Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, December 20, 2015

1) ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 129/2015 ಕಲಂ: 323, 324, 504, 506 ಸಹಿತ 34 ಐ.ಪಿ.ಸಿ.
ದಿನಾಂಕ: 19-12-2015 ರಂದು ಮುಂಜಾನೆ 09-30 ಗಂಟೆಗೆ ಫಿರ್ಯಾದಿ ಹೊಳಿಯಪ್ಪ ಸಾ: ಹುಲಗೇರಿ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದನ್ನು ಗಣಕಿಕರಿಸಿದ ಫಿರ್ಯಾದಿ ಸಾರಾಂಸವೆನೆಂದರೆ. ಫಿರ್ಯಾದಿಯ ತನ್ನ ಸ್ವಂತ ಅಕ್ಕಳಾದ ಚೆನ್ನವ್ವಳ ಗಂಡನಾದ ಚೆಂದಪ್ಪನು ಈಗ್ಗೆ 10 ವರ್ಷಗಳ ಹಿಂದೆ ತೀರಿಕೊಂಡಿದ್ದು ತನ್ನ ಅಕ್ಕನ ಮಗನಾದ ನೀಲಪ್ಪನಿಗೆ ತನ್ನ ಮಗಳಾದ ಹನಮವ್ವಳನ್ನು ಮದುವೆ ಮಾಡಿಕೊಟ್ಟಿದ್ದು ತನ್ನ ಅಳಿಯ ಕುಡಿದ ನೇಸೆದಲ್ಲಿ ನಮ್ಮ ಮನೆಗೆ ಬಂದು ನಮಗೆ ಬೈದು ಹೊಗುವದು ಮಾಡುತ್ತಿದ್ದನು. ಮತ್ತೆ ನಿನ್ನೆ ದಿನಾಂಕ: 18-12-2015 ರಂದು  ತಮ್ಮ ಅಕ್ಕ ಮತ್ತು ಆಕೆಯ ಮಗನಾದ ನೀಲಪ್ಪನು ತಮ್ಮ ಮನೆಗೆ ಬಂದು ಬೈದಾಡಿದ್ದನ್ನು ತನ್ನ ಹೆಂಡತಿ ತಾನು ಕೆಲಸ ಮುಗಿಸಿ ರಾತ್ರಿ 7-30 ಗಂಟೆಗೆ ಬಂದಾಗ ತನಗೆ ಹೇಳಿದಳು ಆಗ ತಾನು ತಮ್ಮ ಅಕ್ಕನ ಮನೆಯ ಹತ್ತಿರ ಹೊಗಿ ಯಾಕೆ ನೀವು ನನ್ನ ಹೆಂಡತಿ ಗಂವ್ವಳಿಗೆ ಬೈಯಿತಿರಿ ಆಂತಾ ಕೇಳಿದ್ದಕ್ಕೆ ನಮ್ಮ ಅಕ್ಕ ಅಕ್ಕನ ಮಗ ನೀಲಪ್ಪ ನಾವು ಬೈಯವರ ನೀನ ಏನ ಸೆಂಟಾ ಹರಕಂತಿದಿ ಅರಕಾ ಅಂತಾ ಅಂದರೆ ಮನೆಯಿಂದ ಹೊರಗೆ ಬಂದು ಅಂಗಳದಲ್ಲಿ ನಿಂತ ನನಗೆ ಅಲ್ಲಿಯೇ ಮನೆ ಮುಂದೆ ಇಟ್ಟಿದ್ದ ಕೊಡಲಿ ಕಾವಿನಿಂದ ನೀಲಪ್ಪನು ಬಲ ಬುಜಕ್ಕೆ ಹಾಗೂ ಬಲ ಬೆನ್ನಿಗೆ ಹಾಗೂ ಬಲಗಡೆ ತಲೆ ಹೊಡೆದು ರಕ್ತಗಾಯ ಮಾಡಿದನು. ಆಗ ನಮ್ಮ ಅಕ್ಕ ಅವನನ್ನ ಉಳಿಸಬ್ಯಾಡಲೋ ನೀಲ ಅಂತಾ ಅಂದವಳೆ ಕೈಯಿಂದ ನನಗೆ ಹೊಡೆ ಬಡಿ ಮಾಡಿದಳು ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ 1] ಶೇಖಪ್ಪ ತಂದೆ ಮಾನಪ್ಪ ಬಡಿಗೇ 2] ಮಾದೇಗೌಡ ಪಾಟೀಲ್ ರವರು ಬಂದು ಜಗಳ ಬಿಡಿಸಿ ಕಳಿಸದರು. ನಾನು ರಾತ್ರಿ ಆಗಿದ್ದರಿಂದ ಊರಲ್ಲಿಯೇ ಉಳಿದು ಹಿರಿಯರಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದಿದ್ದು ನನಗೆ ಕೊಡಲಿ ಕಾವಿನಿಂದ ಹಾಗೂ ಕೈಯಿಂದ ಹೊಡೆ, ಬಡೆ ಮಾಡಿ ದುಖಾಃಪಾತ ಗೊಳಿಸಿದ್ದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾಧಿ ಸಾರಾಂಶದ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 130/15 ಕಲಂ: 341, 504, 509 ಐ.ಪಿ.ಸಿ.
ದಿನಾಂಕ: 19-12-2015 ರಂದು ರಾತ್ರಿ 08-30 ಗಂಟೆಗೆ ಫಿರ್ಯಾದಿ ಶ್ರೀಮತಿ ರೇಣುಕಾಗಂಡ ನಿಂಗಪ್ಪ ಸಾ: ಮನ್ನೆರಾಳ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಫಿರ್ಯಾದಿ ಸಾರಾಂಸವೆನೆಂದರೆ. ಫಿರರ್ಯಾದಿ ದಾರಳು ದಿನಾಂಕ: 08-7-2007 ರಿಂದ ಮನ್ನೆರಾಳ ಗ್ರಾಮದಲ್ಲಿ ಅಂಗನವಾಡಿ ಕಾರ್ಯ ಕರ್ತೆ ಅಂತಾ ಕೆಲಸ ಮಾಡುತ್ತಿದ್ದು ನನ್ನಂತೆ ಅಂಗನವಾಡಿ ಕೇಂದ್ರ 1ರಲ್ಲಿ ಮುತ್ತವ್ವ ಗಂಡ ಚೆನ್ನಪ್ಪ ಗಡಾರವರು ಅಂಗನವಾಡಿ ಕಾರ್ಯ ಕರ್ತೆ ಅಂತಾ ಕೆಲಸ ಮಾಡುತಿದ್ದು ಹಾಗೂ ಅಲ್ಲಿಯೆ ಸಾಹಾಯಕಿ ಅಂತಾ ಮುತ್ತವ್ವ ಗಂಡ ರಾಮಣ್ಣ ಕರಿಗೌಡರ ವರು ಕೆಲಸಮಾಡುತಿದ್ದು ಇಂದು ದಿನಾಂಕ: 19-12-2015 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಕರ್ತವ್ಯ ಮುಗಿಸಿ ಅಂಗನವಾಡಿ ಕೇಂದ್ರಗಳನ್ನು ಬೀಗ ಹಾಕಿಕೊಂಡು ಹೊರಗೆ ಬಂದಾಗ ನಮ್ಮೂರ ಮಹಾಂತೇಶ ತಂದೆ ಶಂಕ್ರಪ್ಪ ಆಡೂರ ಈತನು ಈ ಹಿಂದೆ ಸುಮ್ಮ, ಸುಮ್ಮನೆ ನಮ್ಮ ಸಂಗಡ ಅದು ಏನು ಬಂದಿದೆ ಇದು ಏನು ಬಂದಿದೆ ಅಂತಾ ಕೇಳಿದಂತೆ ಕೇಳಿದಂತೆ ಇವತ್ತು ಕೂಡ ನಮ್ಮನ್ನು ತಡೆದು ನಿಲ್ಲಿಸಿ ನೂವು ಏನು ಇಲ್ಲಿ ಸೆಂಟಾ ಹರಿತೀರಿ ಅಂತಾ ಅಂದವನೆ ನೀವು ಶೆಂಗಾ ಕಾಳನ್ನು ನಮ್ಮ ಗ್ರಾಮದ ಗರ್ಬಿಣಿಯರಿಗೆ ಮತ್ತು ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಕೊಟ್ಟಿಲ್ಲಾ ಅಂತಾ ಅಂದಾಗ ನಾನು ಮತ್ತು ಮುತ್ತವ್ವ ಗಡಾದ ಹಾಗೂ ಮುತ್ತವ್ವ ಗಂಡ ರಾಮಣ್ಣ ಕರಿಗೌಡರ ಸೇರಿ ನಾವು ಎಲ್ಲಾ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಮತ್ತು ಗರ್ಬಿಣಿಯರಿಗೆ ಸಮನ್ವಯ ಸಮೀತಿಯ ಸಮಕ್ಷಮ ಹಂಚಿದ್ದು ಅದರಲ್ಲಿ ನಿನ್ನ ಹೆಂಡತಿಯಾದ ನೀಲವ್ವಳಿಗೂ ಕೂಡಾ ಕೊಟ್ಟಿರುತ್ತೇವೆ ಅಂತಾ ಅಂದಾಗ ಅವನು ನಿವೇನು ಕೊಟ್ಟಿದಿರಿ ನುಮ್ಮನ್ನು ಸೀರಿ ಬಿಚ್ಚಿ ಬಡಿಬೇಕು ನಿಮಗೆ ಎಲ್ಲಿ ಮರಿಯಾದಿ ಕಳಿಯಬೇಕು ಅಲ್ಲಿ ಮರಿಯಾದಿ ಕಳಿಯುತ್ತೇವೆ ಅಂತಾ ಅನ್ನುವಾಗ ನಾವು ಇದು ಸರಿಅಲ್ಲಾ ಅಂತಾ ಹೇಳಿದ್ದು ಅಲ್ಲಿಂದ ಗಂಗವ್ವ ಮಾದರ ಹಾಗೂ ಶಂಕ್ರಪ್ಪ ಹನಮನಾಳ ಇವರು ಹಾಗೂ ಗೂಳಪ್ಪ ರವರು ಕೂಡ ಮಹಾಂತೇಶನಿಗೆ ತಿಳಿಹೇಳಿ ಕಳಿಸಿದರು. ಕಾರಣ ನಮ್ಮನ್ನು ತಡೆದು ನಿಲ್ಲಿಸಿ ಅವಾಚ್ಯ ಬೈದಾಡಿ ನಮಗೆ ಅವಮಾನ ಮಾಡಿದ್ದು ಮಾಹಾಂತೇಶನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿದ್ದ ಫಿರ್ಯಾಧಿ ಸಾರಾಂಶದ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕುಷ್ಠಗಿ ಪೊಲೀಸ್ ಠಾಣೆ ಯು.ಡಿ.ಆರ್.ನಂ.23/2017 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ. 19-12-2015 ರಂದು 2-15 ಪಿ.ಎಂ.ಗೆ ಫಿರ್ಯಾದಿದಾರರಾದ ಶ್ರೀಮತಿ ಸರೋಜಾ ಗಂಡ ಪರಶುರಾಮ ಮಬ್ರುಮಕರ ಸಾ.ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರ ಮಗಳಾದ ಆಶಾ ಈಕೆಯು ಸುಮಾರು 5 ವರ್ಷದ ಹಿಂದೆ ಮೆಹಬೂಬಬಾಷ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದು, ಮದುವೆಯಾದ ನಂತರ ಆಕೆಯ ಮುಸ್ಲಿಂ ಧರ್ಮಕ್ಕೆ ಸೇರಿಕೊಂಡಿದ್ದು, ಮದುವೆಯಾದ ಗಂಡ ಹೆಂಡತಿ ಅನ್ಯೋನ್ಯವಾಗಿದ್ದು, ಸದರಿಯವಳು ಮದುವೆಯಾಗಿ 5 ವರ್ಷಗಳಾದರೂ ಆಕೆಗೆ ಮಕ್ಕಳಾಗದ್ದರಿಂದ ಆಕೆಯು ಚಿಂತಿ ಮಾಡುತ್ತಿದ್ದು, ದಿನಾಂಕ. 18-12-2015 ರಂದು ಮಧ್ಯಾನ್ಹ 12-00 ಗಂಟೆ ಸುಮಾರಿಗೆ ತನಗೆ ಮಕ್ಕಳಾಗಿಲ್ಲ ಅಂತಾ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಮ್ಮ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿದ್ದು, ನಂತರ ಆಕೆಯನ್ನು ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟೆಗೆ ಕರೆದುಕೊಂಡು ಹೋಗುತ್ತಿದ್ದಾಗ ಹುನಗುಂದ ಹತ್ತಿರ ಸಂಜೆ 5-30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡಿದ್ದು ಇರುತ್ತದೆ.
4) ಬೇವೂರು ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ. 107 ಸಿ.ಆರ್.ಪಿ.ಸಿ.
ಕಳಕಪ್ಪ ತಂದೆ ದೇವೇಂದ್ರಪ್ಪ ಕಮ್ಮಾರ ಇತನು ಬೇವೂರ ಪೊಲೀಸ್ ಠಾಣೆಯ ರೌಡಿ ಶೀಟದಾರನಿದ್ದು, ಸದರಿಯನನ್ನು ದಿನಾಂಕ:19.12.2015 ರಂದು ಬೆಳಿಗ್ಗೆ 09.30 ಗಂಟೆ ಸುಮಾರಿಗೆ ಮಂಗಳೂರು ಗ್ರಾಮದಲ್ಲಿ ರೌಡಿಶೀಟ್ದಾರನ ಬಗ್ಗೆ ಚೆಕ್ ಮಾಡಿ, ಅವರ ಬಗ್ಗೆ ವಿಚಾರಿಸಲಾಗಿ ಸದರಿ ರೌಡಿಶೀಟರದಾರನು ಮುಂಬರುವ ವಿಧಾನ ಪರಿಷತ್ ಮತ್ತು ಜಿಲ್ಲಾ ಪಂಚಾಯತ್  ಚುನಾವಣೆಯ ವಿಷಯದ ಬಗ್ಗೆ ಗ್ರಾಮದಲ್ಲಿ ಸಾರ್ವಜನಿಕರಲ್ಲಿ ವೈಷಮ್ಯ ಹುಟ್ಟಿಸಿ ಯಾವುದಾದರೂ ಒಂದು ಪಕ್ಷವನ್ನು ಬೆಂಬಲಿಸಿ ಗ್ರಾಮದಲ್ಲಿ ಜನರಿಗೆ ಅದೇ ಪಕ್ಷಕ್ಕೆ ಬೆಂಬಲಿಸುವಂತೆ ಹಾಗೂ ಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟಾಗುವಂತೆ ಮಾಡುತ್ತಿರುವ ಬಗ್ಗೆ ಮತ್ತು ಗ್ರಾಮದಲ್ಲಿ ಸಾರ್ವಜನಿಕರಲ್ಲಿ ವೈಷಮ್ಯ ಹುಟ್ಟಿಸಿ ಅವರ ನಡುವೆ ಮಾರಕಾಸ್ತ್ರಗಳನ್ನು ಹಿಡಿದು ಕೊಂಡು ಸಾರ್ವಜನಿಕರು ಹೊಡದಾಡಿ ಇವನಿಂದ ಗ್ರಾಮದಲ್ಲಿ ಕೋಮುಗಲಬೆ, ಅಶಾಂತತೆ ಹಾಗೂ ಕಾನೂನು ಸುವ್ಯವಸ್ಥೆ ಕದಡಿ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟಾಗುವ ಸಾದ್ಯತೆ ಕಂಡುಬಂದಿದ್ದರಿಂದ ಗ್ರಾಮದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮದಲ್ಲಿ ಶಾಂತಿ ನೆಲೆಸಲು ಆಪಾದಿತನ ಮೇಲೆ ಮುಂಜಾಗ್ರಾತ ಕ್ರಮವಾಗಿ ಪ್ರಕರಣ ದಾಖಲಿ ತನಿಖೆ ಕೈಗೊಂಡಿದೆ.
5) ಬೇವೂರು ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ. 107 ಸಿ.ಆರ್.ಪಿ.ಸಿ.
ಮೇಲ್ಕಾಣಿಸಿದ ಅಪಾದಿತನಾದ ಹುಸಙೇನಸಾಬ ಇತನು ಬೇವೂರ ಪೊಲೀಸ್ ಠಾಣೆಯ ಎಮ್.ಓ.ಬಿ. ಆಸಾಮಿ ಇದ್ದು ಸದರಿಯನನ್ನು ಇಂದು. ದಿನಾಂಕ:19.12.2015 ರಂದು ಮದ್ಯಾಹ್ನ    12-15 ಗಂಟೆ ಸುಮಾರಿಗೆ ಗುನ್ನಾಳ ಗ್ರಾಮದಲ್ಲಿ ಎಮ್.ಓ.ಬಿ. ಆಸಾಮಿದಾರನ ಬಗ್ಗೆ ಚೆಕ್ ಮಾಡಿ, ಅವರ ಬಗ್ಗೆ ವಿಚಾರಿಸಲಾಗಿ ಸದರಿ ಎಮ್.ಓ.ಬಿ. ಆಸಾಮಿದಾರನು ಮುಂಬರುವ ವಿಧಾನ ಪರಿಷತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆೆ ವಿಷಯದ ಬಗ್ಗೆ ಗ್ರಾಮದಲ್ಲಿ ಸಾರ್ವಜನಿಕರಲ್ಲಿ ವೈಷಮ್ಯ ಹುಟ್ಟಿಸಿ ಯಾವುದಾದರೂ ಒಂದು ಪಕ್ಷವನ್ನು ಬೆಂಬಲಿಸಿ ಗ್ರಾಮದಲ್ಲಿ ಜನರಿಗೆ ಅದೇ ಪಕ್ಷಕ್ಕೆ ಬೆಂಬಲಿಸುವಂತೆ ಹಾಗೂ ಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟಾಗುವಂತೆ ಮಾಡುತ್ತಿರುವ ಬಗ್ಗೆ ಮತ್ತು ಗ್ರಾಮದಲ್ಲಿ ಸಾರ್ವಜನಿಕರಲ್ಲಿ ವೈಷಮ್ಯ ಹುಟ್ಟಿಸಿ ಅವರ ನಡುವೆ ಮಾರಕಾಸ್ತ್ರಗಳನ್ನು ಹಿಡಿದು ಕೊಂಡು ಸಾರ್ವಜನಿಕರು ಹೊಡದಾಡಿ ಎಮ್.ಓ.ಬಿ. ಆಸಾಮಿನಿಂದ ಗ್ರಾಮದಲ್ಲಿ ಕೋಮುಗಲಬೆ, ಅಶಾಂತತೆ ಹಾಗೂ ಕಾನೂನು ಸುವ್ಯವಸ್ಥೆ ಕದಡಿ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟಾಗುವ ಸಾದ್ಯತೆ ಕಂಡುಬಂದಿದ್ದರಿಂದ ಗ್ರಾಮದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮದಲ್ಲಿ ಶಾಂತಿ ನೆಲೆಸಲು ಆಪಾದಿತನ ಮೇಲೆ ಮುಂಜಾಗ್ರಾತ ಕ್ರಮವಾಗಿ ಪ್ರಕರಣ ದಾಖಲಿಸಿದೆ.

0 comments:

 
Will Smith Visitors
Since 01/02/2008