1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 201/2015 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ:21-11-2015 ರಂದು ಸಂಜೆ 05-00 ಗಂಟೆಗೆ ಸರಕಾರಿ ಆಸ್ಪತ್ರೆ ಕುಷ್ಟಗಿಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು , ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು
ವೀರಬಸಪ್ಪ ತಂದೆ ಶಿವಲಿಂಗಪ್ಪ ಬಿಜಕಲ್ ವಯಾ 20 ವರ್ಷ ಜಾ : ಲಿಂಗಾಯತ :
ಉ : ಒಕ್ಕಲುತನ ಸಾ : ಕಂದಕೂರ ತಾ : ಕುಷ್ಟಗಿ ಇಂದು ದಿನಾಂಕ : 21-11-2015 ರಂದು ಸಂಜೆ 04-30 ಗಂಟೆಯ ಸುಮಾರಿಗೆ
ಕಂದಕೂರ-ಕುಷ್ಟಗಿ ರಸ್ತೆಯ ಮೇಲೆ ಕುಷ್ಟಗಿ ಕಡೆಗೆ ಇನ್ನೂ ಶರೀಪ್ ನಗರ ಕ್ರಾಸ್ ಹತ್ತಿರ ಮೋಟಾರ ಸೈಕಲ್
ಮೇಲೆ ಎಡಗಡೆ ಹೋಗುತ್ತಿದ್ದಾಗ ಎದುರುಗಡೆಯಿಂದ ಟಂ.ಟಂ. ವಾಹನದ ಚಾಲಕನು ತನ್ನ ಟಂ.ಟಂ. ವಾಹನವನ್ನು
ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟಕ್ಕರಕೊಟ್ಟು ಅಪಘಾತ ಪಡಿಸಿದ್ದು, ಅಪಘಾತದಿಂದ
ನಾವು ಮೂರು ಜನರು ಎಡಗಡೆಯ ಕಚ್ಚಾರಸ್ತೆಯ ಪಕ್ಕದಲ್ಲಿ ಮೋಟಾರ ಸೈಕಲ್ ಸಮೇತ ಬಿದ್ದು ಅಪಘಾತವಾಗಿದ್ದು
ಅಪಘಾತದಲ್ಲಿ ನನಗೆ ಬಲಗಾಲು ತೊಡೆಗೆ ಒಳಪೆಟ್ಟಾಗಿ, ಬಲಗಾಲು ಮೊಣಕಾಲಿಗೆ ತೆರಚಿದ್ದು, ಬಲಗಾಲು ಮೊಣಕಾಲು
ಕೆಳಗೆ ರಕ್ತಗಾಯವಾಗಿದ್ದು, ಬಲಗಾಲು ಹೆಬ್ಬರಳಿಗೆ ಪೆಟ್ಟುಬಿದ್ದಿದ್ದು ಇರುತ್ತದೆ. ನನ್ನ ಹಿಂದೆ ಕುಳಿತ
ಮಂಜುನಾಥನನ್ನು ನೋಡಲು ಅವನಿಗೆ ಬಲಗೈ ಮುಂಗೈ ಹತ್ತಿರ ಮುರಿದಂದಾಗಿದ್ದು ಕಂಡು ಬರುತ್ತದೆ, ಹಾಗೂ ಮೋಟಾರ
ಸೈಕಲ್ ನಡೆಸುತ್ತಿದ್ದ ಮಲ್ಲೇಶ ಈತನಿಗೆ ಬಲಬುಜದ ಹತ್ತಿರ ತೆರೆಚಿದ್ದು, ಬಲಗೈ ಬುಜದ ಕೆಳಗೆ
ತೆರೆಚಿದ್ದು, ಬಲಮೊಣಕಾಲು ಮತ್ತು ಬಲಗಾಲು ಮೊಣಕಾಲು ಕೆಳಗೆ ತೆರೆಚಿದ್ದು ಹಾಗೂ ಬಲಸೊಂಟದ ಹತ್ತಿರ
ಒಳಪೆಟ್ಟಾಗಿರುತ್ತದೆ. ನಂತರ ಅಪಘಾತಪಡಿಸಿದ ಟಂ.ಟಂ. ವಾಹನದ ನಂಬರ ನೋಡಲು ಕೆ.ಎ-36- ಎ- 6723 ಅಂತಾ
ಇದ್ದು ಅದರ ಚಾಲಕನ ಹೆಸರು ವಿಚಾರಿಸಲು ರಮೇಶ ತಂದೆ ದೊಡ್ಡಪ್ಪ ಖೌದಿ ಸಾ :ಗುಡದೂರ ಅಂತಾ ತಿಳಿಸಿದ್ದು
ಇರುತ್ತದೆ. ನಂತರ ಖಾಸಗಿ ವಾಹನದಲ್ಲಿ ನಾವೆಲ್ಲರೂ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಕುಷ್ಟಗಿಗೆ
ಬಂದು ಸೇರಿಕೆ ಆಗಿದ್ದು ಇರುತ್ತದೆ. ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment