Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, November 4, 2015

1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ.103/2015 ಕಲಂ.143, 147, 283, 341 ಸಹಿತ 149 ಐ.ಪಿ.ಸಿ:.
ದಿನಾಂಕ 03-11-2015 ರಂದು ಸಂಜೆ 7-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಲ್ಲಸಾಬ ತಂದೆ ಅಮೀನಸಾಬ ಗಲಗಲಿ. ವಯ: 36 ವರ್ಷ, ಜಾತಿ: ಮುಸ್ಲಿಂ, : ಲಾರಿ ಚಾಲಕ ಸಾ: ಹೊಂಬಳ ತಾ: ಜಿ: ಗದಗ. ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಹೇಳಿಕೆ ಫಿರ್ಯಾದಿ ಕೊಟ್ಟಿದ್ದು ಸಾರಾಂಶವೆನೆಂದರೆ. ತಾನು ವಿ.ಅರ್.ಎಲ್. ಟ್ರಾನ್ಸ್ಪೊರ್ಟದಲ್ಲಿ ಚಾಲಕ ಅಂತಾ ಕೆಲಸ ಮಾಡಿಕೊಂಡಿದ್ದು ದಿವಸ ಬೇಳಿಗ್ಗೆ 02-30 ಗಂಟೆಗೆ ತಮ್ಮ ಕಂಪನಿಯ ವತಿಯಿಂದ ಒಂದು ಲಾರಿ ನಂ: ಕೆ.-25/7850 ನೆದ್ದನ್ನು ತೆಗೆದುಕೊಂಡು ಅದರಲ್ಲಿ ಪಾರ್ಸಲ್ಗಳಿದ್ದು ಹುಬ್ಬಳ್ಳಿಯಿಂದ ರಾಯಚೂರುಗೆ ಹೋಗುವುದಕ್ಕಾಗಿ ಅಲ್ಲಿಂದ ಬಿಟ್ಟಿದ್ದು ಅಲ್ಲಿ ಇಲ್ಲಿ ವಿಶ್ರಾಂತಿ ಮಾಡುತ್ತಾ ರಾಯಚೂರಿಗೆ ಹೋಗಲು ತಾವರಗೇರಾಕ್ಕೆ ಮದ್ಯಾಹ್ನ 01-00 ಗಂಟೆಗೆ ಬಂದಾಗ ತಾವರಗೇರಾದಲ್ಲಿ ಆರೋಪಿತರೆಲ್ಲರೂ ಕೂಡಿ ತಮಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು ಅಂತಾ ಧರಣೆ ನಿರತರಾಗಿ ಎಲ್ಲಾ ವಾಹನಗಳನ್ನು ಎಲ್ಲಾ ದಿಕ್ಕಿನಿಂದ ಬಂದ್ಮಾಡಿ ಧರಣೆ ನಡೆಸುತ್ತಿದ್ದು ಸದರಿಯವರು 12-30 ಗಂಟೆಯಿಂದ ಸಂಜೆ 06-00 ಗಂಟೆಯವರೆಗೆ ಯಾವುದೇ ವಾಹನಗಳನ್ನು ಯಾವ ಕಡೆಗೂ ಬಿಡದೇ ತಡೆದು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದು ಇರುತ್ತದೆ. ಅಂತಾ ವಗೈರೆ ಫಿರ್ಯಾದಿ ಯಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.  
2) ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 60/2015  ಕಲಂ 279, 337  ಸಹಿತ 187 ಐ.ಪಿ.ಸಿ:.
ದಿನಾಂಕ 03-11-2015 ರಂದು ಸಂಜೆ 6-00 ಗಂಟೆಗೆ ಕೊಪ್ಪಳದ ಕಿಮ್ಸ ಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಗಾಯಾಳುವಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ 03-11-2015 ರಂದು ಸಂಜೆ 5-30 ಗಂಟೆಗೆ ತನ್ನ ಸ್ನೇಹಿತ ಸಂತೋಷ ವರನ್ನು ತನ್ನ ಮೋಟಾರ್ ಸೈಕಲ್ ಹಿಂದೆ ಕೂಡಿಸಕೊಂಡು ತಮ್ಮ ಮನೆಗೆ ಹೋಗಲು ಕೊಪ್ಪಳ ನಗರದ ಸಾಲರಜಂಗ್ ರಸ್ತೆಯ ಮೇಲೆ ಬಾಲಕಿಯರ ಶಾಲೆಯ ಸಮೀಪ ಹೊಗುತ್ತಿರುವಾಗ, ರಸ್ತೆಯ ಬಲಗಡೆಗೆ ಸಂತೋಷ ಇವರ ಅಜ್ಜ ಪರಮೇಶ್ವರಪ್ಪ ಇವರು ನಡೆದುಕೊಂಡು ಹೊಗುತ್ತಿರುವಾಗ ನಮ್ಮ ಎದುರುಗಡೆಯಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪರಮೇಶ್ವರಪ್ಪ ಇವರಿಗೆ ಟಕ್ಕರಮಾಡಿ ಅಪಘಾತಮಾಡಿದನು ಇದರಿಂದ ಪರಮೇಶ್ವರಪ್ಪ ಇವರು ಕೆಳಗೆ ಬಿದ್ದರು. ನಂತರ ಫಿರ್ಯಾದಿದಾರು ಮೋಟಾರ್ ಸೈಕಲ್ ನಿಲ್ಲಿಸಿ ಪರಮೇಶ್ವರಪ್ಪ ಇವರ ಹತ್ತಿರ ಹೋಗಿ ಮೇಲೆ ಎಬ್ಬಿಸಿ ನೋಡಲು ಇದರಿಂದ ಅವರಿಗೆ ತಲೆಯ ಬಲಗಡೆ, ಬಲಕಣ್ಣಿಗೆ, ಬಲಕೈಗೆ ತೆರಚಿದ ಗಾಯಗಳು ಬಲಚಪ್ಪೆಗೆ ಒಳಪೆಟ್ಟು ಆಗಿದ್ದು ಇರುತ್ತದೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 247/2015  ಕಲಂ 409, 420 ಐ.ಪಿ.ಸಿ:.
ದಿನಾಂಕ:- 03-11-2015 ರಂದು 19-00 ಗಂಟೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ರವರ ಕಾರ್ಯಾಲಯದಿಂದ ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 208/15 ಕಲಂ 409, 420 ಐ.ಪಿ.ಸಿ. ಪ್ರಕರಣವು ಹದ್ದಿ ಪ್ರಯುಕ್ತ ವರ್ಗಾವಣೆಗೊಂಡು ಬಂದಿರುತ್ತದೆ.  ಸದರಿ ಫಿರ್ಯಾದಿಯನ್ನು ಶ್ರೀ ಸಂಗಮೇಶ ತಂದೆ ನೂರಂದಯ್ಯ ಮಠ, ಕಾರ್ಯಾ ನಿರ್ವಾಹಕ ಅಧಿಕಾರಿಗಳು, ಗಂಗಾವತಿ ಇವರು ನೀಡಿದ್ದು ಫಿರ್ಯಾದಿ ಸಾರಂಶವೇನೆಂದರೆ,  ಶ್ರೀ ಮಂಜುನಾಥ ತಂದಿ ಸುಭಾಸಚಂದ್ರ ಅಂಗಡಿ ಇವರು ಮೂಲತಃ ಕೃಷಿ ಇಲಾಖೆಯ ಅಧಿಕಾರಿಗಳಾಗಿದ್ದು ನಮ್ಮ ಇಲಾಖೆಗೆ ನಿಯೋಜನೆಯ ಮೇರೆಗೆ ಬಂದು ದಿ-28-02-14 ರಿಂದ ದಿ-23-04-15 ರ ವೆರೆಗೆ ಪ್ರಭಾರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಅಂತಾ ಹುಳ್ಕಿಹಾಳ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು ನಂತರ ಮಾನ್ಯ ಜಂಟಿ ನಿರ್ದೇಶಕರು ಕೊಪ್ಪಳ ರವರ ಆದೇಶದ ಮೇರೆಗೆ ದಿ-24-04-15 ರಂದು ನಮ್ಮ ಇಲಾಖೆಯ ಪಿ.ಡಿ.ಓ ಹುದ್ದೆಯಿಂದ ಬಿಡುಗಡೆಗೊಳಿಸಿ ಅವರ ಮಾತೃ ಇಲಾಖೆಗೆ ಹಾಜರಾಗುವಂತೆ ಆದೇಶ ಮಾಡಿದ್ದು ಸದರಿ ಮಂಜುನಾಥ ರವರು ದಿ24-04-15 ರಂದು ನಮ್ಮ ಇಲಾಖೆಯಿಂದ ಬಿಡುಗಡೆಗೊಂಡ ನಂತರದ ದಿನಗಳಲ್ಲಿ ದಿ-19-05-15 ರಿಂದ ದಿ-15-06-15 ರ ಅವಧಿಯಲ್ಲಿ ''ಸ್ವಚ್ಚ ಭಾರತ್ ಮೀಷನ್'' ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ನಿಗದಿತ ಮಾರ್ಗಸೂಚಿಯಾದ ಆರ್.ಟಿ.ಜಿ.ಎಸ್ ಮೂಲಕ ಅಥವಾ ಕ್ರಾಸ್ ಚೆಕ್ ಮೂಲಕ ಫಲಾನುಭವಿಗಳ ಖಾತೆಗೆ ಹಣವನ್ನು ಪಾವತಿಸದೇ ಮತ್ತು ಸ್ಥಳಿಯ ಮರ್ಲಾನಹಳ್ಳಿಯಲ್ಲಿಯೇ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಇದ್ದರೂ ಕೂಡಾ ಗಂಗಾವತಿಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಒಟ್ಟು ರೂ.20,76,810/-ಗಳನ್ನು ಬೇನಾಮಿ ಹೆಸರಿನಲ್ಲಿ ಡ್ರಾ ಮಾಡಿದ್ದು ಸದರಿ ಮಂಜುನಾಥನು ದಿಃ-19-05-15 ರಿಂದ ದಿಃ-15-06-15 ರ ಅವಧಿಯಲ್ಲಿ ಹುಳ್ಕಿಹಾಳ ಗ್ರಾ.ಪಂ ಪಿ.ಡಿ.ಓ ಅಧಿಕಾರದಲ್ಲಿ ಇಲ್ಲದಿದ್ದಾಗ್ಯೂ ಅಧಿಕಾರ ದೂರುಪಯೋಗ ಪಡಿಸಿಕೊಂಡು ಇಲಾಖೆಗೆ ಮೋಸ ಮಾಡಿರುತ್ತಾನೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ಪಿರ್ಯಾದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಕಾರಣ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
4) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 226/2015  ಕಲಂ 379 ಐ.ಪಿ.ಸಿ:.

ದಿನಾಂಕ: 03-11-2015 ರಂದು ಮುಂಜಾನೆ 10-15 ಗಂಟೆಗೆ ಪಿರ್ಯದಿದಾರರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ನೀಡಿ ಗಣಕೀಕರಣ ಮಾಡಿಸಿದ ಪಿರ್ಯಾದಿ ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ದಿನಾಂಕ:  28-10-2015 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಹುಲಗಿಯ ಹೊಳೆಯಲ್ಲಿ ಸ್ನಾನ ಮಾಡುವ ಸಲುವಾಗಿ ತಮ್ಮ ವಸ್ತುಗಳನ್ನು ಮತ್ತು ತಮ್ಮ ಶ್ರೀಮತಿಯ 5 ತೊಲೆ ಬಂಗಾರದ ತಾಳಿಯನ್ನು ಅವರ ಮಗನ ಪ್ಯಾಂಟಿನ ಜೇಬಿನಲ್ಲಿಟ್ಟು ಹೊಳೆಯ ದಂಡೆಯ ಮೇಲಿಟ್ಟು ಸ್ನಾನ ಮಾಡಿಕೊಂಡು ವಾಪಸ್ ಬರುವಷ್ಟರಲ್ಲಿ ಎಲ್ಲಾ ವಸ್ತುಗಳನ್ನು ಬಿಟ್ಟು ಅವರ ಮಗನ ಪ್ಯಾಂಟ ಮತ್ತು ಅದರಲ್ಲಿದ್ದ 5 ತೊಲೆ ಬಂಗಾರದ ತಾಳಿ ಅಂ.ಕಿ. ಹಳೇ ಲೆಕಕ್ಕೆ 49000-00 ಬೆಲೆ ಬಾಳುವ ಬಂಗಾರದ ಆಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 226/2015 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008