1) ಕನಗಕಗಿರಿ ಪೊಲೀಸ್ ಠಾಣೆ ಗುನ್ನೆನಂ.
178/2015 ಕಲಂ. 87 Karnakata Police Act:.
ದಿನಾಂಕ 15-11-2015 ರಂದು ಸಂಜೆ 5-00 ಗಂಟೆಗೆ ಶ್ರೀ ಉದಯರವಿ ಪಿ.ಎಸ್.ಐ
ಕನಕಗಿರಿ ಪೊಲೀಸ್ ಠಾಣೆ ರವರು ಜಪ್ತ ಮಾಡಿದ ಮಾಲು ಮತ್ತು ಆರೋಪಿತರೊಂದಿಗೆ ವಾಪಸ್ ಠಾಣೆಗೆ ಬಂದು ವರದಿ
ಮತ್ತು ಜಪ್ತಿ ಪಂಚನಾಮೆ ಕೊಟ್ಟಿದ್ದು, ಸದರ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ
15-11-2015 ರಂದು ಮದ್ಯಾನ್ಹ 3-00 ಗಂಟೆಯಿಂದ 4-30 ಗಂಟೆಯವರೆಗೆ ನವಲಿ ಗ್ರಾಮದಲ್ಲಿ ಇರುವ ಪ್ರಾಥಮಿಕ
ಆರೋಗ್ಯ ಕೇಂದ್ರದ ಹತ್ತಿರ ಶಾಂತಯ್ಯ ಪೂಜಾರ ಇವರ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಾಣಿಸಿದ
ಆರೋಪಿತರು ದುಂಡಾಗಿ ಕುಳಿತುಕೊಂಡು ದೈವಲಿಲೇ ಮೇಲೆ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಫಿಯರ್ಾದಿದಾರರು
ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ ರೂ. 1645/-
ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿ, ಈ ಬಗ್ಗೆ ವಿವರವಾದ ಜಪ್ತಿ
ಪಂಚನಾಮೆ ಮಾಡಿಕೊಂಡು ವಾಪಸ್ ಠಾಣೆಗೆ ಬಂದು ಪಂಚನಾಮೆ, ವರದಿಯನ್ನು ಕೊಟ್ಟಿದ್ದು, ಸದರ ವರದಿ
& ಪಂಚನಾಮೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆನಂ.
256/2015 ಕಲಂ. 341, 323, 504 ಐ.ಪಿ.ಸಿ:.
ದಿನಾಂಕ 15-11-2015 ರಂದು ರಾತ್ರಿ 8-00 ಗಂಟೆಗೆ ಶ್ರೀ ಮಂಜುನಾಥ ತಂದೆ ನೂರಣಸಾ ರಾಯಬಾಗಿ, ವಯಸ್ಸು 43 ವರ್ಷ, ಜಾ: ಸೋಮವಂಶ ಕ್ಷತ್ರಿಯ, ಉ: ಸೋಡಾ ವ್ಯಾಪಾರ, ಸಾ: ಪ್ರಶಾಂತನಗರ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ನಿನ್ನೆ ದಿನಾಂಕ 14-11-2015 ರಂದು ಸಂಜೆ 6-00 ಗಂಟೆ ಸುಮಾರಿಗೆ ನನ್ನ ಅಳಿಯಂದಿರಾದ ಸಾಗರ ಹಾಗೂ ಕಾರ್ತೀಕ ಇಬ್ಬರೂ ಸೇರಿ ಐಸ್ ಕ್ರೀಮ್
ತರಲೆಂದು ಕಾಕಾನ ಅಂಗಡಿಗೆ ಹೊರಟಿದ್ದಾಗ ಪ್ರಶಾಂತನಗರದ ರಾಜಾರಾಮ್ ಕಲ್ಯಾಣ ಮಂಟಪದ ಹತ್ತಿರ
ಅವರನ್ನು ತಡೆದು ನಿಲ್ಲಿಸಿದ ಮುನಾವರ್ ತಂದೆ ಅಮೀನುದ್ದೀನ್ ಇವನು ಅವರಿಗೆ ಅವಾಚ್ಯವಾಗಿ ಬೈದು
ಕೈಯಿಂದ ಹೊಡೆಬಡೆ ಮಾಡಿದ್ದು ಕಾರಣ ಮುನಾವರ್ ತಂದೆ ಅಮೀನುದ್ದೀನ್ ಸಾ: ಪ್ರಶಾಂತನಗರ, ಗಂಗಾವತಿ ಇವನ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು..
