಕಲಂ. 87 Karnakata Police Act:.
ದಿನಾಂಕ. 13-11-2015 ರಂದು 08-30 ಪಿ.ಎಂ.ಕ್ಕೆ ಮುನಿರಾಬಾಧ ಆಂಜನೇಯ ದೇಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ಆಡುತ್ತಿರುವಾಗ ಕಾಲಕ್ಕೆ ಶ್ರೀ. ಜಯಪ್ರಕಾಶ ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಢಿ ಇಸ್ಪೇಟ ಜೂಜಾಟ ಆಡುತ್ತಿರುವ ಆರೋಪಿತರಿಂದ ಒಂದು ಬರಕಾ, 52 ಇಸ್ಪೇಟ ಎಲೆಗಳು ಮತ್ತು ಜೂಜಾಟದ ನಗದು ಹಣ 3000=00 ರೂ. ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆನಂ. 266/2015 ಕಲಂ. 87 Karnakata Police Act:.
ದಿ : 13-11-15 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕೊಡದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 1240=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
4)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 240/2015 ಕಲಂ. 457, 380 ಐ.ಪಿ.ಸಿ:.
ದಿನಾಂಕಃ 13-11-2015 ರಂದು 19-45 PM ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀ ಗಂಡ ಯಮನೂರಪ್ಪ ಮೇದಾರ್ ವಯಾ- 35 ವರ್ಷ ಜಾ. ಮೇದಾರ ಉ- ಕುಲಕಸಬು ಸಾ. ನಂದಿಹಳ್ಳಿ ಕ್ರಾಸ್ ಸಿದ್ದಾಪೂರ  ಇವರು ಠಾಣೆಗೆ ಹಾಜರಾಗಿ ಪಿರ್ಯಾದಿ ಹಾಜರುಪಡಿಸಿದ್ದು ಪಿರ್ಯಾದಿಯ ಸಾರಾಂಶವೆನಂದರೆ. ನನ್ನ ಗಂಡನಾದ ಯಮನೂರಪ್ಪ ಇವರು ಗುಮಾಸ್ತ ಕೆಲಸ ಮಾಡಿಕೊಂಡಿರುತ್ತಾರೆ ನಾನು ನಮ್ಮ ಕುಲಕಸಬು ಬುಟ್ಟಿ , ಮರ ಮಾಡುವ ಕೆಲಸ ಮಾಡುತ್ತೇನೆ ನಮಗೆ 6 ಜನ ಮಕ್ಕಳು ಇರುತ್ತಾರೆ. ನಮ್ಮ ಸ್ವಂತ ಊರು ಜಬ್ಬಲಗುಡ್ಡ ಗ್ರಾಮವಿದ್ದು ಈಗ್ಗೆ 4 ವರ್ಷಗಳ ಹಿಂದೆ ದುಡಿದು ತನ್ನಲೆಂದು ನಾನು ನನ್ನ ಗಂಡ ಮಕ್ಕಳು ಸಿದ್ದಾಪೂರಕ್ಕೆ ಬಂದು ವಾಸವಾಗಿರುತ್ತೆನವೆ ನಾನು ಈ ಮೂದಲು ಸಿದ್ದಾಪೂರ ತಾಂಡದ ರವರ ಮನೆಯಲ್ಲಿ ಬಾಡಿಗೆ ರೀತಿಯಲ್ಲಿ ವಾಸವಾಗಿದ್ದೆವು ಅವರ ಮನೆಯಲ್ಲಿ ವಾಸವಾಗಿದ್ದೆವೆ ನಾವು ಪ್ರತಿದಿನ ರಾತ್ರಿ 8-00 ಗಂಟೆಯಿಂದ 9 ಗಂಟೆಯ ಅವಧಿಯಲ್ಲಿ ಊಟ ಮಾಡಿ ರಾತ್ರಿ 10-00 ಗಂಟೆಯ ಸುಮಾರಿಗೆ ಮಲಗುತ್ತೆವೆ ಬೆಸಿಗೆ ಸಮಯದಲ್ಲಿ ಮನೆಯ ಮಾಳಿಗೆಯ ಮೇಲೆ ಮಲಗುತ್ತಿದ್ದೇವು ಈಗ್ಗೆ 7 ತಿಂಗಳ ಹಿಂದೆ ಅಂದರೆ ದಿನಾಂಕ- 01-04-2015 ರಂದು ರಾತ್ರಿ ಊಟ ಮುಗಿಸಿ ನಾವು ಗಂಡ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿ ಊಟ ಮಾಡಿ ರಾತ್ರಿ 10-00 ಗಂಟೆಯ ಬೆಸಿಗೆ ಇದ್ದುದರಿಂದ ನಾವು ವಾಸವಾಗಿದ್ದ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಎಲ್ಲರೂ ಮಾಳಿಗೆಯ ಮೇಲೆ ಮಲಗಿದ್ದೆವು ನಂತರ ದಿನಾಂಕ-02-04-2015 ರಂದು ಬೆಳಿಗ್ಗೆ ಪ್ರತಿದಿನದಂತೆ 5-30 ಗಂಟಯ ಸುಮಾರಿಗೆ ಎದ್ದು ಮಾಳಿಗೆ ಮೇಲಿಂದ ಕೆಳಗೆ ಇಳಿದು ಮನೆಯ ಬಾಗಿಲನ್ನು ನೋಡಲು ಮನೆಯ ಬಾಗಿಲಿಗೆ ಹಾಕಿದ್ದ ಬೀಗದ ಪತ್ತ ಮುರಿದು ಹೋಗಿತ್ತು ಮನೆಯ ಬಾಗಿಲು ತೆರೆದಿತ್ತು ನಂತರ ನಾನು ಗಾಭರಿಯಾಗಿ ನನ್ನ ಗಂಡನಿಗೆ ಎಬ್ಬಿಸಿಕೊಂಡು ಮನೆಯ ಒಳಗಡೆ ಹೋಗಿ ನೋಡಲು ದಿನಾಂಕ-01-04-2015 ರಂದು ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 5-30 ಗಂಟೆಯ ಅವಧಿಯಲ್ಲಿ ನಾವು ನಮ್ಮ ವಾಸದ ಮನೆಯ ಮಾಳಿಗೆಯ ಮೇಲೆ ಮಲಗಿದ ಸಮಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಒಳಗಡೆ ಹೋಗಿ ಟ್ರಿರಿ ಮುರಿದು ಟ್ರಿಜರಿಯಲ್ಲಿದ್ದ ಅಂದಾಜು ತೂಕ 42 ಗ್ರಾಮೀನ ಅಂದಾಜು ಕಿಮ್ಮತ್ತು ರೂ. 1,15,000=00 ಬಂಗಾರದ ಒಡವೆಗಳು ಮತ್ತು ನಗದು ಹಣ ರೂ.11700=00 ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು ನಂತರ ನಾವು ನಮ್ಮ ಮನೆಯಲ್ಲಿದ್ದ ಎಲ್ಲಾ ಬಂಗಾರದ ಸಾಮಾನುಗಳು ಕಳ್ಳತನವಾಗಿದ್ದರಿಂದ ಮನಸ್ಸಿಗೆ ಬೇಜಾರ ಮಾಡಿಕೊಂಡು ಯಾರಿಗೂ ಹೇಳದೇ ನಮಗೆ ಏನು ಮಾಡಬೇಕೆಂದು ತೊಚದೇ ಯಾವುದೇ ಕಂಪ್ಲೆಟ್ ಕೊಡದೇ ನಾವು ಆ ಮನೆಯನ್ನೆ ಖಾಲಿ ಮಾಡಿಕೊಂಡು ಈಗ ಬೇರೆ ಮನೆಯಲ್ಲಿ ವಾಸವಾಗಿರುತ್ತೆವೆ ಈಗ ನಮ್ಮೂರಿನ ಸಿರಾಜ್ ಈತನು ತನ್ನ ಸ್ನೆಹಿತ ಬಸುವ ನಮ್ಮೂರಿನಲ್ಲಿ ಕೆಲವು ಮನೆಗಳನ್ನು ಕಳ್ಳತನ ಮಾಡಿರುತ್ತಾನೆ ಅಂತಾ ವಿಷಯ ಗೊತ್ತಾಗಿ ನಾನು ನನ್ನ ಗಂಡ ಠಾಣೆಗೆ ಬಂದು ಸಿರಾಜ್ ಈತನಿಂದ ಪೊಲೀಸರು ಜಪ್ತ ಮಾಡಿದ ಬಂಗಾರದ ಸಾಮಾನುಗಳನ್ನು ಗುರ್ತಿಸಿ ಈ ದೂರನ್ನು ಬರೆಯಿಸಿ ಕೊಟ್ಟಿರುತ್ತೆನೆ ಕಾರಣ ಈ ಬಗ್ಗ ಕ್ರಮ ಕೈಗೊಂಡು ನಮ್ಮ ಬಂಗಾರದ ಆಬರಣಗಳನ್ನು ಕೊಡಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5)  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 120/2015 ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:

ದಿನಾಂಕ: 13-11-2015 ರಂದು ರಾತ್ರಿ 8-30 ಗಂಟೆಗ ಹನಮಸಾಗರ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದರಿಂದ ಪಿ.ಸಿ-208 ರವರ ಸಂಘಡ ಆಸ್ಪತ್ರೆಗೆ ಹೊಗಿ ಅಲ್ಲಿ ಗಾಯಾಳು ಪಾಂಡಪ್ಪನ್ನು ವಿಚಾರಿಸಲು ಪಾಂಡಪ್ಪನು ನೀಡಿರುವ ಹೇಳಿಕೆಯನ್ನು ಪಡೆದುಕೊಂಡು ವಾಪಾಸ್ ಠಾಣೇಗೆ 9-30 ಗಂಟೆಗೆ ಬಂದು ಸದರಿ ಫಿರ್ಯಾದಿ ಸಾರಾಂಶ ವೇನೆಂದರೆ ಫಿರ್ಯಾದಿ ಹಾಗೂ    ಆತನ ಅಳಿಯ ಮಲ್ಲಪ್ಪ ಈತನು ಗಜೇಂದ್ರಗಡ ದಿಂದ ತಮ್ಮ ಮೋಟರಾ ಸೈಕಲ್ ನಂ: ಕೆ.ಎ-02 ಹೆಚ್.ಇ-8069 ನೇದ್ದನ್ನು ಮಲಪ್ಪ ನಡೆಸಿಕೊಂಡು ಬೆನಕನಾಳ ದಾಟಿ ಮಡಿಕೆರಿ ಕ್ರಾಸ ಸಮೀಪ ಬರುವಾಗ ಎದರುಗಡೆ ಮಡಿಕೇರಿ ಕ್ರಾಸ್ ಕಡೆಯಿಂದ ಬೆನಕನಾಳ ಕಡೆಗೆ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಟಾಕ್ಟರನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ್ ಸವಾರನಿಗೆ ಟಕ್ಕರಕೊಟ್ಟು ಅಪಘಾತ ಪಡಿಸಿ ಟ್ರ್ಯಾಕ್ಟರ ನಿಲ್ಲಿಸದೆ ಓಡಿ ಹೊಗಿದ್ದು ಇರುತ್ತದೆ ಅಪಘಾತದಲ್ಲಿ ಫಿರ್ಯಾದಿಗೆ ಬಲಗಾಲ ಮಂಡಿ ಹಾಗೂ ಬಲಗಾಲ ಹೆಬ್ಬೆರಳಿಗೆ ರಕ್ತಗಾಯ ಹಾಗೂ ಬಲ ಪಕ್ಕಡಿಗೆ ಪೆಟ್ಟು ಬಿದ್ದಿದ್ದು ಹಾಗೂ ಮೋಟಾರ ಸೈಕಲ್ ಚಾಲಕ ಮಲ್ಲಪ್ಪನಿಗೆ ಹಣೆಗೆ, ಬಲಕಪಾಳ, ಎಡ ಕಪಾಳ, ಎಡ ಕಿವಿಯ ಹಿಂದೆ ತಲೆಗೆ ಹಾಗೂ ಹಿಂದೆಲೆಗೆ ರಕ್ತಗಾಯಗಳಾಗಿದ್ದು ಹಾಗೂ ಬಲ ಬುಜಕ್ಕೆ ತೆರಚಿದ ಗಾಯಗಳಾಗಿದ್ದು ಅಪಘಾತ ಪಡಿಸಿ ಓಡಿ ಹೊದವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ. 

0 comments:

 
Will Smith Visitors
Since 01/02/2008