1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 245/2015 ಕಲಂ. 279, 338, 304(ಎ) ಐ.ಪಿ.ಸಿ
ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ
: 20-11-2015 ರಂದು ಮದ್ಯಾಹ್ನ 12-45 ಗಂಟೆಯ
ಸುಮಾರಿಗೆ ಫಿರ್ಯಾದಿದಾರರಾದ ಹನುಮಂತ ತಂದಿ ಭೀಮಪ್ಪ ಭೇವಿನಾಳ ವಯ-35 ವರ್ಷ ಜಾ.ಛಲವಾದಿ ಉ- ಒಕ್ಕಲುತನ
ಸಾ. ಗಂಡೂರು ತಾ. ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ
ನಾನು ಒಕ್ಕಲುತನ ಮಾಡಿಕೊಂಡು ಉಪಜೀವನ ಮಾಡಿಕೊಂಡಿರುತ್ತೇನೆ ನನಗೆ ನಮ್ಮೂರಿನ ಕಾಮ್ ಗುಂಡಮ್ಮ ಕ್ಯಾಂಪಿನ
ಜನರೆಲ್ಲರ ಪರಿಚಯವಿರುತ್ತದೆ. ಇಂದು ದಿನಾಂಕಃ-20-11-2015 ರಂದು ನಾನು ಮತ್ತು ಸತ್ಯನಾರಾಯಣ ರಾಜ್
ಕೂಡಿ ಕನಕಪ್ಪ ಈಡಿಗೇರ ಇವರ ಹೊಲದಲ್ಲಿ ಕೋಲಿ ಕೆಲಸಕ್ಕೆಂದು ಹೋಗಿದ್ದೇವು ನಾವು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ್ಗೆ
ಬೆಳಿಗ್ಗೆ ಬೆಳಿಗ್ಗೆ 9-45 ರಿಂದ 9-50 ಗಂಟೆಯ ಅವಧಿಯಲ್ಲಿ ತ್ರೀಮೂರ್ತಿ ತಂದಿ ರಾಮಣ್ಣ ಜಿ. ವಯಾ-28
ವರ್ಷ ಈತನು ತನ್ನ ಮೋಟಾರ್ ಸೈಕಲ್ ನಂ ಕೆ.ಎ37ವಿ-784 ನೆದ್ದರ ಮೇಲೆ ತನ್ನ ಸಹೋದರಿ ಜಯಮ್ಮ ಗಂಡ ನಾಗೇಶ್ವರ
ರಾವ್ ಸೋರಂಪುಡಿ ಇವರನ್ನು ಕುಡಿಸಿಕೊಂಡು ಗುಂಡೂರು ಕ್ರಾಸ್ ಕಡೆಯಿಂದ ಕಾಮ್ ಕಾಮಗುಂಡಮ್ಮ ಕ್ಯಾಂಪ್
ಕಡೆ ಹೋಗುವ ರೋಡಿನ ಮೇಲೆ ಮೋಟಾರ್ ಸೈಕಲ್ ಚಲಾಯಿಸಿಕೊಂಡು ತಮ್ಮ ಸೈಡಿನಲ್ಲಿ ಹೋರಟಿದ್ದಾಗ್ಗೆ ಅದೇ
ವೇಳೆಗೆ ಅವರ ಹಿಂದುಗಡೆಹಿಂದ ಒಂದು ಮಹಿಂದ್ರಾ ಟ್ರ್ಯಾಕ್ಟರ್ ಚಾಲಕ ತನ್ನ ಟ್ರ್ಯಾಕ್ಟರ್ ನ್ನು ಅತೀ
ವೇಗ ಅಜಾಗುರುಕತೆಯಿಂದ ಎರ್ರಾಬಿರ್ರಿ ಚಲಾಯಿಸಿಕೊಂಡು ಹೋಗಿ ರಸ್ತೆಯ ಬದಿಗೆ ಹೋರಟಿದ್ದ ತ್ರೀಮೂರ್ತಿ
ಈತನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ತ್ರೀಮೂರ್ತಿ ಮತ್ತು ಜಯಮ್ಮ ಇವರು ಕೆಳಗೆ
ಬಿದ್ದಿದ್ದರಿಂದ ಈ ಇಬ್ಬರ ಮೇಲೆ ಟ್ರ್ಯಾಕ್ಟರ್ ನ ಮುಂದಿನ ಗಾಲಿ ಹಾಯಿದು ಹೋಗಿದ್ದರಿಂದ ಜಯಮ್ಮ ಇವರಿಗೆ
ಹೊಟ್ಟೆಗೆ ಗಂಭೀರ ಗಾಯವಾಗಿ ಹೊಟ್ಟೆಯಲ್ಲಿಯ ಮೌಂಸ ಖಂಡಗಳು ಹೊರಗಡೆ ಬಂದಿದ್ದರಿಂದ ಜಯಮ್ಮ ಇವರು ಸ್ಥಳದಲ್ಲೆ
ಮೃತಪಟ್ಟಿದ್ದು ತ್ರೀಮೂರ್ತಿ ಈತನಿಗೆ ಬುಜಕ್ಕೆ ಸೊಂಟಕ್ಕೆ ಇತರೆ ಕಡೆ ಗಂಭೀರ ಗಾಯಗಳಾಗಿರುತ್ತವೆ ಅಪಘಾತ
ಪಡಸಿದ ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ಅಲ್ಲೇ ಬಿಟ್ಟು ಓಡಿ ಹೋಗಿದ್ದು ಸದರಿ ಟ್ರ್ಯಾಕ್ಟರ್ ನೋಡಲು
ಮಹಿಂದ್ರಾ ಕಂಪನಿಯದು ಇದ್ದು ಇದರ ನಂಬರ ಮತ್ತು ಟ್ರೇಲರ್ ನಂಬರ ನೋಡಲು ಅಸ್ಪಷ್ಟವಾಗಿ ಕಾಣುತ್ತಿದ್ದು
ಟ್ರ್ಯಾಕ್ಟರ್ ಇಂಜಿನ್ ನಂಬರ್ ನೋಡಲು REOS00940 ಅಂತಾ ಕಾಣಿಸುತ್ತಿತ್ತು ಜಯಮ್ಮಳ ಮೃತ ದೇಹವು ಸ್ಥಳದಲ್ಲೆ
ಇದ್ದು ಈಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 274/2015 ಕಲಂ. 279, 337, 338
ಐ.ಪಿ.ಸಿ:.
ದಿ:20-11-15 ರಂದು ಸಾಯಂಕಾಲ 6-30 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ
ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗೆ ದಾಖಲಾದ ಬಗ್ಗೆ ಎಮ್.ಎಲ್.ಸಿ
ಸ್ವೀಕೃತವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕುಮಾರಿ ರೇಣುಕಾ ಕ್ಯಾಸೆಪ್ಪನವರ ಸಾ: ಬಿ. ಹೊಸಳ್ಳಿ ಇವರ
ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ದೂರಿನ ಸಾರಾಂಶವೇನೆಂದರೇ, ಇಂದು ದಿ:20-11-15
ರಂದು ಸಾಯಂಕಾಲ ಹ್ಯಾಟಿಯಿಂದ ಶಾಲೆ ಮುಗಿಸಿಕೊಂಡು ನಮ್ಮೂರು ಬಿ. ಹೊಸಳ್ಳಿಗೆ ವಾಪಾಸ್ ಬರಲು ಅಂತಾ
ನಮ್ಮೂರ ಮಂಜುನಾಥ ಗುನ್ನಳ್ಳಿ ಇತನ ಆಟೋ ನಂ: ಕೆಎ-37/8569 ನೇದ್ದರಲ್ಲಿ ನಾನು ಮತ್ತು ನನ್ನ
ಗೆಳತಿಯರು ಕುಳಿತೆವು. ನಂತರ ಸಾಯಂಕಾಲ 5-30 ಗಂಟೆಯ ಸುಮಾರಿಗೆ ಆಟೋ ಚಾಲಕನು ತನ್ನ ಆಟೋವನ್ನು
ಆರೀಫಸಾಬ ಇವರ ಇಟ್ಟಂಗಿ ಭಟ್ಟಿ ಹತ್ತಿರ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಮಾನವಜೀವಕ್ಕೆ
ಅಪಾಯಕರ ವಾಗುವ ರೀತಿಯಲ್ಲಿ ಓಡಿಸಿಕೊಂಡು ಹೊರಟವನೇ ಎದುರುಗಡೆ ಬರುತ್ತಿದ್ದ ಕುರಿಗಳನ್ನು
ಗಮನಿಸದೇ ಚಲಾಯಿಸಿ ಆಟೋ ಪಲ್ಟಿ ಮಾಡಿದ್ದರಿಂದ ಈ ಅಪಘಾತದಲ್ಲಿ ನನಗೆ ತಲೆಗೆ ರಕ್ತಗಾಯವಾಗಿದ್ದು, ಕರಿಯಮ್ಮ
ಇವಳಿಗೆ ಭಾರಿ ರಕ್ತಗಾಯಗಳಾಗಿದ್ದು, ಅಲ್ಲದೇ ಗವಿಸಿದ್ದಮ್ಮ, ವಿಜಯಲಕ್ಷ್ಮೀ, ಶಶಿಕಲಾ
ಕ್ಯಾಶಪ್ಪನವರ, ಶಶಿಕಲಾ ವಡ್ಡಟ್ಟಿ, ಹಾಗೂ ನೇತ್ರಾವತಿ ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.
ಉಳಿದವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಕಾರಣ ಅಪಘಾತ ಮಾಡಿದ ಆಟೋ ನಂ: ಕೆಎ-37/8569 ನೆದ್ದರ
ಚಾಲಕ ಮಂಜುನಾಥ ಗುನ್ನಳ್ಳಿ ಸಾ: ಬಿ. ಹೊಸಳ್ಳಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ
ನೀಡಿದ ದೂರನ್ನು ಪಡೆದು ವಾಪಾಸ್ ಠಾಣೆಗೆ ರಾತ್ರಿ 9-00 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ
ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 274/2015. ಕಲಂ: 279, 337, 338 ಐಪಿಸಿ
ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment