ದಿ:29-11-2015 ರಂದು ಬೆಳಿಗ್ಗೆ 07-00 ಗಂಟೆಗೆ ಫಿರ್ಯಾದಿದಾರರಾದ, ಶ್ರೀ ಪ್ರದೀಪ ತಂದೆ ಹನುಮಂತಸಾ ಮೇಘರಾಜ ಸಾ: ಭಾಗ್ಯನಗರ ಕೊಪ್ಪಳ ಇವರು
ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 28-11-2015 ರಂದು ಸಂಜೆ ಮರಿಯಮ್ಮನಹಳ್ಳಿಯಲ್ಲಿ ನಮ್ಮ ಸಂಬಂಧಿಕರನ್ನು ಕಂಡು ಮಾತನಾಡಿಸಿ ಅಲ್ಲಿಂದ
ವಾಪಾಸ್ ಊರಿಗೆ ಬರುತ್ತಿದ್ದೆನು. ನಂತರ ಹೊಸಪೇಟೆ-ಕೊಪ್ಪಳ ಎನ್.ಹೆಚ್-63 ರಸ್ತೆಯ ಕಲ್ಯಾಣಿ ಫ್ಯಾಕ್ಟರಿಯ ಸಮೀಪದಲ್ಲಿ ಕೊಪ್ಪಳ ಕಡೆಗೆ
ಬರುತ್ತಿದ್ದಾಗ ರಾತ್ರಿ 9-00
ಗಂಟೆಯ ಸುಮಾರಿಗೆ ನನ್ನ ಮುಂದೆ ರಸ್ತೆಯ ಎಡಬಾಜು ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ
ಸೈಕಲ್ನ್ನು ಓಡಿಸಿಕೊಂಡು ಹೊರಟಿದ್ದನು. ಅದೇವೇಳೆಗೆ ಎದುರುಗಡೆ ಕೊಪ್ಪಳ ಕಡೆಯಿಂದ ಯಾವುದೋ ಒಂದು
ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸುತ್ತಾ ನನ್ನ ಮುಂದೆ
ಹೊರಟಿದ್ದ ಮೋಟಾರ ಸೈಕಲ ಗೆ ಟಕ್ಕರ ಕೊಟ್ಟಾಗ ಮೋಟಾರ ಸೈಕಲ್ ಸವಾರನು ಮೋಟಾರ ಸೈಕಲ್ ಸಮೇತ ತನ್ನ
ಪಕ್ಕದಲ್ಲಿ ಸೈಕಲ್ ತೆಗೆದುಕೊಂಡು ಹೊರಟಿದ್ದ ವ್ಯಕ್ತಿಗೆ ಬಡಿದು ಇಬ್ಬರೂ ಕೆಳಗಡೆ ಬಿದ್ದರು. ಆಗ
ನಾನು ನನ್ನ ಮೋಟಾರ ಸೈಕಲ್ ನಿಲ್ಲಿಸಿ ಹತ್ತಿರ ಹೋದೆನು. ಟಕ್ಕರ ಕೊಟ್ಟ ಲಾರಿ ಚಾಲಕನು ಸಹ
ಲಾರಿಯನ್ನು ನಿಲ್ಲಿಸಿ ಹತ್ತಿರ ಬಂದು ಕೆಳಗಡೆ ಬಿದ್ದವರನ್ನು ಮತ್ತು ನನ್ನನ್ನು ನೋಡಿ ಲಾರಿ
ಚಾಲಕನು ತನ್ನ ಲಾರಿಯನ್ನು ತೆಗೆದುಕೊಂಡು ಹೊಸಪೇಟೆ ಕಡೆಗೆ ಹೋದನು. ಈ ಅಪಘಾತದಲ್ಲಿ ಕೊಪ್ಪಳ
ಗ್ರಾಮೀಣ ಠಾಣೆಯ ಅಂದಪ್ಪ ಪೊಲೀಸರಿಗೆ ಎರಡೂ ಮೊಣಕಾಲ ಹತ್ತಿರ ತೆರೆಚಿದ ಗಾಯಗಳಾಗಿದ್ದವು. ಮತ್ತು
ಬಲಗಡೆ ಕಣ್ಣಿನ ಪಕ್ಕದಲ್ಲಿ ತೆರೆಚಿದ ಗಾಯವಾಗಿತ್ತು. ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಅಲ್ಲದೇ ಸೈಕಲ್ ತೆಗೆದುಕೊಂಡು ಹೊರಟಿದ್ದ ವ್ಯಕ್ತಿಗೆ ಸಹ ನೋಡಲಾಗಿ ಆತನ ತಲೆಯ ಬಲಭಾಗದಲ್ಲಿ ಭಾರಿ
ರಕ್ತಗಾಯವಾಗಿ ಮೈ ಕೈ ಗಳಿಗೆ ತೆರೆಚಿದ ರಕ್ತಗಾಯಗಳಾಗಿದ್ದು ಆತನು ಸಹ ಮಾತನಾಡುವ
ಸ್ಥಿತಿಯಲ್ಲಿರಲಿಲ್ಲ. ಅಪಘಾತದಲ್ಲಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯ ಹೆಸರು ಕೊಟ್ರೇಶ
ಮ್ಯಾಳಿ. ಕಲ್ಯಾಣಿ ಫ್ಯಾಕ್ಟರಿಯ ಕೆಲಸಗಾರ,
ಸಾ: ಹೊಸಕನಕಾಪೂರ ಅಂತಾ ಗೊತ್ತಾಯಿತು. ಕಾರಣ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ
ನಿಲ್ಲಿಸದೇ ಹೋದ ಲಾರಿ ಮತ್ತು ಚಾಲಕನನ್ನು ಪತ್ತೆ ಮಾಡಿ ಅವನ ಮೇಲೆ ಕಾನೂನು ಕ್ರಮ ಜರುಗಿಸಲು
ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 277/2015 ಕಲಂ: 279,338 ಐಪಿಸಿ ಹಾಗೂ ಕಲಂ: 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 342/2015 ಕಲಂ. 279, 338 ಐ.ಪಿ.ಸಿ:.
ದಿನಾಂಕ:- 29-11-2015 ರಂದು ಸಂಜೆ 6:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ
ಶಿವಪುತ್ರಪ್ಪ ತಂದೆ ಸಣ್ಣ ನಿಂಗಪ್ಪ ಕುದರಿಕೊಟಗಿ, ವಯಸ್ಸು 31 ವರ್ಷ, ಜಾತಿ: ಗಾಣಿಗ ಉ: ಗುಮಾಸ್ತ ಸಾ: ಗುಡ್ಡದ
ಕ್ಯಾಂಪ್ ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿ ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. "ನಾನು
ಗುಡ್ಡದ ಕ್ಯಾಂಪಿನ ನಿವಾಸಿ ಇದ್ದು ಖಾಸಗಿ ಗುಮಾಸ್ತ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಕ್ಯಾಂಪ್
ನಲ್ಲಿ ನನ್ನ ಸಂಬಂಧಿಕರಾದ ಚಂದಪ್ಪನ ಮಗಳು ಋತುಮತಿಯಾಗಿದ್ದರಿಂದ ಇಂದು ದಿನಾಂಕ:- 29-11-2015 ರಂದು ಅವರ ಮನೆಯಲ್ಲಿ ಕಾರ್ಯಕ್ರಮವನ್ನು
ಹಮ್ಮಿಕೊಂಡಿದ್ದು, ಅದಕ್ಕಾಗಿ ಊರಿನಿಂದ ಸಂಬಂಧಿಕರುಗಳು ಬಂದಿದ್ದರು. ಅದರಂತೆ ನಮ್ಮ ಸಂಬಂಧಿಕರಾದ
(1) ಹೆಚ್.ದ್ಯಾಮಣ್ಣ ತಂದೆ ನಿಂಗಪ್ಪ ಹೊಸಳ್ಳಿ, ವಯಸ್ಸು 36 ವರ್ಷ, ಜಾತಿ: ಗಾಣಿಗ ಉ: ಒಕ್ಕಲುತನ ಸಾ:
ಮ್ಯಾದನೇರಿ ತಾ: ಯಲಬುರ್ಗಾ (2) ರಾಮಣ್ಣ ತಂದೆ ದ್ಯಾಮಣ್ಣ ಹೊಸಳ್ಳಿ, ವಯಸ್ಸು 33 ವರ್ಷ, ಜಾತಿ: ಗಾಣಿಗ ಉ: ಒಕ್ಕಲುತನ ಸಾ:
ಮ್ಯಾದನೇರಿ ತಾ: ಯಲಬುರ್ಗಾ ಇವರುಗಳು ಸಹ ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ
ದ್ಯಾಮಣ್ಣ ಮತ್ತು ರಾಮಣ್ಣ ಇವರಿಬ್ಬರೂ ಕೂಡಿಕೊಂಡು ಸಂಜೆ ಬಜಾಜ್ ಸಿ.ಟಿ. 100 ಮೋಟಾರ ಸೈಕಲ್ ನಂಬರ್: ಕೆ.ಎ-34/ ಆರ್-4469 ನೇದ್ದರಲ್ಲಿ ವಾಪಸ್ ಮ್ಯಾದನೇರಿಗೆ ಹೊರಟರು.
ದ್ಯಾಮಣ್ಣನು ಮೋಟಾರ ಸೈಕಲ್ ನಡೆಯಿಸುತ್ತಿದ್ದನು. ಅವರ ಹಿಂದೆಯೇ ರುದ್ರಪ್ಪ ತಂದೆ ಕಳಕಪ್ಪ
ವದ್ನಾಳ, 40 ವರ್ಷ, ಸಾ: ಮ್ಯಾದನೇರಿ ಈತನು ಸಹ ಮೋಟಾರ ಸೈಕಲ್
ನಡೆಯಿಸಿಕೊಂಡು ಊರಿಗೆ ಹೊರಟನು. ಅವರು ಹೋದ ಸ್ವಲ್ಪ ಸಮಯದ ನಂತರ ಅಂದರೆ ಸಂಜೆ 4:15 ಗಂಟೆಯ ಸುಮಾರಿಗೆ ರುದ್ರಪ್ಪನು ಫೋನ್
ಮಾಡಿ ದ್ಯಾಮಣ್ಣ ಮತ್ತು ರಾಮಣ್ಣ ಇವರಿಗೆ ದಾಸನಾಳ ಬ್ರಿಡ್ಜನಲ್ಲಿ ಲಾರಿ ಅಪಘಾತವಾಗಿ
ಇಬ್ಬರೂ ಗಾಯಗೊಂಡಿರುತ್ತಾರೆ ಅಂತಾ ತಿಳಿಸಿದನು. ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ
ದ್ಯಾಮಣ್ಣನಿಗೆ ಹಣೆಯ ಎಡಗಡೆ ತೀವ್ರ ಪೆಟ್ಟಾಗಿ ಎಡಕಿವಿಯಲ್ಲಿ ರಕ್ತ ಬಂದಿದ್ದು, ತಲೆಯ ಹಿಂಭಾಗ ತೀವ್ರ ಒಳಪೆಟ್ಟಾಗಿ ಎಡ
ಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ರಾಮಣ್ಣನಿಗೆ ಎಡ
ಮುಂಗೈ ಹತ್ತಿರ ತೀವ್ರ ಒಳಪೆಟ್ಟಾಗಿ, ಎಡಗಾಲು ಮೊಣಕಾಲು ಕೆಳಗೆ ಒಳಪೆಟ್ಟಾಗಿ, ಎಡ ಹಣೆ ಹತ್ತಿರ ಗಾಯವಾಗಿತ್ತು. ಸ್ಥಳದಲ್ಲಿ ಅವರ ಮೋಟಾರ ಸೈಕಲ್ ಬಿದ್ದಿದ್ದು, ಅಲ್ಲಿದ್ದ ರುದ್ರಪ್ಪನಿಗೆ ವಿಚಾರಿಸಲು
ತಿಳಿಸಿದ್ದೇನೆಂದರೆ, “ ಸಂಜೆ 4:00 ಗಂಟೆಯ ಸುಮಾರಿಗೆ ದ್ಯಾಮಣ್ಣ ಮತ್ತು ರಾಮಣ್ಣ
ಇವರು ಮೋಟಾರ ಸೈಕಲ್ ಮೇಲೆ ದಾಸನಾಳ ಬ್ರಿಡ್ಜ್ ಮೇಲೆ ಹೋಗುತ್ತಿದ್ದರು. ತಾನು ಅವರಿಂದ ಸ್ವಲ್ಪ
ಅಂತರದಲ್ಲಿ ಹಿಂದೆ ಹಿಂದೆ ಹೋಗುತ್ತಿದ್ದೆನು. ಆಗ ಎದುರುಗಡೆ ಕೊಪ್ಪಳ ಕಡೆಯಿಂದ ಒಂದು
ಲಾರಿ ಚಾಲಕನು ಲಾರಿಯನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು
ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ದ್ಯಾಮಣ್ಣ ಮತ್ತು ರಾಮಣ್ಣ ಇವರಿಗೆ ಟಕ್ಕರ್
ಕೊಟ್ಟು ಅಪಘಾತ ಮಾಡಿದನು. ಇದರಿಂದ ಇಬ್ಬರೂ ಮೋಟಾರ ಸೈಕಲ್ ಸಮೇತ ಬಿದ್ದು ತೀವ್ರವಾಗಿ
ಗಾಯಗೊಂಡರು. ಅಪಘಾತ ಮಾಡಿದ ಲಾರಿ ಸ್ಥಳದಲ್ಲಿಯೇ ಇದೆ ಅಂತಾ ತೋರಿಸಿದನು. ನೋಡಲಾಗಿ ಲಾರಿ ನಂಬರ್:
ಎ.ಪಿ-37/ ಟಿ.ಎ-2233 ಅಂತಾ ಇದ್ದು, ಅದರ ಚಾಲಕನ ಹೆಸರು ವಿಚಾರಿಸಲು ರಮೇಶ.ಜಿ
ತಂದೆ ವೆಂಕಟರಾವ್, 49 ವರ್ಷ, ಸಾ: ಅಗರ್ತಿಪಾಲೆಂ, ಪಾಲಕೊಲ್ಲು ಮಂಡಲಂ, ಪಶ್ಚಿಮ ಗೋದಾವರಿ ಜಿಲ್ಲೆ ಅಂತಾ
ತಿಳಿಸಿದನು. 108 ಗೆ ಫೋನ್ ಮಾಡಿ ಅಂಬ್ಯುಲೆನ್ಸ್ ಬಂದಿದ್ದು, ಅದರಲ್ಲಿ ಗಾಯಗೊಂಡ ದ್ಯಾಮಣ್ಣ ಮತ್ತು
ರಾಮಣ್ಣ ಇವರನ್ನು ಕರೆದುಕೊಂಡು ಬಂದು ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ವೈದ್ಯರು ಪರೀಕ್ಷೆ ಮಾಡಿ ಹೆಚ್ಚಿನ
ಚಿಕಿತ್ಸೆ ಕುರಿತು ಕರೆದುಕೊಂಡ ಹೋಗಲು ತಿಳಿಸಿದ್ದರಿಂದ ರುದ್ರಪ್ಪನೊಂದಿಗ ಕೊಪ್ಪಳಕ್ಕೆ
ಕಳುಹಿಸಿಕೊಟ್ಟು ಈಗ ನಾನು ಪೊಲೀಸ್ ಠಾಣೆಗೆ ಹಾಜರಾಗಿ ಈ ಹೇಳಿಕೆ ಫಿರ್ಯಾದಿಯನ್ನು
ನೀಡಿರುತ್ತೇನೆ. ಕಾರಣ ಈ ಅಪಘಾತ ಮಾಡಿದ ಲಾರಿ ಚಾಲಕ ರಮೇಶ. ಜಿ ಈತನ ವಿರುದ್ಧ
ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ" ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ
ದಾಖಲಿಸಿಕೊಂಡ ತನಿಖೆ ಕೈಗೊಳ್ಳಲಾಯಿತು.
3) ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 343/2015 ಕಲಂ. 279, 338 ಐ.ಪಿ.ಸಿ:.
ದಿನಾಂಕ:- 29-11-2015 ರಂದು ರಾತ್ರಿ 9:30 ಗಂಟೆಗೆ
ಫಿರ್ಯಾದಿದಾರರಾದ ಶ್ರೀ
ಸಂಗಪ್ಪ ತಂದೆ ಮಲ್ಲಪ್ಪ ಮೇಟಿ, ವಯಸ್ಸು 40 ವರ್ಷ, ಜಾತಿ: ಲಿಂಗಾಯತ, ಉ: ಒಕ್ಕಲುತನ ಸಾ: ಆರಾಳ ತಾ:
ಗಂಗಾವತಿ ಇವರು ಬರೆಯಿಸಿಕೊಟ್ಟ
ಲಿಖಿತ ದೂರನ್ನು ಈಶಪ್ಪ ತಂದೆ ಚೆನ್ನಪ್ಪ ಬಿಜಕಲ್ ಸಾ: ಆರಾಳ ಇವರು ತಂದು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 29-11-2015 ರಂದು ಸಂಜೆ ನನ್ನ ಮಕ್ಕಳಾದ ಶಾಂತಾ-15
ವರ್ಷ, ಪಂಪಾಪತಿ-10 ವರ್ಷ ಇವರಿಗೆ ಸ್ವರ್ಣ ಬಿಂದು ಲಸಿಕೆಯನ್ನು ಹಾಕಿಸಿಕೊಂಡು ಬರುವ ಸಲುವಾಗಿ ನನ್ನ
ಹಿರೋಹೋಂಡಾ ಸಿ.ಡಿ. ಡಿಲಕ್ಸ್ ಮೋಟಾರ ಸೈಕಲ್ ನಂಬರ್: ಕೆ.ಎ-37/ ಯು-5068 ನೇದ್ದರಲ್ಲಿ ಮೂವರು ಕೂಡಿಕೊಂಡು
ಆರಾಳದಿಂದ ಬಸಾಪಟ್ಟಣಕ್ಕೆ ಬರುತ್ತಿದ್ದೆವು. ರಾತ್ರಿ 7:00 ಗಂಟೆಯ ಸುಮಾರಿಗೆ ನಾನು ಆರಾಳ-ಬಸಾಪಟ್ಟಣ
ರಸ್ತೆಯ ಬಸಾಪಟ್ಟಣ ಸೀಮಾದ ಪಚ್ಚೇದ ಹಳ್ಳದ ಹತ್ತಿರ ಮೋಟಾರ ಸೈಕಲ್ ನಡೆಯಿಸಿಕೊಂಡು ನಿಧಾನವಾಗಿ ರಸ್ತೆಯ
ಎಡಗಡೆ ಬರುತ್ತಿರುವಾಗ ನಮ್ಮ ಎದುರುಗಡೆ ಬಸಾಪಟ್ಟಣ ಕಡೆಯಿಂದ ಬಂದ ಮೋಟಾರ ಸೈಕಲ್ ಚಾಲಕನು ತನ್ನ ಮೋಟಾರ
ಸೈಕಲ್ ನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ವೇಗವನ್ನು
ನಿಯಂತ್ರಿಸಲು ಆಗದೇ ನಮಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ಎಲ್ಲರೂ ಮೋಟಾರ ಸೈಕಲ್ ಗಳ
ಸಮೇತ ಕೆಳಗೆ ಬಿದ್ದೆವು. ಅಪಘಾತದಿಂದ ನನಗೆ ಎಡಗಾಲ ಮೊಣಕಾಲಿಗೆ ತೀವ್ರ ರಕ್ತಗಾಯವಾಯಿತು. ನನ್ನ ಮಗಳು
ಶಾಂತಾಳಿಗೆ ಎಡಗಾಲು ಮೊಣಕಾಲಿಗೆ ತೀವ್ರ ರಕ್ತಗಾಯವಾಯಿತು, ನನ್ನ ಮಗ ಪಂಪಾಪತಿಗೆ ಬಲಗೈ ಮೊಣಕೈ ಹತ್ತಿರ
ತೆರೆಚಿದ ಗಾಯವಾಯಿತು. ಅಪಘಾತ ಮಾಡಿದ ಮೋಟಾರ ಸೈಕಲ್ ನೋಡಲು ಹಿರೋ ಹೋಂಡಾ ಸಿ.ಡಿ. ಡಿಲಕ್ಸ್ ನಂಬರ್:
ಕೆ.ಎ-37/ ಆರ್-1231 ಅಂತಾ ಇದ್ದು, ಅಪಘಾತ ಮಾಡಿದ ಮೋಟಾರ ಸೈಕಲ್ ಚಾಲಕನಿಗೆ ವಿಚಾರಿಸಲು ಆತನ ಹೆಸರು
ಶಂಕರ ತಂದೆ ಹನುಮಪ್ಪ ಕುದ್ರಿಮೋತಿ ವಯಸ್ಸು: 24 ವರ್ಷ ಸಾ: ಕರೆಕಲ್ಲಪ್ಪ ಕ್ಯಾಂಪ್ ಅಂತಾ ತಿಳಿಸಿದ್ದು,
ಆತನಿಗೆ ಅಲ್ಪಸ್ವಲ್ಪ ಪೆಟ್ಟಾಗಿದ್ದವು. ಆತನ ಸಂಗಡ ಮೋಟಾರ ಸೈಕಲ್ ನ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಗೆ
ಎಡಗೈ ಮುಂಗೈ ಹತ್ತಿರ ತೀವ್ರ ರಕ್ತಗಾಯವಾಗಿದ್ದು, ವಿಚಾರಿಸಲು ಆತನ ಹೆಸರು ರಮೇಶ ತಂದೆ ತಿಮ್ಮಣ್ಣ,
ವಯಸ್ಸು 30 ವರ್ಷ, ಜಾತಿ: ವಡ್ಡರು ಉ: ಕಲ್ಲು ಒಡೆಯುವುದು ಸಾ: ಸಿದ್ದಿಕೇರಿ ತಾ: ಗಂಗಾವತಿ ಅಂತಾ
ತಿಳಿಯಿತು. ನಂತರ ಯಾವುದೋ ಒಂದು ಆಟೋದಲ್ಲಿ ಗಾಯಗೊಂಡವರೆಲ್ಲರೂ ಕೂಡಿಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಗೆ
ಬಂದು ಚಿಕಿತ್ಸೆಗಾಗಿ ದಾಖಲಾಗಿದ್ದು ಚಿಕಿತ್ಸೆ ಮಾಡಿದ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ
ಕುರಿತು ಗಂಗಾವತಿಯ ಡಾ: ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಬಂದು ಸೇರಿಕೆಯಾಗಿ ಚಿಕಿತ್ಸೆ ಪಡೆದ ನಂತರ
ಈಗ ತಡವಾಗಿ ಈ ನನ್ನ ದೂರನ್ನು ಬರೆಯಿಸಿ ಕೊಟ್ಟಿರುತ್ತೇನೆ. ಕಾರಣ ಈ ಅಪಘಾತ ಮಾಡಿದ ಮೋಟಾರ ಸೈಕಲ್
ಚಾಲಕ ಶಂಕರ ತಂದೆ ಹನುಮಪ್ಪ ಸಾ: ಕರೆಕಲ್ಲಪ್ಪ ಕ್ಯಾಂಪ್ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ
ಇರುತ್ತದೆ" ಅಂತಾ ನೀಡಿದ
ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
4) ಗಂಗಾವತಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 267/2015 ಕಲಂ. 143, 147, 341, 323, 324, 354,
504, 506 ಸಹಿತ 149 ಐ.ಪಿ.ಸಿ:.
ದಿನಾಂಕ 29-11-2015 ರಂದು 22-30 ಗಂಟೆಗೆ ಶ್ರೀಮತಿ ಲಕ್ಷ್ಮೀ ಗಂಡ ವೀರೇಶ ಪೂಜಾರ, ವಯಸ್ಸು
30 ವರ್ಷ, ಜಾ: ಕುರುಬರ, ಉ: ಮನೆಗೆಲಸ, ಸಾ: ಲಿಂಗರಾಜ ಕ್ಯಾಂಪ್-ಗಂಗಾವತಿ
ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ
29-11-2015 ರಂದು ನನ್ನ ತಮ್ಮನಾದ ವೀರೇಶ ತಂದೆ ಸಿದ್ದಪ್ಪ ಪೂಜಾರ ಇವನು ಬೈಕ್ ನಡೆಸಿಕೊಂಡು
ಬರುವಾಗ ಪ್ರಶಾಂತನಗರದ ಅನ್ನು ತಂದೆ ಕಾಲಿಯಾಸಾಬ ಹಾಗೂ ಜುಬೇರ ಇವರಿಬ್ಬರೂ ಸೇರಿಕೊಂಡು
ಬಾಯಿ ಮಾತಿನ ಜಗಳಾ ಮಾಡಿಕೊಂಡಿದ್ದು, ಜಗಳವನ್ನು ನನ್ನ ಇನ್ನೊಬ್ಬ ಖಾಸ ತಮ್ಮ ಮಲ್ಲಿಕಾರ್ಜುನ ಇವನು
ಬಿಡಿಸಿದ್ದನು. ಇದೇ ವಿಷಯವಾಗಿ ರಾತ್ರಿ 8-30 ಗಂಟೆ ಸುಮಾರಿಗೆ ಪ್ರಶಾಂತನಗರದ (1) ಅನ್ನು
ತಂದೆ ಕಾಲಿಯಾಸಾಬ ಇವನು ತನ್ನ ತಮ್ಮನಾದ (2) ದಾದಾಪೀರ ತಂದೆ ಕಾಲಿಯಾಸಾಬ ಇವರು ತಮ್ಮ ಸಂಗಡಿಗರಾದ
(3) ಜುಬೇರ (4) ಇಬ್ರಾಹಿಂ @ ಸೊಂಡಿ (5) ರಂಜಾನ್ @ ವಡಕಾ (6) ಮಹ್ಮದ್ ಮತ್ತು
ಸಂತೇಬಯಲಿನ (7) ಅಜ್ಜು ತಂದೆ ಮುಸ್ತಫಾ ಹಾಗೂ ಲಿಂಗರಾಜ ಕ್ಯಾಂಪಿನ (8) ರಹೀಮ
ತಂದೆ ಕುತುಬುದ್ದೀನ್ ಮತ್ತಿತರರು ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಹತ್ತಿರ ಬಂದು “ಲೇ ಸೂಳೇಮಕ್ಕಳ ಹೊರಗ್ ಬರ್ರಿಲೇ”” ಅಂತಾ ಕೂಗಾಡುತ್ತಿದ್ದು, ಆಗ ನಾನು, ನಮ್ಮ
ಮನೆಯಿಂದ ಹೊರಗೆ ಬಂದು ಯಾಕ್ರಪ್ಪಾ ಏನಾಯ್ತು ಅಂತಾ ಕೇಳುವಷ್ಟರಲ್ಲಿ “ಎಲ್ಲಿ ಅದರಾ ಆ ಸೂಳೇ ಮಕ್ಕಳ, ಇವತ್ ಅವ್ರನ್ನ
ಮುಗಿಸಿಬಿಡ್ತಿವಿ” ಅಂತಾ ಅನ್ನುತ್ತಾ ನನ್ನನ್ನು ತಡೆದು
ನಿಲ್ಲಿಸಿ ದಬ್ಬಿಕೊಂಡು ಮುಂದೆ ಬಂದರು. ಆಗ ನಾನು, ನನ್ನ ತಮ್ಮಂದಿರು ಮನೆಯಲ್ಲಿಲ್ಲ ಅಂತಾ
ಹೇಳುತ್ತಾ ಮುಂದೆ ಹೋದಾಗ ಮಹ್ಮದ್ ಇವನು ನನ್ನ ಎಡಗೈಯನ್ನು ಹಿಡಿದು ತಿರುವಿ ಕೈಯಿಂದ ಬೆನ್ನಿಗೆ
ಗುದ್ದಿ, “ಹಾಕ್ರಲೇ ಈಕಿಗೆ” ಅಂತಾ ಅಂದಾಗ ಉಳಿದವರು ನನ್ನನ್ನು ಹಿಡಿದು ದೂಕಾಡಿ ಕೈಯಿಂದ ಹೊಡೆಬಡೆ
ಮಾಡಿದ್ದು, ಅಲ್ಲದೇ ನನ್ನ ಸೀರೆ ಹಿಡಿದು ಎಳೆದು ಅಪಮಾನ ಮಾಡಿದರು. ನಂತರ ಅವರೆಲ್ಲರೂ “ಇವತ್ ಇವರ್ ಬಂದ್ರ ಅಂತ ಉಳಕೊಂಡಿ, ನಮ್ಮ
ತಂಟೆಗೆ ಬಂದರ್ನೆಲ್ಲಾ ಸಾಯಿಸಿ ಬಿಡ್ತಿವಿ ಹುಷಾರ್” ಅಂತಾ ಅನ್ನುತ್ತಾ ಅಲ್ಲಿಂದ ಹೊರಟು ಹೋದರು. ಕಾರಣ ಸದರಿ 8 ಜನರು ಹಾಗೂ ಮತ್ತಿತರರ ಮೇಲೆ
ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment