Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, November 7, 2015

1)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 331/2015 ಕಲಂ. 87 Karnataka Police Act.
ದಿನಾಂಕ:- 06-11-2015 ರಂದು ಸಂಜೆ 6:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.ಇಂದು ದಿನಾಂಕ: 06-11-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದೇವಘಾಟ್ ಸೀಮಾದ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಹಾಗೂ ಸಿಪಿಐ ಸಾಹೇಬರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 68, ಪಿ.ಸಿ. 110, 160, 180, 363, 323, 358 ಹಾಗೂ ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲ್ಗಳಲ್ಲಿ ಠಾಣೆಯಿಂದ ಸಂಜೆ 4:00 ಗಂಟೆಗೆ ಹೊರಟು ದೇವಘಾಟ್ ಸೀಮಾದಲ್ಲಿ ಹೋಗಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 4:30 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 8 ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಮೂಕಪ್ಪ ತಂದೆ ರಾಮಣ್ಣ ಗಿಣಿಮೂತಿ, 27 ವರ್ಷ, ಮಾದಿಗ ಉ: ಮೆಸನ್ ಸಾ: ಮುತ್ತೂರ ಆಸ್ಪತ್ರೆ ಹತ್ತಿರ, ಗಂಗಾವತಿ  (2) ದಾವಲಸಾಬ ತಂದೆ ಸೂದಿಸಾಬ, 30 ವರ್ಷ, ಮುಸ್ಲೀಂ ಉ: ಹೋಟಲ್ ಸಾ: ಗಾಂಧೀನಗರ ಗಂಗಾವತಿ (3) ರಾಜು ತಂದೆ ಫಕೀರಪ್ಪ, ಮಡಿವಾಳ, 29 ವರ್ಷ, ಕುಲ ಕಸುಬು ಸಾ: ಅಗಸರ ಓಣಿ ಗಂಗಾವತಿ (4) ಬಸಪ್ಪ ತಂದೆ ಪಂಪಣ್ಣ ಮಡಿವಾಳ, 50 ವರ್ಷ, ಕುಲ ಕಸುಬು ಸಾ: ಅಗಸರ ಓಣಿ-ಗಂಗಾವತಿ (5) ಸ್ಮರೇಶ ತಂದೆ ರಾಮಣ್ಣ ಗಿಣಿಮೂತಿ, 23 ವರ್ಷ, ಮಾದಿಗ, ಕೂಲಿ ಸಾ: ಗಾಂಧಿನಗರ ಗಂಗಾವತಿ (6) ರಫೀಕ್ ತಂದೆ ಖಾಜಾಹುಸೇನ್, 28 ವರ್ಷ, ಮುಸ್ಲೀಂ ಉ: ಗ್ಯಾರೇಜ್ ಕೆಲಸ ಸಾ: ಒಡೆಯರ ಓಣಿ ಗಂಗಾವತಿ (7) ಅಮರೇಶ ತಂದೆ ದುರಗಪ್ಪ ಭಂಡ್ರಾಳ, 40 ವರ್ಷ, ಮಡಿವಾಳ, ಕುಲಕಸುಬು ಸಾ: ರಾಯರ ಗುಡಿ ಹಿಂಭಾಗ ಗಂಗಾವತಿ (8) ಲಕ್ಪ್ಷ್ಮಣ ತಂದೆ ಯಮನಪ್ಪ ಮಡಿವಾಳ, 42 ವರ್ಷ, ಸಾ: ರಾಯರ ಗುಡಿ ಹಿಂಭಾಗ ಗಂಗಾವತಿ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 5,700/- ಗಳು, 52 ಇಸ್ಪೇಟ್ ಎಲೆಗಳು, ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು. ಈ ಬಗ್ಗೆ ಸಂಜೆ 4:30 ರಿಂದ 5:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 6:00 ಗಂಟೆಗೆ ಠಾಣೆಗೆ ವಾಪಸ್ ಬಂದು ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ” ಅಂತಾ ಸಾರಾಂಶ  ಇದ್ದು  ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು ಕಾರಣ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 234/2015 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ 06-11-2015 ರಂದು ರಾತ್ರಿ 08-20 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಂಜುನಾಥ ತಂದೆ ರಾಜಪ್ಪ ನಾಯಕ ವಯ 40 ವರ್ಷ ಜಾತಿ ನಾಯಕ ಉ. ಕೂಲಿಕೆಲಸ ಸಾ. ಗುಂಡಮ್ಮ ಕ್ಯಾಂಪ್ ಗಂಗಾವತಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನಂದರೆ, ಗಂಗಾವತಿಯ ಆಂಜಣೇಯ ಇವರಿಗೆ ಸಂಬಂಧಿಸಿ ಟಾಟಾ ಎ.ಸಿ.ಇ ವಾಃನ ನಂ ಕೆಎ-37/ ಎ-4108 ನೇದ್ದರಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದು ಪ್ರತಿ ದಿನದಂತೆ ಈ ದಿನ ಸದರಿ ಫಿರ್ಯಾದಿದಾರರು ಹಾಗೂ ಟಾಟಾ ಎಸಿಇ ವಾಹನದ ಚಾಲಕ ಸಿದ್ದಲಿಂಗಪ್ಪ ತಂದೆ ರಾಜಪ್ಪ ಹಾಗೂ ಇದರಲ್ಲಿ ಕೂಲಿಕೆಲಸ ಮಾಡುವ ಸತ್ಯಪ್ಪ ಕಬ್ಬೇರ ಮೂವರು ಕೂಡಿಕೊಂಡು ಗಂಗಾವತಿ ತಾಲೂಕಿನ ಜಮಾಪೂರ ಗ್ರಾಮದಲ್ಲಿ ಸೆಂಟ್ರಿಂಗ್ ಸಾಮಾಗ್ರಿಗಳನ್ನು ತಮ್ಮ ವಾಹನದಲ್ಲಿ ಲೋಡ್ ಮಾಡಿಕೊಂಡು ಗಂಗಾವತಿ ಬರಲು ಜಮಾಪೂರ-ಕೊಟ್ನೇಕಲ್ ರಸ್ತೆಯ ಮೇಲೆ ಈ ದಿನ ದಿನಾಂಕ 06-11-2015 ರಂದು ಬೆಳಿಗ್ಗೆ 11-15 ಗಂಟೆಯ ಸುಮಾರಿಗೆ ಅರೊಣೋದಯ ಕ್ಯಾಂಪ್ ಕ್ರಾಸ್ ಸಮೀಪದಲ್ಲಿ ಜಮಾಪೂರದ ಕಡೆಗೆ ಹೋಗುತ್ತಿದ್ದಾಗ ಫಿರ್ಯಾದಿದಾರರ ವಾಹನ ಮುಂದೆ ನಮೂದು ಮಾಡಿದ ಆರೋಫಿತನು ತಾನೂ ನಡೆಸುತ್ತಿದ್ದ ಲಾರಿ ನಂ ಎ.ಪಿ.27/ಡಬ್ಲೂ-5437 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋರಟು ಹಿಂದೆ ಬರುವ ವಾಹನಗಳಿಗೆ ಯಾವುದೇ ಮುನ್ಸೂಚನೆ ನೀಡದೇ, ಹಾಗೂ ಸಿಗ್ನಲ್ ಕೊಡದೇ ಒಮ್ಮಲೇ ತನ್ನ ವಾಹನವನ್ನು ಬ್ರೇಕ್ ಹಾಕಿದ್ದರಿಂದ ಸದರಿ ಫಿರ್ಯಾದಿದಾರರ ವಾಹನ ಲಾರಿಯ ಹಿಂಭಾಗಕ್ಕೆ ಟಚ್ ಆಗಿದ್ದು ಇದರಿಂದ ಟಾಟಾ ಎಸಿಇ ವಾಹನದಲ್ಲಿದ್ದ ಫಿರ್ಯಾದಿದಾರರಿಗೆ ಸತ್ಯಪ್ಪ ಕಬ್ಬೇರ ಮತ್ತು ಲಾರಿಯ ಚಾಲಕ ಸಿದ್ದಲಿಂಗಪ್ಪ ನಾಯಕ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಪಟ್ಟೆಗಳಾಗಿದ್ದು ಇರುತ್ತದೆ. ಅಪಘಾತಪಡಿಸಿದ ನಂತರ ಲಾರಿಯ ಚಾಲಕ ವಾನಹವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ, ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯಕಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
3) ಕಾರಟಗಿ ಪೊಲೀಸ್ ಠಾಣೆ ಯು.ಡಿ.ಆರ್.ನಂ. 20/2015 ಕಲಂ. 174(ಸಿ) ಸಿ.ಆರ್.ಪಿ.ಸಿ.


ದಿನಾಂಕ : 06-11-2015 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಬಸವರಾಜ ತಂದಿ ಯಂಕೋಬ ವಯಾ-42 ವರ್ಷ ಜಾ- ನಾಯಕ ಉ- ಸೌಡಿ ಸಾ- ಪುಲದಿನ್ನಿ ತಾ- ಸಿಂಧನೂರ ಹಾ.ವ. ಕಾರಟಗಿ, ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ನಾನು ಕಾರಟಗಿಯ ನೀರಾವರಿ ಇಲಾಖೆಯಲ್ಲಿ ಸೌಡಿ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನನ್ನದು ತುಂಗಭದ್ರ ಎಡದಂಡೆ ಕಾಲುವೆಯ ವಿತರಣಾ ಕಾಲುವೆ 30 ಡಿಸ್ಟ್ರೀಬ್ಯೂಟರಿಯಲ್ಲಿ ಸೌಡಿ ಅಂತಾ 1999 ನೇ ಸಾಲಿನಿಂದ ಇಲ್ಲಿಯವರೆಗೆ ಕೆಲಸ ಮಾಡಿಕೊಂಡು ಕಾಲುವೆಯ ಮೇಲೆ ಆಗು ಹೊಗುಗಳನ್ನು ನಾನೇನೋಡಿಕೊಳ್ಳುತ್ತೇನೆ. ಸದರ್ ಕಾಲುವೆಗೆ ಗ್ಯಾಂಗಮನ್ ದೇವೆಂದ್ರಪ್ಪ ಅಂತಾ ಇರುತ್ತಾನೆ. ಸದರ್ ಕಾಲುವೆಗೆ ಶ್ರೀನಿವಾಸ ತಂದಿ ಕರಿಯಪ್ಪ ಅಡವಿ ಇವರು ಸಹಾಯಕ ಇಂಜಿನಿರ್ ಇರುತ್ತಾರೆ. ಹಾಗೂ ಎ.ಇ.ಇ. ಸೂಗಪ್ಪ ಅಂತಾ ಇದ್ದು ಇವರು ಉಸ್ತುವಾರಿ ಕೆಲಸ ಮಾಡುತ್ತಿರುತ್ತಾರೆ. ನಾನು ಮತ್ತು ನಮ್ಮ ಗ್ಯಾಂಗಮನ್ ದೇವೆಂದ್ರಪ್ಪ ಇವರು ದಿನಂಪ್ರತಿ ಕಾಲುವೆ ಮೇಲೆ ಗಸ್ತು ಕೆಲಸಕ್ಕೆ ಹೊಗುತ್ತೇವೆ. ಅದರಂತೆ ದಿನಾಂಕ : 05-11-2015 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ತುಂಗಭದ್ರ ಎಡದಂಡೆ ಕಾಲುವೆಯ ವಿತರಣಾ ಕಾಲುವೆ 30 ನೇದ್ದರ ನಾಗರಡ್ಡೆಪ್ಪ ಇವರ ಗದ್ದೆಯ ಹತ್ತಿರ ಸುಮಾರು ಕಾಲುವೆಯಲ್ಲಿ ಒಂದು ಗಂಡಸಿನ ಶವ ತೆಲುತ್ತಿರುವದು ಕಂಡು ಬಂದಿದ್ದರಿಂದ ನಾವು ಹತ್ತಿರ ಹೊಗಿ ನೋಡಲು ಶದರಿ ಸುಮಾರು 25 ರಿಂದಾ 30 ವರ್ಷದ ಗಂಡಸಿನ ಶವ ಇದ್ದು ಸದರಿ ಯವನ ಮೈ ಮೇಲೆ ಒಂದು ಚಕ್ಸ ಶರ್ಟ ಹಾಗೂ ಒಂದು ನಾಶಿಕಲರಿನ ಬನಿಯನ ಹಾಗೂ ಒಂದು ಚಾಕ್ಲೇಟ್ ಕಲರಿನ ಅಂಡರ್ ವೇರ್ ಇದ್ದು ಮೃತನ ತಲೆಯ ಮುಂದುಗಡೆ ಹರಿತವಾದ ಗಾಯವಾಗಿದ್ದು ಹಾಗೂ ಆತನ ಕಾಲಿಗೆ ಟೆಂಗಿನ ನಾರಿನ ದಾರದಿಂದ ಕಾಲುಗಳನ್ನು ಕಟ್ಟಿದ್ದು ಸದರಿ ಮೃತ ದೇವು ಈಗ್ಗೆ ಒಂದೆರಡು ದಿನಗಳಿಂದ ಅಂದರೆ ದಿನಾಂಕ-4-11-2015 ರಿಂದಾ ದಿನಾಂಕ : 5-11-2015 ರಂದು ಸಾಯಂಕಾಲ 5-00 ಗಂಟೆಯ ನಡುವಿನ ಅವದಿಯಲ್ಲಿ ನೀರಿನಲ್ಲಿ ಬಿದ್ದಿದ್ದು ಸದರಿಯವನ ತಲೆಯ ಮೇಲಿನ ಗಾಯ ಹಾಗೂ ಆತನ ಕಾಲಿಗೆ ಹಗ್ಗದಿಂದ ಕಟ್ಟಿದ್ದರಿಂದ ಸದರಿಯವನ ಮರಣದಲ್ಲಿ ನಮಗೆ ಶಂಸಯ ಬಂದಿದ್ದರಿಂದ ಈ ಬಗ್ಗೆ ನಾವು ನಮ್ಮ ಇಂಜಿನಿಯರ್ ರವರಿಗೆ ವಿಷಯ ತಿಳಿಸಿದ್ದು ಯಾರಾದರು ಆತನ ಸಂಭಂದಿಕರು ಬರಭಹುದು ಅಂತಾ ಇಲ್ಲಿಯವರೆಗೂ ಆತನ ಸಂಭಂದಿಕರು ಮತ್ತು ಆತನ ವಿಳಾಸ ಗೊತ್ತಾಗದ್ದರಿಂದ ಈ ವಿಷಯವನ್ನು ನಮ್ಮ ಅಧೀಕಾರಿಗಳಿಗೆ ವಿಷಯ ತಿಳಿಸಿ ಈಗ ತಡವಾಗಿ ತಮ್ಮಲ್ಲಿಗೆ ಬಂದು ಫಿರ್ಯಾದಿ ನೀಡಿರುತ್ತೇನೆ. ಕಾರಣ ಈ ಬಗ್ಗೆ ಮುಂದಿನ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಫಿರ್ಯಾದಿ ಇರುತ್ತದೆ. ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ದೂರಿನ ಮೇರೆಗೆ ಯು.ಡಿ.ಆರ್. ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008