1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 222/2015 ಕಲಂ. 78(3) Karnataka
Police Act.
ದಿನಾಂಕ 19.11.2015 ರಂದು ರಾತ್ರಿ 8-30 ಪಿ.ಎಂ ಕ್ಕೆ
ಶ್ರೀ ಎಸ್.ಎಸ್. ಪಾಟೀಲ ಪಿ..ಐ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಇಂದು ಸಾಯಂಕಾಲ 7:00 ಗಂಟೆಗೆ ಕೊಪ್ಪಳ ನಗರದ ಬನ್ನಿಕಟ್ಟಿ ಏರಿಯಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಇದು ನಶೀಬದ ಆಟ ಅಂತಾ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೇದ ಚೀಟಿಯನ್ನು ಬರೇದುಕೊಡುತ್ತಿದ್ದಾಗ ಪಂಚರ ಸಮಕ್ಷಮದಲ್ಕಿ ದಾಳಿ ಮಾಡಿ ಹಿಡಿದು ಅವನಿಂದ ನಗದು ಹಣ 810=00 ರೂ, ಮಟಕಾ ನಂಬರ ಬರೇದ ಚೀಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡಿದ್ದು ಇರುತ್ತದೆ. ಆರೋಪಿ ನಂ 02 ಇತನು ಮಟಕಾ ನಂಬರ ಪಟ್ಟಿಯನ್ನು ತೆಗೆದುಕೊಳ್ಳುತ್ಯಿದ್ದು ಇರುತ್ತದೆ. ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡದ ದೂರಿನ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 260/2015 ಕಲಂ. 379 ಐ.ಪಿ.ಸಿ:.
ದಿನಾಂಕ 19-11-2015 ರಂದು 2330 ಗಂಟೆಗೆ ನಿಂಗಪ್ಪ ತಂದೆ ಕಲ್ಯಾಣಪ್ಪ ಬಸಿರಾಳ, ವಯಸ್ಸು 38 ವರ್ಷ, ಜಾ: ಲಿಂಗಾಯತ, ಉ: ವಿ.ಆರ್.ಎಲ್.
ಕಂಪನಿಯ ಲಾರಿ ಡ್ರೈವರ್, ಸಾ: ವಂಕಲಕುಂಟ ತಾ: ಯಲಬುರ್ಗಾ ಇವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು,
ಸಾರಂಶವೇನೆಂದರೆ, ದಿನಾಂಕ 18-11-2015 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾದಿದಾರರು ವಿ.ಆರ್.ಎಲ್. ಕಂಪನಿಯ ಲಾರಿ ನಂ. ಕೆ.ಎ.25/ಎ-9867 ನೇದ್ದರಲ್ಲಿ ಸೊಲ್ಲಾಪುರದಲ್ಲಿ ಬಟ್ಟೆಯ ಬಂಡಲಗಳನ್ನು ಲೋಡ ಮಾಡಿಕೊಂಡು ಗಂಗಾವತಿಗೆ ಬರುತ್ತಿದ್ದು, ಸೊಲ್ಲಾಪುರದಿಂದ ಹೊರಟು ಅಂದೇ ದಿನಾಂಕ 18-11-2015 ರಂದು ರಾತ್ರಿ 9-15 ಗಂಟೆಯ ಸುಮಾರಿಗೆ ಊಟ ಮಾಡುವ ಸಲುವಾಗಿ ಕೂಡಲಸಂಗಮ ಕ್ರಾಸ್ ದಲ್ಲಿ ಡಾಬಾದ ಹತ್ತಿರ ಸದರಿ ಲಾರಿಯನ್ನು ನಿಲ್ಲಿಸಿ ಊಟ ಮಾಡಿಕೊಂಡು ವಾಪಸ್ ರಾತ್ರಿ 9-55 ಗಂಟೆಯ ಸುಮಾರಿಗೆ ಬಂದಿದ್ದು, ಊಟ ಮಾಡುವ ಸಮಯದಲ್ಲಿ ಯಾರೋ ಕಳ್ಳರು ಲಾರಿಯ ಮೇಲೆ ಹತ್ತಿ
ತಾಡಪಾಲನ್ನು ಕೊಯ್ದು ಅದರೊಳಗಿನಿಂದ ಒಟ್ಟು ಅಂ.ಕಿ.ರೂ. 92,840-00 ಬೆಲೆ ಬಾಳುವ ಒಟ್ಟು 06 ಬಟ್ಟೆಯ ಬಂಡಲ್ ಗಳನ್ನು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಲಾರಿಯನ್ನು ಗಂಗಾವತಿಗೆ ಬಂದು ನೋಡಿಕೊಂಡಿದ್ದರಿಂದ ಈಗ ತಡವಾಗಿ ಬಂದು ಈ ಫಿರ್ಯಾದಿಯನ್ನು ನೀಡಿರುವುದಾಗಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 28/2015 ಕಲಂ. 174 ಸಿ.ಆರ್.ಪಿ.ಸಿ:.
ದಿನಾಂಕ:- 19-11-2015 ರಂದು ಮಧ್ಯಾಹ್ನ 12:15 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ರಾಜೇಶ್ವರಿ ಗಂಡ ಮಹಾಂತೇಶ, ವಯಸ್ಸು 38 ವರ್ಷ, ಜಾತಿ: ಹೂಗಾರ ಉ: ಹೋಟಲ್ ಸಾ:
ಹೊಸಕೇರಾ ಡಗ್ಗಿ ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫೀರ್ಯಾದಿ ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಹೊಸಕೇರಾ ಡಗ್ಗಿ
ಗ್ರಾಮದ ನಿವಾಸಿ ಇರುತ್ತೇನೆ. ನಾನು ಹಾಗೂ ನನ್ನ ಗಂಡನಾದ ಮಹಾಂತೇಶ ತಂದೆ ಶಿವಪ್ಪ ವಯಸ್ಸು
40 ವರ್ಷ ಇವರು ಕೂಡಿ
ಗ್ರಾಮದಲ್ಲಿ ಒಂದು ಹೋಟಲ್ ನಡೆಯಿಸಿಕೊಂಡಿರುತ್ತೇವೆ. ನನ್ನ ಗಂಡ ಮಹಾಂತೇಶನಿಗೆ ಟಿ.ಬಿ. ಕಾಯಿಲೆ
ಇದ್ದು, ಇದರಿಂದ ಅವರು
ನಿಶ್ಯಕ್ತರಾಗಿದ್ದರು. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ:- 19-11-2015 ರಂದು ಬೆಳಿಗ್ಗೆ 11:15 ಗಂಟೆಯ ಸುಮಾರಿಗೆ ನಾನು, ನನ್ನ ಗಂಡ ಹೋಟಲ್ ನಲ್ಲಿ ಕೆಲಸ ಮಾಡುತ್ತಿದ್ದೆವು. ನನ್ನ
ಗಂಡನು ಚಹ ಮಾಡಲು ಪಂಪ್ ಸ್ಟೋವ್ ನ್ನು ಹಚ್ಚಿ ಬೋಗಾಣಿಯನ್ನು ಅದರ ಮೇಲೆ ಇಡುತ್ತಿರುವಾಗ ಜೋಲಿ
ಹೋಗಿ ಸ್ಟೋವ್ ಮೇಲೆ ಬಿದ್ದನು. ಇದರಿಂದ ಆತನಿಗೆ ಒಮ್ಮೆಲೇ ಬೆಂಕಿ ಹತ್ತಿಕೊಂಡಿದ್ದು, ಕೂಡಲೇ ನಾನು ಮತ್ತು ಹೋಟಲ್ ಗೆ ಬಂದಿದ್ದ ಮಲ್ಲಿಕಾರ್ಜುನ ತಂದೆ
ಹನುಮಂತಪ್ಪ-38 ವರ್ಷ, ಲಿಂಗಾಯತ ಹಾಗೂ ಪಂಪೇಶ ತಂದೆ ಹನುಮಂತಪ್ಪ-42 ವರ್ಷ ಇವರುಗಳು ಕೂಡಿ ನನ್ನ ಗಂಡನನ್ನು ಸ್ಟೋವ್ ಮೇಲಿಂದ ಮೇಲಕ್ಕೆ
ಎತ್ತಿದೆವು. ಆದರೆ ನನ್ನ ಗಂಡನ ಎದೆಗೆ, ಮುಖಕ್ಕೆ ಹಾಗೂ ಎಡಗಾಲ ತೊಡೆಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ನಂತರ ಯಾವುದೇ ಒಂದು
ಆಟೋದಲ್ಲಿ ಚಿಕಿತ್ಸೆಗಾಗಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು
ಮಾಡಿದೆವು. ಆದರೆ ವೈದ್ಯರು ಚಿಕಿತ್ಸೆ ನೀಡುತ್ತಿರುವಾಗ ನನ್ನ ಗಂಡನು ಗುಣವಾಗದೇ ಮಧ್ಯಾಹ್ನ 12:30 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ.
0 comments:
Post a Comment