Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, November 18, 2015

1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 197/2015 ಕಲಂ. 78(3) Karnataka Police Act.
ದಿನಾಂಕ 16-11-2015 ರಂದು ರಾತ್ರಿ 7-15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯ ಲಾಡ ಭಕ್ಷಿ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ .ಎಸ್.ಐ ಪುಂಡಪ್ಪ, ಹೆಚ್.ಸಿ-36, 108, 63 ಪಿ.ಸಿ-116,109,117,167,161, 24, ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಅದರ ಚಾಲಕ ಶಿವಕುಮಾರ ಎ.ಪಿ.ಸಿ-38 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 6 ಜನ ಆರೋಪಿತರನ್ನು ಹಾಗೂ ಇಸ್ಪೆಟ್  ಜೂಜಾಟದ ಒಟ್ಟು ಹಣ 2600-00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಠಾಣೆ ಗುನ್ನೆ ನಂ.197/2015 ಕಲಂ. 87 ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 198/2015 ಕಲಂ. 78(3) Karnataka Police Act.
ದಿನಾಂಕ: 16-11-2015 ರಂದು 9-30 ಪಿ.ಎಂ.ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಇಂದು ರಾತ್ರಿ 7-15 ಗಂಟೆಗೆ  ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಕ್ಯಾದಿಗುಪ್ಪಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಮಾನಪ್ಪ ತಂದೆ ಬಾಳಪ್ಪ ತಳವಾರ 2] ಗಣೇಶ ತಂದೆ ಮುದುಕಪ್ಪ ದನ್ನೂರು ಇಬ್ಬರೂ ಸಾ:ಕ್ಯಾದಿಗುಪ್ಪಾರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-63, ಪಿ.ಸಿ-161,109,117,116,24, ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ  ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 7-30 ಪಿ.ಎಂ ಗಂಟೆಗೆ ಹೊರಟು ಕ್ಯಾದಿಗುಪ್ಪಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ  ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಶರಣಪ್ಪ ತಂದೆ ಹೊಳಿಯಪ್ಪ ಅಂಬಿಗೇರ ವಯಾ: 29 ವರ್ಷ ಜಾತಿ: ಅಂಬಿಗೇರ : ಒಕ್ಕಲುತನ ಸಾ: ಕ್ಯಾದಿಗುಪ್ಪಾ ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿದ್ದು, ಹಾಗೂ ತಾನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 1530-00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಒಂದು ನೋಕಿಯೋ ಕಂಪನಿಯ ಮೋಬೈಲ್ ಅಂ:ಕಿ: 600=00 ರೂ:ಗಳಷ್ಟು ಆಗಬಹುದು ಇವುಗಳನ್ನು ಜಪ್ತ ಪಡಿಸಿದ್ದು ಇರುತ್ತದೆ ತಾನು ಬರೆದ ಮಟಕಾ ಚೀಟಿಗಳನ್ನು ಸಂಗಪ್ಪ ಸಾ: ಇಲಕಲ್ ಇವರಿಗೆ ಕೊಡುವದಾಗಿ ತಿಳಿಸಿದನು. ಈ ಪಂಚನಾಮೆಯನ್ನು ಇಂದು ದಿನಾಂಕ: 16-11-2015  ರಂದು ರಾತ್ರಿ 8-00 ಗಂಟೆಯಿಂದ 9-00 ವರೆಗೆ ಬರೆದು ಮುಗಿಸಲಾಯಿತು. ನಂತರ ಆರೋಪಿತನ್ನು ಮತ್ತು ಮುದ್ದೆಮಾಲುಗಳನ್ನು ಪಂಚನಾಮೆಯ ಸಾರಾಂಶದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.  340/2015 ಕಲಂ. 279, 338 ಸಹಿತ 187 ಐ.ಎಂ.ವಿ. ಕಾಯ್ದೆ:.
 ದಿನಾಂಕ:- 17-11-2015 ರಂದು ಬೆಳಿಗ್ಗೆ 07:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಂಗಾರಾವ್ ತಂದೆ ಸೂರ್ಯನಾರಾಯಣರಾವ್ ವೇಗುಳ್ಳ, ವಯಸ್ಸು 52 ವರ್ಷ, ಜಾತಿ: ಕಮ್ಮಾ ಉ: ಒಕ್ಕಲುತನ ಸಾ: ಸಿದ್ದಾಪೂರು. ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಸಿದ್ದಾಪೂರು ನಿವಾಸಿ ಇದ್ದು ಒಕ್ಕಲುತನ ಮಾಡಿಕೊಂಡಿರುತ್ತೇನೆ.  ನನಗೆ ಸೂರ್ಯನಾರಾಯಣ ವಯಸ್ಸು 30 ವರ್ಷ ಎಂಬ ಒಬ್ಬನೇ ಮಗನಿದ್ದು, ಒಕ್ಕಲುತನ ಮಾಡಿಕೊಂಡಿರುತ್ತಾನೆ. ನಿನ್ನೆ ದಿನಾಂಕ:- 16-11-2015 ರಂದು ಸಂಜೆ ನನ್ನ ಮಗ ಸೂರ್ಯನಾರಾಯಣ ಹಾಗೂ ಆತನ ಗೆಳೆಯನಾದ ವೀರಭದ್ರಗೌಡ ತಂದೆ ಬಸನಗೌಡ ಮಾಲೀಪಾಟೀಲ್, ವಯಸ್ಸು 33 ವರ್ಷ ಉ: ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಕೆಲಸ ಸಾ: ಸಿದ್ದಾಪೂರು ಇಬ್ಬರೂ ಕೂಡಿಕೊಂಡು ಹಿರೋ ಹೆಚ್.ಎಫ್. ಡಿಲಕ್ಸ್ ಮೋಟಾರ ಸೈಕಲ್ ನಂ: ಕೆ.ಎ-37/ಎಕ್ಸ್-8748 ರಲ್ಲಿ ಸ್ವಂತ ಕೆಲಸದ ನಿಮಿತ್ಯವಾಗಿ ಗಂಗಾವತಿಗೆ ಹೋಗಿ ಬರುವುದಾಗಿ ಹೇಳಿ ಹೋದರು.  ನಂತರ ರಾತ್ರಿ 12:00 ಗಂಟೆಯ ಸುಮಾರಿಗೆ ನನ್ನ ಮಗ ಸೂರ್ಯನಾರಾಯಣ ಈತನು ಫೋನ್ ಮಾಡಿ ತಮಗೆ ಶ್ರೀರಾಮನಗರದ ಪೆಟ್ರೋಲ್ ಬಂಕ್ ಹತ್ತಿರ ಕಾರ್ ಅಪಘಾತ ಮಾಡಿದ್ದು, ಇದರಿಂದ ತಾನು ಮತ್ತು ವೀರಭದ್ರಗೌಡ ಇಬ್ಬರೂ ತೀವ್ರವಾಗಿ ಗಾಯಗೊಂಡಿರುತ್ತೇವೆ.  ತಮ್ಮನ್ನು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಅಂತಾ ತಿಳಿಸಿದನು.  ಕೂಡಲೇ ನಾನು ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗ ಸೂರ್ಯನಾರಾಯಣನಿಗೆ ತಲೆಗೆ ರಕ್ತಗಾಯ, ಎಡಭುಜಕ್ಕೆ ಮತ್ತು ಎಡಗಾಲಿನ ಎಲುಬು ಮುರಿದು ತೀವ್ರ ರಕ್ತಗಾಯವಾಗಿದ್ದವು.  ವೀರಭದ್ರಗೌಡನಿಗೆ ತಲೆಗೆ ರಕ್ತಗಾಯವಾಗಿ, ಎಡಗೈ ಮುರಿದ್ದು, ಎಡಗಾಲಿಗೆ ಒಳಪೆಟ್ಟಾಗಿತ್ತು, ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ.  ನನ್ನ ಮಗನಿಗೆ ವಿಚಾರಿಸಲು ತಿಳಿಸಿದ್ದೇನೆಂದರೆ, “ ತಾವು ಗಂಗಾವತಿಯಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಸಿದ್ದಾಪೂರಕ್ಕೆ ಹೋಗುತ್ತಿರುವಾಗ ಮೋಟಾರ ಸೈಕಲನ್ನು ವೀರಭದ್ರಗೌಡನು ನಡೆಯಿಸುತ್ತಿದ್ದನು.  ತಾನು ಹಿಂಭಾಗದಲ್ಲಿ ಕುಳಿತಿದ್ದೆನು. ರಾತ್ರಿ 10:30 ರಿಂದ 11:00 ಗಂಟೆಯ ಅವಧಿಯಲ್ಲಿ ಸಿಂಧನೂರು-ಗಂಗಾವತಿ ಮುಖ್ಯ ರಸ್ತೆಯಲ್ಲಿ ಶ್ರೀರಾಮನಗರದ ಪೆಟ್ರೋಲ್ ಬಂಕ್ ಹತ್ತಿರ ನಿಧಾನವಾಗಿ ರಸ್ತೆಯ ಎಡಗಡೆ ಹೋಗುತ್ತಿರುವಾಗ ತಮ್ಮ ಎದುರುಗಡೆ ಸಿಂಧನೂರು ಕಡೆಯಿಂದ ಬಂದ ಯಾವುದೋ ಒಂದು ಕಾರ್ ಚಾಲಕನು ಕಾರನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ತಮಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ಕಾರ್ ನ್ನು ನಿಲ್ಲಿಸದೇ ಹಾಗೆಯೇ ಹೊರಟು ಹೋದನು.  ಇದರಿಂದ ತಮ್ಮಿಬ್ಬರಿಗೆ ತೀವ್ರ ಗಾಯಗಳಾಗಿರುತ್ತವೆ.  ನಂತರ ರಸ್ತೆಯಲ್ಲಿ ಹೋಗುವವರು ಯಾರೋ ಮರಳಿ ಟೋಲ್ ಅಂಬ್ಯುಲೆನ್ಸ್ ಗೆ ತಿಳಿಸಿದ್ದರಿಂದ ಅಂಬ್ಯುಲೆನ್ಸ್ ಬಂದು ತಮ್ಮನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು ಇರುತ್ತದೆಅಂತಾ ತಿಳಿಸಿದನು.   ನಂತರ ವೈದ್ಯರು ಇಬ್ಬರೂ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಅವರನ್ನು  ಬಳ್ಳಾರಿಗೆ ಕಳುಹಿಸಿಕೊಟ್ಟು  ಈಗ ತಡವಾಗಿ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾದಿಯನ್ನು ಸಲ್ಲಿಸಿರುತ್ತೇನೆ. ಯಾವುದೋ ಕಾರ್ ಚಾಲಕನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲ್ ಮೇಲೆ ಹೊರಟಿದ್ದ ನನ್ನ ಮಗ ಸೂರ್ಯನಾರಾಯಣ ಹಾಗೂ ಆತನ ಗೆಳೆಯ ವೀರಭದ್ರಗೌಡ ಇವರಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ನಿಲ್ಲಿಸದೇ ಹಾಗೆಯೇ ಹೊರಟು ಹೋಗಿದ್ದು, ಕಾರಣ   ಈ   ಬಗ್ಗೆ ಕಾನೂನು ಕ್ರಮ ಜರುಗಿಸಿ ಅಪಘಾತ ಮಾಡಿದ ಕಾರ್ ಮತ್ತು ಚಾಲಕನನ್ನು ಪತ್ತೆ ಮಾಡಲು ವಿನಂತಿ ಇರುತ್ತದೆ.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ.  200/2015 ಕಲಂ. 120(ಬಿ), 196, 198, 468, 471, 420, 425, 109 ಸಹಿತ 34 ಐ.ಪಿ.ಸಿ:.
ದಿ: 17-11-2015 ರಂದು 01-30 ಗಂಟೆಗೆ ಮಾನ್ಯ ನ್ಯಾಯಾಲಯದ ಖಾಸಗಿ ದೂರ ನಂ: 1433/2015 ದಿ: 21-09-2015 ನೇದ್ದರ ಸಾರಾಂಶವೇನೆಂದರೆ,  ಫಿರ್ಯಾದಿದಾರರು 1ನೇ ಆರೋಪಿತರ ಹತ್ತಿರ ಕೈಗಡ ಹಣ ಪಡೆದುಕೊಂಡಿದ್ದು ಅದಕ್ಕೆ ಜಮಾನತ್ತಾಗಿ ಕೊಪ್ಪಳ ತಾಲೂಕ ಯತ್ನಟ್ಟಿ  ಗ್ರಾಮ ಸ.ನಂ: 105/1 ಮತ್ತು 105/3 ನೇದ್ದನ್ನು ವತ್ತಿ ರೂಪದಲ್ಲಿ ಪತ್ರ ಬರೆದುಕೊಟ್ಟಿದ್ದು ಇರುತ್ತದೆ.  ಅದೇ ಪತ್ರದ ಮೇಲಿಂದ ಆರೋಪಿತರೆಲ್ಲರೂ ಕೂಡಿಕೊಂಡು ನಂತರ ದಿನಾಂಕ: 19-10-2015 ರಂದು ಸದರಿ ಸ. ನಂ: 105/2 ಮತ್ತು 105/3 ನೇದ್ದರ ಜಮೀನನ್ನು ಕೊಪ್ಪಳ ಸಬ್ ರಜಿಸ್ಟರ್ ಆಫೀಸನಲ್ಲಿ ಖರೀದಿ ಮಾಢಿಸಿಕೊಂಡು ಮೋಸ ಮಾಡಿರುತ್ತಾರೆ ಅಂತಾ ಇರುವ ದೂರಿನ ಸಾರಾಂಶದ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 220/2015 ಕಲಂ: 120 [ಬಿ], 196, 198, 468,471, 420, 425, 109 ಸಹಿತ 34 ಐಪಿಸಿ ನೇದ್ದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗಂಡಿದ್ದು ಅದೆ.


0 comments:

 
Will Smith Visitors
Since 01/02/2008