1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 259/2015 ಕಲಂ. 457, 380, 511,
307 ಸಹಿತ 34 ಐ.ಪಿ.ಸಿ:.
ದಿನಾಂಕ 19-11-2015 ರಂದು ಮಧ್ಯಾಹ್ನ
1430 ಗಂಟೆಗೆ ಶ್ರೀ ಪರಣ್ಣ ತಂದೆ ಈಶ್ವರಪ್ಪ ಮುನವಳ್ಳಿ, ಮಾಜಿ ಶಾಸಕರು,
ಸಾ: ಬನ್ನಿಗಿಡದ ಕ್ಯಾಂಪ್, ಗಂಗಾವತಿ
ರವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ಫಿರ್ಯಾದಿ ನೀಡಿದ್ದು ಅದರ
ಸಾರಂಶವೇನೆಂದರೆ, ದಿನಾಂಕ
19-11-2015 ರಂದು ಮಧ್ಯರಾತ್ರಿ 12-15 ಗಂಟೆಯಿಂದ ಬೆಳಿಗ್ಗೆ 7-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ
ದುಷ್ಕರ್ಮಿಗಳು ಫಿರ್ಯಾದಿದಾರರ ಮನೆಯ ಒಂದು ಬೆಡ್ ರೂಮಿನ ಕಿಡಕಿಯ ಫ್ರೇಮನ್ನು ಬಿಚ್ಚಿ ಒಳಪ್ರವೇಶ
ಮಾಡಿ ಸದರಿ ಬೆಡ್ ರೂಮಿನ ಬಾಗಿಲವನ್ನು ಒಳಗಿನಿಂದ ಹಾಕಿಕೊಂಡು ರೂಮ್ ದಲ್ಲಿದ್ದ ಅಲ್ಮರಾಗಳನ್ನು ತೆಗೆದು
ಬಟ್ಟೆಗಳನ್ನು ಹಾಗೂ ಅದರಲ್ಲಿದ್ದ ಲ್ಯಾಪ್ ಟಾಪ್, ಕ್ಯಾಮರಾ, ರೇಷ್ಮೆ ಸೀರೆಗಳು ಮತ್ತು ಕಪಾಟಿನಲ್ಲಿ
ರೂ. 15,000-00 ಹಣ ಇವೆಲ್ಲವನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿ ಹೋಗಿದ್ದು, ಮನೆಯಿಂದ ಏನನ್ನೂ
ತೆಗೆದುಕೊಂಡು ಹೋಗಿರುವುದಿಲ್ಲ. ನಮ್ಮ ಮನೆಗೆ ಅಳವಡಿಸಿದ ಸಿ.ಸಿ. ಕ್ಯಾಮರಾವನ್ನು ಪರಿಶೀಲಿಸಲಾಗಿ
ಯಾರೋ 4 ಜನರು ಕಂಪೌಂಡಿನೊಳಗೆ ಓಡಾಡುತ್ತಿದ್ದುದು ಅಲ್ಲದೇ ಅವರಲ್ಲಿ ಒಬ್ಬನು ರೂಮಿನ ಹಿಂದಿನ ಬಾಗಿಲನ್ನು
ತೆಗೆಯಲು ಪ್ರಯತ್ನಿಸಿ ನಂತರ ಕಿಡಕಿಯ ಹತ್ತಿರ ನಿಂತು ಸ್ಕ್ರೂಡ್ರೈವರ್ ನಿಂದ ಕಿಡಕಿಯ ಫ್ರೇಮನ್ನು
ತೆಗೆಯುತ್ತಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಈ ಘಟನೆಯನ್ನು ನೋಡಿದರೆ ಯಾರೋ ನನ್ನನ್ನು
ಕೊಲೆ ಮಾಡುವ ಉದ್ದೇಶದಿಂದ ನನ್ನ ಮನೆಗೆ ಪ್ರವೇಶ ಮಾಡಿದ್ದು, ನನಗೆ ಜೀವದ ಭಯವಿರುತ್ತದೆ. ಕಾರಣ
ಸೂಕ್ತ ಕಾನೂನು ಕ್ರಮ ಜರುಗಿಸುವ ಬಗ್ಗೆ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment