1) ಯಲಬುರ್ಗಾ
ಪೊಲೀಸ್ ಠಾಣೆ ಗುನ್ನೆ ನಂ. 127/2015 ಕಲಂ 279, 337, 338 ಐ.ಪಿ.ಸಿ:.
ದಿನಾಂಕ: 09-12-2015 ರಂದು ಸಾಯಾಂಕಾಲ 5-45 ಗಂಟೆಯ ಸುಮಾರಿಗೆ ಆರೋಪಿತರಿಬ್ಬರು ಬೇವೂರು-
ಯಲಬುರ್ಗಾ ರಸ್ತೆ ಮೇಲೆ ಚಿಕ್ಕಮ್ಯಾಗೇರಿ ಸೀಮಾದಲ್ಲಿ ಬರುವ ಹನಮಪ್ಪ ಉಪ್ಪಾರ ಇವರ ಹೊಲದ ಹತ್ತಿರ
ಆರೋಪಿ ನಂ 01 ನೇದ್ದವನು ಬೇವೂರು ಕಡೆಯಿಂದ ಚಿಕ್ಕಮ್ಯಾಗೇರಿ ಗ್ರಾಮದ ಕಡೆಗೆ ತಾನು
ನಡೆಸುತ್ತಿದ್ದ ಮೋಟಾರ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಮತ್ತು
ಆರೋಪಿ ನಂ 02 ನೇದ್ದವನು ಚಿಕ್ಕಮ್ಯಾಗೇರಿ ಗ್ರಾಮದ ಕಡೆಯಿಂದ ಬೇವೂರು ಕಡೆಗೆ ತಾನು
ನಡೆಸುತ್ತಿದ್ದ ಮೋಟಾರ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು
ಎರಡು ಮೋಟಾರ ಸೈಕಲ ಸವಾರರು ತಮ್ಮ ತಮ್ಮ ಮೋಟಾರ ಸೈಕಲಗಳನ್ನು ಸೈಡು ತೆಗೆದುಕೊಳ್ಳದೆ
ಮುಖಾಮುಖಿಯಾಗಿ ಡಿಕ್ಕಿ ಹೊಡೆಹಿಸಿ ಅಪಘಾತ ಪಡಿಸಿದ್ದರಿಂದ ಆರೋಪಿ ನಂ 01 ನೇದ್ದವನಿಗೆ ಭಾರಿ
ಸ್ವರೂಪದ ಗಾಯ ಹಾಗೂ ಆರೊಪಿ ನಂ 02 ನೇದ್ದವನಿಗೆ ಸಾದಾ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಕಾರಣ
ಸದರಿ ಆರೋಪಿರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ
ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ. ನಂ. 257/2015
ಕಲಂ. 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ
09-12-2015 ರಂದು ಸಂಜೆ 7-30 ಗಂಟೆಗೆ ಗದಗ ಆಕ್ಸಿಜನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ
ವಿರುಪಾಕ್ಷಗೌಡ ಈತನು ಮೂತ್ರ ವಿಸರ್ಜನೆಗೆಂದು ಹೊಸಪೇಟ-ಕೊಪ್ಪಳ ಎನ್. ಹೆಚ್.-63 ರಸ್ತೆಯ ಮೇಲೆ
ಬಂದಾಗ, ಕೆ.ಎಸ್. ಆರ್.ಟಿ.ಸಿ ಬಸ್ ನಂ. ಕೆಎ-37/ ಎಫ್- 551 ನೇದ್ದರ ಚಾಲಕನು ತನ್ನ ಬಸ್ ನ್ನು
ಹೊಸಪೇಟೆ ಕಡೆಯಿಂದ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ವಿರುಪಾಕ್ಷಗೌಡ
ಈತನಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದು, ಇದರಿಂದ ವಿರುಪಾಕ್ಷಗೌಡ ಈತನಿಗೆ ಎರಡು ಕಾಲುಗಳಿಗೆ, ತಲೆಯ ಹತ್ತಿರ ಭಾರಿ ರಕ್ತಗಾಯವಾಗಿದ್ದು ಇರುತ್ತದೆ ಅಂತಾ
ಮುಂತಾಗಿ ಫಿರ್ಯಾದಿ ಸಾರಾಂಶ ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ. ನಂ. 282/2015
ಕಲಂ. 504, 506 ಸಹಿತ 34 ಐ.ಪಿ.ಸಿ:.
ದಿನಾಂಕ: 09-12-2015 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಣ್ಣಹನುಮಂತಪ್ಪ
ತಂದೆ ಫಕ್ಕೀರಪ್ಪ ಚಳ್ಳಾರಿ, ವಯಸ್ಸು 70 ವರ್ಷ, ಜಾ: ಉಪ್ಪಾರ, ಉ: ಒಕ್ಕಲುತನ, ಸಾ:
ವಡ್ಡರ ಓಣಿ, ಗಂಗಾವತಿ ಇವರು ಠಾಣೆಗೆ ಹಾಜರಾಗಿ ಒಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರಿಗೆ ರೈಲ್ವೆ ಹಳಿಗೆ ಹೊಲ ನೀಡಿದ್ದಕ್ಕಾಗಿ 47
ಲಕ್ಷ ಬಂದಿದ್ದು ಅವುಗಳನ್ನು ತನ್ನಿಬ್ಬರೂ ಗಂಡು ಮಕ್ಕಳಿಗೆ ಸಮವಾಗಿ ಹಂಚಿದ್ದು, 7 ಲಕ್ಷ ರೂಪಾಯಿಗಳನ್ನು ತನಗಾಗಿ
ಇಟ್ಟುಕೊಂಡಿದ್ದು ಇದೆ. ಇದೇ ವಿಷಯವಾಗಿ ಫಿರ್ಯಾದಿದಾರರ ಕಿರಿಯ ಮಗನಾದ ಕೃಷ್ಣಪ್ಪ ಇವನು ಆಗಾಗ ಬಂದು ಫಿರ್ಯಾದಿಯೊಂದಿಗೆ ಹಾಗೂ ಅವರ ಹಿರಿಯ ಮಗ ಮತ್ತು ಮನೆಯವರೊಂದಿಗೆ ಜಗಳಾ ಮಾಡಿಕೊಳ್ಳುತ್ತಿದ್ದುದು ಇದೆ. ಆ ಕಾರಣಕ್ಕಾಗಿ ನಿನ್ನೆ
ದಿನಾಂಕ 08-12-2015 ರಂದು ಕೃಷ್ಣಪ್ಪ ಹಾಗೂ ಅವನ ಹೆಂಡತಿ ಕಾಮಾಕ್ಷಮ್ಮ ಇಬ್ಬರ ಮೇಲೆ ಕೇಸ್
ಆಗಿದ್ದು, ಸದರಿ ಕೇಸ್ ದಲ್ಲಿ ಇಬ್ಬರನ್ನೂ ಪೊಲೀಸರು ಇಂದು ಅರೆಸ್ಟ್ ಮಾಡಿ ಕೋರ್ಟಿಗೆ
ಕಳುಹಿಸಿದ್ದರು. ನಂತರ ಜಾಮೀನು ಪಡೆದುಕೊಂಡು ಬಂದ ಆರೋಪಿತರು ಇಂದು ದಿನಾಂಕ: 09-12-2015 ರಂದು ಸಂಜೆ 4-00
ಗಂಟೆಯ ಸುಮಾರಿಗೆ ತನ್ನನ್ನು ನಿನ್ನೆಯ ಕೇಸ್ ದಲ್ಲಿ ಪೊಲೀಸರು ದಸ್ತಗಿರಿ ಮಾಡಿ ಕಳುಹಿಸಿದ್ದಕ್ಕೆ
ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿದ್ದ ಫಿರ್ಯಾದಿಯನ್ನು
ಪಡೆದುಕೊಂಡಿದ್ದು ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಆದೇಶವನ್ನು
ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
0 comments:
Post a Comment