ದಿನಾಂಕಃ-07-11-2015 ರಂದು ಸಾಯಂಕಾಲ 5-45 ಗಂಟೆಗೆ ಶ್ರೀನಿಂಗಪ್ಪ
ಎನ್.ಆರ್. ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ ಜೂಜಾಟದ ಮೂಲ ಪಂಚನಾಮೆ ಮತ್ತು ವರದಿ ಯೊಂದಿಗೆ ಆರೋಪಿತರನ್ನು ಕರೆದುಕೊಂಡು ಠಾಣೆಗೆ ಬಂದು ಹಾಜರು ಪಡಿಸಿದ್ದು ವರದಿಯ ಸಾರಾಂಶ ದಲ್ಲಿ ಇಂದು ದಿನಾಂಕಃ-07-11-2015 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಘವೇಂದ್ರ ರೈಸ್ಮೀಲ್ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತರು ದುಂಡಾಗಿಕುಳಿತು ಅಂದರಬಾಹರ ಎಂಬ ಇಸ್ಪೀಟ್ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐಸಾ ಹೇಬರು ಮತ್ತುಸಿ ಬ್ಬಂದಿಯವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತ ರಿಂದ ಒಟ್ಟುರೂ. 10200/- ಗಳನ್ನು ಮತ್ತು ಇಸ್ಪೀಟ್ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷದಲ್ಲಿ ಜಪ್ತಮಾಡಿಕೊಂಡು ಠಾಣೆಗೆ ಬಂದು ಮೂಲ ಪಂಚನಾಮೆ ಮತ್ತು ಒಂದು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡಿದ್ದು ತನಿಖೆಕೈ ಗೊಂಡಿದ್ದುಇರುತ್ತದೆ.
2) ಕೊಪ್ಪಳ ನಗರ
ಪೊಲೀಸ್ ಠಾಣೆ ಗುನ್ನೆ ನಂ.216/2015 ಕಲಂ. 457, 380 ಐ.ಪಿ.ಸಿ.
ದಿನಾಂಕ: 07-11-2015 ರಂದುಮದ್ಯಾಹ್ನ
01-00 ಗಂಟೆಗೆ ಫಿರ್ಯಾದಿದಾರರಾದ ಪಿ. ನಾಗರಾಜ ತಂದೆ ಪೆದ್ದಯ್ಯಪೆನ್ನಿಕಲಾಪಾಟಿ ಸಾ: ಬೆತಮ್ಚಾರ್ಲಾ
ಜಿಲ್ಲಾಕರ್ನೂಲ ರಾಜ್ಯ: ಆಂದ್ರಪ್ರದೇಶ. ಇವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಗಣಕೀಕೃತ ಫಿರ್ಯಾದಿಯ
ಸಾರಾಂಶವೇನೆಂದರೆ, ಫಿರ್ಯಾದಿದಾರರು ತಾವು ಕೊಪ್ಪಳ ಮತ್ತು ಸುತ್ತ ಮುತ್ತಲಿನ ಊರುಗಳಿಗೆ ಪಾಟಿಕಲ್ಲಗಳನ್ನು
ಸಪ್ಲೈಯ್ಮಾಡಿ ನಂತರ ಬಾಕಿ ಹಣವನ್ನು ಬಂದು ವಸೂಲಿ ಮಾಡುತ್ತಿರುತ್ತಾರೆ. ಅದೇ ರೀತಿ ದಿನಾಂಕ:
16-10-2015 ರಂದು ಫಿರ್ಯದಿದಾರು ಕೊಪ್ಪಳಕ್ಕೆ ಬಂದು ಕೊಪ್ಪಳ ದಿಂದ ಮುಂಡರಗಿಗೆ ಹೋಗಿ ಅಲ್ಲಿ ಬಾಕಿ
ಹಣ ರೂ 60,000=00 ಗಳನ್ನ ವಸೂಲಿ ಮಾಡಿ ಕೊಂಡು ಸಂಜೆ ಕೊಪ್ಪಳಕ್ಕೆ ವಾಪಸ ಬಂದು ಕೊಪ್ಪಳದ ಮಯೂರ ಲಾಡ್ಜನಲ್ಲಿ
ರೂಮ್ಮಾಡಿಕೊಂಡಿರುತ್ತಾರೆ, ದಿನಾಂಕ: 17-10-2015 ರಂದು ಕೊಪ್ಪಳದಲ್ಲಿ ಬಾಕಿ ಹಣ ರೂ 75,000=00
ಗಳನ್ನು ವಸೂಲಿ ಮಾಡಿ ನಂತರ ತಾನು ಈ ಹಣವನ್ನು ಆಂದ್ರ ಬ್ಯಾಂಕ್ನಲ್ಲಿ ಹಾಕಿರುತ್ತಾರೆ. ನಂತರ ತಾನು
ಲಾಡ್ಜಗೆ ಹೋಗಿ ದಿನಾಂಕ: 18-10-2015 ರಂದು ಮಂಗಳೂರಿಗೆ ಹೋಗಿ ಅಲ್ಲಿ ರೂ 20,000=00 ನಂತರ ಅಲ್ಲಿಂದ
ಕುಕನೂರನ ಲ್ಲಿ ರೂ 8,500=00 ಹಾಗೂ ರೋಣದಲ್ಲಿ ರೂ 40,000=00 ಗಳನ್ನ ಮತ್ತು ಗಜೇಂದ್ರ ಗಡದಲ್ಲಿ
ರೂ 15,000=00 ಗಳ ಬಾಕಿಯನ್ನ ವಸೂಲಿ ಮಾಡಿ ಕೊಂಡು ವಾಪಸ ಸಂಜೆ ಕೊಪ್ಪಳಕ್ಕೆ ಬಂದು ಕೊಪ್ಪಳದ
1,70,000=00 ಗಳಬಾಕಿ ಹಣವಸೂಲಿ ಮಾಡಿಕೊಂಡು ರಾತ್ರಿ 7-30 ಗಂಟೆ ಸುಮಾರಿಗೆ ಲಾಡ್ಜಗೆ ಹೋಗಿ ತಾನು
ವಸೂಲಿ ಮಾಡಿ ಕೊಂಡು ಬಂದಿದ್ದ ಹಣವನ್ನು ಏಣಿಕೆ ಮಾಡಿದಾಗ ಅವು ರೂ 2,53,500=00 ಗಳಿದ್ದು ಅದರಲ್ಲಿರೂ
2,24,000=00 ಗಳನ್ನ ಒಂದು ಕ್ಯಾಶ್ಬ್ಯಾಗಿ ನಲ್ಲಿಟ್ಟುಆ ಬ್ಯಾಗನ್ನು ರೂಮ್ನಲ್ಲಿಟ್ಟಿರುತ್ತೇನೆ.
ಉಳಿದ ಹಣ ರೂ 29,500=00 ಗಳನ್ನ ತನ್ನಲ್ಲಿಟ್ಟು ಕೊಂಡಿರುತ್ತಾನೆ. ತಮ್ಮಊರಿನವರಾದ ಮತ್ತು ಸಂಬಂದಿ
ಯಾದ ಬಿ.ಮದ್ದಿಲೇಟಿ ಮತ್ತು ಎ.ಮದೂಸುದನ ಸಾ: ಬೆತಮ್ಚಾರ್ಲಾ ಇವರು ಕೂಡಾ ಕೊಪ್ಪಳಕ್ಕೆ ಬಾಕಿ ಹಣವಸೂಲಿಗೆ
ಬಂದಿದ್ದು ಅವರೊಂದಿಗೆ ತಾನು ದಿನಾಂಕ: 18-10-2015 ರಂದುರಾತ್ರಿ 8-00 ಗಂಟೆಗೆ ಅವರೊಂದಿಗೆ ಊಟಕ್ಕೆ
ಹೋಗುವಾಗ ತಾನು ತನ್ನ ಹಣ ಇರುವ ಕ್ಯಾಶ್ಬ್ಯಾಗನ್ನು ತನ್ನರೂಮ್ನಲ್ಲಿಟ್ಟು ರೂಮನ್ನು ಬೀಗ ಹಾಕಿಕೊಂಡುಕೀಯನ್ನು
ತಾನು ತನ್ನ ಹತ್ತಿರ ಇಟ್ಟು ಕೊಂಡು ಊಟಕ್ಕೆ ಹೋಗಿ ವಾಪಸ ರಾತ್ರಿ 8-45 ಗಂಟೆಗೆ ತಾವು ಮೂವರು ಊಟಮುಗಿಸಿ
ಕೊಂಡು ರೂಮ್ಗೆ ಬಂದು ರೂಮಿನ ಬೀಗತೆಗೆದು ಒಳಗಡೆ ಹೋಗಿ ನೋಡಿದಾಗ ತಾನು ಹಣ ಇಟ್ಟಿದ್ದ ಬ್ಯಾಗ್ಕಾಣಲಿಲ್ಲಾ.
ನಂತರ ಲಾಡ್ಜನ ಮ್ಯಾನೇಜರ್ನನ್ನು ಮತ್ತು ರೂಮ್ಬಾಯ್ನನ್ನು ಕೇಳಿದಾಗ ಅವರು ತಮಗೆನುಗೊತ್ತಿಲ್ಲಾ ಅಂತಾ
ಹೇಳಿದರು. ನಂತರ ತಾನು ನಾನು ಸುತ್ತಾ ಮುತ್ತಾ ಹುಡುಕಾಡಿದರೂ ತನ್ನ ಹಣ ಇರುವ ಬ್ಯಾಗನಲ್ಲಿಲ್ಲಾ ಯಾರೋ
ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದಿತು. ದಿನಾಂಕ: 18-10-2015 ರಂದುರಾತ್ರಿ
8-00 ಗಂಟೆ ಯಿಂದ ರಾತ್ರಿ 8-45 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಾನು ಇದ್ದಮಯೂರ ಲಾಡ್ಜನ ರೂಮ
ನಂ. 212 ನೇದ್ದರ ಬಾಗಿಲು ತೆರೆದು ರೂಮ್ನಲ್ಲಿದ್ದಕ್ಯಾಶ್ಬ್ಯಾಗಿ ನಲ್ಲಿದ್ದ ಹಣರೂ 2,24,000=00
ಮತ್ತು ಲೆಕ್ಕ ಪುಸ್ತಕವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳ್ಳತನ ಮಾಡಿದ
ಕಳ್ಳರನ್ನು ಪತ್ತೇ ಮಾಡಿ ಕಳ್ಳತನ ವಾದನನ್ನ ಹಣವನ್ನು ಮರಳಿ ಕೊಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು
ವಿನಂತಿ. ನಾನು ನನ್ನ ತಾಯಿ ಗೆ ಅರಾಮ ಇಲ್ಲದ ಕಾರಣ ನಾನು ನಮ್ಮ ಊರಿಗೆ ಹೋಗಿ ಇಂದು ತಡವಾಗಿ ಬಂದು
ನನಗೆ ಕೊಪ್ಪಳ ದಲ್ಲಿ ಪರಿಚಯ ಇರುವ ಸಂತೋಷ ಇವರನ್ನು ಕರೆದು ಕೊಂಡು ಬಂದು ಫಿರ್ಯಾದಿ ಸಲ್ಲಿಸಿರುತ್ತೇನೆ.
ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆಕೈ ಗೊಂಡಿದ್ದು ಇರುತ್ತದೆ.
3) ಮುನಿರಾಬಾದ ಪೊಲೀಸ್ ಠಾಣೆಗುನ್ನೆ
ನಂ.228/2015 ಕಲಂ.143, 147, 148, 323, 324, 504, 506, ಐ.ಪಿ.ಸಿ.ಸಹಿತ 149 ಐ.ಪಿ.ಸಿ.
ದಿನಾಂಕ. 06-11-2015 ರಂದು 11-30 ಎ.ಎಂ.ಕ್ಕೆ ಫಿರ್ಯಾದಿದಾರರು ಹೊಸ ಕನಕಾಪುರ
ಗ್ರಾಮದಲ್ಲಿ ತಮ್ಮ ಜಾಗೆಯಲ್ಲಿ ಮನೆ ಕಟ್ಟಿಸಲು ಅಳತೆ ಮಾಡಿ ಭುನಾಧಿ ಹಾಕಿಸಲು ಹೋದಾಗ ಆರೋಪಿತರೆಲ್ಲರು ಅಕ್ರಮ ಕೂಟ
ರಚಿಸಿಕೊಂಡು ಬಂದು ಫಿರ್ಯಾದಿಗೆ ಅವಾಚ್ಯ ಬೈದು ಜೀವದ ಬೆದರಿಕೆ ಹಾಕಿ ಫಿರ್ಯಾದಿಗೆ ಮತ್ತು
ಫಿರ್ಯಾದಿ ಹೆಂಡತಿ ದುರುಗಮ್ಮಳಿಗೆ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದಿರುತ್ತಾರೆ ಅಂತಾ
ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸನೆ
ಕೈಕೊಂಡಿದ್ದು ಇರುತ್ತದೆ.
0 comments:
Post a Comment