Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, December 11, 2015

1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 242/2015  ಕಲಂ 406, 420, 465, 468, 471  ಐ.ಪಿ.ಸಿ:.  
ಸನ್ 2010 ನೇ ಸಾಲಿನಲ್ಲಿ ಫಿರ್ಯಾದಿದಾರರಿಂದ 97500/- ರೂಪಾಯಿಯನ್ನು ಪಡೆದುಕೊಂಡು. ಹಿರಿಯೂರು ತಾಲೂಕಿನ ಸೋಮಸಾಗರ ಹಳ್ಳಿ ಎಂಬ ಗ್ರಾಮದಲ್ಲಿ ಸರ್ವೆ ನಂ. 29/5 ನೇದ್ದರಲ್ಲಿ ನಿವೇಶನಗಳನ್ನು ಮಾಡಿ. ನಿವೇಶನ ನಂ. 41 ಮತ್ತು 42 ನೇದ್ದವುಗಳನ್ನು ಹಂಚಿಕೆ ಮಾಡುತ್ತೇನೆ ಅಂತಾ ಆರೋಪಿತನು ಫಿರ್ಯಾದಿದಾರರನ್ನು ನಂಬಿಸಿ. ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ. ಇಲ್ಲಿಯವರೆಗೂ ಪ್ಲಾಟನ್ನು ಕೊಡದೆ ಹಾಗೂ ಹಣವನ್ನು ಸಹ ವಾಪಸ್ ಕೊಡದೆ ನಂಬಿಕೆ ದ್ರೋಹ ಮಾಡಿ. ಮೋಸ ಮಾಡಿದ್ದು ಇರುತ್ತದೆ. ಕಾರಣ ಸದರಿ ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸ್ವೀಕ್ರತಗೊಂಡಿದ್ದರಿಂದ ಪ್ರಕರಣ ದಾಖಲಿಸಿ. ತನಿಖೆ ಕೈಗೊಂಡಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 128/2015  ಕಲಂ. 107 ಸಿ.ಆರ್.ಪಿ.ಸಿ:.

ವಿನಾಯಕ ಪಿ,ಎಸ್.ಐ ಯಲಬುರ್ಗಾ ಪೊಲೀಸ್ ಠಾಣೆ ಇದ್ದು  ಇಂದು ದಿನಾಂಕ: 10-12-2015 ರಂದು ನಾನು ಠಾಣಾ ವ್ಯಾಪ್ತಿಯ ಚಿಕ್ಕಮ್ಯಾಗೇರಿ, ಗೇದಗೇರಿ, ಕುದ್ರಿಕೊಟಗಿ, ತುಮ್ಮರ ಗುದ್ದಿ ಹೊಸಳ್ಳಿ ಹಾಗೂ ಮುಧೊಳ ಗ್ರಾಮಗಳಿಗೆ ಬೇಟಿ ನೀಡಿದ್ದು  ಸಾಯಂಕಾಲ 6 ಗಂಟೆಗೆ ನಾನು ಮುಧೋಳ ಗ್ರಾಮದಲ್ಲಿ ಮುಂಬರುವ ವಿಧಾನ ಪರಿಷತ್ ಮತ್ತು ತಾಲೂಕಾ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಚುನಾವಣೆ ನಿಮಿತ್ಯ ಮಾಹಿತಿ ಸಂಗ್ರಹಿಸುತ್ತಿರುವಾಗ ಸ್ಥಾನಿಕವಾಗಿ ವಿಚಾರ ಮಾಡಲಾಗಿ ಯಲಬುರ್ಗಾ ಠಾಣೆಯ ರೌಡಿ ಶೀಟ ದಾರರಾದ  1] ಹುಸೇನಸಾಬ ತಂದೆ ರೇಹಮಾನಸಾಬ ಹಿರೇಮನಿ : 60 ವರ್ಷ ಜಾತಿ: ಮುಸ್ಲಿಂ : ಒಕ್ಕಲುತನ 2] ಸೈದುಸಾಬ ತಂದೆ ಹುಸೇನಸಾಬ ಹಿರೇಮನಿ : 50 ವರ್ಷ ಜಾತಿ: ಮುಸ್ಲಿಂ : ಒಕ್ಕಲುತನ 3] ಹುಸೇನಸಾಬ ತಂದೆ ಇಮಾಮಸಾಬ ಹಿರೇಮನಿ : 34 ವರ್ಷ ಜಾತಿ: ಮುಸ್ಲಿಂ : ಒಕ್ಕಲುತನ ಇವರ ವಿರುದ್ಧ  ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ  ಗುನ್ನೆ ನಂ: 21/1999 ಕಲಂ 147, 148, 323, 324, 302, 504, 506 ಸಹಿತ 149 ಐ.ಪಿಸಿ  ಹಾಗೂ  ಗುನ್ನೆ ನಂ 28/2000 ಕಲಂ  143, 147, 148, 353, 323, 326 ಸಹಿತ  149 ಐ.ಪಿ.ಸಿ ಹಾಗೂ ಗುನ್ನೆ ನಂ 46/2015 ಕಲಂ 107 ಸಿ.ಆರ್.ಪಿ.ಸಿ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ. ಹಾಗೂ 4] ಈಶಪ್ಪ ತಂದೆ ಶಿವಲಿಂಗಪ್ಪ ಕಮತರ : 50 ವರ್ಷ ಜಾತಿ: ಲಿಂಗಾಯತ : ಒಕ್ಕಲುತನ ಸಾ: ಮುಧೋಳ ಈತನ ವಿರುದ್ಧ  ಗುನ್ನೆ ನಂ 73/95 ಕಲಂ: 110 () & (ಜಿ) ಸಿ.ಆರ್,ಪಿ.ಸಿ, ಗುನ್ನೆ ನಂ. 25/1998 ಕಲಂ: 307 .ಪಿ.ಸಿ. ಹಾಗೂ ಗುನ್ನೆ ನಂ. 32/1999 ಕಲಂ: 341,323,504,506 .ಪಿ.ಸಿ.ಹಾಗೂ 46/2015 ಕಲಂ 107 ಸಿ.ಆರ್,ಪಿ.ಸಿ ಪ್ರಕರಣಗಳು ಧಾಖಲಾಗಿದ್ದು ಇರುತ್ತದೆ  ಮುಂಬರುವ ವಿಧಾನ ಪರಿಷತ್  ಚುನಾವಣೆ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಮತಯಾಚನೆಯ ನಿಮಿತ್ಯ  ಯಲಬುರ್ಗಾ  ಠಾಣಾ ಸರಹದ್ದಿನಲ್ಲಿ ಸಭೆ, ಸಮಾರಂಭ & ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ರಾಜಕೀಯ ಮುಖ್ಯ ಗಣ್ಯರು, ಮುಖಂಡರು ಸದರ ಸಭೆ ಸಮಾರಂಭಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭದಲ್ಲಿ ಯಲಬುರ್ಗಾ ಪೊಲೀಸ್ ಠಾಣಾ ಹದ್ದಿಯ ಮೇಲ್ಕಂಡ ರೌಡಿಶೀಟ್ ದಾರರು ತಮ್ಮ ಸಹಚರರೊಂದಿಗೆ ತಮ್ಮ ರೌಡಿ ಚಟುವಟಿಕೆಯನ್ನು ಮುಂದುವರೆಸಿ ಸಭೆ ಸಮಾರಂಭದಲ್ಲಿ ಹಾಗೂ ಇತರೇ ಸಂದರ್ಭಗಳಲ್ಲಿ ಯಾವುದೇ ರೂಪದಲ್ಲಿ ಅಹಿತಕರ ಘಟನೆ ಜರುಗುವಂತೆ ಮಾಡಿ ಅದರಿಂದ ಶಾಂತಿಭಂಗ ಮಾಡುವ ಸಾಧ್ಯತೆ ಕಂಡು ಬರುತ್ತಿರುವುದರಿಂದ ಸದರಿಯವರಿಂದ ಶಾಂತಿ ಪಾಲನೆಗಾಗಿ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಬೇಕೆಂದು ಮಾನ್ಯರಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 128/2015  ಕಲಂ: 107  ಸಿ.ಆರ್.ಪಿ.ಸಿ. ಅಡಿಯಲ್ಲಿ ವರದಿಯನ್ನು ಸಲ್ಲಿಸಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008