1) ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ. 197/2015 ಕಲಂ. 87
Karnataka Police Act.
ದಿನಾಂಕ 16-11-2015 ರಂದು ರಾತ್ರಿ 7-15 ಗಂಟೆಗೆ ಪಿ.ಎಸ್.ಐ ಕುಷ್ಠಗಿ ಪೊಲೀಸ
ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಕುಷ್ಟಗಿ
ಪಟ್ಟಣದ ತೆಗ್ಗಿನ ಓಣಿಯ ಲಾಡ ಭಕ್ಷಿ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ
ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ
ಎ.ಎಸ್.ಐ ಪುಂಡಪ್ಪ, ಹೆಚ್.ಸಿ-36, 108,
63 ಪಿ.ಸಿ-116,109,117,167,161,24, ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.ಎ-37-ಜಿ-292 ನೇದ್ದರಲ್ಲಿ ಅದರ ಚಾಲಕ ಶಿವಕುಮಾರ ಎ.ಪಿ.ಸಿ-38 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ
ಕೂಡಿ ಹೋಗಿ ರೇಡ್ ಮಾಡಿ 6 ಜನ ಆರೋಪಿತರನ್ನು ಹಾಗೂ ಇಸ್ಪೆಟ್ ಜೂಜಾಟದ ಒಟ್ಟು ಹಣ 2600-00
ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ
ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ. 198/2015 ಕಲಂ. 78(3)
Karnataka Police Act.
ದಿನಾಂಕ: 16-11-2015 ರಂದು 9-30 ಪಿ.ಎಂ.ಗೆ ಪಿ.ಎಸ್.ಐ ಕುಷ್ಟಗಿ ಪೊಲೀಸ್ ಠಾಣೆ ರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಇಂದು ರಾತ್ರಿ 7-15 ಗಂಟೆಗೆ
ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಕ್ಯಾದಿಗುಪ್ಪಾ
ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ
ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಮಾನಪ್ಪ ತಂದೆ
ಬಾಳಪ್ಪ ತಳವಾರ 2] ಗಣೇಶ ತಂದೆ ಮುದುಕಪ್ಪ ದನ್ನೂರು ಇಬ್ಬರೂ ಸಾ:ಕ್ಯಾದಿಗುಪ್ಪಾರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-63,
ಪಿ.ಸಿ-161,109,117,116,24, ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 7-30 ಪಿ.ಎಂ ಗಂಟೆಗೆ ಹೊರಟು ಕ್ಯಾದಿಗುಪ್ಪಾ
ಗ್ರಾಮದ ಬಸ್ ನಿಲ್ದಾಣದ ಹತ್ತಿರ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ
ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ
ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ
ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು
ವಿಚಾರಿಸಿದಾಗ ಹೆಸರು ಶರಣಪ್ಪ ತಂದೆ ಹೊಳಿಯಪ್ಪ ಅಂಬಿಗೇರ ವಯಾ: 29 ವರ್ಷ ಜಾತಿ: ಅಂಬಿಗೇರ
: ಒಕ್ಕಲುತನ ಸಾ: ಕ್ಯಾದಿಗುಪ್ಪಾ ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ
ಹೆಚ್ಚಿನ ಹಣ ಕೊಡುವುದಾಗಿ ಹೇಳಿದ್ದು, ಹಾಗೂ ತಾನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ
ಮಾಡಿದಾಗ ಮಟಕಾ ಜೂಜಾಟದ ಹಣ 1530-00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ
ಒಂದು ನೋಕಿಯೋ ಕಂಪನಿಯ ಮೋಬೈಲ್ ಅಂ:ಕಿ: 600=00 ರೂ:ಗಳಷ್ಟು ಆಗಬಹುದು ಇವುಗಳನ್ನು ಜಪ್ತ
ಪಡಿಸಿದ್ದು ಇರುತ್ತದೆ ತಾನು ಬರೆದ ಮಟಕಾ ಚೀಟಿಗಳನ್ನು ಸಂಗಪ್ಪ ಸಾ: ಇಲಕಲ್ ಇವರಿಗೆ
ಕೊಡುವದಾಗಿ ತಿಳಿಸಿದನು. ಈ ಪಂಚನಾಮೆಯನ್ನು ದಿನಾಂಕ: 16-11-2015 ರಂದು ರಾತ್ರಿ
8-00 ಗಂಟೆಯಿಂದ 9-00 ವರೆಗೆ ಬರೆದು ಮುಗಿಸಲಾಯಿತು. ನಂತರ ಆರೋಪಿತನ್ನು ಮತ್ತುಮುದ್ದೆಮಾಲುಗಳನ್ನು ಪಂಚನಾಮೆಯ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆನಂ. 242/2015 ಕಲಂ. 143, 147, 504, 506 r /w 149 IPC & 3 (1) (11)
SC/ST Act-1989.
ದಿನಾಂಕಃ-16-11-2015
ರಂದು ಸಾಯಂಕಾಲ 18-20 ಗಂಟೆಗೆ ಶ್ರೀಮತಿ ಕೆ. ಲಕ್ಷ್ಮೀ ಗಂಡ ಅಮರೇಶ ಮಾದಿಗ ಸಾ. ಸಿದ್ದಾಪೂರ
ಗದ್ವಾಲ ಕ್ಯಾಂಫ್ ತಾ. ಗಂಗಾವತಿ ರವರು ಕೊಟ್ಟ ಪಿರ್ಯಾದಿ ರಜೀಸ್ಟರ್ ಪೋಸ್ಟ ಮೂಖಾಂತರ ಮಾನ್ಯ
ಪೊಲೀಸ ಅಧೀಕ್ಷಕರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹಳೆ ಐ.ಜಿ.ಪಿ ಕಛೇರಿ ಕಟ್ಟಡ
ಕಲಬುರ್ಗಿರವರಿಂದ ಬಂದ ಪಿರ್ಯಾದಿಯನ್ನು ಹೆಚ್.ಸಿ 89 ರವರು ಹಾಜರ ಪಡಿಸಿದ್ದು ಸದರಿ ಪಿರ್ಯಾದಿಯ
ಸಾರಾಂಶದಲ್ಲಿ ನಾನು ಸಿದ್ದಾಪೂರ ಹೋಬಳಿ ವ್ಯಾಪ್ತಿಯಲ್ಲಿ ಕೊಟ್ನೆಕಲ್ ಗ್ರಾಮದ ಜಮೀನು ಸರ್ವೆ ನಂ
38*/ಹಿಸ್ಸಾ13 ಕ್ಷೇತ್ರ 01-00 ಎಕರೆ ಮತ್ತು ಸರ್ವೆ ನಂ 38*/ಹಿಸ್ಸಾ 17 ಕ್ಷೇತ್ರ 00-20
ಗುಂಟೆ ಜಮೀನನಿನ ಮಾಲೀಕಳು ಹಾಗೂ ಸ್ವಾದಿನದಾರಳು ಇದ್ದು ನಮ್ಮ ಕುಟುಂಬಕ್ಕೆ ನನ್ನ ಜಮೀನು ಸೇರಿ 3
ಎಕರೆ ಜಮೀನು ಹೊಂದಿದ್ದು ಈ ಜಮೀನಿನ ಆದಾಯದಿಂದ ಕೌಟುಂಬಿಕ ಜೀವನ ನಡೆಸುತ್ತಿದ್ದೇನೆ. ನಮ್ಮ
ಗ್ರಾಮದ ಲಿಂಗಾಯತ ಸಮಾಜದ 1) ಗಂಗಪ್ಪ ತಂದಿ ಪಂಪಣ್ಣ ಮಾದಾಪೂರ 35 ವರ್ಷ, 2) ಸೋಮರೆಡ್ಡಿ ತಂದಿ ಪಂಪಣ್ಣ ಮಾದಾಪೂರ, 48 ವರ್ಷ, 3) ರೇಣಪ್ಪ ತಂದಿ ಪಂಪಣ್ಣ ಮಾದಾಪೂರ, ವಯ-38 ವರ್ಷ, 4) ಮಂಜಪ್ಪ ತಂದಿ ಸೋಮರೆಡ್ಡಿ ಮಾದಾಪೂರ,
22 ವರ್ಷ, 5) ಸಾವೀತ್ರಮ್ಮ ಗಂಡ ಸೋಮರೆಡ್ಡಿ ಮಾದಾಪೂರ
43 ವರ್ಷ ಎಲ್ಲರೂ ಸಿದ್ದಾಪೂರ ತಾಲೂಕ ಗಂಗಾವತಿ ಇವರುಗಳು ಸೇರಿ ಕಳೆದ ಒಂದು ವರ್ಷದಿಂದ ನಮ್ಮ
ಜಮೀನನ್ನು ನುಂಗಿ ಹಾಕುವ ಹುನ್ನಾರ ನಡೆಸಿದ್ದು ಅದಕ್ಕಾಗಿ ಇನ್ನಿಲ್ಲದ ತೊಂದರೆಗಳನ್ನು ಕೊಡುತ್ತಾ
ಬಂದಿದ್ದು ಜಮೀನಿನಲ್ಲಿ ನಾವುಗಳು ಸಾಗುವಳಿ ಮಾಡಲು ಬಂದರೆ ಇಲ್ಲಿಗೆ ಯಾಕೆ ಬಂದಿರುತ್ತಿರಿ, ನಿಮ್ಮನ್ನು ಕೊಂದು ಇದೆ ಜಮೀನಿನಲ್ಲಿ ಹುತು ಹಾಕುತ್ತೇವೆ, ನೀವುಗಳು
ಈ ಜಮೀನನ್ನು ನಮಗೆ ಖರಿದಿಗೆ ಕೊಟ್ಟು ಇಲ್ಲಿಂದ ಹೋರಟು ಹೋಗಿ, ಇಲ್ಲವಾದಲ್ಲೀ
ನೀವುಗಳು ನಿಮ್ಮ ಮಕ್ಕಳು ಹೇಗೆ ಇಲ್ಲಿ ವಾಸ ಮಾಡುತ್ತಿರಿ ಎಂದು ಜೀವದ ಬೇದರಿಕೆ ಹಾಕುತ್ತಾ
ಬಂದಿದ್ದು ಈ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರು ಅವರಿಗೆ ಬುದ್ದಿವಾದ ಹೇಳಿದ್ದರೂ ಅವರ ಮಾತು
ಕೇಳಿರುವುದಿಲ್ಲಾ ನಮಗೆ ಗ್ರಾಮವನ್ನು ಬಿಟ್ಟು ಹೋಗಿರಿ ಅಂತಾ ಅವರ ಮಾತನ್ನು ತಿರಸ್ಕಾರ ಮಾಡಿದ್ದು
ಇರುತ್ತದೆ ಅಲ್ಲದೇ ಇದೇ ತಿಂಗಳು ಒಂದು ವಾರದ ಹಿಂದೆ ನಮ್ಮ ಮನೆಯ ಮುಂದೆ ಬಂದು ಕೆಟ್ಟ ಶಬ್ದಗಳಿಂದ
ಅಂದರೆ ಸೂಳೆ ಮಕ್ಕಳೇ ಕಂಬಾಲಪಲ್ಲಿಯಲ್ಲಿ ಆಗಿರುವ ನರಮೇದದಂತೆ ಇಲ್ಲಿಯೂ ಕೂಡಾ ನಿಮ್ಮನ್ನು
ಸುಟ್ಟು ಹಾಕುತ್ತೇವೆ ಸುಮ್ಮನೇ ನಿಮ್ಮ ಜಮೀನನ್ನು ನಮಗೆ ಕೊಟ್ಟು ಬದಕಿಕೊಳ್ಳಿ ಅಂತಾ ಸುಮಾರು
ಒಂದು ತಾಸಿನ ವರೆಗೆ ಕೂಗಾಡಿದ್ದು ಗಂಗಪ್ಪ ಸೋಮರೆಡ್ಡ, ರೇಣಪ್ಪ ನಮ್ಮ
ಜೀವ ತೆಗೆಯಲು ಪಣ ತೊಟ್ಟಿದ್ದಾರೆ ಇನ್ನೂ ಮುಂದೆ
ನನಗೆ ನನ್ನ ಗಂಡನಿಗೆ ಇಲ್ಲವೇ ನನ್ನ ಮಕ್ಕಳಿಗೆ ಯಾವುದೇ ದೈಹಿಕ ಇಲ್ಲವೇ ಜೀವದ ಅಪಾಯವಾದಲ್ಲೀ
ಇದಕ್ಕೆ ನೇರವಾಗಿ ಮೇಲಿನವರೆ ಕಾರಣರಾಗುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ
ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಬೇವೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 22/2015 ಕಲಂ. 174 ಸಿ.ಆರ್.ಪಿ.ಸಿ.
ಮೃತ ಹನಮಂತಪ್ಪ ಇವನು ಈಗ್ಗೆ ಸುಮಾರು 10 ವರ್ಷಗಳ ಹಿಂದೆ ದೇವಮ್ಮ
ಎಂಬುವಳನ್ನು ಮದುವೆಯಾಗಿದ್ದು ಇವಳಿಗೆ 03 ಜನ ಮಕ್ಕಳಿದ್ದು
ಸದರಿ ದೇವಮ್ಮಳು ಮೃತಪಟ್ಟಿದ್ದು, ನಂತರ ಮೃತ ಹನಮಂತಪ್ಪ ಇವನು ಲಕ್ಷ್ಮವ್ವ ಎಂಬುವಳನ್ನು ಎರಡನೇ ಮದುವೆ
ಮಾಡಿಕೊಂಡಿದ್ದು ಇವಳಿಗೆ 02 ಜನ ಮಕ್ಕಳಿದ್ದು ಹನಮಂತಪ್ಪನು ಈಗ್ಗೆ ಸುಮಾರು 6-7 ವರ್ಷಗಳಿಂದ ಮದ್ಯಪಾನ
ಮಾಡುವ ಚಟಕ್ಕೆ ಅಂಟಿಕೊಂಡಿದ್ದು ಅಲ್ಲದೇ ತನ್ನ ಸಂಸಾರದಲ್ಲಿ ಮನಸ್ಸಿಗೆ ಬೇಜಾರು ಮಾಡಿಕೊಂಡು ಅಲ್ಲಲ್ಲಿ
ಮದ್ಯಪಾನ ಮಾಡುತ್ತಾ ತಿರುಗಾಡುತ್ತಿದ್ದು ಇರುತ್ತದೆ. ಸದರಿಯವನು ಮದ್ಯಪಾನ ಸೇವಿಸಿ ಅದೇ ನಷೆಯಲ್ಲಿ
ಇಂದು ದಿನಾಂಕ: 16.11.2015 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಎಲ್ಲಿಯೋ ಯಾವುದೋ ಕ್ರೀಮಿನಾಷಕ
ಔಷಧಿಯನ್ನು ಸೇವಿಸಿ ಫಿರ್ಯಾದಿ ತಮ್ಮ ಅಣ್ಣ ಕರಿಯಪ್ಪನ ಹೊಲಕ್ಕೆ ಹೋದಾಗ ಕರಿಯಪ್ಪನು ವಿಷ ಸೇವನೆ ಮಾಡಿದ್ದನ್ನು
ನೋಡಿ ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ
ಮದ್ಯಾಹ್ನ 12.30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವದಿಲ್ಲಾ
ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,
0 comments:
Post a Comment