1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 233/2015 ಕಲಂ. 393,
398 ಐ.ಪಿ.ಸಿ:.
ದಿನಾಂಕ – 5-11-2015 ರಂದು ಬೆಳಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ
ಶ್ರೀ ರಾಮಪ್ಪ ತಂದಿ ಯಮನಪ್ಪ ಮಡಿವಾಳರ ವಯಾ- 45 ವರ್ಷ ಜಾ- ಮಡಿವಾಳರ ಉ- ಐ.ಸಿ.ಐ.ಸಿ.ಬ್ಯಾಂಕಿನ .ಎ.ಟಿ.ಎಮ್.
ಸೆಕ್ಯೂರಿಟಿ ಗಾರ್ಡ ಸಾ-ಹೊಸಜೂರಟಗಿ ತಾ-ಗಂಗಾವತಿ ಕೊಡುವ
ಫಿರ್ಯಾದಿ ಏನೆಂದರೆ, ನಾನು ಕಾರಟಗಿ ಐ.ಸಿ.ಐ.ಸಿ.ಐ
ಬ್ಯಾಂಕ್ ಬ್ರ್ಯಾಂಚ್ ಕಾರಟಗಿಯ ಮತ್ತು .ಎ.ಟಿ.ಎಮ್. ದ ಸೆಕ್ಯೂರಿಟಿ ಅಂತಾ ಈಗ್ಗೆ 3 ತಿಂಗಳಿಂದ ಕೆಲಸ
ಮಾಡಿಕೊಂಡಿರುತ್ತೇನೆ. ನನ್ನದು ದಿನಾಂಕ – 4-11-2015 ರಂದು
ರಾತ್ರಿ 10-00 ಗಂಟೆಯಿಂದ ದಿನಾಂಕ- 05-11-2015 ರ ಬೆಳಿಗನ 6-00 ಗಂಟೆಯ ವರೆಗೆ ಕರ್ತವ್ಯ ಇತ್ತು. ದಿನಾಂಕ –05-11-2015 ರಂದು ಬೆಳಗ್ಗೆ 01-15 ರಿಂದ 2-00 ಗಂಟೆಯ ಸುಮಾರಿಗೆ
ನಾನು ಎ.ಟಿ.ಎಮ್. ದಲ್ಲಿ ರೂಮಿನಲ್ಲಿ ಇದ್ದಾಗ್ಗೆ ಅಂದಾಜು ಸುಮಾರು 25 ರಿಂದಾ 30 ವರ್ಷದ ಹುಡುಗರು ಬನಿಯನ್
ಮತ್ತು ಲುಂಗಿ ಹಾಕಿಕೊಂಡು ಮುಖಕ್ಕೆ ಕರಿಯ
ಬಣ್ಣದ ಪ್ಲಾಸ್ಟೀಕ್ ಚೀಲಗಳನ್ನು ಹಾಕಿಕೊಂಡು ಕಣ್ಣುಗಳು ಕಾಣುವ ಜಾಗ ಮಾತ್ರ
ಬಿಟ್ಟಿದ್ದು ಅವರು ನಮ್ಮ ಎ.ಟಿ.ಎಮ್. ಬಾಗಿಲು
ತೆಗೆದು ಒಳಗಡೆ ಬಂದು ನನಗೆ ಚೂರಿಯನ್ನು ತೋರಿಸಿ ನೀನು
ಸುಮ್ಮನಿದ್ದರೆ ಸರಿ ಇಲ್ಲದಿದ್ದರೆ ನಿನ್ನ ಜೀವ ತೆಗೆದು ಎ.ಟಿ.ಎಮ್.
ದಲ್ಲಿಹ ಹಣವನ್ನು ದೋಚಿಕೊಂಡು ಹೊಗುತ್ತೇವೆ ಅಂತಾ ಹೇದರಿಸಿದರು.
ಒಬ್ಬನು ನನ್ನ ಕುತ್ತಿಗೆ ಹತ್ತಿರ ಚೂರಿ ಹಿಡಿದು ಮತ್ತೊಬ್ಬ ನಮ್ಮ ಎ.ಟಿ.ಮ್.
ನ್ನು ಕಬ್ಬಿಣದ ಚೂರಿಯಿಂದ ಎ.ಟಿ.ಎಮ್. ತಿವಿದು ಮೀಟಿ ಸುಲಿಗೆ ಮಾಡುವ
ಪ್ರಯತ್ನಪಟ್ಟಿದ್ದಾಗ್ಗೆ ಆತನಿಗೆ ಕೈಗೆ ಗಾಯವಾಯಿತು ಆಗ ನಾನು ಜೋರಾಗಿ ಚೀರಿದ್ದರಿಂದ ಸದರಿಯವರು
ಸುಲಿಗೆ ಮಾಡುವದನ್ನು ಬಿಟ್ಟು ಅಲ್ಲಿಂದ ಓಡಿ ಹೊಗಿದ್ದು, ನಾನು ಕೂಡಾ ಹೊರಗಡೆ ಬಂದು ಸಮೀಪದ ಮಾನ್ವಿ ಪಟ್ಟಣ ಬ್ಯಾಂಕಿನ
ಸೆಕ್ಯೂರಿಟಿ ಗಾರ್ಡ ಲಾಲಸಿಂಗ್ ಇವರಿಗೆ ಹೇಳಿದೇನು. ಈ ಘಟನೆಯ ಬಗ್ಗೆ ನಮ್ಮ ಎಜೆನ್ಸಿರವರಿಗೆ
ಹಾಗೂ ಬ್ಯಾಂಕಿನವರಿಗೆ ಮಾಹಿತಿ ತಿಳಿಸಿ ಈಗ ತಡವಾಗಿ ಬಂದು ಫಿರ್ಯಾದಿಯನ್ನು ಕೊಟ್ಟಿರುತ್ತೇನೆ.
ಸದರಿ ವ್ಯಕ್ತಿಗಳ ದೇಹ ಚಹರೆಯನ್ನು ನಾನು ನೋಡಿದರೆ ಗುರುತಿಸುತ್ತೇನೆ. ಕಾರಣ ಈ ರೀತಿ ನಮ್ಮ ಎ.ಟಿ.ಎಮ್. ಸುಲಿಗೆ ಮಾಡಲು ಪ್ರಯತ್ನಪಟ್ಟ
ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಫಿರ್ಯಾದಿ ಇರುತ್ತದೆ.
ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
2) ಮುನಿರಾಬಾದ
ಪೊಲೀಸ್ ಠಾಣೆ ಗುನ್ನೆ ನಂ. 227/2015 ಕಲಂ. 279, 337, 304(ಎ) ಐ.ಪಿ.ಸಿ:.
ದಿನಾಂಕ: 05-11-2015 ರಂದು ರಾತ್ರಿ 7-30 ಪಿ.ಎಂ.ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆಯನ್ನು ಗಣಕೀಕರಣ ಮಾಡಿಸಿದ ಪಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 05-11-2015
ರಂದು ಸಾಯಂಕಾಲ 6-20 ಗಂಟೆ ಸುಮಾರಿಗೆ ಮೃತ
ಮೊಹ್ಮದತಬರೇಜ ಮತ್ತು ಆತನ ಸ್ನೇಹಿತ ಲತೀಫಖಾನ ಇಬ್ಬರೂ ಕೂಡಿಕೊಂಡು ತಮ್ಮ ಮೋಟರ ಸೈಕಲ್ ನಂ. ಕೆಎ37/ಎಲ್-2675
ನೇದ್ದನ್ನು ನಡೆಸಿಕೊಂಡು ಹೊಸಲಿಂಗಾಪೂರ ಕಡೆಯಿಂದ ಮುನಿರಾಬಾದ ಕಡೆಗೆ
ಮುನಿರಾಬಾದ-ಹೊಸಲಿಂಗಾಪೂರ ರಸ್ತೆಯ ಮೇಲೆ ತೋಟಗಾರಿಕೆ ಕಾಲೇಜು ಎದುರುಗಡೆ ರಸ್ತೆಯ ಎಡಭಾಗದಲ್ಲಿ
ಬರುತ್ತಿದ್ದಾಗ ಅದೇ ಸಮಯಕ್ಕೆ ಮುನಿರಾಬಾದ ಕಡೆಯಿಂದ ಮೋಟರ ಸೈಕಲ್ ನಂ. ಕೆಎ-37/ಎಲ್-2778
ನೇದ್ದರ ಸವಾರನು ತನ್ನ ಮೋಟರ ಸೈಕಲ ಹಿಂದೆ ಇನ್ನೂ ಇಬ್ಬರನ್ನು
ಕರೆದುಕೊಂಡು ಹೋಗಿ ಮೃತ ಮೊಹ್ಮದತಬರೇಜ ಹಾಗೂ ಲತೀಫಖಾನ ಇವರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆಸಿ
ಅಪಘಾತ ಪಡಿಸಿದ್ದರಿಂದ ಮೊಹ್ಮದತಬರೇಜ ಇತನು ಮೃತಪಟ್ಟಿದ್ದು, ಉಳಿದವರಿಗೆ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.
3) ಗಂಗಾವತಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 249/2015 ಕಲಂ. 323, 324, 354, 504, 506 ಐ.ಪಿ.ಸಿ:.
ದಿನಾಂಕ: 05-11-2015 ರಂದು ಮಧ್ಯಾಹ್ನ 1-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶೇಖರಪ್ಪ ತಂದೆ ಹನುಮಂತಪ್ಪ ಚಳ್ಳಾರಿ, ವಯಸ್ಸು 45 ವರ್ಷ, ಜಾ:
ಉಪ್ಪಾರ, ಉ: ಒಕ್ಕಲುತನ, ಸಾ: 19ನೇ ವಾರ್ಡ, ವಡ್ಡರ ಓಣಿ, ಗಂಗಾವತಿ ಇವರು ಠಾಣೆಗೆ ಹಾಜರಾಗಿ
ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರ ತಂದೆಗೆ ರೈಲ್ವೆ ಹಳಿಗೆ ಹೊಲ ನೀಡಿದ್ದಕ್ಕಾಗಿ 47 ಲಕ್ಷ ಬಂದಿದ್ದು
ಅವುಗಳನ್ನು ಇಬ್ಬರೂ ಗಂಡು ಮಕ್ಕಳಿಗೆ ಸಮವಾಗಿ ಹಂಚಿದ್ದು, 7 ಲಕ್ಷ ರೂಪಾಯಿಗಳನ್ನು ತನಗಾಗಿ
ಇಟ್ಟುಕೊಂಡಿದ್ದು ಇದೆ. ಇದೇ ವಿಷಯವಾಗಿ ಫಿರ್ಯಾದಿದಾರರ ತಮ್ಮನಾದ ಕೃಷ್ಣಪ್ಪ ಇವನು ಆಗಾಗ
ಬಂದು ಫಿರ್ಯಾದಿಯೊಂದಿಗೆ ಹಾಗೂ ಅವರ ತಂದೆಯೊಂದಿಗೆ ಜಗಳಾ ಮಾಡಿಕೊಳ್ಳುತ್ತಿದ್ದುದು ಇದೆ.
ಸದರಿ ಕೃಷ್ಣಪ್ಪ ಇವನು ನಿನ್ನೆ ದಿನಾಂಕ: 04-11-2015 ರಂದು
ಬುಧವಾರ ದಿವಸ ರಾತ್ರಿ 9-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮನೆಯಲ್ಲಿದ್ದಾಗ ಮನೆಯ ಮುಂದೆ ಬಂದು ನಿಂತುಕೊಂಡು ಲೇ ನಿಮ್ಮೌನ್ ಭೋಸುಡಿ ಮಗನಾ ಹೊರಗ್ ಬಾರ್ಲೇ, ನಂಗ್ ರೊಕ್ಕಾ ಕೊಡಬಾ
ಸೂಳೇಮಗನಾ ಅಂತಾ ನಮ್ಮ ತಂದೆಗೆ ಬೈದಾಡುತ್ತಿದ್ದು, ಫಿರ್ಯಾದಿದಾರರ ಮನೆಯಿಂದ ಹೊರಗೆ
ಅಂಗಳದಲ್ಲಿ ಬಂದು ತಮ್ಮನಿಗೆ ಬುದ್ಧಿವಾದ ಹೇಳಲು ಲೇ ನಿನ್ಯಾರ್ ಲೇ, ನಮ್ಮಪ್ಪನ್ ಕಳಸ್
ನಿನ್ಯಾಕ ಬಂದಿ ಶೇಂಠಾ ಹರ್ಯಾಕ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಬೆನ್ನಿಗೆ
ಹೊಡೆದಿದ್ದು, ಅಲ್ಲದೇ ಕೈಯಿಂದ ಎಡಪಕ್ಕಡಿಗೆ ಗುದ್ದಿದ್ದು ಇದೆ. ಜಗಳವನ್ನು ಬಿಡಿಸಲು ಹೋದ
ಅವರ ತಂದೆಗೆ ಹಾಗೂ ಪತ್ನಿಯಾದ ಪದ್ಮಾವತಿ ಇವರಿಗೂ ಸಹಾ ಕೈಯಿಂದ ಹೊಡೆಬಡೆ ಮಾಡಿದ್ದು, ಪದ್ಮಾವತಿ
ಇವರ ಸೀರೆ ಹಿಡಿದು ಎಳೆದಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿದ್ದ
ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
4) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ 111/2015 ಕಲಂ
341, 324, 504, 506 ಐ.ಪಿ.ಸಿ:.
ಪಿರ್ಯಾದಿದಾರರ ಮಗಳಾದ ಶೀಲಾ ಈಕೆಯನ್ನು ಆರೋಪಿತನಿಗೆ ಕೊಟ್ಟು ಮದುವೆ
ಮಾಡಿದ್ದು, ಸದರಿ ಆರೋಪಿತನು ಪಿರ್ಯಾದಿದಾರರ ಮಗಳೂ ಶೀಲಾ ಈಕೆಗೆ ವಿನಾಕಾರಣ ಹೊಡೆ ಬಡಿ ಮಾಡುತ್ತಾ
ಬಂದಿದ್ದು ಅದರಂತೆ ದಿನಾಂಕ 30-10-2015 ರಂದು ಆರೋಪಿತನು ತನ್ನ ಹೆಂಡತಿ ಶೀಲಾಳಿಗೆ
ಯಲಬುರ್ಗಾದಲ್ಲಿರುವ ತನ್ನ ಮನೆಯಲ್ಲಿ ಹೊಡಿ ಬಡಿ ಮಾಡಿದ್ದು ನಂತರ ಅವಳು ಕೊಪ್ಪಳದಲ್ಲಿರುವ ತನ್ನ
ತವರು ಮನೆಗೆ ಹೋಗಿದ್ದು ದಿನಾಂಕ 05-11-2015 ರಂದು ಪಿರ್ಯಾದಿದಾರರು ತನ್ನ ಮಗಳು
ಶೀಲಾಳೊಂದಿಗೆ ಯಲಬುರ್ಗಾಕ್ಕೆ ಬಂದು ರಾತ್ರಿ 9-30 ಗಂಟೆ ಸುಮಾರಿಗೆ ಆರೋಪಿತನ ಮನೆಯ
ಕಂಪೌಂಡ ಒಳಬಾಗದಲ್ಲಿ ತನ್ನ ಮಗಳೊಂದಿಗೆ ಮಾತನಾಡುತ್ತಾ ಕುಳಿತುಕೊಂಡಾಗ ಆರೋಪಿತನು ಬಂದು
ಪಿರ್ಯಾದಿದಾರನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಿಗೆ ಬಡಿಗೆಯಿಂದ ತೆಲೆಯ ಮೇಲೆ ಹೊಡೆದು ರಕ್ತ
ಗಾಯ ಮಾಡಿದ್ದು ಆಗ ಪಿರ್ಯಾದಿದಾರನು ತಪ್ಪಿಸಿಕೊಂಡು ಹೋಗಬೆಕೆನ್ನುವಷ್ಟರಲ್ಲಿ ತಡೆದು
ನಿಲ್ಲಿಸಿ ಬಲಗಾಲಿನಿಂದ ಪಿರ್ಯಾದಿಯ ಬೆನ್ನಿಗೆ ಒದ್ದು ಜೀವಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ
ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 111/2015 ಕಲಂ 341, 324,
504, 506 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment