Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, November 15, 2015

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆನಂ. 337/2015 ಕಲಂ. 87 Karnakata Police Act:.
ದಿನಾಂಕ:- 14-11-2015 ರಂದು ಸಂಜೆ 5:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 14-11-2015 ರಂದು ಮಧ್ಯಾಹ್ನ  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದಾಸನಾಳ ಗ್ರಾಮದಲ್ಲಿ ಯಂಕಪ್ಪ ಹೋಟಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಸಿಪಿಐ ಸಾಹೇಬರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 68, ಪಿ.ಸಿ. 129, 97, 160, 131, 323, 386, 429, 118 ಹಾಗೂ ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲಗಳಲ್ಲಿ ಠಾಣೆಯಿಂದ ಮಧ್ಯಾಹ್ನ 3:00 ಗಂಟೆಗೆ ಹೊರಟು ದಾಸನಾಳ ಊರ ಮುಂದೆ ಹೋಗಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಯಂಕಪ್ಪ ಎಂಬುವವರ ಹೋಟಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಮಧ್ಯಾಹ್ನ 3:30 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 9 ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಶೇಖರಗೌಡ ತಂದೆ ಬುಡ್ಡನಗೌಡ, ವಯಸ್ಸು 34 ವರ್ಷ, ಜಾತಿ: ಲಿಂಗಾಯತ ಉ: ವ್ಯವಸಾಯ ಸಾ: ದಾಸನಾಳ (2) ವೀರೇಶಪ್ಪ ತಂದೆ ಮಲ್ಲಪ್ಪ ಯರಗೇರಿ, ವಯಸ್ಸು 60 ವರ್ಷ, ಜಾತಿ: ಲಿಂಗಾಯತ, ವ್ಯವಸಾಯ ಸಾ: ದಾಸನಾಳ (3) ದೇವಪ್ಪ ತಂದೆ ದಾಸಪ್ಪ ಪೂಜಾರ, ವಯಸ್ಸು 50 ವರ್ಷ, ಉಪ್ಪಾರ ಉ: ಕೂಲಿ ಕೆಲಸ ಸಾ: ದಾಸನಾಳ (4) ಶಂಕ್ರಪ್ಪ ತಂದೆ ಮಲ್ಲಪ್ಪ ಯರಗೇರಿ, ವಯಸ್ಸು 35 ವರ್ಷ, ಲಿಂಗಾಯತ ಉ: ಕೂಲಿ ಕೆಲಸ ಸಾ: ದಾಸನಾಳ (5) ಹನುಮಂತಪ್ಪ ತಂದೆ ಹನುಮಂತಪ್ಪ ಪೂಜಾರಿ, ವಯಸ್ಸು 60 ವರ್ಷ, ಉಪ್ಪಾರ, ಕೂಲಿ ಕೆಲಸ ಸಾ: ದಾಸನಾಳ (6) ಆಂಜನೇಯ ತಂದೆ ಹನುಮಂತಪ್ಪ ವಡ್ಡರು, ವಯಸ್ಸು 28 ವರ್ಷ, ಉ: ಕೂಲಿ ಕೆಲಸ ಸಾ: ಹಿರೇಬೆಣಕಲ್. (7) ಹುಲಗಪ್ಪ ತಂದೆ ದುರಗಪ್ಪ, ಕಲ್ಗುಡಿ, ವಯಸ್ಸು 28 ವರ್ಷ, ಮಾದಿಗ, ಮೇಸನ್ ಸಾ: ಹಿರೇಜಂತಕಲ್, ರಾಮದೇವರ ಗುಡಿಯ ಹತ್ತಿರ ಗಂಗಾವತಿ. (8) ಜಿಲಾನಿ ತಂದೆ ಸೈಯ್ಯದ್ ಮೀರಾಸಾಬ, ವಯಸ್ಸು 38 ವರ್ಷ, ಜಾತಿ: ಮುಸ್ಲೀಂ ಉ: ಆಟೋ ಚಾಲಕ ಸಾ: ಹೊಸ ಹಿರೇಬೆಣಕಲ್ (9) ವೀರೇಶ ತಂದೆ ಗುರ್ರಪ್ಪ ಕುದ್ರಿಮೋತಿ, ವಯಸ್ಸು 34 ವರ್ಷ, ಜಾತಿ: ದೇವಾಂಗ ಉ: ಕೂಲಿಕೆಲಸ ಸಾ: ಹೊಸ ಹಿರೇಬೆಣಕಲ್ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 6,700 /- ಗಳು, 52 ಇಸ್ಪೇಟ್ ಎಲೆಗಳು, ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು. ಈ ಬಗ್ಗೆ ಮಧ್ಯಾಹ್ನ 3:30 ರಿಂದ 4:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 5:00 ಗಂಟೆಗೆ ಠಾಣೆಗೆ ವಾಪಸ್ ಬಂದು ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆನಂ. 338/2015 ಕಲಂ. 87 Karnakata Police Act:.
ದಿನಾಂಕ:- 14-11-2015 ರಂದು ಸಂಜೆ 7:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:  14-11-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸರಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಸಿಪಿಐ ಸಾಹೇಬರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 68, ಪಿ.ಸಿ. 129, 97, 160, 131, 323, 386, 429, 110, 358, 118 ಹಾಗೂ ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲ್ಗಳಲ್ಲಿ ಠಾಣೆಯಿಂದ ಸಂಜೆ 5:30 ಗಂಟೆಗೆ ಹೊರಟು ಕೇಸರಹಟ್ಟಿ ಊರ ಮುಂದೆ ಹೋಗಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಪಂಚಾಯತಿ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 6:00 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ದೇವಪ್ಪ ತಾಯಿ ಮಾರೆಮ್ಮ, ವಯಸ್ಸು 25 ವರ್ಷ, ಜಾತಿ: ಮಾದಿಗ ಉ: ಆಟೋ ಚಾಲಕ ಸಾ: ಹೇರೂರು (2) ಪಂಪಾಪತಿ ತಂದೆ ದ್ಯಾಮಣ್ಣ, ವಯಸ್ಸು 45 ವರ್ಷ, ಜಾತಿ: ಮಾದಿಗ ಉ: ಕೂಲಿಕೆಲಸ ಸಾ: ಹೇರೂರು (3) ಮಲ್ಲಿಕಾರ್ಜುನ ತಾಯಿ ದುರಗಮ್ಮ ವಯಸ್ಸು 23 ವರ್ಷ, ಜಾತಿ: ಮಾದಿಗ ಉ: ಚಾಲಕ ಸಾ: ಹೇರೂರು (4) ಮಂಜುನಾಥ ತಂದೆ ವಿರುಪಣ್ಣ, ವಯಸ್ಸು 18 ವರ್ಷ, ಮಾದಿಗ ಉ: ಕೂಲಿಕೆಲಸ ಸಾ: ಹೇರೂರು (5) ಪರಶುರಾಮ ತಂದೆ ಫಕೀರಪ್ಪ, 27 ವರ್ಷ, ಮಾದಿಗ, ಕೂಲಿಕೆಲಸ ಸಾ: ಹೇರೂರು. (6) ಬಸವರಾಜ ತಂದೆ ಉಡಚಪ್ಪ ಹುಲಿಹೈದರ, ವಯಸ್ಸು 24 ವರ್ಷ, ನಾಯಕ ಉ: ಕೂಲಿ ಕೆಲಸ ಸಾ: ಕೇಸರಹಟ್ಟಿ (7) ಬಸವರಾಜ ತಂದೆ ವಿರುಪಾಕ್ಷಗೌಡ ಮಾಲೀಪಾಟೀಲ್, 35 ವರ್ಷ, ಲಿಂಗಾಯತ, ವ್ಯವಸಾಯ ಸಾ: ಕೇಸರಹಟ್ಟಿ (8) ವೀರೇಶ ತಂದೆ ನಿಂಗಪ್ಪ, ಮಡಿವಾಳ, ವಯಸ್ಸು 28 ವರ್ಷ, ವ್ಯವಸಾಯ ಸಾ: ಕೇಸರಹಟ್ಟಿ (9) ಹುಸೇನ್ ಸಾಬ ತಂದೆ ಅಲಿಸಾಬ, ವಯಸ್ಸು 35 ವರ್ಷ, ಪಿಂಜಾರ, ಕೂಲಿ ಕೆಲಸ ಸಾ: ಕೇಸರಹಟ್ಟಿ (10) ವಿಜಯಕುಮಾರ ತಂದೆ ಪಂಪಾಪತಿ ಮಾಲೀಪಾಟೀಲ್, 24 ವರ್ಷ, ಲಿಂಗಾಯತ ಸಾ: ಕೇಸರಹಟ್ಟಿ (11) ಕಾಶೀಂಸಾಬ ತಂದೆ ಮುರ್ತುಜಾಸಾಬ, ವಯಸ್ಸು 38 ವರ್ಷ, ವ್ಯವಸಾಯ ಸಾ: ಕೇಸರಹಟ್ಟಿ  ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 4,700/- ಗಳು, 52 ಇಸ್ಪೇಟ್ ಎಲೆಗಳು, ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು. ಈ ಬಗ್ಗೆ ಸಂಜೆ 6:00 ರಿಂದ 7:00 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ರಾತ್ರಿ 7:30 ಗಂಟೆಗೆ ಠಾಣೆಗೆ ವಾಪಸ್ ಬಂದು ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 241/2015 ಕಲಂ.  87 Karnakata Police Act:.
ದಿನಾಂಕಃ-14-11-2015 ರಂದು ಸಾಯಂಕಾಲ 6-45 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ಮೂಲ ಪಂಚನಾಮೆ ಮತ್ತು ವರದಿಯೊಂದಿಗೆ ಆರೋಪಿತರನ್ನು ಕರೆದುಕೊಂಡು ಠಾಣೆಗೆ ಬಂದು ಹಾಜರು ಪಡಿಸಿದ್ದು ವರದಿಯ ಸಾರಾಂಶದಲ್ಲಿ ಇಂದು ದಿನಾಂಕಃ-14-11-2015 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯಲ್ಲಿ ಬರುವ ಮರ್ಲಾನಹಳ್ಳಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತರಿಂದ ಒಟ್ಟು ರೂ. 2640/- ಗಳನ್ನು ಮತ್ತು ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷದಲ್ಲಿ ಜಪ್ತ ಮಾಡಿಕೊಂಡು ಠಾಣೆಗೆ ಬಂದು ಮೂಲ ಪಂಚನಾಮೆ ಮತ್ತು ಒಂದು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದು ಇರುತ್ತದೆ.
4)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 234/2015 ಕಲಂ87 Karnakata Police Act:.
ದಿನಾಂಕ. 14-11-2015 ರಂದು 06-30 ಪಿ.ಎಂ.ಕ್ಕೆ ಮುನಿರಾಬಾಧ ಪಿಳೈ ಸರ್ಕಲ್  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ಆಡುತ್ತಿರುವಾಗ ಕಾಲಕ್ಕೆ ಶ್ರೀ. ಜಯಪ್ರಕಾಶ ಪಿ.ಎಸ್.ಐ. ಮುನಿರಾಬಾದ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಢಿ ಇಸ್ಪೇಟ ಜೂಜಾಟ ಆಡುತ್ತಿರುವ ಆರೋಪಿತರಿಂದ ಒಂದು ಬರಕಾ, 52 ಇಸ್ಪೇಟ ಎಲೆಗಳು ಮತ್ತು ಜೂಜಾಟದ ನಗದು ಹಣ 3500=00 ರೂ. ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
5)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 269/2015 ಕಲಂ87 Karnakata Police Act:.
ದಿ : 14.11.15 ರಂದು ಮಧ್ಯಾನ್ನ 01.00 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಗಿಣಿಗೇರಿ ಗ್ರಾಮದ ಸರಕಾರಿ ಆಸ್ಪತ್ರೆ ಹತ್ತಿರದ ಸಂಗಪ್ಪ ಇಂದರಗಿ ಇವರ ಮನೆಯ ಹತ್ತಿರ À ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 12300=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
6)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 270/2015 ಕಲಂ87 Karnakata Police Act:.
ದಿ : 14.11.15 ರಂದು ¸ÀAeÉ 6.00 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮುಂಡರಗಿ ಗ್ರಾಮದ ಬಸ್ ನಿಲ್ದಾಣ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 880-00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
7) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 255/2015 ಕಲಂ. 143, 147, 148, 323, 324, 354, 509, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 14-11-2015 ರಂದು ರಾತ್ರಿ 21-30 ಗಂಟೆಗೆ ಶ್ರೀ ಮುನಾವರ ತಂದೆ ಅಮೀನುದ್ದೀನ್ ವಯಾ; 17 ರ್ಷ, ಜಾ: ಮುಸ್ಲಿಂ,  ಉ: ಆಟೋ ಡ್ರೈವರ್, ಸಾ: ಪ್ರಶಾಂತ ನಗರ ಗಂಗಾವತಿ  ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು  ಅದರ ಸಾರಂಶವೇನೆಂದರೆ, ಆರೋಪಿತರಾದ ಸಾಗರ್ ಮತ್ತು ಆಕಾಶ ಎಂಬುವವರು ಪಿರ್ಯಾದಿದಾರಳ ತಂಗಿಯಾದ ಕುಮಾರಿ ಶಬುಸ್ತಾ ಇವಳಿಗೆ ಶಾಲೆಗೆ ಹೋಗುವಾಗ ಓಣಿಯಲ್ಲಿ ಅವಳಿಗೆ ಡುಮ್ಮಿ ಅಂತಾ ಅನ್ನುವುದು ಅವಳನ್ನು ನೋಡಿ ನಗುವುದು ಮತ್ತು ರಸ್ತೆಗೆ ನೀರನ್ನು ಉಗ್ಗುವುದನ್ನು ಮಾಡುತ್ತಿದ್ದು, ಆ ವಿಷಯವನ್ನು ಅವಳು ಪಿರ್ಯಾದಿದಾರನಿಗೆ ತಿಳಿಸಿದ್ದು ಪಿರ್ಯಾಧಿದಾರನು ಇಂದು ಬೆಳಿಗ್ಗೆ ಆರೋಪಿತರಿಬ್ಬರ ಮನೆಯ ಹತ್ತಿರ ಹೋಗಿ ತನ್ನ ತಂಗಿಯನ್ನು ಕಾಡಿಸಬೇಡಿರಿ ಅಂತಾ ಹೇಳಿದ್ದಕ್ಕೆ ಆರೋಪಿತರು ತಮ್ಮ ಸಂಗಡ ಮತ್ತೇ ಕೆಲವು ಜನ ಆರೋಪಿತರನ್ನು ಕರೆದುಕೊಂಡು ಬಂದು ಪಿರ್ಯಾದಿದಾರನು ತನ್ನ ಆಟೋ ತೆಗೆದುಕೊಂಡು ಹೋಗುತ್ತಿದ್ದಾಗ ಅವನಿಗೆ ತಡೆದು ನಿಲ್ಲಿಸಿ ಚೈನ್ ಮತ್ತು ಬೆಲ್ಟ ನಿಂದ ಹೊಡೆ ಬಡಿ ಮಾಡಿದ್ದು ಅದನ್ನು ಬಿಡಿಸಕೊಳ್ಳಲು ಬಂದ ಪಿರ್ಯಾದಿದಾರನ ತಂಗಿಯರಿಗೂ ಕೈಯಿಂದ ಹೊಡೆಬಡಿ ಮಾಡಿ ಅವರ ಕೈಹಿಡಿದು ನೂಕಿ, ಅವರ ಹೆಣ್ಣುತನಕ್ಕೆ ಅವಮಾನ ಮಾಡಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ನೀಡಿದ  ಫಿರ್ಯಾದಿ  ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
8) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 177/2015 ಕಲಂ. 394, 326 ಐ.ಪಿ.ಸಿ:.

ದಿನಾಂಕ : 14/11/2015 ರಂದು ಬೆಳಗಿನ ಜಾವ 04-30 ಗಂಟೆ ಸುಮಾರಿಗೆ ಆರೋಪಿತನು ಫಿರ್ಯಾದಿದಾರಳ ಮನೆಗೆ ಬಂದು ಮೈಯಲ್ಲಿ ಆರಾಮ ಇಲ್ಲ ತಲೆ ನೋವು ಜಾಸ್ತಿಯಾಗಿದೆ ಅಂತಾ ಒಮ್ಮೇಲೆ ಕುತ್ತಿಗೆಗೆ ಕೈಹಾಕಿ ಹಿಚುಕಿದ್ದರಿಂದ ಪ್ರಜ್ಞೆ ತಪ್ಪಿದಂತಾಗಿದ್ದು ಕೂಡಲೇ ಬಲಗಿವಿಯ ಬಂಗಾರದ ಓಲೆ ಬಿಚ್ಚಿಕೊಂಡು ನಂತರ ಅವಸರದಲ್ಲಿ ಎಡಕಿವಿಯನ್ನು ಬ್ಲೇಡಿನಿಂದ ಕೊಯ್ದು ಬಂಗಾರದ ಓಲೆಯನ್ನು ತೆಗೆದುಕೊಂಡಿದ್ದು ಹಾಗೂ ಕೊರಳಲ್ಲಿ ಇರುವ ಒಂದು ಬಂಗಾರದ ಟಿಕಾ ಮಣಿಯನ್ನು ಮತ್ತು ಒಂದು ಡೋರ್ ಬಂಗಾರದ ಸಾಮಾನುಗಳನ್ನು ಹರಿದುಕೊಂಡಿದ್ದು ಅಲ್ಲದೇ ಎಡ ಕಿವಿಯಲ್ಲಿಯ ಬೆಂಡೋಲಿಯನ್ನು ಬ್ಲೇಡಿನಿಂದ ಕೊಯ್ದುಕೊಂಡು ತೆಗೆದುಕೊಂಡು ಓಡಿ ಹೋಗಿದ್ದು, ಎಡ ಕಿವಿಯ ಹಾಲಿಯು ಹರಿದು ಹೊಗಿದ್ದು, ಕೂಡಲೇ ನೋವು ಆಗಿ ಚಿರಾಡಲು ಪ್ರಯತ್ನಿಸಿದಾಗ ಪಕ್ಕದ ಮನೆಯಲ್ಲಿದ್ದ ಓಣಿಯ ಜನರಾದ ಕರಿಯಪ್ಪ ತಂದೆ ಪರಸಪ್ಪ ಕುಷ್ಟಗಿ ಮತ್ತು ದ್ಯಾಮಣ್ಣ ತಂದೆ ಮಲಿಯಪ್ಪ ಬಸಾಪುರ ರವರು ಬಂದು ವಿಚಾರಿಸಲಾಗಿ ಸಂಗಪ್ಪ ಮೇಟಿ ಇವನು ನನ್ನ ಕಿವಿಯ ಬಂಗಾರದ ಸಾಮಾನುಗಳು ಮತ್ತು ಕೊರಳ ಬಂಗಾರದ ಸಾಮಾನುಗಳನ್ನು ಹರಿದುಕೊಂಡು ಹೋಗಿರುತ್ತಾನೆ, ಈ ವಿಷಯವನ್ನು ನಮ್ಮ ಸಂಬಂಧಿಕರಿಗೆ ತಿಳಸಿ, ಮತ್ತು ಗ್ರಾಮದ ಹಿರಿಯರೊಂದಿಗೆ ವಿಚಾರಿಸಿ ತಡವಾಗಿ ಬಂದು ಫಿಯರ್ಾದಿ ನೀಡಿದ್ದು ಕಾರಣ ಎಡಕಿವಿಯಲ್ಲಿ ಇದ್ದ ಓಲೆಯನ್ನು ಬ್ಲೆಡಿನಿಂದ ಕೊಯ್ದು ಕಿತ್ತುಕೊಂಡಿದ್ದು ಅಲ್ಲದೇ ಬಲಕಿವಿಯ ಮತ್ತು ಕೊರಳಲ್ಲಿನ ಬಂಗಾರದ ಸಾಮಾನುಗಳನ್ನು ಕಿತ್ತುಕೊಂಡು ಓಡಿ ಹೋದ ಸಂಗಪ್ಪ ತಂದೆ ಬಸಟೇಪ್ಪ ಮೇಟಿ ಸಾ/ಕನ್ನಾಳ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008