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 154/2015 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ:-14/11/2015 ರಂದು 1-30..ಎ.ಎಂ.ಕ್ಕೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ
ಅಪಘಾತದ ಬಗ್ಗೆ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ 8.00 ಎ.ಎಂ.ಕ್ಕೆ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿಗೆ
ಪರಿಶೀಲಿಸಿ ಗಾಯಾಳು ಮಹೇಶ ಬಳಗೇರಿ, ಸಾ:ರಾಜೂರರವರ ಹೇಳಿಕೆಯನ್ನು ಪಡೆಯಲು ಕೇಳಿದಾಗ ತಾನು ತನ್ನ ಮನೆಯ
ಹಿರಿಯರು ಬಂದ ಮೇಲೆ ಹೇಳಿಕೆ ನೀಡುವದಾಗಿ ಹೇಳಿದ್ದರಿಂದ ಗಾಯಾಳುವಿನ ಹಿರಿಯರು ಬಂದ ಮೇಲೆ ವಿಚಾರಿಸಿ
ನಂತರ ಗಾಯಾಳುವಿನ ಹೇಳಿಕೆಯನ್ನು 3-30 ಪಿ.ಎಂದಿಂದ 4-30 ಪಿಎಂದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೆನೆಂದರೆ,
ನಿನ್ನೆ ದಿನಾಂಕ; 13/11/2015 ರಂದು 6-00 ಪಿ.ಎಂ.ಕ್ಕೆ ತಮ್ಮೂರಿನ ಶಿವಪ್ಪ ಹಾಗೂ
ಹೇಮರಡ್ಡಿ ರವರ ತನ್ನ ಬೈಕ ಮೇಲೆ ಬಾ ಅಂತಾ ಕರೆದುಕೊಂಡು ಕುಕನೂರದಿಂದ ರಾಜೂರಗೆ ಹೋಗುವಾಗ 6.15 ಪಿ.ಎಂ.
ಸುಮಾರಿಗೆ ರಾಜೂರ ಸೀಮಾದಲ್ಲಿ ಹೇಮರಡ್ಡಿ ಈತನು ಅತೀವೇಗವಾಗಿ ಹೋಗುವಾಗ ರಸ್ತೆಯಲ್ಲಿ ಯಾವುದೇ ಸೂಚನೆ
ನೀಡದೇ ಸಿಗ್ನಲ್ ಲೈಟ್ ಹಾಕದೇ ನಿಲ್ಲಿಸಿದ ಟಾಟಾ ಮ್ಯಾಜಿಕ್ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ
ನಾವು ಮೂರು ಜನ ಬೈಕ ಸಮೇತ ಕೆಳಗೆ ಬಿದ್ದಿದ್ದು, ಇದರಿಂದ ನನಗೆ ಎಡಗಾಲಿನ ಮೊಣಕಾಲ ಕೆಳಗೆ & ಮೊಣಕಾಲ
ಮೇಲೆ ಭಾರಿ ರಕ್ತಗಾಯಗಳಾಗಿದ್ದು ಬೈಕ್ ನಡೆಸುತ್ತಿದ್ದ ಹೇಮರಡ್ಡಿ ಈತನಿಗೆ ಹೊಟ್ಟೆಗೆ ಭಾರಿ ಒಳಪೆಟ್ಟು
ಆಗಿ ಕೈ ಮತ್ತು ಕಾಲಿಗೆ ತೆರಚಿದ ಗಾಯಗಳಾಗಿದ್ದು, ನಡುವೆ ಕುಳಿತ ಶಿವಪ್ಪನಿಗೆ ಅಲ್ಲಲ್ಲಿ ತೆರಚಿದ
ಗಾಯ ಮತ್ತು ಒಳಪೆಟ್ಟುಗಳಾಗಿದ್ದು ಇದೆ. ಹೇಮರಡ್ಡಿ ಮತ್ತು ಶಿವಪ್ಪನು ಊರಿನಲ್ಲಿ ಇರುವ ಜನರಿಗೆ ತಿಳಿಸಿ
ಕರೆದುಕೊಂಡು ಬರುತ್ತೇವೆ ಅಂತಾ ಹೇಳಿ ನನಗೆ ಅಲ್ಲಿಯೇ ಬಿಟ್ಟು ಯಾವುದೋ ವಾಹನದಲ್ಲಿ ರಾಜೂರಿಗೆ ಹೋಗಿದ್ದು
ನಂತರ ನಾನು ಕುಳಿತು ಹೊರಟ ಬೈಕ್ ನಂ.ನೋಡಲಾಗಿ ಅದು ಹೊಸ HF ಡೀಲಕ್ಸ ಮೋಟಾರ್ ಸೈಕಲ್ ಇದ್ದು ಅದಕ್ಕೆ ನಂಬರ ಇರುವದಿಲ್ಲ. ಮತ್ತು ರಸ್ತೆಯಲ್ಲಿ ನಿಲ್ಲಿಸಿದ
ಟಾಟಾ ಮ್ಯಾಜಿಕ್ ವಾಹನದ ನಂ. ನೋಡಲಾಗಿ ಅದರ ನಂ. KA 22 N 8637 ಅಂತಾ ಇದ್ದು ಅದರ ಚಾಲಕ ನಮ್ಮೂರಿನ
ಮಲ್ಲಪ್ಪ ಚಿಲಕಮುಲ್ಕಿ ಇರುತ್ತಾನೆ. ಮಲ್ಲಪ್ಪನು ಗಾಯಗೊಂಡ ತನಗೆ ಅದೇ ವಾಹನದಲ್ಲಿ ಕುಕನೂರ ಸರಕಾರಿ
ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆಮಾಡಿ ನಂತರ ವೈದ್ಯರ ಸೂಚನೆಯ ಮೇರೆಗೆ ಹೆಚ್ಚಿನ ಇಲಾಜು ಕುರಿತು
ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಅಪಘಾತಕ್ಕೆ
ಕಾರಣರಾದ ಇಬ್ಬರೂ ಚಾಲಕರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಇದ್ದ ಹೇಳಿಕೆಯ
ಫಿರ್ಯಾಧಿಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈ ಕೊಂಡೆನು .
4) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ 62 ಗುನ್ನೆ ನಂ. 234/2015
ಕಲಂ 279, 337 ಐ.ಪಿ.ಸಿ:.
ದಿನಾಂಕ 15-11-2015 ರಂದು ಬೆಳಿಗ್ಗೆ 9-45
ಗಂಟೆಗೆ ಕೊಪ್ಪಳದ ಕಿಮ್ಸ ಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ
ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿಯ
ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು
ದಿನಾಂಕ 15-11-2015 ರಂದು ಬೆಳಿಗ್ಗೆ 8-50
ಗಂಟೆಗೆ ಫಿರ್ಯಾದಿಯ ಗಂಡ ಗದಗ ರಸ್ತೆಯಲ್ಲಿರುವ ಪದ್ಮಾವತಿ ಸಿಮೆಂಟ ಪ್ಯಾಕ್ಟರಿಯಲ್ಲಿ
ಸೆಕ್ಯೂರಿ ಕೆಲಸವನ್ನು ಮುಗಿಸಿಕೊಂಡು ವಾಪಾಸ ಮನೆಗೆ ಬರಲು ಸೈಕಲ್ ತುಳಿದುಕೊಂಡು ಕೊಪ್ಪಳ-ಗದಗ
ರಸ್ತೆಯ ಮೇಲೆ ಸಿಮೆಂಟ ಪ್ಯಾಕ್ಟರಿಯ ಸಮೀಪ ಕೊಪ್ಪಳದ ಕಡೆಗೆ ಬರುತ್ತಿರುವಾಗ ಹಿಂದಿನಿಂದ
ಕೆ.ಎಸ್.ಆರ್.ಟಿ.ಸಿ ಬಸ್ ನಂ. KA-32/F-1595 ನೆದ್ದರ ಚಾಲಕ ವಾಹನವನ್ನು ಜೋರಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನಿಗೆ ಟಕ್ಕರಮಾಡಿ ಅಪಘಾತಮಾಡಿದನು ಇದರಿಂದ
ನನ್ನ ಗಂಡನಿಗೆ ಹಣೆಗೆ ಬಲಗಡೆ ರಕ್ತಗಾಯ, ಬಲಕೈಗೆ ಮತ್ತು
ಬಲಕಾಲಿಗೆ ತೆರಚಿದಗಾಯಗಳು ಆಗಿರುತ್ತವೆ. ನಂತರ ಗಾಯಗೊಂಡ ನನ್ನ ಗಂಡನನ್ನು ನಮ್ಮ ಒಣಿಯ ಆಂಜನೇಯ
ಮತ್ತು ಮಲ್ಲಿಕಾರ್ಜುನ ಇವರು ಕರೆದುಕೊಂಡು ಬಂದು ಚಿಕಿತ್ಸೆ ಕುರಿತು ಕೊಪ್ಪಳದ ಕಿಮ್ಸ
ಆಸ್ಪತ್ರೆಗೆ ದಾಖಲುಮಾಡಿರುತ್ತಾರೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇಲಿಂದ
ಠಾಣಾ ಗುನ್ನೆ ನಂ. 62/2015 ಕಲಂ. 279, 337 ಐ.ಪಿ.ಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ
ಕೈಕೊಂಡೆನು.
0 comments:
Post a Comment