1) ತಾವರಗೇರಾ
ಪೊಲೀಸ್ ಠಾಣೆ ಗುನ್ನೆ ನಂ. 115/2015 ಕಲಂ 279, 304(ಎ) ಐ.ಪಿ.ಸಿ:.
ದಿನಾಂಕ 11-12-2015 ರಂದು
ಅಮವಾಸ್ಸೆ ಇದ್ದದ್ದರಿಂದ ಫಿರ್ಯಾದಿ ಮತ್ತು ಆಕೆಯ ಗಂಡ ಚಂದ್ರಶೇಖರ ಕೂಡಿ ಹಿರೋ ಸ್ಪ್ಲಂಡರ ಪ್ರೋ ಮೋಟರ
ಸೈಕಲ್ ನಂ: ಕೆ.ಎ-36/ ಇ-ಹೆಚ್-3827 ನೇದ್ದನ್ನು ತೆಗೆದುಕೊಂಡು ಮೋಟರ ಸೈಕಲನ್ನು ಮೃತನು ನಡೆಸುತ್ತಿದ್ದು
ಫಿರ್ಯಾದಿ ಹಿಂದುಗಡೆ ಕುಳಿತುಕೊಂಡಿದ್ದು ಮುಂಜಾನೆ 10-00 ಗಂಟೆಗೆ ನಂಜಲದಿನ್ನಿ ಗ್ರಾಮದಿಂದ ತಾವರಗೇರ
ಪಟ್ಟಣದ ಮುಖಾಂತರ ಛತ್ರ ಗ್ರಾಮಕ್ಕೆ ಹೋಗಿ ಅಲ್ಲಿ ಹನಮಂತ ದೇವರಿಗೆ ಪೂಜೆ ಮಾಡಿಸಿಕೊಂಡು ವಾಪಸ್ ಮದ್ಯಾಹ್ನ
12-30 ಗಂಟೆಗೆ ತಾವರಗೇರಾಕ್ಕೆ ಬಂದು ನಂತರ ವೀರಾಪೂರ ಗ್ರಾಮದ ಶ್ಯಾಮೀದಲಿ ದರ್ಗಾಕ್ಕೆ ಹೋಗುವ ಕುರಿತು
ತಾವರಗೇರ ಗ್ರಾಮದಲ್ಲಿ ಸಕ್ಕರೆ, ಕಾಯಿ, ಕರ್ಪುರ ತೆಗೆದುಕೊಂಡು ವೀರಾಪೂರ ಗ್ರಾಮಕ್ಕೆ ತಾವರಗೇರ ಮುದಗಲ್
ರಸ್ತೆಯಲ್ಲಿ ಮೃತನು ಮೋಟರ ಸೈಕಲನ್ನು ರಸ್ತೆಯ ಎಡಗಡೆ ನಿಧಾನವಾಗಿ ನಡೆಯಿಸಿಕೊಂಡು ಮದ್ಯಾಹ್ನ
1-00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಅದೇ ವೇಳೆಗೆ ಎದುರುಗಡೆಯಿಂದ ಅಂದರೆ ಮುದಗಲ ಕಡೆಯಿಂದ ಒಂದು
ಟೊಯೊಟೊ ಇನ್ನೊವಾ ವಾಹನ ಚಾಲಕನು ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು
ಜೋರಾಗಿ ಮೃತನ ಮೋಟರ ಸೈಕಲಗೆ ಟಕ್ಕರ ಕೊಟ್ಟು ಅಪಘಾತಪಡಿಸಿದನು ಅಪಘಾತದಿಂದ ಮೋಟರ ಸೈಕಲ ಸಮೇತ ಫಿರ್ಯಾದಿ
ಮತ್ತು ಮೃತ ಚಂದ್ರಶೇಖರ ಇಬ್ಬರೂ ಬಿದ್ದಿದ್ದು ಫಿರ್ಯಾದಿಗೆ ಯಾವದೇ ಗಾಯ ವಗೈರೆ ಆಗಿರಲಿಲ್ಲ ನಂತರ
ಚಂದ್ರಶೇಖರ ಈತನಿಗೆ ಬಲಭಾಗದ ಮುಖಕ್ಕೆ ಮೂಗಿಗೆ, ಬಾಯಿಗೆ ಬಲಕಣ್ಣಿಗೆ ಭಾರಿ ರಕ್ತ ಗಾಯವಾಗಿ ಮಾಂಸ
ಜಜ್ಜಿ ರಕ್ತ ಬಂದಿದ್ದು ಮತ್ತು ಬಲಗಡೆ ಕುತ್ತಿಗೆಗೆ ಮತ್ತು ಬಲಕಿವಿ ಹರಿದು ಭಾರಿ ರಕ್ತ ಗಾಯವಾಗಿದ್ದು
ಇತ್ತು ಮಾತನಾಡಿಸಿದರೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ಅಪಘಾತಪಡಿಸಿದ ಇನ್ನೋವಾ ವಾಹನ ನೋಡಲಾಗಿ
ಅಲ್ಲೆ ಸ್ವಲ್ಪ ರಸ್ತೆಯ ಪಕ್ಕದಲ್ಲಿ ನಿಂತಿದ್ದು ಅದರ ನಂಬರ ಕೆ.ಎ-56 /ಎಂ-2777 ಅಂತಾ ಇದ್ದು ಅದರ
ಚಾಲಕನ ಹೆಸರು ಉಮೇಶ ತಂದಿ ಶಂಕರಗೌಡ ಪೊಲೀಸ್ ಪಾಟೀಲ ಸಾ: ಸೈದಾಪೂರ ಅಂತಾ ಇದ್ದು ಸ್ಥಳಕ್ಕೆ 108 ವಾಹನ
ಬಂದಿದ್ದು ಅದರಲ್ಲಿ ಚಂದ್ರಶೇಖರನಿಗೆ ಹಾಕಿಕೊಂಡು ತಾವರಗೇರಾಕ್ಕೆ ಬಂದು ಅಲ್ಲಿಂದ ಹೆಚ್ಚಿನ ಇಲಾಜ
ಕುರಿತು ಕುಷ್ಟಗಿಗೆ ಕರೆದುಕೊಂಡು ಬರುತ್ತಿರುವಾಗ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಮಾರ್ಗದ ಮದ್ಯದಲ್ಲಿ
ಮೃತಪಟ್ಟಿದ್ದು ಇರುತ್ತದೆ.
2) ತಾವರಗೇರಾ
ಪೊಲೀಸ್ ಠಾಣೆ ಗುನ್ನೆ ನಂ. 116/2015 ಕಲಂ 279, 337, 338, 304(ಎ) ಐ.ಪಿ.ಸಿ:.
ದಿನಾಂಕ 11/12/2015 ರಂದು
ನಾನು ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿದ್ದಾಗ ಸಂಜೆ 07-15 ಗಂಟೆಗೆ ವೈದ್ಯಾಧಿಕಾರಿಗಳು ಎಂ.ಎಲ್.ಸಿ
ಮಾಹಿತಿ ನೀಡಿದ್ದು ಆಗ ಆಸ್ಪತ್ರೆಯಲ್ಲಿ ಫಿರ್ಯಾದಿ ಬಸವರಾಜ ತಂದೆ ಕಳಕಪ್ಪ ಪಲಾಕಿ ವಯ: 20 ವರ್ಷ,
ಜಾತಿ: ಚೆಲುವಾದಿ, ಉ: ಒಕ್ಕಲುತನ, ಸಾ: ಶ್ರೀನಿವಾಸ ಕ್ಯಾಂಪ ತುರುವಿಹಾಳ ಹತ್ತಿರ ತಾ: ಸಿಂಧನೂರು
ರವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಈ ದಿನ ಸಂಜೆ 05-00 ಗಂಟೆಗೆ ತಮ್ಮ ತಂದೆಯ ಪರಿಚಿತರಾದ
ನಿರುಪಾದಿ ತಂದೆ ಅಮರಪ್ಪ ಚೆಲುವಾದಿ ವಯ: 40 ವರ್ಷ, ಸಾ: ಸಿಂಧನೂರು ಇವರು ತಮ್ಮ ಮೋಟಾರು ಸೈಕಲ್ ನಂ:
ಕೆ.ಎ-36/ಇ.ಜಿ-5463 ಹಿರೋ ಹೆಚ್.ಎಫ್. ಡಿಲಕ್ಸ್ ನೇದ್ದರ ಮೇಲೆ ತಾವರಗೇರಾ ಕಡೆಗೆ ಹೋಗುತ್ತಿದ್ದಾಗ,
ತಾವರಗೇರಾ ಇನ್ನೂ 2 ಕಿ.ಮೀ ದೂರ ಇದ್ದಾಗ ಒಬ್ಬ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಚಾಲಕ ತಾವರಗೇರಾ ಕಡೆಯಿಂದ
ಅತಿವೇಗ ಮತ್ತು ಅಲಕ್ಷತನದಿಂದ ಟ್ರ್ಯಾಕ್ಟರ್ನ್ನು ನಡೆಯಿಸಿಕೊಂಡು ಬಂದು ಸೈಕಲ್ ಮೋಟಾರುಕ್ಕೆ ಟಕ್ಕರು
ಮಾಡಿದ್ದಿರಿಂದ, ಸೈಕಲ್ ಮೋಟಾರು ನಡೆಸುತ್ತಿದ್ದ ನಿರುಪಾದಿ ಚೆಲುವಾದಿ ಈತನು ತೀವ್ರ ಸ್ವರೂಪದ ಗಾಯಗಳನ್ನು
ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಾಗೂ ಫಿರ್ಯಾದಿ ತಂದೆ ಕಳಕಪ್ಪ ಪಲಾಕಿ ವಯ: 50 ವರ್ಷ ಈತನಿಗೆ
ಬಲಗಾಲ ಮೋಣಕಾಲಿಗೆ ತೀವ್ರ ಸ್ವರೂಪದ ಒಳಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಮತ್ತು
ಟ್ರ್ಯಾಕ್ಟರ್ ಇಂಜೆನ್ನ ಮೇಲೆ ಬಿಳಿ ಹಾಳೆಯಲ್ಲಿ ಕೆ.ಎ-37/ಟಿ.ಎ-9646 ಅಂತಾ ಬರೆದಿದ್ದು ಅದೆ. ಟ್ರ್ಯಾಲಿಗೆ
ನಂಬರ್ ಇರುವುದಿಲ್ಲ. ಟ್ರ್ಯಾಕ್ಟರ್ ಚಾಲಕ ಅಪಘಾತಪಡಿಸಿದ ನಂತರ ವಾಹನವನ್ನು ಅಲ್ಲೆ ಬಿಟ್ಟು ಓಡಿಹೋಗಿದ್ದು
ಅಂತಾ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದೆ.
3) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 184/2015
ಕಲಂ 279, 337, 304(ಎ) ಐ.ಪಿ.ಸಿ:.
ದಿನಾಂಕ 11-12-2015 ರಂದು
ರಾತ್ರಿ 8-30 ಗಂಟೆಗೆ ಸರಕಾರಿ ಆಸ್ಪತ್ರೆ ತಾವರಗೇರಾದಿಂದ ರಸ್ತೆ ಅಪಘಾತವಾಗಿ ಮೃತಪಟ್ಟ ಬಗ್ಗೆ ಎಂ.ಎಲ್.ಸಿ.ಬಂದ
ಮೇರೆಗೆ ನಾನು ಕೂಡಲೇ ಆಸ್ಪತ್ರೆಗೆ ಬೇಟಿ ಗಾಯಾಳುಗಳ ಪೈಕಿ ಶಂಕ್ರಪ್ಪ ತಂದೆ ನಾಗಪ್ಪ ಮಾದಿನಾಳ ಇವರ
ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ದಿನಾಂಕ
12-12-2015 ರಂದು ಶ್ರೀ ಮಾರುತೇಶ್ವರ್ ಜಾತ್ರಾ ಪ್ರಯುಕ್ತ ದೇವಸ್ಥಾನದ ಮೈಕ ಸೆಟ್ ಕೆಟ್ಟಿದ್ದರಿಂದ
ಅದನ್ನು ರಿಪೇರಿ ಮಾಡಿಸಿಕೊಂಡು ಬರಲು ಇಂದು ದಿನಾಂಕ 11-12-2015 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ
ನಾನು, ನಮ್ಮ ಗ್ರಾಮದ ಯಂಕಪ್ಪ ತಂದೆ ಸಣ್ಣ ರಾಮಣ್ಣ ಕಲಮಂಗಿ, ರಾಮಣ್ಣ ತಂದೆ ಗುಂಡಪ್ಪ ತಳವಾರ ಇವರೊಂದಿಗೆ
ಬಜಾಜ ಡಿಸ್ಕವರಿ ಮೋ.ಸೈ ನಂ.ಕೆಎ-37/ಆರ್-8351 ನೇದ್ದನ್ನು ತೆಗೆದುಕೊಂಡು ಕನಕಗಿರಿ ಗ್ರಾಮಕ್ಕೆ ಹೋಗಿ
ಅಲ್ಲಿ ಮೈಕ್ಸೆಟ್ ರಿಪೇರಿ ಮಾಡಿಸಿಕೊಂಡು ಸಂಜೆ 6-30 ಗಂಟೆಯ ಸುಮಾರಿಗೆ ವಾಪಸ್ ನಮ್ಮೂರಿಗೆ ನಾವು
ತಂದಿದ್ದ ಮೋ.ಸೈ. ಮೇಲೆ ಕನಕಗಿರಿ-ಹುಲಿಹೈದರ ರಸ್ತೆಯ ಮೇಲೆ ಹೋಗುತ್ತಿದ್ದೇವು. ಮೋ.ಸೈ.ನ್ನು ಯಂಕಪ್ಪ
ಕಲಮಂಗಿ ಈತನು ನಡೆಸುತ್ತಿದ್ದು, ನಾನು ನಡುವೆ ಕುಳಿತುಕೊಂಡಿದ್ದೆನು,. ನನ್ನ ಹಿಂದೆ ರಾಮಣ್ಣ್ಣ ತಂದೆ
ಗುಂಡಪ್ಪ ತಳವಾರ ಈತನು ಕುಳಿತುಕೊಂಡಿದ್ದನು. ಯಂಕಪ್ಪ ಕಲಮಂಗಿ ಈತನು ನಡೆಸುತ್ತಿದ್ದ ಬಜಾಜ ಡಿಸ್ಕವರಿ
ಮೋ.ಸೈ. ನಂ.ಕೆಎ-37/ಆರ್-8351 ನೇದ್ದನ್ನು ಅತೀವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹುಲಿಹೈದರ ಕಡೆ
ಹೋಗುತ್ತಾ ವರ್ಣಖೇಡಾ ಕ್ರಾಸ್ ಹತ್ತಿರ ಅಂಬಣ್ಣ ಇವರ ಕಟ್ಟಿಗೆ ಸಾಮೀಲ್ ಹತ್ತಿರ ಸಂಜೆ 7-00 ಗಂಟೆಯ
ಸುಮಾರಿಗೆ ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ದನಕರುಗಳು ಒಮ್ಮಿಂದೊಮ್ಮೇಲೆ ಚಿನ್ನಾಟ
ತೆಗೆದಿದ್ದರಿಂದ ಯಂಕಣ್ಣನು ತಾನು ನಡೆಸುತ್ತಿದ್ದ ಮೋ.ಸೈ.ನ್ನು ನಿಯಂತ್ರಣ ಮಾಡಲಾಗದೇ ಅಲಕ್ಷತನದಿಂದ ಅತೀ ವೇಗವಾಗಿ ನಡೆಸುತ್ತಾ ಒಮ್ಮಿಂದೊಮ್ಮೇಲೆ
ಹಿಂದಕ್ಕೆ ಕೆಡವಿ ಪಲ್ಟಿ ಮಾಡಿದನು. ಇದರಿಂದ ಮೊ.ಸೈ.ನ ಪೂತರ್ಿ ಹಿಂದೆ ಕುಳಿತ ರಾಮಣ್ಣ ತಂದೆ ಗುಂಡಪ್ಪ
ತಳವಾರ ಈತನಿಗೆ ತಲೆಯ ಹಿಂದೆ ಪೆಟ್ಟಾಗಿ ಭಾರಿ ರಕ್ತ ಸೋರಿದ್ದು, ಮೂಗು ಮತ್ತು ಬಾಯಿಂದ ರಕ್ತ ಬಂದಿದ್ದು,
ಬಲ ಕಿವಿಗೆ ರಕ್ತ ಗಾಯವಾಗಿದ್ದು, ಬಲಗಾಲ ಪಾದದ ಮೇಲೆ ತೆರಚಿದ ಗಾಯವಾಗಿದ್ದು ಮತ್ತು ನನಗೆ ಎಡಗೈ ಮೊಣಕೈ,
ಬುಜಕ್ಕೆ ತೆರಚಿದ ಗಾಯವಾಗಿದ್ದು, ಬಲ ಮೊಣಕಾಲದ ಮೇಲೆ ಕೆತ್ತಿದ ಗಾಯ, ಬಲ ಕಿವಿ ಹರಿದಿದ್ದು, ಮೋ.ಸೈ.
ಚಾಲಕ ಯಂಕಪ್ಪ ಕಲಮಂಗಿ ಈತನಿಗೆ ಬಲ ಮೊಣಕೈಗೆ ತೆರಚಿದ ಗಾಯ, ಬಲ ಮೊಣಕಾಲ ಕೆಳಗೆ ತೆರಚಿದ ಗಾಯ, ಎಡಗೈ
ಮುಂಗೈಗೆ ಒಳ ಪೆಟ್ಟಾಗಿದ್ದು, ನಾವು ಕೂಡಲೇ ಅಲ್ಲಿಗೆ ಬಂದಿದ್ದ ಜನರು ನಮ್ಮನ್ನು ಚಿಕಿತ್ಸೆ ಕುರಿತು
ತಾವರಗೇರಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರಿ ಗಾಯಗೊಂಡ ರಾಮಣ್ಣ ತಂದೆ ಗುಂಡಪ್ಪ ತಳವಾರ ಈತನು ಚಿಕಿತ್ಸೆ ಪಲಿಸದೇ
ಇಂದು ದಿನಾಂಕ 11-12-2015 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ, ಕಾರಣ ಚಾಲಕ
ಯಂಕಪ್ಪ ತಂದೆ ಸಣ್ಣ ರಾಮಣ್ಣ ಕಲಮಂಗಿ ಸಾ : ಹಡಗಲಿ
ಈತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾಧಿಯನ್ನು
ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 10-30 ಗಂಟೆಗೆ ಬಂದು ಸದರಿ ಹೇಳಿಕೆ ಫಿರ್ಯಾಧಿಯ ಸಾರಾಂಶದ ಮೇಲಿಂದ
ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
4) ಕೊಪ್ಪಳ
ನಗರ ಪೊಲೀಸ್ ಠಾಣೆ ಗುನ್ನೆ ನಂ. 244/2015 ಕಲಂ. 78(3) Karnataka Police Act.
ದಿನಾಂಕ: 11-12-2015 ರಂದು ರಾತ್ರಿ 09:15 ಗಂಟೆಗೆ ಶ್ರೀ ಸತೀಶ ಪಾಟೀಲ ಪಿ.ಐ. ರವರು ಠಾಣೆಗೆ
ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶದಲ್ಲಿ ಇಂದು ದಿನಾಂಕ 11.12.2015 ರಂದು ರಾತ್ರಿ 8:15
ಗಂಟೆಗೆ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ 1] ಮಂಜುನಾಥ
ಸಾಲಮನಿ ಇತನು 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಇದು ನಶೀಬದ ಆಟ ಅಂತಾ ಸಾರ್ವಜನಿಕರನ್ನು ಕೂಗಿ
ಕರೆಯುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೇದ ಚೀಟಿಯನ್ನು ಬರೇದುಕೊಡುತ್ತಿದ್ದಾಗ
ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನಿಂದ ನಗದು ಹಣ 1500=00 ರೂ, ಮಟಕಾ ನಂಬರ ಬರೇದ
ಚೀಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡಿದ್ದು ಇರುತ್ತದೆ. ಆರೋಪಿ ನಂ 02 ಇತನು ಮಟಕಾ ನಂಬರ ಪಟ್ಟಿಯನ್ನು
ತೆಗೆದುಕೊಳ್ಳುತ್ಯಿದ್ದು ಇರುತ್ತದೆ. ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
5) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 283/2015 ಕಲಂ. 379 ಐ.ಪಿ.ಸಿ:.
ದಿನಾಂಕ 10-12-2015 ರಂದು ಮದ್ಯಾಹ್ನ 11-00 ಗಂಟೆಗೆ ಶ್ರೀ ರಾಮಕೃಷ್ಣ ತಂದೆ ತಿಮ್ಮಣ್ಣ
ಭೋವಿ ವಯಾ: 32 ವರ್ಷ , ಜಾ: ಭೋವಿ ಉ: ಟ್ರ್ಯಾಕ್ಟರ ಚಾಲಕ ಸಾ: ಸಂಗಾಪುರ ತಾ: ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ:- 09-12-2015 ರಂದು ಮದ್ಯಾಹ್ನ 12-30 ಗಂಟೆಯಿಂದ 1-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿಯ ಸರಕಾರಿ ಆಸ್ಪತ್ರೆ
ಮುಭಾಗದ ಕಂಪೌಂಡ ಹತ್ತಿರ ನಿಲ್ಲಿಸಿದ ಪಿರ್ಯಾಧಿದಾರರ ಬಜಾಜ ಕಂಪನಿಯ
ಡಿಸ್ಕವರಿ ಮೋಟಾರ ಸೈಕಲ್ ನಂ ಕೆ.ಎ 37/ಆರ್ 7958 ಚಾಸ್ಸಿ ನಂ MD2DSPAZZTWE24468, ಇಂಜಿನ್ ನಂ JBMBTE29561, ಇದ್ದು
ಕಪ್ಪುಬಣ್ಣದ್ದು ಅಂ.ಕಿ 25,000-00 ಬೆಲೆ ಬಾಳುವುದನ್ನು
ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment