1) ಬೇವೂರ
ಪೊಲೀಸ್ ಠಾಣೆ ಗುನ್ನೆ ನಂ. 77/2015 ಕಲಂ. 279, 337, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ.
ಕಾಯ್ದೆ:.
ದಿನಾಂಕ: 03.11.2015 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಕುಷ್ಟಗಿ
- ಕೊಪ್ಪಳ ರಸ್ತೆಯ ಮೇಲೆ ಕುದ್ರಿಮೋತಿ ಸೀಮಾದಲ್ಲಿ ಆರೋಪಿತನು ತಾನು ನೆಡೆಸುತ್ತಿದ್ದ ತನ್ನ ಮೋಟಾರ್ ಸೈಕಲ್ ನಂಬರ: ಕೆ.ಎ-37 ಎಕ್ಸ 5532 ನೆದ್ದರಲ್ಲಿ
ಹಿಂದುಗಡೆ ಫಿರ್ಯಾದಿದಾರರ ಮಗನಾದ ಈರಣ್ಣ ಇತನ್ನನ್ನು ಕೂಡ್ರಿಸಿಕೊಂಡು
ಕುಷ್ಟಗಿಯಿಂದ ಬೇವೂರ ರಸ್ತೆಯ ಮುಖಾಂತರವಾಗಿ ಕಲಕೇರಿ ಗ್ರಾಮಕ್ಕೆ ಹೋಗುವ ಕಾಲಕ್ಕೆ ಆರೋಪಿತನು ತಾನು
ನೆಡೆಸುತ್ತಿದ್ದ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯ
ಉಂಟಾಗುವಂತೆ ನೆಡೆಸಿಕೊಂಡು ಬಂದಿದ್ದರಿಂದ ಮೋಟಾರ್ ಸೈಕಲ್ ಮೇಲೆ ನಿಯಂತ್ರಣ ಸಾದಿಸದೆ ಮೋಟಾರ್ ಸೈಕಲ್
ಸಮೇತ ರಸ್ತೆಯ ಮೆಲೆ ಕೆಡವಿ ಅಪಘಾತ ಮಾಡಿ ಅಪಘಾತದ ಮಾಹಿತಿಯನ್ನು ತಿಳಿಸದೆ ಹಾಗೆ ಹೋಗಿದ್ದು ಇರುತ್ತದೆ.
ಸದರಿ ಅಪಘಾತದಲ್ಲಿ ಆರೋಪಿತನಿಗೆ ಸಾದಾಸ್ವರೂಫದ ರಕ್ತಗಾಯವಾಗಿದ್ದು
ಹಾಗೂ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಫಿರ್ಯಾದಿದಾರರ ಮಗನಾದ ಈರಣ್ಣ ಇವನಿಗೆ ಭಾರಿ ಸ್ವರೂಫದ ರಕ್ತಗಾಯ
ಹಾಗೂ ಒಳಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಇತ್ಯಾದಿ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
2) ಕುಕನೂರ ಪೊಲೀಸ್
ಠಾಣೆ ಗುನ್ನೆ ನಂ. 148/2015 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ:-04/11/2015 ರಂದು 7-15..ಪಿ.ಎಂ.ಕ್ಕೆ ಕುಕನೂರ ಸರಕಾರಿ
ಆಸ್ಪತ್ರೆಯಿಂದ ಅಪಘಾತದ ಬಗ್ಗೆ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ,
ಗಾಯಾಳುಗಳನ್ನು ಪರಿಶೀಲಿಸಿ ಗಾಯಾಳು ಮಾತನಾಡದೇ ಇದ್ದುದರಿಂದ ಪ್ರತ್ಯಕ್ಷ ಸಾಕ್ಷಿದಾರರಾದ
ಶರಣಪ್ಪರವರ ಹೇಳಿಕೆಯನ್ನು 07-30 ಪಿಎಂದಿಂದ 8-30 ಪಿಎಂದವರೆಗೆ ಪಡೆದುಕೊಂಡಿದ್ದು, ಅದರ
ಸಾರಾಂಶವೆನೆಂದರೆ, ಇಂದು ದಿನಾಂಕ; 04/11/2015 ರಂದು 6-00 ಪಿ.ಎಂ.ಕ್ಕೆ ತಾನು
ತಮ್ಮೂರಿನ ಯಲ್ಲಪ್ಪ ಹರಿಜನರವರ ಟಾಟಾ ಎ.ಸಿ. ವಾಹನದಲ್ಲಿ ಭಟಪನಳ್ಳಿಗೆ ಹೋಗುವಾಗ ತಮ್ಮೂರಿನ
ಯಮನೂರಪ್ಪನು ತನ್ನ ಮೋ: ಸೈಕಲ್ ನಂ:KA37 R 565 ನೇದ್ದರಲ್ಲಿ ತನ್ನ ತಮ್ಮನಾದ ಲಕ್ಷ್ಮಣನಿಗೆ
ಕರೆದುಕೊಂಡು ಕುಕನೂರದಿಂದ ಭಟಪನಳ್ಳಿಗೆ ಹೊರಟಿದ್ದು, ಅವರ ಬೈಕ್ ಹಿಂದೆ ತಾನು ಕುಳಿತ ಟಾಟಾ
ಎ.ಸಿ.ವಾಹನ ಹೊರಟಿದ್ದು ಕುಕನೂರ ದಿಂದ 4 ಕೀ.ಮೀ. ದೂರದಲ್ಲಿ ರಸ್ತೆಯಲ್ಲಿ ಯಮನೂರಪ್ಪನು ತನ್ನ
ಬೈಕ್ ನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಹೋಗುವಾಗ ಬೈಕ್ ಸ್ಕಿಡ್ ಆಗಿ ಬೈಕ್
ಸಮೇತ ಇಬ್ಬರೂ ಕೆಳಗೆ ಬಿದಿದ್ದು ನಾವು ಟಾಟಾ ಎ.ಸಿ. ವಾಹನ ನಿಲ್ಲಿಸಿ ಸ್ಕಿಡ್ ಆಗಿ ಬಿದ್ದ ಬೈಕ್
ನಂ. ನೋಡಲಾಗಿ ಅದು KA 37 R 565 ಅಂತಾ ಇದ್ದು ಗಾಯಗೊಂಡ ತನ್ನ ತಮ್ಮನಿಗೆ ಹಾಗೂ ಬೈಕ್
ನಡೆಸುತ್ತಿದ್ದ ತಮ್ಮೂರಿನ ಯಮನೂರಪ್ಪನಿಗೆ ತಾನು ಕುಳಿತು ಹೊರಟ ವಾಹನದಲ್ಲಿ ಹಾಕಿಕೊಂಡು ಕುಕನೂರ
ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ಇದೆ. ಕಾರಣ ಅತೀವೇಗವಾಗಿ ಮತ್ತು
ಅಲಕ್ಷ್ಯತನದಿಂದ ಮೊಟಾರ್ ಸೈಕಲ್ ನಡೆಸಿ ಅಪಘಾತಕ್ಕೆ ಕಾರಣನಾದ ಮೊಟಾರ್ ಸೈಕಲ್ ಚಾಲಕನ ಮೇಲೆ
ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಇದ್ದ ಹೇಳಿಕೆಯ ಪಿರ್ಯಾಧಿಯನ್ನು
ಪಡೆದುಕೊಂಡು ವಾಪಸ್ ಠಾಣೆಗೆ 8-45 ಪಿಎಂಕ್ಕೆ ಬಂದು ಸದರ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
3) ತಾವರಗೇರಾ
ಪೊಲೀಸ್ ಠಾಣೆ ಗುನ್ನೆ ನಂ.104/2015 ಕಲಂ. 279, 504 ಐ.ಪಿ.ಸಿ:.
ಇಂದು ದಿನಾಂಕ 04-11-2015 ರಂದು ಸಂಜೆ 6-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಸಾಗರ ತಂದೆ ಶಿವಪುತ್ರಪ್ಪ ಬೇರಿ ವಯ: 33 ವರ್ಷ, ಜಾತಿ: ಮಾದಿಗ, ಉ: ಕೃಷಿ, ಸಾ:
ತಾವರಗೇರಾ ಮೋ. ನಂ: 8861501333 ತಾ: ಕುಷ್ಟಗಿ. ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಗಣಕೀಕೃತ ದೂರು
ನೀಡಿದ್ದು ಸಾರಾಂಶವೆನೆಂದರೆ. ತಾವುಗಳು ನಿನ್ನೆ ಮದ್ಯಾಹ್ನ 12-00 ಗಂಟೆಯ ಸುಮಾರು ಐ.ಬಿ ಯಿಂದ ಬಸ್
ನಿಲ್ದಾಣಕ್ಕೆ ಹೋಗುವಾಗ ನಮೂದಿತ ಆರೋಪಿತನು ತನ್ನ ಲಾರಿ ನಂ: ಕೆ.ಎ-25/7850 ನೇದ್ದನ್ನು ಅತಿವೇಗ
ಅಲಕ್ಷತನದಿಂದ 70-80 ಕಿ.ಮೀ ವೇಗದಲ್ಲಿ ಬಂದು ತಾವರಗೇರಾದ ಶ್ಯಾಮೀದಲಿ ವೃತ್ತದಲ್ಲಿ ಫಿಯರ್ಾದಿಯ ದ್ವಿಚಕ್ರ
ವಾಹನಕ್ಕೆ ಸ್ವಲ್ಪದಲ್ಲಿಯೇ ತಪ್ಪಿದ್ದು ಆಗ ಪಿರ್ಯಾಧಿ ತನ್ನ ಸ್ನೇಹಿತರಾದ
ಸಂತೋಷ್, ಕಳಕನಗೌಡ ಇವರುಗಳಿಗೆ ಪೋನ್ ಮುಖಾಂತರ ಕರೆ ಮಾಡಿ ಲಾರಿ ಬಗ್ಗೆ ಮಾಹಿತಿ ನೀಡಿದ್ದು ಅವರು
ಬಂದಿದ್ದು, ಆಗ ಪಿರ್ಯಾಧಿ ಚಾಲಕನಿಗೆ ಪ್ರಶ್ನೆ ಮಾಡಿದರೆ ಏಕಾಏಕಿ ಲೇ ಸೂಳೆ ಮಗನೇ ನಿನ್ಯಾರಲೇ ಕೆಳೋಕೆ
ಅಂತಾ ಬೈದಿದ್ದು, ನಂತರ ಪಿರ್ಯಾಧಿಯು ತನ್ನ ವಯಕ್ತಿಕ
ಕೆಲಸದ ನಿಮಿತ್ಯ ಗಂಗಾವತಿಗೆ ಹೋಗಿದ್ದು, ಈ ದಿವಸ ಬಂದು ಸದರಿ ಚಾಲಕನ ವಿರುದ್ಧ ಪಿರ್ಯಾಧಿ ನೀಡಿದ್ದು ಅಂತಾ ವಗೈರೆ ಪಿರ್ಯಾಧಿಯಿಂದ ಪ್ರಕರಣ ದಾಖಲಿಸಿ
ತನಿಖೆ ಕೈಕೊಂಡಿದೆ.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 248/2015 ಕಲಂ 409, 420 ಐ.ಪಿ.ಸಿ:.
ಪ್ರಕರಣವು ಹದ್ದಿ ಪ್ರಯುಕ್ತ
ವರ್ಗಾವಣೆಗೊಂಡು ಬಂದಿರುತ್ತದೆ. ಸದರಿ ಫಿರ್ಯಾದಿಯನ್ನು ಶ್ರೀ ಸಂಗಮೇಶ ತಂದೆ ನೂರಂದಯ್ಯ
ಮಠ, ಕಾರ್ಯಾ ನಿರ್ವಾಹಕ
ಅಧಿಕಾರಿಗಳು, ಗಂಗಾವತಿ ಇವರು ನೀಡಿದ್ದು ಫಿರ್ಯಾದಿ ಸಾರಂಶವೇನೆಂದರೆ, ಮಂಜುನಾಥ ತಂದೆ ಸುಭಾಸಚಂದ್ರ ಅಂಗಡಿ
ಈ ಹಿಂದೆ ಪ್ರಭಾರ ಪಂಚಾಯತ ಅಭಿವೃದ್ಧಿ ಅಧಿಕಾರಿ ನವಲಿ ಗ್ರಾ.ಪಂ. ಈತನು ದಿನಾಂಕ 27-04-2015
ರಿಂದ 15-07-2015 ರ ಮಧ್ಯದ ಅವಧಿಯಲ್ಲಿ ತಾನು ನವಲಿ ಗ್ರಾಪಂ ಪಿ.ಡಿ.ಓ ಅಧಿಕಾರದಲ್ಲಿ
ಇಲ್ಲದಿದ್ದಾಗ್ಯೂ ಕೂಡ ಅಧಿಕಾರವನ್ನು ದುರುಪಯೊಪಡಿಸಿಕೊಂಡು ಗಂಗಾವತಿಯ ಪ್ರಗತಿ ಕೃಷ್ಣ ಗ್ರಾಮೀಣ
ಬ್ಯಾಂಕ ಶಾಖೆಯಲ್ಲಿ (ನೀಲಕಂಠೇಶ್ವರ ವೃತ್ತದ ಹತ್ತಿರ) ಒಟ್ಟು ರೂ, 9,18,186=00 ರೂ ಗಳನ್ನು ಬೇನಾಮಿ
ಹೆಸರುಗಳಲ್ಲಿ ಡ್ರಾ ಮಾಡಿ ಮೋಸ ಮಾಡಿರುತ್ತಾನೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ
ಮೇಲಿಂದ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
0 comments:
Post a Comment