1) ಹನುಮಸಾಗರ
ಪೊಲೀಸ್ ಠಾಣೆ ಗುನ್ನೆ ನಂ.117/2015 ಕಲಂ.302 ಐ.ಪಿ.ಸಿ:.
ದಿನಾಂಕ: 02-11-2015 ರಂದು ಜಾಹಗೀರಗುಡದೂರ ಗ್ರಾಮದ ಚೋಳಪ್ಪ ಈತನಿಗೆ ಯಾರೋ ಕೊಡಲಿಯಿಂದ ತಲೆಗೆ ಕಡಿದಿದ್ದಾರೆ ಅಂತಾ
ಮಾಹಿತಿ ಬಂದ ಮೇರೆಗೆ ಹೆಚ್.ಸಿ-11, ಪಿ.ಸಿ-162 ರವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಲು ಅಲ್ಲಿಂದ
ಗಾಯಾಳು ಚೋಳಪ್ಪನನ್ನು 108 ಅಂಬ್ಯುಲೆನ್ಸ್ ದಲ್ಲಿ ಉಪಚಚಾರ ಕುರಿತು ಬಾಗಲಕೋಟೆಗೆ ಕರೆದುಕೊಂಡು ಹೋಗಿದ್ದಾರೆ
ಅಂತಾ ತಿಳಿದ ಮೇರೆಗೆ ಬಾಗಲಕೋಟೆಗೆ ಮದ್ಯಾಹ್ನ 03-45 ಗಂಟೆಗೆ ಹೋಗಲು ಚೋಳಪ್ಪನು ಮೃತಪಟ್ಟಿದ್ದು;
ಶವವನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ಶವಗಾರ ಕೋಣೆಯಲ್ಲಿ ಹಾಕಿರುತ್ತದೆ. ನಂತರ ಫಿರ್ಯಾದಿದಾರರು
07-00 ಗಂಟೆಗೆ ಲಿಖಿತ ಫಿರ್ಯಾದಿಯನ್ನು ಬಾಗಲಕೋಟ ಸರಕಾಗಿ ಆಸ್ಪತ್ರೆಯಲ್ಲಿ ಹಾಜರಪಡಿಸಿದ್ದು ವಾಪಸ್
ಠಾಣೆಗೆ 21-00 ಗಂಟೆಗೆ ಬಂದಿದ್ದು ಫಿರ್ಯಾದಿ ಸಾರಾಂಶವೇನೆಂದರೆ, ಫಿರ್ಯಾದಿದಾರರು ಇಂದು ಮುಂಜಾನೆ
ತಮ್ಮ ಸಂಬಂಧಿಕರಾದ ಯಮನೂರಪ್ಪ ಗೊಡೇಕಾರ ರವರ ಮಗನಿಗೆ ಕನ್ಯಾ ನೋಡಲು ಮನೆಯಲ್ಲಿ ತನ್ನ ಗಂಡನಿಗೆ ಹಾಗೂ
ಮಕ್ಕಳಿಗೆ ಊರ ಮುಂದಿನ ಹೊಲದಲ್ಲಿ ಮೆಕ್ಕೆಜೋಳದ ರಾಶಿಯನ್ನು ನೋಡಿಕೊಳ್ಳಲು ಹೇಳಿ ಮುಂಜಾನೆ 09-00
ಗಂಟೆಗೆ ಒಂದು ಖಾಸಗಿ ವಾಹನದಲ್ಲಿ ಹೊರಟು ಇಬ್ರಾಹಿಮಪುರಕ್ಕೆ ಹೋಗಿದ್ದು; ಅಲ್ಲಿ ಕಾರಣ ನಡೆಯುವಾಗ
ಮದ್ಯಾಹ್ನ 12-10 ಗಂಟೆಯ ಸುಮಾರಿಗೆ ಫಿರ್ಯಾದಿ ಸಂಗಡ ಹೋದ ಮಹಿಬೂಬಸಾಬ ಮುಲ್ಲಾರವರ ಫೋನಿಗೆ ಊರಿಂದ
ತಿಳಿಸಿದ್ದೆನೆಂದರೆ, ಫಿರ್ಯಾದಿ ಗಂಡ ಚೋಳಪ್ಪನು ತಮ್ಮ ಹೊಲದ ಮನೆಯಲ್ಲಿ ರಾಶಿ ಕಾಯುತ್ತಾ ಮಲಗಿದಾಗ
ಯಾರೋ ದುಶ್ಕರ್ಮಿಗಳು ಕೊಡಲಿಯಿಂದ ತಲೆಗೆ ಕಡೆದು ರಕ್ತ ಗಾಯ ಮಾಡಿದ್ದು, ಆತನನ್ನು ಉಪಚಾರ ಕುರಿತು
108 ಆಂಬ್ಯುಲೆನ್ಸ್ ದಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿದರು. ನಂತರ ಫಿರ್ಯಾದಿದಾರರು ಅಲ್ಲಿಂದ
ಬಾಗಲಕೋಟೆಗೆ ಬಂದು ನೋಡಲು ಚೋಳಪ್ಪನು ಮೃತಪಟ್ಟಿದ್ದು, ಬಲಗಣ್ಣಿನ ಹುಬ್ಬಿನಿಂದ ಹಣೆಗೆ ಕಡೆದಿದ್ದು
ಮತ್ತು ಬಲತಲೆಗೆ ಬಲವಾಗಿ ಕಡೆದು ರಕ್ತಗಾಯ ಮಾಡಿದ್ದು ಇರುತ್ತದೆ. ಈ ಬಗ್ಗೆ ಫಿರ್ಯಾದಿಯು ತನ್ನ ಚಿಕ್ಕಪ್ಪನನ್ನು
ವಿಚಾರಿಸಲು ಆತನು ತಿಳಿಸಿದ್ದೇನೆಂದರೆ, ಚೋಳಪ್ಪನು ತೋಟದ ಮನೆಗೆ ಮಲಗಿದಾಗ ಯಾರೋ ದುಶ್ಕರ್ಮಿಗಳು ಕೊಡಲಿಯಿಂದ
ತಲೆಗೆ ಕಡೆದು ಕೊಡಲಿ ಬಿಸಾಕಿ ಹೋಗಿದ್ದು ಅದನ್ನು ತಿಳಿದು ಅಲ್ಲಿಗೆ ಹೋಗಿ ನೋಡಿದಾಗ ಜೀವಂತ ಇದ್ದು
ಗೊರ್ರ ಗೊರ್ರ ಎಂದು ರಕ್ತ ಸೋರುತ್ತಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರದೇ ಇರುವುದರಿಂದ ತಾನು ಹಾಗೂ
ತಮ್ಮ ಗ್ರಾಮದವರು ಬಾಗಲಕೋಟೆಗೆ ಹೊರಟಾಗ ಬಾಗಲಕೋಟ ರೇಲ್ವೇ ಗೇಟ್ ಹತ್ತಿರ ಮೃತಪಟ್ಟಿದ್ದು, ನಂತರ ಜಿಲ್ಲಾ
ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿದ್ದು ಇರುತ್ತದೆ. ಸದರಿ ಚೋಳಪ್ಪನನ್ನು ಯಾರೋ ದುಶ್ಕರ್ಮಿಗಳು
ಯಾವುದೋ ದುರುದ್ದೇಶದಿಂದ ಕೊಡಲಿಯಿಂದ ತಲೆಗೆ ಬಲವಾಗಿ ಕಡೆದು ಕೊಲೆ ಮಾಡಿದ್ದು ಅಂತಾ ಮುಂತಾಗಿ ಫಿರ್ಯಾದಿ
ಇರುತ್ತದೆ.
2) ಕೊಪ್ಪಳನಗರ ಪೊಲೀಸ್
ಠಾಣೆ ಗುನ್ನೆ ನಂ. 214/2015 ಕಲಂ 306 ಸಹಿತ 34 ಐ.ಪಿ.ಸಿ:.
ದಿ: 02-11-2015 ರಂದು ಸಾಯಂಕಾಲ 6-15 ಗಂಟೆಗೆ ಫಿರ್ಯಾದಿ ಶಂಭುಲಿಂಗಪ್ಪ ಕೌಜಗೇರಿ ಸಾ: ಕೊಪ್ಪಳ ಇವರು ಠಾಣೆಗೆ ಹಾಜಾರಿಗ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಅಣ್ಣ ಮೃತ ಶಿವಪ್ಪನಿಗೆ ಹೆಚ್ಚಿಗೆ ದುಡಿದು ಇನ್ನೂ ಹೆಚ್ಚಿನ ಹಣ ತೆಗೆದುಕೊಂಡು ಬರುವಂತೆ ಆತನ ಹೆಂಡತಿ ನಿರ್ಮಲಾ ಹಾಗೂ ಅವಳ ತಾಯಿ ಗಂಗಮ್ಮ ಹಾಗೂ ಅವಳ ಮಾವ ಮಲ್ಲಪ್ಪ, ಲೋಕೇಶ ಇವರಿಂದ ಮಾನಸಿಕವಾಗಿ ಕಿರುಕುಳ ಅನುಭವಿಸಿ ಅವರ ಕಿರಿಕಿರಿಯಿಂದ ಮನನೊಂದು ದಿ : 02-11-2015 ರಂದು ಮಧ್ಯಾಹ್ನ 3-00 ಗಂಟೆಗೆ ಕೊಪ್ಪಳ ನಗರದ ಗಡಿಯಾರ ಕಂಬದ ಹತ್ತಿರ ಕುಸಿದು ಬಿದ್ದು, ನಂತರ ಉಪಚಾರ ಫಲೀಸದೇ ಜಿ.ಎಸ್.ಆರ್. ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ನನ್ನ ಅಣ್ಣ ಶಿವಪ್ಪನು ಅವನ ಹೆಂಡತಿ ನಿರ್ಮಲಾ, ಅವಳ ತಾಯಿ ಗಂಗಮ್ಮ, ಅವಳ ಮಾವ ಮಲ್ಲಪ್ಪ ಲೋಕೇಶ ಇವರ ಪ್ರಚೋದನೆಯಿಂದ ಸಾವು ಸಂಭವಿಸಿದ್ದು ಕಾರಣ ಅವರ ಮೇಲೆ ಕಾನೂನು ಕ್ರಮ ಲೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
3) ಮುನಿರಾಬಾದ ಪೊಲೀಸ್
ಠಾಣೆ ಗುನ್ನೆ ನಂ. 224/2015 ಕಲಂ 379 ಐ.ಪಿ.ಸಿ:.
ದಿನಾಂಕ:
02-11-2015 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯದಿದಾರರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ
ಗಣಕೀಕೃತ ಮಾಡಿದ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ದಿನಾಂಕ:
27-10-2015 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಹುಲಗಿಯ ಶ್ರೀ ಹುಲಿಗೆಮ್ಮ ದೇವಿಯ ದೇವಸ್ಥಾನದ
ಆವರಣದಲ್ಲಿರುವ ಹುಂಡಿಯಲ್ಲಿ ಹಣ ಹಾಕುವ ಸಮಯದಲ್ಲಿ ಪಿರ್ಯಾದಿದಾರರ ಕುತ್ತಿಗೆಯಲ್ಲಿನ ಅಂದಾಜು
45,000-00 ರೂ. ಬೆಲೆ ಬಾಳುವ 3 ತೊಲೆ ಬಂಗಾರದ ಸರವನ್ನು ಯಾರೋ ಕಟ್ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 224/2015 ಕಲಂ 379 ಐ.ಪಿ.ಸಿ.
ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment