1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 264/2015
ಕಲಂ 87 Karntaka Police Act.
ದಿನಾಂಕಃ- 13-12--2015 ರಂದು ರಾತ್ರಿ
20-10 ಗಂಟೆಗೆ ಫಿಯಾದಿದಾರರಾ
ಶ್ರೀ ನಿಂಗಪ್ಪ ಎನ್.ಆರ್. ಪಿ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ಇವರು ಫಿರ್ಯಾದಿ ಏನೆಂದರೆ
ಇಂದು ದಿನಾಂಕ – 13-12-2015 ರಂದು ಮಾನ್ಯ ಡಿ.ಎಸ್.ಪಿ. ಸಾಹೇಬರು ತೆಗೆದುಕೊಂಡ ಅಪರಾಧ ಸಭೆ
ಮುಗಿಸಿಕೊಂಡು ವಾಪಾಸ್ ಕಾರಟಗಿಗೆ ಬರುತ್ತಿರುವಾಗ್ಗೆ ಸಿದ್ದಾಪೂರದಲ್ಲಿದ್ದಾಗ್ಗೆ ಖಚಿತ ಮಾಹಿತಿ
ಬಂದಿದ್ದೇನೆಂದರೆ, ಕಿಂದಿಕ್ಯಾಂಪ್ ಸಮೀಪ
ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದ
ಮೇರೆಗೆ ನಮ್ಮ ಠಾಣೆಯ ಸಿಬ್ಬಂದಿಯವರಾದ ಪಿ.ಸಿ- 103, 306, 197, 76 ರವರನ್ನು ಸಿದ್ದಾಪೂರಕ್ಕೆ
ಬರಮಾಡಿಕೊಂಡು ನಂತರ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೂ ಸಹ ದಾಳಿಯ ಬಗ್ಗೆ ಮಾಹಿತಿ ನೀಡಿ
ನಂತರ ಒಂದು ಖಾಸಗಿ ವಾಹನದಲ್ಲಿ ಸಿದ್ದಾಪೂರ ಬಸ್ ನಿಲ್ದಾಣದಿಂದ ಸಾಯಂಕಾಲ 4-00 ಗಂಟೆಗೆ ಹೊರಟು ಬಾತ್ಮೀ ಪ್ರಕಾರ ಕಿಂದಿಕ್ಯಾಂಪ್ ಹತ್ತಿರ ಹೊಗಿ ಮರೆಯಲ್ಲಿ ವಾಹನ ನಿಲ್ಲಿಸಿ
ಎಲ್ಲರೂ ಕೆಳಗೆ ಇಳಿದು ನೋಡಲು ಸ್ವಲ್ಪ ದೂರದಲ್ಲಿ ಕೆಲವು ಜನರು ಹಳ್ಳದ ಪಕ್ಕದಲ್ಲಿ
ಸಾರ್ವಜನಿಕ ಸ್ಥಳದಲ್ಲಿ ಗಿಡಗಂಟಿಗಳ ಕೆಳಗಡೆ ಕೆಲವು ಜನರ ಅಂದರ್ ಬಾಹರ್ ಎಂಬ ಇಸ್ಪೇಟ್
ಜೂಜಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಗಳೊಂದಿಗೆ
ದಾಳಿ ಮಾಡಲು ಇಸ್ಪೇಟ್ ಆಟದಲ್ಲಿ ತೊಡಗಿದ್ದವರು ನಮ್ಮನ್ನು ನೋಡಿ ಇಸ್ಪೇಟ್ ಆಟವಾಡುವದನ್ನು
ಬಿಟ್ಟು ಅಲ್ಲಿಂದ ಓಡಿ ಹೊಗಿದ್ದು ಖಣದಲ್ಲಿ ಪರೀಶೀಲಿಸಲು 52 ಇಸ್ಪೇಟ್ ಎಲೆಗಳು ಹಾಗೂ 300-00 ರೂ. ನಗದು ಹಣ ಹಾಗೂ ಒಂದು ಹಳೆಯ ಪ್ಲಾಸ್ಟೀಕ್ ಬರ್ಕ ದೊರೆತಿದ್ದು. ಸದರ್ ಆರೋಪಿತರು ಇಸ್ಪೇಟ್ ಆಟವಾಡಲು
ತಂದಿದ್ದ ಮೊಟಾರ್ ಸೈಕಲ್
ಪಕ್ಕದಲ್ಲಿ ನಿಲ್ಲಿಸಿದ್ದು ಅವುಗಳನ್ನು ಪರೀಶಿಲಿಸಲು 1) ಒಂದು ಬಜಾಜ ಪ್ಲಾಟಿನಾ ಮೊಟಾರ್ ಸೈಕಲ್ ನಂ- ಕೆ.ಎ- 34- ವಿ- 5719 ಅಂತಾ ಇದ್ದು ಇದರ ಅಂ.ಕಿ- 10,000-00 ರೂ.ಗಳು 2) ಒಂದು ಹಿರೋ ಸ್ಪ್ಲೆಂಡರ್ ಸಿಲ್ವರ್ ಕಲರಿನ
ಮೊಟಾರ್ ಸೈಕಲ್ ಚಾಸ್ಸಿಸ್ ನಂ- MBLHA10BFFHJ47970 ಅಂ.ಕಿ-15,000=00,
3) ಒಂದು ಹಿರೋ ಸ್ಪ್ಲೆಂಡರ್
ಸಿಲ್ವರ್ ಕಲರಿನ ಮೊಟಾರ್ ಸೈಕಲ್ ಚಾಸ್ಸಿಸ್ ನಂ-
MBLHA10BFFHD29360. ಅಂ.ಕಿ15,000=00 4 ) ಒಂದು ಹಿರೋ ಸ್ಪ್ಲೆಂಡರ್
ಮೊಟಾರ್ ಸೈಕಲ್ ನಂ- KA-37/ L- 9087 ಅಂ.ಕಿ 15,000=00 ಈ ರೀತಿಯಾಗಿ ದೊರೆತಿದ್ದು ಸದರಿಯವುಗಳನ್ನು ಕೇಸಿನ ಪುರಾವೆ ಕುರಿತು ಪಂಚರ ಸಮಕ್ಷಮ 4 ಮೊ.ಸೈಗಳನ್ನು ಹಾಗೂ ಇಸ್ಪೇಟ್ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.
2) ಗಂಗಾವತಿನಗರ ಪೊಲೀಸ್ ಠಾಣೆ ಗುನ್ನೆ ನಂ. 291/2015 ಕಲಂ 4 ಕರ್ನಾಟಕ ಮಿತಿ
ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತುಹಾಗೂ ಕಲಂ 506 ಐ.ಪಿ.ಸಿ :.
ದಿನಾಂಕ 13-12-2015
ರಂದು ಜರ್ಮನ್ ಆಸ್ಪತ್ರೆ ಗದಗ ಬೇಟಿಕೊಟ್ಟು ಇಲಾಜು ಪಡೆಯುತ್ತಿದ್ದ
ಫಿರ್ಯಾದಿ
ಪಿ. ಮಹ್ಮದ ರಫಿ ತಂದೆ ಸಲಾಂಸಾಬ ವಯಾ: 38 ವರ್ಷ, ಜಾ: ಮುಸ್ಲಿಂ ಉ:
ವ್ಯಾಪಾರ ಮತ್ತು ಒಕ್ಕಲುತನ ಸಾ: ಈದ್ಗಾ ಕಾಲೋನಿ ಗಂಗಾವತಿ ಇವನು ಲಿಖಿತವಾಗಿ ಬರೆಸಿಕೊಟ್ಟ ಫಿರ್ಯಾದಿಯನ್ನು
ಪಡೆದುಕೊಂಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರನು ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ಮಲ್ಲಣ್ಣನ
ಹತ್ತಿರ 10 ಲಕ್ಷ ಸಾಲವನ್ನು ಪಡೆದಿದ್ದು ಸದರಿ ಸಾಲಕ್ಕೆ ತಿಂಗಳಿಗೆ 60 ಸಾವಿರ ಬಡ್ಡಿ ಕಟ್ಟುತ್ತಿದ್ದು
ಸಾಲವನ್ನು ಪಡೆದ ಕಾಲಕ್ಕೆ ತನ್ನ ಸಿಂಡಿಕೇಟ್ ಬ್ಯಾಂಕಿನ ಮೂರು ಖಾಲಿ ಚೆಕ್ ಮತ್ತು 100 ರೂಪಾಯಿಯ ಸ್ಟಾಂಪ್
ಪೇಪರ್ ಮತ್ತು 6 ಎಕರೆ ಖರೀದಿ ಕರಾರು ಪತ್ರ ನೀಡಿದ್ದು ಅದೇ ರೀತಿ ಸಂತೋಷ ಟ್ರೇಡಿಂಗ್ ಕಂಪನಿಯ ಮಾಲಕನ
ಹತ್ತಿರ ಸಹ 7 ಲಕ್ಷ ಸಾಲವನ್ನು ಪಡೆದಿದ್ದು ಸಾಲ ಪಡೆದ ಕಾಲಕ್ಕೆ ಪ್ರಾಮಿಸರಿ ನೋಟ್ ಖಾಲಿ ಚೆಕ್ ಗಳನ್ನು
ನೀಡಿದ್ದು ಸದರಿ 7 ಲಕ್ಷ ಸಾಲದಲ್ಲಿ 5 ಲಕ್ಷಕ್ಕೆ 3 ರೂ, ಬಡ್ಡಿಯಂತೆ ಉಳಿದ 2 ಲಕ್ಷ ಸಾಲಕ್ಕೆ ದಿನಕ್ಕೆ
400 ರೂ. ಅಂತೆ ಕಟ್ಟುತ್ತಿದ್ದು ಹಾಗೂ ಜಿಲೇಬಿ ರಾಜನ ಹತ್ತಿರ ಆಗಾಗ ಸಾಲ ಪಡೆಯುತ್ತ 18 ಲಕ್ಷ ರೂ.ಗಳ
ಸಾಲ ಪಡೆದಿದ್ದು 3 ರೂ. ಬಡ್ಡಿಯಂತೆ ಕಟ್ಟಿದ್ದು, ಈಗ್ಗೆ 3-4 ತಿಂಗಳಿಂದ ಹಣದ ಅಡಚಣೆ ಆಗಿದ್ದರಿಂದ
ಫಿರ್ಯಾದಿಯು ಬಡ್ಡಿ ಹಣವನ್ನು ಕಟ್ಟದಿದ್ದರಿಂದ ಆರೋಪಿತರಾದ ಮಲ್ಲಣ್ಣ, ಮರ್ದಾನಪ್ಪ, ಸಂತೋಷ ಟ್ರೇಡಿಂಗ್
ಕಂಪನಿಯ ಮಾಲಕ ಹಾಗೂ ಜಿಲೇಬಿ ರಾಜಾ ಇವರುಗಳು ಫಿರ್ಯಾದಿಗೆ ಫೋನ್ ಮಾಡಿ ಬಡ್ಡಿ ಹಣ ಕಟ್ಟುವಂತೆ ಬೇದರಿಕೆ
ಹಾಕಿ ಕಿರುಕುಳ ನೀಡಿದ್ದರಿಂದ ಮನನೊಂದು ದಿನಾಂಕ 10-12-2015 ರಂದು ರಾತ್ರಿ 11-00 ಗಂಟೆಗೆ ಲಲಿತ್
ಮಹಲ್ ಹತ್ತಿರ ವಿಷ ಕುಡಿದು ಇಲಾಜಿಗಾಗಿ ಸರಕಾರಿ ಆಸ್ಪತ್ರೆ ಗಂಗಾವತಿಗೆ ಸೇರಿಕೆಯಾಗಿ ಅಲ್ಲಿಂದ ಹೆಚ್ಚಿನ
ಚಿಕಿತ್ಸೆಗಾಗಿ ಜರ್ಮನ್ ಆಸ್ಪತ್ರೆ ಗದಗ-ಬಟಗೇರಿ ಗೆ ದಾಖಲಾಗಿದ್ದು ಸದರಿಯವ ಕಿರುಕುಳದಿಂದ ವಿಷ ತಗೆದುಕೊಂಡಿದ್ದು
ಸದರಿ ನಾಲ್ಕು ಜನ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಲಿಖಿತ ಫಿರ್ಯಾದಿ ಪಡೆದುಕೊಂಡು
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
3) ಗಂಗಾವತಿ ನಗರ ಪೊಲೀಸ್
ಠಾಣೆ ಗುನ್ನೆ ನಂ. 292/2015 ಕಲಂ. 457, 380 ಐ.ಪಿ.ಸಿ:
ದಿನಾಂಕ 13-12-2015 ರಂದು 19-30 ಗಂಟೆಗೆ ಶ್ರೀ ಚಾಂದಪಾಷಾ ತಂದೆ ಯೂನುಸಮಿಯಾ ಗಡದ ವಯಸ್ಸು 34 ವರ್ಷ ಜಾ: ಮುಸ್ಲಿಂ ಉ: ಫೋಟೊ ಸ್ಟುಡಿಯೋ ಸಾ:ಬಂಡ್ರಾಳ್ ತಾ: ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಫಿರ್ಯಾದಿ ನೀಡಿದ್ದು ಅದರ
ಸಾರಂಶವೇನೆಂದರೆ, ದಿನಾಂಕ 12-12-2015 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ 13-12-2015 ರಂದು ಮುಂಜಾನೆ
10-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ಇಸ್ಲಾಂಪುರ ಜಾಮೀಯಾ
ಕಾಂಪ್ಲೆಕ್ಸದಲ್ಲಿರುವ ಸ್ಟುಡಿಯೋ 9 ಫೋಟೊ ಸ್ಟುಡಿಯೋ ಹೆಸರಿನ ಅಂಗಡಿಯ ಷಟರ್ಸಗೆ
ಹಾಕಿದ ಪತ್ತವನ್ನು ರಾಡಿನಿಂದ ಮೀಟಿ ತೆರೆದು ಅಂಗಡಿಯ ಒಳಗಡೆಗೆ ಹೋಗಿ ಫೋಟೊಸ್ಟುಡಿಯೋದಲ್ಲಿದ್ದ
[01] ಎಲ್.ಜಿ. ಕಂಪನಿಯ ಮಾನಿಟರ್ ಅಂ.ಕಿ.ರೂ. 2,000-00. [02] ಎಪಸನ್ ಕಂಪನಿಯ
ಪ್ರಿಂಟರ್ ಅಂ.ಕಿ.ರೂ. 4,000-00. [03] ಒಂದು ನಿಕಾನ್ ಡಿ90 ಕ್ಯಾಮರ ಅಂ.ಕಿ.ರೂ. 15,000-00 ಬೆಲೆ ಬಾಳುವವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment