1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 110/2015 ಕಲಂ. 78(3)
Karnataka Police Act:.
ದಿನಾಂಕ: 25-11-2015 ರಂದು ಸಂಜೆ
7-10 ಗಂಟೆಗೆ ಶ್ರೀ. ಸಿ.ಗಣೇಶ ಪಿ.ಎಸ್.ಐ ಅಳವಂಡಿ ಪೊಲೀಸ್ ಠಾಣೆರವರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ
ಮಟಕಾ ಜೂಜಾಟದ ದಾಳಿ ಮಾಡಿ, ವಾಪಸ್ ಠಾಣೆಗೆ ಬಂದು ಒಂದು ವರದಿ ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿತನನ್ನು
ಮುಂದಿನ ಕ್ರಮ ಜರುಗಿಸುವ ಕುರಿತು ಒಪ್ಪಿಸಿದ್ದು, ಸದರಿ ವರದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿ
ನೋಡಲಾಗಿ, ಇಂದು ದಿನಾಂಕ: 25-11-2015 ರಂದು ಸಾಯಂಕಾಲ 5-30 ಗಂಟೆಗೆ ಆರೋಪಿತನಾದ ಹೊನ್ನಕೇರಪ್ಪ
ತಂದೆ ಮುದುಕಪ್ಪ ಮೇಟಿ, ವಯಾ: 44 ವರ್ಷ, ಜಾ: ಕುರುಬರ ಉ: ಕಿರಾಣಿ ಅಂಗಡಿ ವ್ಯಾಪರ, ಸಾ: ಬೋಚನಹಳ್ಳಿ
ಈತನು ತಮ್ಮ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆಯಾದ ಮಟಕಾ
ಜೂಜಾಟದಲ್ಲಿ ನಿರತನಾಗಿದ್ದಾಗ ಶ್ರೀ ಸಿ.ಗಣೇಶ ಪಿ.ಎಸ್.ಐ
ಅಳವಂಡಿರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ
ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 2,300=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು
ಪೂರೈಸಿಕೊಂಡು ವಾಪಸ್ ಠಾಣೆಗೆ ಬಂದು ಆರೋಪಿತನ ಮೇಲೆ ಕ್ರಮ ಕುರಿತು ಹಾಜರಪಡಿಸಿದ್ದರ ಮೇರೆಗೆ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 156/2015
ಕಲಂ. 279, 338, 283 ಐ.ಪಿ.ಸಿ:.
ದಿನಾಂಕ:26-11-2015 ರಂದು 6-00 ಎಎಂಕ್ಕೆ ಕುಕನೂರ ಸರ್ಕಾರೀ ಆಸ್ಪತ್ರೆಯಿಂದ ಎಂ.ಎಲ್.ಸಿ.
ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, ಪಿರ್ಯಾಧಿದಾರನ ಹೇಳಿಕೆ ಪಿರ್ಯಾದಿಯನ್ನು 6-10 ಎಎಂದಿಂದ
6-40 ಎಎಂ ದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ತನ್ನ ಮಗಳ ಗಂಡನಾದ ಶಂಕರ್ ಇವನು ಇಂದು
ದಿನಾಂಕ:26-11-2015 ರಂದು 5-30 ಎಎಂಕ್ಕೆ ಕುಕನೂರ ದಿಂದ ಮಂಡಲಗೇರಿಗೆ ಹೋಗುವ ರಸ್ತೆಯಲ್ಲಿ,
ಮಂಡಲಗೇರಿ ಸೀಮಾದ ಗೊರ್ಲೆಕೊಪ್ಪ ಕ್ರಾಸ್ ಹತ್ತಿರ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನ್ನು ಕುಕನೂರ
ಕಡೆಯಿಂದ ಮಂಡಲಗೇರಿ ಕಡೆಗೆ ಗದಗಗೆ ಹೋಗುವ ಕುರಿತು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ, ಸ್ಕೀಡ್ಡಾಗಿ
ಬಿದ್ದು, ಭಾರೀ ಗಾಯಗೊಂಡಿದ್ದು, ಘಟನೆ ನೋಡಿದ ಗವಿಶಿದ್ದಪ್ಪ ಹಿರೇಮನಿ ಎನ್ನುವವರು ತಮಗೆ ಫೋನ್ ಮಾಡಿ
ತಿಳಿಸಿ, 108 ದಲ್ಲಿ ಹಾಕಿ ಕಳುಹಿಸಿದ್ದರ ಬಗ್ಗೆ ತಿಳಿಸಿದ ಮೇರೆಗೆ ತಾವು ಬಂದು ನೋಡಿದ್ದು ಸ್ಥಿತಿ
ನಿಜವಿರುತ್ತದೆ. ಕಾರಣ, ಕಾನೂನು ರೀತಿಯ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ
ಇದ್ದ ಹೇಳಿಕೆ ದೂರನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
3) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ
ನಂ. 122/2015 ಕಲಂ 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 25-11-2015 ರಂದು ಮಧ್ಯಾನ್ಹ 2 ಗಂಟೆಯ ಸುಮಾರಿಗೆ ಆರೋಪಿನು ತಾನು
ನಡೆಯಿಸುತ್ತಿದ್ದ 3 ಗಾಲಿಯ ಟಂ. ಟಂ. ವಾಹನ ಸಂಖ್ಯೆ: ಕೆ.ಎ-37/8272 ನೇದ್ದನ್ನು ಮಂಡಲಮರಿ-ಯಲಬುರ್ಗಾ
ರಸ್ತೆಯ ಮೇಲೆ ಅತೀಜೋರಾಗಿ ಹಾಗೂ ಅಲಕ್ಷತನದಿಂಡ ನಡೆಯಿಸಿಕೊಂಡು ಬರುತ್ತಿರುವಾಗ ಮಂಡಲಮರಿ ಗ್ರಾಮದ
ಸೀಮಾದಲ್ಲಿ ಬರುವ ದುರಗಪ್ಪ ಹನಮಾಪೂರ ಇವರ ಹೊಲದ ಹತ್ತಿರ ಇರುವ ರಸ್ತೆ ತಿರುವನ್ನು ಲೇಕ್ಕಿಸದೇ
ಹಾಗೆಯೇ ಜೋರಾಗಿ ನಡೆಯಿಸಿಕೊಂಡು ರಸ್ತೆಯ ಬಲಮಗ್ಗಲು ಇರುವ ತೆಗ್ಗಿನಲ್ಲಿ ಪಲ್ಟಿ ಹೊಡೆಯಿಸಿದ್ದರಿಂದ
ಅನುಕ್ರಮ ನಂ: 9 ರಲ್ಲಿ ನಮೂದಿಸಿದ ಅನುಕ್ರಮ ನಂ: 1 ರಿಂದ 9 ನೇದ್ದವರಿಗೆ ತಲೆಗೆ, ಕೈ
ಕಾಲುಗಳಿಗೆ, ಸೊಂಟಕ್ಕೆ ಹಾಗೂ ಇನ್ನಿತರ ಕಡೆಗಳಲ್ಲಿ ಸಾಧಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು
ಇರುತ್ತದೆ. ಸದರಿ ಆರೋಪಿತನು ಅಪಘಾತ ಮಾಡಿದ ನಂತರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ
ಹೋಗಿದ್ದರಿಂದ ಚಾಲಕನ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲ. ಕಾರಣ ಸದರಿ ಚಾಲಕನ
ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment