1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 202/2015 ಕಲಂ. 87 Karnataka Police
Act.
ದಿನಾಂಕ 22-11-2015 ರಂದು ರಾತ್ರಿ 1-00 ಗಂಟೆಗೆ ಪಿ.ಎಸ್.ಐ ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಖಚಿತ ಬಾತ್ಮೀ ಮೇರೆಗೆ ಶ್ರೀ ಆರ್.ವಾಯ್ ಜಲಗೇರಿ ಪಿ.ಎಸ್.ಐ. ಕುಷ್ಟಗಿ ಮತ್ತು ಸಿಬ್ಬಂದಿಯವರಾದ ಎ.ಎಸ್.ಐ ಪುಂಡಪ್ಪ, ಹೆಚ್.ಸಿ-36, 63 ಪಿ.ಸಿ-109, 116, 117,92,161,407,426, ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.ಎ-37-ಜಿ-292 ನೇದ್ದರಲ್ಲಿ ಅದರ ಚಾಲಕ ಶಿವಕುಮಾರ ಎ.ಪಿ.ಸಿ-38 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 13 ಜನ ಆರೋಪಿತರನ್ನು ಹಾಗೂ ಇಸ್ಪೆಟ್ ಜೂಜಾಟದ ಒಟ್ಟು ಹಣ 4,14,000-00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇದರಲ್ಲಿ ಜಾಕೀರಹುಸೇನ ವಯಾ: 40 ವರ್ಷ ಸಾ: ನಾಗರಬೆಟ್ಟ ಹಾಗೂ ಇತರೇ 7 ಜನರು ಓಡಿ ಹೋಗಿದ್ದು ಇರುತ್ತದೆ ಅಂತಾ ಬಂದು ಪಂಚನಾಮೆಯೊಂದಿಗೆ ವರದಿಯನ್ನು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 119/2015
ಕಲಂ. 279, 337, 338 ಐ.ಪಿ.ಸಿ:
ದಿನಾಂಕ: 22-11-2015 ರಂದು ಮದ್ಯಾಹ್ನ 2-45 ಗಂಟೆ ಸುಮಾರಿಗೆ ಆರೋಪಿತನು ತಾನು
ನಡೆಸುತ್ತಿದ್ದ ಮೋಟಾರ್ ಸೈಕಲ ಚೆಸ್ಸಿ ನಂ : MD2DDDZZZVWB10092 ಮತ್ತು ಇಂಜೀನ ನಂ :
DZMBVB59445 ನೇದ್ದನ್ನು ಯಲಬುರ್ಗಾ ಪಟ್ಟಣದ ಕನಕದಾಸ ವೃತ್ತದ ಕಡೆಯಿಂದ ಕುದ್ರಿಕೊಟಗಿ ಗ್ರಾಮದ
ಕಡೆಗೆ ಅತಿ ಜೋರಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಯಲಬುರ್ಗಾ ಪಟ್ಟಣದ ಪ್ರವೀಣ ಚಿತ್ರ
ಮಂದಿರದ ಮುಂದೆ ರಸ್ತೆಯ ಎಡಮಗ್ಗಲು ಮೀನಾಕ್ಷಿ ನಗರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ
ಪಿರ್ಯಾದಿದಾರನಿಗೆ ಹಿಂದಿನಿಂದ ಜೋರಾಗಿ ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ
ಪಿರ್ಯಾದಿದಾರನಿಗೆ ಹಣೆಗೆ, ಮೂಗಿಗೆ, ಬಲಗಣ್ಣಿನ ಹತ್ತಿರ, ಹಾಗೂ ಬಲಗೈ ಮೊಣಕೈ ಕೆಳಗೆ ತೆರಚಿದ
ಗಾಯ, ತೆಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿದ್ದು ಹಾಗೂ ಎಡಗಾಲ ಹಿಂಬಡಕ್ಕೆ ಭಾರಿ ಸ್ವರೂಪದ ಪೆಟ್ಟು
ಬಿದ್ದಿದ್ದು ಇರುತ್ತದೆ. ಹಾಗೂ ಸದರ ಅಪಘಾತದಲ್ಲಿ ಆರೋಪಿತನಿಗೆ ಎಡಗಣ್ಣಿನ ಹತ್ತಿರ, ಎಡಬುಜದ
ಮೇಲೆ ತೆರಚಿದ ನಮೂನೆಯ ಸಾದಾ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ
ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 120/2015
ಕಲಂ. 279, 337, 338 ಐ.ಪಿ.ಸಿ:
ದಿನಾಂಕ: 22-11-2015 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಆರೋಪಿನು ತಾನು
ನಡೆಯಿಸುತ್ತಿದ್ದ ಕಾರ ನಂ: ಕೆ.ಎ-25/ಎನ್-9719 ನೇದ್ದನ್ನು ಕುಷ್ಟಗಿ-ಕೊಪ್ಪಳ ರಸ್ತೆಯ ಮೇಲೆ
ಅತೀಜೋರಾಗಿ ಹಾಗೂ ಅಲಕ್ಷತನದಿಂಡ ನಡೆಯಿಸಿಕೊಂಡು ಹೋಗುತ್ತಿರುವಾಗ ಮಂಡಲಮರಿ ಗ್ರಾಮದ ಸೀಮಾದಲ್ಲಿ
ಬರುವ ಉಮೇಶ ಜೂಲಕಟ್ಟಿ ಇವರ ಹೊಲದ ಹತ್ತಿರ ಕಾರಿನ ಮುಂದಿನ ಬಲಗಾಲಿ ಬಸ್ಟ ಆಗಿದ್ದರಿಂದ ಸದರಿ ಕಾರ
ರಸ್ತೆಯ ಪೂರ್ವ ಭಾಗದಲ್ಲಿ ಪಲ್ಟಿಯಾಗಿ ಬಿದ್ದಿದ್ದರಿಂದ ಕಾರಿನಲ್ಲಿದ್ದ ಬಸವರಾಜ ಬೇಲೇರಿ ಈತನ
ತಲೆಗೆ ಭಾರಿ ಸ್ವರೂಪದ ಒಳಪೆಟ್ಟಾಗಿದ್ದು ಮತ್ತು ಆರೋಪಿ ಜಗದೀಶ ಮಂತ್ರಿ ಈತನ ಬಲ ಚೆಪ್ಪೆಗೆ,
ಬಲಗಾಲ ಮೊಣಕಾಲ ಚಿಪ್ಪಿನ ಮೇಲ್ಬಾಗದಲ್ಲಿ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ
ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಹನುಮಸಾಗರ ಪೊಲೀಸ್ ಠಾಣಾ ಗುನ್ನೆ ನಂ. 120/2015
ಕಲಂ. 279, 337, 338 ಐ.ಪಿ.ಸಿ:
ದಿನಾಂಕ: 22-11-2015 ರಂದು ಮುಂಜಾನೆ 09-30 ಗಂಟೆಗೆ ಫಿರ್ಯಾದಿ ಹಾಗೂ ಆತನ ತಂಗಿ
ತಂಗಿಯ ಮಗ ಮತ್ತು ಇತರರು ಗಜೇಂದ್ರಗಡದಿಂದ ಬಾದಿಮನನಾ: ನೀರಲಕೊಪ್ಪಕ್ಕೆ ಹೊಗುವ ಕುರಿತು
ಗಡಾದಲ್ಲಿ ಒಂದು ಟ್ರ್ಯಾಕ್ಸದಲ್ಲಿ ಕುಳಿತು ಅಲ್ಲಿಂದ ಹೊರಟು ಹಾಬಲಕಟ್ಟಿ ಕ್ರಾಸ್ ದಾಟಿ
ತುಮರಿಕೊಪ್ಪ ಕ್ರಾಸ್ ಹತ್ತಿರ ಮುಂಜಾನೆ 10-00 ಗಂಟೆಯ
ಸುಮಾರಿಗೆ ಬಾದಮಿನಾಳ ಕಡೆಗೆ ಬರುವಾಗ ಟ್ರ್ಯಾಕ್ಸ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ಮಾನವ
ಜೀವಕ್ಕೆ ಅಪಾಯಕಾರಿ ಆಗುವಂತೆ ನಡೆಸಿಕೊಂಡು ಬಂದು ರೋಡಿನ ಎಡಬಾಜು ತೆಗ್ಗಿನಲ್ಲಿ ಇರುವ ಗಿಡಕ್ಕೆ
ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಈ ಮೇಲಿನ
ಗಾಯಾಳುಗಳಿಗೆ ಸಾದಾ ಹಾಗೂ ಬಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ನಂತರ 108 ಆಬುಲೈನ್ಸದಲ್ಲಿ ಎಲ್ಲರೂ ಹನಮನಾಳ ಸರಕಾರಿ ಆಸ್ಪತ್ರೆಗೆ ಹೊಗಿ ಅಲ್ಲಿ ಡಾಕ್ಟರ
ಇಲ್ಲದ್ದರಿಂದ ಅಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿಕೊಂಡು ಇಲಕಲ ಕಠಾರೆ ಆಸ್ಪತ್ರೆಗೆ ಬಂದು
ಸೇರಿಕೆಯಾಗಿ ಇಲಾಜು ಮಾಡಿಸಿಕೊಂಡು ವಾಪಾಸ್ ಠಾಣೆಗೆ ತಡವಾಗಿ ಠಾಣೆಗೆ ಬಂದು. ಟ್ರ್ಯಾಕ್ಟ ನಂ: ಕೆ.ಎ-26-7366 ನೇದ್ದರ ಚಾಲಕ ಕಿರಣ ತಂದೆ
ಕೃಷ್ಣಪ್ಪ ಲಮಾಣಿ ಸಾ: ಗಜೇಂದ್ರಗಡ ಈತನ ಮೇಲೆ ಕಾನೂನನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
0 comments:
Post a Comment