ದಿನಾಂಕ: 28.11.2015 ರಂದು ರಾತ್ರಿ 8:30
ಗಂಟೆ ಸುಮಾರಿಗೆ ಹಿರೆವಂಕಲಕುಂಟಾ ಸೀಮಾದಲ್ಲಿ ಒಬ್ಬ ಲಾರಿ ಚಾಲಕನು ಕುಷ್ಟಗಿ ಕಡೆಯಿಂದ ಹೊಸಪೇಟ
ಕಡೆಗೆ ತನ್ನ ಲಾರಿಯನ್ನು ಅತಿ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾಗುವ
ರೀತಿಯಲ್ಲಿ ನಡೆಸಿಕೊಂಡು ಬಂದು ಎನ್ ಹೆಚ್ 50 ರಸ್ತೆಯ ಮೇಲೆ ಹೊಸಪೇಟ ಕಡೆಗೆ ಹೋಗಲು ಲಾರಿಗಳಿಗೆ
ಕೈ ಮಾಡಿ ನಿಲ್ಲಿಸುತ್ತಿದ್ದ ಮಂಜಮ್ಮ ಇವಳಿಗೆ ಬಲವಾಗಿ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ
ಲಾರಿಯನ್ನು ನಿಲ್ಲಿಸದೇ ಅದೇ ವೇಗದಲ್ಲಿ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಮಂಜಮ್ಮ
ಇವಳಿಗೆ ಭಾರಿ ರಕ್ತಗಾಯವಾಗಿ ಇವಳಿಗೆ ಚಿಕಿತ್ಸೆಗಾಗಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಹೋಗಿ
ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಚಿಕಿತ್ಸೆ ಮಾಡುವಷ್ಟರಲ್ಲಿ ರಾತ್ರಿ 9:45 ಗಂಟೆಗೆ ಗಾಯಾಳು
ಮಂಜಮ್ಮ ಗಂಡ ಮಲ್ಲಿಕಾರ್ಜುನ ಇವಳು ಮೃತಪಟ್ಟಿದ್ದು ಇರುತ್ತದೆ ಅಂತಾ ಇತ್ಯಾದಿ ಪಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕುಕನೂರ
ಪೊಲೀಸ್ ಠಾಣೆ ಗುನ್ನೆ ನಂ. 158/2015 ಕಲಂ. 498(ಬಿ) & (ಸಿ) ಸಹಿತ 34 ಐ.ಪಿ.ಸಿ:.
ದಿನಾಂಕ:28-11-2015 ರಂದು
11-15 ಪಿಎಂಕ್ಕೆ ಬಾನಾಪುರದಿಂದ ಪಿರ್ಯಾದಿದಾರನು ಫೋನ್ ಮುಖಾಂತರ ಮಾಹಿತಿ ನೀಡಿದ ಮೇರೆಗೆ ಸಿಬ್ಬಂದಿಯೊಂದಿಗೆ
ಸ್ಥಳಕ್ಕೆ 11-45 ಪಿಎಂಕ್ಕೆ ಭೇಟಿ ನೀಡಿದಾಗ ಪಿರ್ಯಾದಿದಾರನು ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು,
ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನು ಬಾನಾಪುರ ಕ್ರಾಸ್ ದಲ್ಲಿ ಬೀಡಿ ಅಂಗಡಿ ಮತ್ತು ಹೋಟಲ್ ಮಾಡಿಕೊಂಡಿದ್ದು,
ಆರೋಪಿತರು ದಿ:28-11-2015 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿದಾರನ ಅಂಗಡಿಗೆ ಹೋಗಿ ಒಂದು ಪ್ಯಾಕ್
ಸಿಗರೇಟು ಮತ್ತು ಒಂದು ಲೀಟರ್ ನೀರಿನ ಬಾಟಲ್ ಕೇಳಿದ್ದು, ಕೊಟ್ಟಾಗ ಆರೋಪಿತ ಲವರಾಜ ಇವನು 500-00
ರೂ. ಮುಖಬೆಲೆಯ ನೋಟನ್ನು ಕೊಟ್ಟಿದ್ದು, ಅದನ್ನು ನೋಡಿದಾಗ ಪಿರ್ಯಾದಿದಾರನಿಗೆ ಅದು ಖೋಟಾ ನೋಟು ಅಂತಾ
ಕಂಡುಬಂದಿದ್ದರಿಂದ ಅವನು ಆರೋಪಿತ ಲವರಾಜನಿಗೆ ಇದು ಖೋಟಾ ನೋಟು ಬೇರೆ ನೋಟು ಕೊಡಿರಿ ಅಂತಾ ಅಂದಾಗ
ಆರೋಪಿತ ಬಾಯಿಮಾಡಹತ್ತಿದ್ದು, ಅದನ್ನು ಕೇಳಿದ ಆಜು-ಬಾಜು ಅಂಗಡಿಯವರು ಬಂದು ನೋಟು ನೋಡಿ ಖೋಟಡಾ ನೋಟು
ಅಂತಾ ಗುರುತಿಸಿದಾಗ ಆರೋಪಿ ದತ್ತಾತ್ರೇಯ ಇವನು ಮೋಟಾರ್ ಸೈಕಲ್ ತೆಗೆದುಕೊಂಡು ಪರಾರಿಯಾಗಿದ್ದು, ನಂತರ
ಪಿರ್ಯಾದಿದಾರನು ಆರೋಪಿತನನ್ನು ಆಜು-ಬಾಜುದವರ ಸಹಾಯದಿಂದ ಹಿಡಿದು ಕೂಡ್ರಿಸಿಕೊಂಡಿದ್ದು, ಕಾರಣ, ಆರೋಪಿತರು
ಖೊಟ್ಟಿ ನೋಟನ್ನು ನಿಜವಾದ ನೋಟು ಎಂಬಂತೆ ಚಲಾವಣೆ ಮಾಡಲು ಬಂದಿದ್ದು, ಅವರ ಮೇಲೆ ಕಾನೂನು ರೀತಿಯ ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ ಇಂದು ದಿನಾಂಕ:29-11-2015
ರಂದು 1-00 ಎಎಂಕ್ಕೆ ಬಂದು, ಸದರ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment