Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, December 13, 2015

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 353/2015  ಕಲಂ 107 ಸಿ.ಅರ್.ಪಿ.ಸಿ.
ನಾನು ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ ಠಾಣೆ ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸಲ್ಲಿಸುವ ದೂರು ಏನೆಂದರೆ, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ  ಉಡುಮಕಲ್ ಗ್ರಾಮದಲ್ಲಿ  ಡಿ.ಮಲ್ಲಾಪೂರು ಸೀಮಾದ ಜಮೀನು ಸರ್ವೆ ನಂ: 27 ವಿಸ್ತೀರ್ಣ 9 ಎಕರೆ 10 ಗುಂಟೆ ಜಮೀನಿನ ಖಬ್ಜಾ ಹಾಗೂ ಸಾಗುವಳಿ ವಿಚಾರದಲ್ಲಿ ಪ್ರತಿವಾದಿಗಳಾದ ಶರಣಪ್ಪ ತಂದೆ ಹಿರೇ ಸಿದ್ದಲಿಂಗಪ್ಪ ಉಡುಮಕಲ್ ಇವರಿಗೂ ಮತ್ತು ಬಸವರಾಜ ತಂದೆ ವೀರೇಶಪ್ಪ ಸಾ: ಉಡುಮಕಲ್  ಇವರುಗಳ ನಡುವೆ ಸನ್ 2012 ನೇ ಸಾಲಿನಿಂದ ವ್ಯಾಜ್ಯ ಇದ್ದು, ಎರಡೂ ಪಾರ್ಟಿಯವರು ಒಬ್ಬರಿಗೊಬ್ಬರು ಪರಸ್ಪರ ತಾವೇ ಖಬ್ಜಾ ಮಾಡಿಕೊಂಡು ಸಾಗುವಳಿ ಮಾಡಬೇಕೆಂಬ ಉದ್ದೇಶದಿಂದ ವೈಮನಸ್ಸು ಮಾಡಿಕೊಂಡು ದ್ವೇಷವನ್ನು ಸಾಧಿಸುತ್ತಿದ್ದರಿಂದ ಮತ್ತು ಮುಂಬರಲಿರುವ ವಿಧಾನ ಪರಿಷತ, ತಾಲೂಕ, ಮತ್ತು ಜಿಲ್ಲಾ ಪಂಚಾಯತ ಚುನಾವಣೆ ಹಿನ್ನಲೆಯಲ್ಲಿ ಇಂದು ದಿ:- 12-12-2015 ರಂದು ನಾನು ಉಡುಮಕಲ್ ಗ್ರಾಮಕ್ಕೆ ಭೇಟಿ ಕೊಟ್ಟು ಗ್ರಾಮದಲ್ಲಿ ವಿಚಾರಣೆ ಮಾಡಲಾಗಿ ಮೇಲೆ ನಮೂದಿಸಿದ ಪ್ರತಿವಾದಿ ವಿವಿಧ ರಾಜಕೀಯ ಬೆಂಬಲವನ್ನು ಪಡೆದುಕೊಂಡು ಯಾವ ಸಮಯದಲ್ಲಾದರೂ ಜಮೀನಿನ ವಿಷಯದಲ್ಲಿ ಜಗಳ ಮಾಡಿಕೊಂಡು ಗ್ರಾಮದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಗಳು ಇರುವುದಾಗಿ ತಿಳಿದುಬಂದಿದ್ದು, ಅಲ್ಲದೇ ಚುನಾವಣೆ ಸಮಯದಲ್ಲಿ ಜಗಳ ಮಾಡಿಕೊಂಡು ಪ್ರಾಣ ಹಾನಿ ಮತ್ತು ಆಸ್ಥಿ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಇದ್ದು ಕಾರಣ ಪ್ರತಿವಾದಿಗಳಾದ 1] ಶರಣಪ್ಪ ತಂದೆ ಹಿರೇ ಸಿದ್ದಲಿಂಗಪ್ಪ ಕೋರಿ, 48 ವರ್ಷ, ಲಿಂಗಾಯತ ಉ: ಒಕ್ಕಲುತನ ಸಾ: ಉಡುಮಕಲ್ 2] ಈಶಪ್ಪ ತಂದೆ ಹಿರೇ ಸಿದ್ದಲಿಂಗಪ್ಪ  ಕೋರಿ, 40 ವರ್ಷ, ಲಿಂಗಾಯತ ಉ: ಒಕ್ಕಲುತನ ಸಾ: ಉಡುಮಕಲ್ 3] ಬಸವರಾಜ ತಂದೆ ಹಿರೇ ಸಿದ್ದಲಿಂಗಪ್ಪ ಕೋರಿ, 55 ವರ್ಷ, ಲಿಂಗಾಯತ ಉ: ಒಕ್ಕಲುತನ ಸಾ: ಉಡುಮಕಲ್ ಇವರುಗಳಿಂದ ಶಾಂತತೆಯನ್ನು ಕಾಪಾಡುವ ಕುರಿತು ಯೋಗ್ಯ ಮುಚ್ಚಳಿಕೆಯನ್ನು ಪಡೆದುಕೊಳ್ಳುವುದು ಅತೀ ಅವಶ್ಯಕತೆ ಇದ್ದುದರಿಂದ ವಿಚಾರಣೆಯನ್ನು ಮುಗಿಸಿಕೊಂಡು ಬಂದು ಇಂದು ದಿ:-12-12-2015 ರಂದು ರಾತ್ರಿ 9:00 ಗಂಟೆಗೆ ಸ್ವಂತ ಫಿರ್ಯಾದಿಯ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 353/2015 ಕಲಂ 107 ಸಿಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 256/2015  ಕಲಂ 107 ಸಿ.ಅರ್.ಪಿ.ಸಿ.:
ದಿನಾಂಕಃ-12-12-2015 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಹಗೇದಾಳ ಗ್ರಾಮದಲ್ಲಿ ಪೆಟ್ರೋಲಿಂಗ್ ಕರ್ತವ್ಯದ ಮೇಲಿದ್ದಾಗ  ಪಾರ್ಟಿ ನಂ 1 ) ಚಿದಾನಂದಪ್ಪ ತಂದಿ ಈರಪ್ಪ ಸಾ. ಹಗೇದಾಳ 2) ಜಡಿಯಪ್ಪ ತಂದಿ ಈರಪ್ಪ ಸಾ. ಹಗೇದಾಳ 3) ವೆಂಕಟೇಶ ತಂದಿ ಈರಪ್ಪ ಸಾ. ಹಗೇದಾಳ ಇವರ ಮದ್ಯದಲ್ಲಿ ಮತ್ತು ಪ್ರತಿವಾದಿಗಳಾದ 1)  ಮುದಿಯಪ್ಪ @ ಯಂಕಪ್ಪ ತಂದಿ ಹನಮಂತಪ್ಪ ದಡ್ಡಿಹಾಳ 2) ಕೃಷ್ಣಾ ತಂದಿ ಹನಮಂತಪ್ಪ ದಡ್ಡಿಹಾಳ 3) ಶ್ರೀನಿವಾಸ ತಂದಿ ಹನಮಂತಪ್ಪ ದಡ್ಡಿಹಾಳ  ಇವರ ಮದ್ಯದದಲ್ಲಿ ರಾಜಕೀಯ ಪೈಪೋಟಿ ಇದ್ದು  ಅಲ್ಲದೇ ದಿನಾಂಕಃ-19-10-2015 ರಂದು ರಾತ್ರಿ 8-30 ಗಂಟೆಯಿಂದ 9-00 ಗಂಟೆಯ ಅವಧಿಯಲ್ಲಿ ಇಬ್ಬರು ಜಗಳ ಮಾಡಿಕೊಂಡು ಹೊಡೆದಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಪರಸ್ಪರರು ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ದ ಪಾರ್ಟಿ 1 ರವರ ವಿರುದ್ದ ಠಾಣೆ ಗುನ್ನೆ ನಂ 222/2015 ಕಲಂ 143, 147, 341, 323, 324, 326, 504,506 r/w 149 IPC ಮತ್ತು ಪಾರ್ಟಿ 2 ರವರ ವಿರುದ್ದ 223/2015 ಕಲಂ 143, 147, 341, 323, 324, 504,506 r/w 149 IPCಪ್ರಕಾರ ಪ್ರಕರಣಗಳು ದಾಖಲಾಗಿದ್ದು ಎರಡು ಪಾರ್ಟಿಯವರ ವಿರುದ್ದ ಆರೋಪ ಸಾಭೀತಾಗಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಸಲ್ಲಿಸಲಿದ್ದು ಇರುತ್ತದೆ. ಸದರಿ ಎರಡು ಪಾರ್ಟಿಯವರು ಮುಂಬರುವ ಎಮ್.ಎಲ್.ಸಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಅವಧಿಯಲ್ಲಿ ಎರಡು ಪಾರ್ಟಿಯವರು ಜಗಳ ಮಾಡಿಕೊಂಡು ತಮ್ಮ ಹಾಗೂ ಸಾರ್ವಜನಿಕ ಆಸ್ತಿ ಮತ್ತು ಪ್ರಾಣ ಹಾನಿ ಮಾಡಿಕೊಂಡು ಕಾನೂನು ಸುವ್ಯವಸ್ತೆಗೆ ದಕ್ಕೆಯುಂಟು ಮಾಡುವ ಸಂಭವವಿರುದಾಗಿ ತಿಳಿದು ಬಂದಿದ್ದರಿಂದ ಠಾಣೆಗೆ ಬಂದು ಮುನ್ನೆಚ್ಚರಿಕಾ ಕ್ರಮವಾಗಿ ಠಾಣೆಗೆದ ಸಾಯಂಕಾಳ 5-15 ಗಂಟೆಗೆ ಬಂದು 5-20 ಗಂಟೆಗೆ ಪಾರ್ಟಿ ನಂ 1 ) ಚಿದಾನಂದಪ್ಪ ತಂದಿ ಈರಪ್ಪ ಸಾ. ಹಗೇದಾಳ 2) ಜಡಿಯಪ್ಪ ತಂದಿ ಈರಪ್ಪ ಸಾ. ಹಗೇದಾಳ 3) ವೆಂಕಟೇಶ ತಂದಿ ಈರಪ್ಪ ಸಾ. ಹಗೇದಾಳ ರವರ ಮೇಲೆ ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ ಕಾರಣ ಸದರಿ ಆರೋಪಿತರಿಗೆ ಆದಷ್ಟು ಬೇಗನೆ ನೋಟೀಸ್ ಜಾರಿ ಮಾಡುವುದರ ಮೂಲಕ ತಮ್ಮ ಕರೆಯಿಸಿಕೊಂಡು ಮುಂಬರುವ ಎಮ್.ಎಲ್.ಸಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಅವಧಿಯಲ್ಲಿ ಸದ್ವರ್ತನೆಯಿಂದ ಇರಲು ಸೂಕ್ತ ಪಾಬಂದಿ ಮಾಡಿಕೊಳ್ಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ.  
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 257/2015  ಕಲಂ 107 ಸಿ.ಅರ್.ಪಿ.ಸಿ.:
ದಿನಾಂಕಃ-12-12-2015 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಹಗೇದಾಳ ಗ್ರಾಮದಲ್ಲಿ ಪೆಟ್ರೋಲಿಂಗ್ ಕರ್ತವ್ಯದ ಮೇಲಿದ್ದಾಗ  ಪಾರ್ಟಿ ನಂ 1 1)  ಮುದಿಯಪ್ಪ @ ಯಂಕಪ್ಪ ತಂದಿ ಹನಮಂತಪ್ಪ ದಡ್ಡಿಹಾಳ 2) ಕೃಷ್ಣಾ ತಂದಿ ಹನಮಂತಪ್ಪ ದಡ್ಡಿಹಾಳ 3) ಶ್ರೀನಿವಾಸ ತಂದಿ ಹನಮಂತಪ್ಪ ದಡ್ಡಿಹಾಳ ಸಾ. ಹಗೇದಾಳ ಇವರ ಮದ್ಯದಲ್ಲಿ ಮತ್ತು ಪ್ರತಿವಾದಿಗಳಾದ  1 ) ಚಿದಾನಂದಪ್ಪ ತಂದಿ ಈರಪ್ಪ ಸಾ. ಹಗೇದಾಳ 2) ಜಡಿಯಪ್ಪ ತಂದಿ ಈರಪ್ಪ ಸಾ. ಹಗೇದಾಳ 3) ವೆಂಕಟೇಶ ತಂದಿ ಈರಪ್ಪ ಸಾ. ಹಗೇದಾಳ ಇವರ ಮದ್ಯದದಲ್ಲಿ ರಾಜಕೀಯ ಪೈಪೋಟಿ ಇದ್ದು  ಅಲ್ಲದೇ ದಿನಾಂಕಃ-19-10-2015 ರಂದು ರಾತ್ರಿ 8-30 ಗಂಟೆಯಿಂದ 9-00 ಗಂಟೆಯ ಅವಧಿಯಲ್ಲಿ ಇಬ್ಬರು ಜಗಳ ಮಾಡಿಕೊಂಡು ಹೊಡೆದಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಪರಸ್ಪರರು ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ದ ಪಾರ್ಟಿ 2 ರವರ ವಿರುದ್ದ ಠಾಣೆ ಗುನ್ನೆ ನಂ 222/2015 ಕಲಂ 143, 147, 341, 323, 324, 326, 504,506 r/w 149 IPC ಮತ್ತು ಪಾರ್ಟಿ 1 ರವರ ವಿರುದ್ದ 223/2015 ಕಲಂ 143, 147, 341, 323, 324, 504,506 r/w 149 IPCಪ್ರಕಾರ ಪ್ರಕರಣಗಳು ದಾಖಲಾಗಿದ್ದು ಎರಡು ಪಾರ್ಟಿಯವರ ವಿರುದ್ದ ಆರೋಪ ಸಾಭೀತಾಗಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಸಲ್ಲಿಸಲಿದ್ದು ಇರುತ್ತದೆ.
       ಸದರಿ ಎರಡು ಪಾರ್ಟಿಯವರು ಮುಂಬರುವ ಎಮ್.ಎಲ್.ಸಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಅವಧಿಯಲ್ಲಿ ಎರಡು ಪಾರ್ಟಿಯವರು ಜಗಳ ಮಾಡಿಕೊಂಡು ತಮ್ಮ ಹಾಗೂ ಸಾರ್ವಜನಿಕ ಆಸ್ತಿ ಮತ್ತು ಪ್ರಾಣ ಹಾನಿ ಮಾಡಿಕೊಂಡು ಕಾನೂನು ಸುವ್ಯವಸ್ತೆಗೆ ದಕ್ಕೆಯುಂಟು ಮಾಡುವ ಸಂಭವವಿರುದಾಗಿ ತಿಳಿದು ಬಂದಿದ್ದರಿಂದ ಠಾಣೆಗೆ ಬಂದು ಮುನ್ನೆಚ್ಚರಿಕಾ ಕ್ರಮವಾಗಿ ಠಾಣೆಗೆದ ಸಾಯಂಕಾಳ 5-15 ಗಂಟೆಗೆ ಬಂದು 5-45 ಗಂಟೆಗೆ ಪಾರ್ಟಿ ನಂ 1)  ಮುದಿಯಪ್ಪ @ ಯಂಕಪ್ಪ ತಂದಿ ಹನಮಂತಪ್ಪ ದಡ್ಡಿಹಾಳ 2) ಕೃಷ್ಣಾ ತಂದಿ ಹನಮಂತಪ್ಪ ದಡ್ಡಿಹಾಳ 3) ಶ್ರೀನಿವಾಸ ತಂದಿ ಹನಮಂತಪ್ಪ ದಡ್ಡಿಹಾಳ ಸಾ. ಹಗೇದಾಳ ರವರ ಮೇಲೆ ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ .
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 258/2015  ಕಲಂ 107 ಸಿ.ಅರ್.ಪಿ.ಸಿ.:
 ದಿನಾಂಕ : 12-12-2015 ರಂದು ನಾನು ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಗ್ರಾಮ ಬೇಟಿ ಕುರಿತು ಕಾರಟಗಿ, ಬಸವಣ್ಣಕ್ಯಾಂಪ್ ಬೇವಿನಾಳ ಗ್ರಾಮಕ್ಕೆ ಬೇಟಿಕೊಟ್ಟು ಗ್ರಾಮದಲ್ಲಿ ಗುಪ್ತವಾಗಿ ವಿಚಾರಿಸಲಾಗಿ ಆರೋಪಿತನಾದ ಅಟೋ ಸತ್ಯಪ್ಪ @ ಸತ್ಯನಾರಾಯಣ ಈಡಿಗೇರ ವಯಾ-40 ವರ್ಷ ಜಾ- ಈಳಿಗೇರ ಉ-ಒಕ್ಕಲುತನ ಸಾಬಸವಣ್ಣಕ್ಯಾಂಪ್ ತಾ-ಗಂಗಾವತಿ ಜಿ- ಕೊಪ್ಪಳ ಇತನು ಈಗ್ಗೆ 2 ತಿಂಗಳಿಂದ ಊರಲ್ಲಿ ಗಲಾಟೆ ಮಾಡುವದು ಹಾಗೂ ಈ ಊರಲ್ಲಿ ನಾನು ಬೇಕಾದ್ದು ಮಾಡುತ್ತೆನೆ ನನಗೆ ಯಾರು ಏನು ಮಾಡಿಕೊಳ್ಳಲು ಆಗುವದಿಲ್ಲ ನಾನು ಹೇಳಿದ ವ್ಯಕ್ತಿಗೆ ಮತಹಾಕಬೇಕು ಅಂತಾ ಕೂಗಾಡುವದು ಮಾಡುತ್ತಿದ್ದು ಇವನು ಕೂಗಾಡುವದರಿಂದ ಮುಂಬವರುವ ಎಮ್.ಎಲ್.ಸಿ. ಚುನಾವಣೆಯಲ್ಲಿ ಯಾವುದಾದರು ಇವನಿಂದ ಗಲಬೆಯುಂಟಾಗಿ . ಚುನಾವಣೆಯ ಅವದಿಯಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗಬಾರದೆಂಬ ಉದ್ದೇಶದಿಂದ ಸ್ಸಾಯಂಕಾಲ 6-15 ಗಂಟೆಯ ಸುಮಾರಿಗೆ ಸರಕಾರಿ ತರ್ಪೆ ನಾನೇ ಪೀರ್ಯಾದಿದಾರನಾಗಿ ಕಾರಟಗಿ ಠಾಣೆ ಗುನ್ನೆ ನಂ : 258/2015 ಕಲಂ : 107 ಸಿ.ಆರ್.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಡು ತನಿಖೆ ಕೈಗೊಂಡಿದ್ದು ಇರುತ್ತದೆ ಕಾರಣ ಮಾನ್ಯರವರು ಆದಷ್ಟು ಬೇಗನೆ ಎರಡೂ ಪಾರ್ಟಿಯ ಆರೋಪಿತರಿಗೆ ನೊಟೀಸ್ ನೀಡುವದರ ಜೊತೆಗೆ ತಮ್ಮ ಹತ್ತಿರ ಆರೋಪಿತರನ್ನು ಹಾಜರುಪಡಿಸಿಕೊಂಡು ಇನ್ನೂ ಮುಂದೆ ಸದ್ವರ್ಥನೆಯಿಂದ ಇರಲು ಹೆಚ್ಚಿನ ಮೊತ್ತದ ಮುಚ್ಚಳಿಕೆಯನ್ನು ಪಡೆದುಕೊಳ್ಳಲು ವಿನಂತಿ.
5) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 118/2015  ಕಲಂ. 107 ಸಿ.ಅರ್.ಪಿ.ಸಿ.:

ದಿನಾಂಕ: 12-12-2015 ರಂದು ಸಂಜೆ 06-30 ಗಂಟೆಗೆ ಸುಮಾರಿಗೆ ಸಿಬ್ಬಂದಿಯವರಾದ ಪಿಸಿ-271 ಮತ್ತು ಸಿಪಿಸಿ-362 ರವರೊಂದಿಗೆ ತಾವರಗೇರಾ ನಗರದಲ್ಲಿ ಪೆಟ್ರೋಲಿಂಗ್  ಕರ್ತವ್ಯ ನಿರ್ವಹಿಸುತ್ತಿದ್ದಾಗ ತಾವರಗೇರಾ ಪೊಲೀಸ್ ಠಾಣೆಯ ಈ ಕೆಳಕಂಡ ರೌಡಿಶೀಟ್ ದಾರನಾದ ªÀÄjAiÀÄ¥Àà vÀAzÉ ºÀÄ®ÄUÀ¥Àà ©¹Û eÁw: ªÀiÁ¢UÀ 31 ªÀµÀð ¸Á.ºÀjd£ÀªÁqÁ vÁªÀgÀUÉÃgÁ. ರವರ ಮೇಲೆ ತಾವರಗೇರಾ ಠಾಣೆಯಲ್ಲಿ ಈಗಾಗಲೇ ಸದರಿಯವರ ಮೇಲೆ ತಾವರಗೇರಾ ಪೊಲೀಸ್ ಠಾಣೆAiÀÄ°è ಪ್ರಕರಣಗಳು ದಾಖಲಾಗಿದ್ದು ಇರುತ್ತದೆ. ಸದರಿಯವರು ಮುಂಬರುವ ಎಂ.ಎಲ್.ಸಿ ಚುನಾವಣೆ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಪುನ್ಹ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಸಾರ್ವಜನಿಕರಿಂದ ಮತಯಾಚನೆಯ ನಿಮಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭ  & ರೋಡ್ ಶೋ, ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ರಾಜಕೀಯ ಮುಖ್ಯ ಗಣ್ಯರು, ಮುಖಂಡರು ಸದರ ಸಭೆ ಸಮಾರಂಭಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭದಲ್ಲಿ ತಾವರಗೇರಾ ಠಾಣಾ ಹದ್ದಿಯ ಮೇಲ್ಕಂಡ ರೌಡಿಶೀಟ್ ದಾರನು ತನ್ನ ರೌಡಿ ಚಟುವಟಿಕೆಯನ್ನು ಮುಂದುವರೆಸಿ ಸಭೆ ಸಮಾರಂಭದಲ್ಲಿ ಹಾಗೂ ಇತರೇ ಸಂದರ್ಭಗಳಲ್ಲಿ ಯಾವುದೇ ರೂಪದಲ್ಲಿ ಅಹಿತಕರ ಘಟನೆ ಜರುಗುವಂತೆ ಮಾಡಿ ಅದರಿಂದ ಶಾಂತಿಭಂಗ ಮಾಡುವ ಸಾಧ್ಯತೆ ಕಂಡು ಬರುತ್ತಿರುವುದರಿಂದ ಸದರಿಯವನಿಂದ ಶಾಂತಿ ಪಾಲನೆಗಾಗಿ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಬೇಕೆಂದು ಮಾನ್ಯರಲ್ಲಿ ತಾವರಗೇರಾ ಠಾಣೆ ಗುನ್ನೆ ನಂ:  118/2015 ಕಲಂ: 107 ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ವರದಿಯನ್ನು ಸಲ್ಲಿಸಿದ್ದು ಇರುತ್ತದೆ.

0 comments:

 
Will Smith Visitors
Since 01/02/2008