1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 254/2015
ಕಲಂ. 78(3) Karnataka Police Act.
ದಿನಾಂಕ- 08-12-2015 ರಂದು ಸಾಯಂಕಾಲ 07-30 ಗಂಟೆಯ
ಸುಮಾರಿಗೆ ಠಾಣಾ ವ್ಯಾಪ್ತಿಯ ಹುಳ್ಕಿಹಾಳ ಗ್ರಾಮದ ಶಾಲೆಯ ಹತ್ತಿರ ಸಾರ್ವಜನಿಕರ
ಸ್ಥಳದಲ್ಲಿ ಆರೋಪಿ ನಂ 1 ಮತ್ತು 2 ರವರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ ಕಾರಟಗಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ
ಮಾಡಲು ಎ-2 ಓಡಿಹೋಗಿದ್ದದು
ಎ-1 ಸಿಕ್ಕಿಬಿದ್ದಿರುತ್ತಾನೆ
ಸಿಕ್ಕಿಬಿದ್ದ ಆರೋಪಿತನಿಂದ ಮಟ್ಕಾ ಜೂಜಾಟದ ನಗದು ಹಣ ರೂ. 1010/- ಗಳನ್ನು ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ
ಜಪ್ತ ಮಾಡಿಕೊಂಡಿದ್ದು ಸದರಿ ಸಿಕ್ಕಿ ಬಿದ್ದದ ಆರೋಪಿತನಿಗೆ ತಾನು ಬರೆದ ಪಟ್ಟಿಯನ್ನು ಮತ್ತು
ಹಣವನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಲಾಗಿ ಆರೋಪಿತನು ತಾನು ಬರೆದ ಮಟ್ಕಾ ನಂಬರಿನ ಪಟ್ಟಿ
ಮತ್ತು ಹಣವನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ವರದಿ ಮತ್ತು ಮೂಲ ಪಂಚನಾಮೆಯನ್ನು
ಹಾಜರು ಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಸಂಚಾರಿ
ಪೊಲೀಸ್ ಠಾಣೆ ಕೊಪ್ಪಳ ಗುನ್ನೆ. ನಂ. 64/2015 ಕಲಂ. 279, 338 ಐ.ಪಿ.ಸಿ:.
ದಿನಾಂಕ 08-12-2015 ರಂದು ಬೆಳಿಗ್ಗೆ 11-20
ಗಂಟೆಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ
ಕೂಡಲೇ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ಚಿಕಿತ್ಸೆ ಕೊಡಿಸುತ್ತಿರುವ
ಫಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು
ದಿನಾಂಕ 08-12-2015 ರಂದು ಬೆಳಿಗ್ಗೆ 10-30
ಗಂಟೆಗೆ ಫಿರ್ಯಾದಿ ಮತ್ತು ಅವರ ತಾಯಿ ದ್ಯಾಮಮ್ಮ ಇಬ್ಬರೂ ಉಪಹಾರ ಮಾಡಲು ಕೊಪ್ಪಳದ ಕಿಮ್ಸ
ಸ್ಪತ್ರೆಯ ಮುಂದೆ ಇರುವ ಹೋಟೆಲ್ ಗೆ ಹೋಗಿ ಅಲ್ಲಿ ಉಪಹಾರವನ್ನು ಮಾಡಿ ವಾಪಾಸ ಆಸ್ಪತ್ರೆಗೆ
ಹೋಗುವಾಗ ಫಿರ್ಯಾದಿಯ ತಾಯಿ ದ್ಯಾಮಮ್ಮ ಈಕೆಯು ಮೂತ್ರ ವಿಸರ್ಜನೆ ಮಾಡಲು ಆಸ್ಪತ್ರೆಯ ಮುಂದೆ ಇರುವ
ಹೊಸಪೇಟೆ-ಗದಗ ರಸ್ತೆಯನ್ನು ದಾಟಿ ಹೋಗಿ ಮೂತ್ರ ವಿಸರ್ಜನೆಯನ್ನು ಮಾಡಿ ವಾಪಾಸ ರಸ್ತೆಯ ನ್ನು
ದಾಟಿ ಬರುವಾಗ ಕೊಪ್ಪಳದ ಕಡೆಯಿಂದ ಮೋಟಾರ್ ಸೈಕಲ್ ನಂಬರ. KA-22/Y-1402 ನೆದ್ದರ
ಸವಾರ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಾಯಿಗೆ
ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಫಿರ್ಯಾದಿಯ ತಾಯಿಯ ತಲೆಯ ಹಿಂದೆ ಬಾರಿ ರಕ್ತಗಾಯವಾಗಿ ಆಕೆಯು
ಸರಿಯಾಗಿ ಮಾತನಾಡುತ್ತಿಲ್ಲ ಅಂತಾ ಮುಂತಾಗಿದ್ದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಪ್ರಕರಣವನ್ನು
ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ. ನಂ. 254/2015
ಕಲಂ. 279, 337 ಐ.ಪಿ.ಸಿ:.
ದಿನಾಂಕ 08-12-2015 ರಂದು ಬೆಳಿಗ್ಗೆ 08-00 ಗಮಟೆ ಸುಮರಿಗೆ ಕುಷ್ಟಗಿ-ಹೊಸಪೇಟೆ ಎನ್.ಹೆಚ್.13 ಒನ್ ವೇ ರಸ್ತೆಯ ಮೆಲೆ ಆರೋಪಿತನು ತನ್ನ ಲಾರಿ ನಂ .ಸಿಜಿ.04/ಜೆ.ಎ.0313 ನೇದ್ದನ್ನು ಶಹಪೂರ ಕ್ರಾಸ ಹತ್ತಿರ ಅತೀ ವೆಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಬ್ರೇಕನ್ನು ಗಮನಿಸದೆ ಬಂದು ಒಮ್ಮೆಲೆ ಲಾರಿಯನ್ನು ಎಡಕ್ಕೆ ತೆಗೆದುಕೊಂಡಿದ್ದರಿಂದ ಲಾರಿಯು ರಸ್ತೆಯ ಪಕ್ಕದ ತೆಗ್ಗಿನಲ್ಲಿ ಹೋಗಿ ಬಿದ್ದಿದ್ದರಿಂದ ಆರೊಪಿತನಿಗೆ ಕಾಲಿಗೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಮಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
4) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ. ನಂ. 255/2015
ಕಲಂ. 279, 337 ಐ.ಪಿ.ಸಿ:.
ದಿನಾಂಕ. 08-12-2015 ರಂದು 2-45 ಪಿ.ಎಂ.ಕ್ಕೆ
ಫಿರ್ಯಾದಿದಾರರು ಮತ್ತು ಹನಮಂತಪ್ಪ, ದಾದಾಪೀರ, ಸಾಗರಪ್ಪ, ಮುತ್ತಣ್ಣ, ಕನಕಪ್ಪ, ಮಾರುತಿ ಇವರು ಹೊಸ ಟ್ರ್ಯಾಕ್ಟರದಲ್ಲಿ ಹಣವಾಳದಿಂದ ನೆಲ್ಲು ಹುಲ್ಲು
ಲೋಡ ಮಾಡಿಕೊಂಡು ಕಲಿಕೇರಿಗೆ ಹೋಗುತ್ತಿರುವಾಗ ಹೊಸಪೇಟೆ ಕುಷ್ಟಗಿ ಒನ್ ವೇ ಎನ್.ಹೆಚ್. 13 ರಸ್ತೆಯ
ಮೇಲೆ ಬೂದಗುಂಪಾ ಕ್ರಾಸದಿಂದ ಕೂಕನಪಳ್ಳಿಗೆ ಹೋಗುತ್ತಿರುವಾಗ ಒಂದು ಸಣ್ಣ ಬ್ರಿಡ್ಜ ಹತ್ತಿರ
ಟ್ರ್ಯಾಕ್ಟರ ಹಿಂದೆ ಒಂದು ಲಾರಿ ಚಾಲಕನು ಲಾರಿಯನ್ನು ಅತಿವೇಗವಾಗಿ ಹಾಗೂ ನಿರ್ಲಕ್ಷತನನಿಂದ
ಚಲಾಯಿಸಿಕೊಂಡು ಬಂದು ಟ್ರ್ಯಾಕ್ಟರ ಹಿಂದೆ ಟ್ರೇಲರಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿ ಲಾರಿ
ನಿಲ್ಲಸದೇ ಹೋಗಿದ್ದು, ಟ್ರ್ಯಾಕ್ಟರ ಟ್ರೇಲರ ಪಲ್ಟಿಯಾಗಿ ಬಿದ್ದು ಹನಮಂತಪ್ಪ, ಮಾರುತಿ, ಕನಕಪ್ಪ
ಮುತ್ತಣ್ಣ ಇವರಿಗೆ ಗಾಯ ಪೆಟ್ಟುಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ. ನಂ. 256/2015
ಕಲಂ. 457, 380 ಐ.ಪಿ.ಸಿ:.
ದಿನಾಂಕ: 08-12-2015 ರಂದು ರಾತ್ರಿ 7-20 ಗಂಟೆಗೆ ಪಿರ್ಯದಿದಾರರು
ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ,
ದಿನಾಂಕ: 07-12-2015 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 08-12-2015 ರ ಬೆಳಗಿನ 6-00 ಗಂಟೆಯ
ನಡುವಿನ ಅವಧಿಯಲ್ಲಿ ಕರ್ಕಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಕಂಪ್ಯೂಟರ ಕೊಠಡಿಯ ಬಾಗಿಲಿನ ಬೀಗವನ್ನು
ಯಾರೋ ಕಳ್ಳರು ಮುರಿದು ಒಳ ಪ್ರವೇಶ ಮಾಡಿ ಕೊಠಡಿಯಲ್ಲಿದ್ದ 1] ಯು.ಪಿ.ಎಸ್.ನ 3 ಬ್ಯಾಟರಿಗಳು
ಅಂ.ಕಿ 36000-00 ರೂ. 2] 2 ಧ್ವನಿವರ್ಧಕಗಳು ಅಂ.ಕಿ. 6000-00 ರೂ. 3]
1 ಅಂಪ್ಲಿಪೈಯರ ಅಂ.ಕಿ. 3000-00 ರೂ. ಮತ್ತು 4] 1 ಮೈಕ ಅಂ.ಕಿ. 1000-00
ರೂ. ಒಟ್ಟು 46000-00 ರೂ. ಬೆಲೆ ಬಾಳುವ ವಸ್ತುಗಳು ಯಾರೋ
ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ
ಗುನ್ನೆ ನಂ. 256/2015 ಕಲಂ 457,380 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
0 comments:
Post a Comment