Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, December 2, 2015

1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 209/2015  ಕಲಂ. 78(3) Karnataka Police Act.
ದಿನಾಂಕ: 01-12-2015 ರಂದು 9-30 ಪಿ.ಎಂ.ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಇಂದು ರಾತ್ರಿ 07-30 ಗಂಟೆಗೆ  ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಕಂದಕೂರ  ಗ್ರಾಮದ ಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಎ.ಎಸ್.ಐ (ಪಿ) ಹೆಚ್.ಸಿ-63, ಪಿ.ಸಿ-109, 116, 117, 161, ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ  ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 7-45 ಪಿ.ಎಂ ಗಂಟೆಗೆ ಹೊರಟು ಕಂದಕೂರ ಗ್ರಾಮದ ಪಂಚಾಯತ ಹತ್ತಿರ  ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಶರಣಪ್ಪ ತಂದೆ ಚೆನ್ನಬಸಪ್ಪ ಶಿವಸಿಂಪಿ ವಯಾ 35 ವರ್ಷ ಜಾತಿ:ಲಿಂಗಾಯತ ಉ: ಕೂಲಿಕೆಲಸ  ಸಾ: ಕಂದಕೂರ ತಾ: ಕುಷ್ಟಗಿ ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿದ್ದು, ಹಾಗೂ ತಾನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 1090-00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಒಂದು ಎಂ.ಯು. ಮೋನ್ ಕಂಪನಿಯ ಮೋಬೈಲ್ ಅಂ:ಕಿ: 600=00 ರೂ:ಗಳಷ್ಟು ಆಗಬಹುದು ಇವುಗಳನ್ನು ಜಪ್ತ ಪಡಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
2) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 125/2015  ಕಲಂ. 279, 337, 429 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 01-12-2015 ರಂದು ಸಂಜೆ 7 ಗಂಟೆಯ ಸುಮಾರಿಗೆ ಆರೋಪಿನು ತಾನು ನಡೆಯಿಸುತ್ತಿದ್ದ ಕೃಷರ ಜೀಪ ನಂ- ಕೆ.ಎ-37/ಎಮ್-4147 ನೇದ್ದನ್ನು ಯಲಬುರ್ಗಾ ಕಡೆಯಿಂದ ತುಮ್ಮರಗುದ್ದಿ ಗ್ರಾಮದ ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂಡ ನಡೆಯಿಸಿಕೊಂಡು ಹೋಗುತ್ತಿರುವಾಗ ಯಲಬುರ್ಗಾ ಸೀಮಾದಲ್ಲಿ ಬರುವ ಕಲ್ಲಪ್ಪ ಸಜ್ಜನ ಇವರ ಹೊಲದ ಹತ್ತಿರ ತನ್ನ ಎದುರುಗಡೆಯಿಂದ ಅಂದರೆ, ತುಮ್ಮರಗುದ್ದಿ ಗ್ರಾಮದ ಕಡೆಯಿಂದ ಯಲಬುರ್ಗಾ ಕಡೆಗೆ ಪಿರ್ಯಾದಿದಾರರು ತನ್ನ ಎತ್ತಿನ ಬಂಡಿಯನ್ನು ರಸ್ತೆಯ ಎಡಮಗ್ಗಲು ನಡೆಯಿಸಿಕೊಂಡು ಬರುತ್ತಿದ್ದು, ಆರೋಪಿತನಿಗೆ ಎತ್ತಿನ ಬಂಡಿಗೆ ಮತ್ತು ಎತ್ತಿಗೆ ಅಪಘಾತ ಮಾಡಿದರೆ ಎತ್ತು ಸಾಯುತ್ತದೆ ಅಂತಾ ಅವನಿಗೆ ಗೊತ್ತಿದ್ದರೂ ಸಹ ಸದರಿ ವಾಹನವನ್ನು ಹಾಗೆಯೇ ಜೋರಾಗಿ ನಡೆಯಿಸಿಕೊಂಡು ಹೋಗಿ ಬಂಡಿಯ ಬಲಭಾಗದಲ್ಲಿ ಕಟ್ಟಿದ ಎತ್ತಿಗೆ ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಅದರ ಬಾಯಿಗೆ, ಎದಗೆ ಭಾರಿ ಸ್ವರೂಪ ಪೆಟ್ಟು ಬಿದ್ದು ಗಾಯವಾಗಿದ್ದು ಮತ್ತು ಸದರಿ ಎತ್ತಿನ ಎಡ ಕೊಂಬಿಗೂ ಕೂಡಾ ಗಾಯವಾಗಿ ಮುರಿದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ.  ಸದರಿ ಸತ್ತ ಎತ್ತಿನ ಅಂದಾಜ ಕಿಮ್ಮತ್ 38,000-00 ರೂಪಾಯಿ ಆಗುತ್ತದೆ, ಸದರಿ ಬಂಡಿಯ ಎಡಗಡೆ ಕಟ್ಟಿದ ಎತ್ತಿಗೂ ಕೂಡಾ ಬಲ ಚೆಪ್ಪಗೆ ಭಾರಿ ಸ್ವರೂಪದ ಒಳಪೆಟ್ಟಾಗಿ ಬಾವು ಬಂದಿದ್ದು ಇರುತ್ತದೆ.  ಸದರ ಅಪಘಾತದಲ್ಲಿ ಎತ್ತಿನ ಬಂಡಿಯಲ್ಲಿದ್ದ ಯಲ್ಲಪ್ಪ ದಂಡಿನ ಈತನ ಬಲ ಬುಜಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ.  ಸದರಿ ಆರೋಪಿತನು ಅಪಘಾತ ಮಾಡಿದ ನಂತರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 269/2015  ಕಲಂ. 323, 324, 354, 504, 506 ಸಹಿತ 34 ಐ.ಪಿ.ಸಿ:.  
ದಿನಾಂಕ 01-12-2015 ರಂದು ರಾತ್ರಿ 22-00 ಗಂಟೆಗೆ ಶ್ರೀಮತಿ  ದಿಲ್ಷಾನ ತಂದೆ ಹುಸೇನಪೀರಾ ವಯಾ: 40 ವರ್ಷ ಜಾ: ಮುಸ್ಲಿಂ ಉ: ಗೃಹಿಣಿ ಸಾ: ಅಮರಭಗತ್ ಸಿಂಗ್ ನಗರ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಹೇಳಿಕೆ ನೀಡಿದ್ದು ಅದರ ಸಾರಂಶವೇನೆಂದರೆ,  ದಿನಾಂಕ 01-12-2015 ರಂದು ರಾತ್ರಿ 21-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು & ಅವರ ಮಕ್ಕಳಾದ ಆಸ್ಮಾ ಹಾಗೂ ನಗ್ಮಾ ಇವರು ಅಮರಭಗತ್ ಸಿಂಗ್ ನಗರದ ಕಾರ್ಮಿಕರ ಯೂನಿಯನ್ ಆಪೀಸ್ ಹಿಂದೆ ಇರುವ ಬಯಲು ಜಾಗೆಯಲ್ಲಿ ಬಹಿರ್ದೆಸೆಗೆ ಹೋದ ಕಾಲಕ್ಕೆ ಆರೋಫಿತನಾದ ಮಂಜುನಾಥ ಈತನು  ಪಿರ್ಯಾಧಿದಾರರು  & ಅವರ ಮಕ್ಕಳು ಬಹಿರ್ದೆಸೆ ಕುಳಿತ ಜಾಗಕ್ಕೆ ಮೂತ್ರ ವಿಸರ್ಜನೆ ಮಾಡಿ , ಪುನಃ  ಬಂದಿದ್ದಕ್ಕೆ, ಈ ರೀತಿ ಹೆಣ್ಣುಮಕ್ಕಳು ಬಹಿರ್ದೆಸೆ ಮಾಡುವ ಜಾಗಕ್ಕೆ ಗಂಡು ಮಕ್ಕಳು ಬರಬಾರದು ಅಂತಾ ಹೇಳಿದರೂ ಕೇಳದೇ  ಆರೋಪಿತನು ಪಿರ್ಯಾಧಿದಾರರ ಮೇಲೆ ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದು ರಕ್ತಗಾಯ ಗೊಳಿಸಿದ್ದು, ಅದನ್ನು ನೋಡಿದ ಸಾಕ್ಷಿದಾರರು ಬಿಡಿಸಲು ಬಂದಾಗ ಆರೋಪಿತನ ಹೆಂಡತಿ ಅನ್ನಪೂರ್ಣ , ತಾಯಿ ಅನೂಸೂಯಮ್ಮ ಇವರು ಬಂದು ಪಿರ್ಯಾಧಿದಾರರ ಮಕ್ಕಳಾಧ ನಗ್ಮಾ ಇವಳಿಗೆ ಹಾಗೂ ಗರ್ಭಿಣಿಯಾದ ಆಸ್ಮಾ ಇವಳಿಗೆ ಕೈಯಿಂದ ಹೊಡಿ ಬಡಿ ಮಾಡಿ ಅವಾಚ್ಯ ಶಭ್ದಗಳಿಂದ ಬೈದಾಡಿ ಜೀವಧ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ಹೇಳಿಕೆಯ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 270/2015  ಕಲಂ. 143, 147, 323, 354, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ 01-12-2015 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿ ಮಂಜುನಾಥ ತಂದೆ ಬಸಪ್ಪ ಕಳ್ಳಿಮನಿ, ವಯಾ: 38 ವರ್ಷ, ಜಾ: ಕುರುಬರು ಉ: ಫಿಟ್ಟರ್ ಕೆಲಸ, ಸಾ: ಅಮರಭಗತ್ ಸಿಂಗ್ ನಗರ ಗಂಗಾವತಿ, ಇವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು  ಅದರ ಸಾರಂಶವೇನೆಂದರೆ, ಫಿರ್ಯಾಧಿದಾರರು 01-12-2015 ರಂದು ರಾತ್ರಿ 8-45 ಗಂಟೆ ಸುಮಾರಿಗೆ ಊಟ ಮಾಡಿ ತಮ್ಮ ಮನೆಯ ಮುಂದೆ ನಿಂತುಕೊಂಡಿದ್ದಾಗ ಆರೋಪಿತರಾದ ದಿಲ್ ಷಾದ ಮತ್ತು ಆಶಾ ಇವರು ಬಂದು ಫಿರ್ಯಾದಿಗೆ ಎನಲೇ ಸೂಳೇ ಮಗನೆ ನಾವು ಲೆಟ್ರೀನ್ ಕುಳಿದ್ದು ನೋಡುತ್ತೀಯನೇಲೆ ಸೂಳೇ ಮಗನೆ ಅಂತಾ ಜಗಳ ಮಾಡಿದ್ದು ಸದರಿ ಈ ಜಗಳವನ್ನು ನೋಡಿದ ಅವರ ಸಂಬಂದಿಕರು ಇರ್ಫಾನ್, ಮೈನುದ್ದೀನ್, ಆರೀಫ್ ಮೈಬೂಬು ಇವರು ಬಂದವರೆ ಫಿರ್ಯಾದಿಗೆ ಎನಲೇ ಸೂಳೇ ಮಗನೆ ನಮ್ಮ ಮನೆಯ ಹೆಣ್ಣುಮಕ್ಕಳು ಲೆಟ್ರೀನ್ ಕುಳಿತು ಕೊಳ್ಳೊದನ್ನ ನೋಡುತ್ತೀಯ ಲೇ ಈ ಸೂಳೇ ಮಗನ್ನ ಇವತ್ತು ಜೀವಸಹಿತ ಬಿಡಬಾರದ್ದು  ಅಂತಾ ಅಂದವರೆ ನನಗೆ ಕೈಯಿಂದ ಎದಗೆ ಬಾಯಿಗೆ ಹೊಡಿ-ಬಡಿ ಮಾಡಿದ್ದು ಜಗಳವನ್ನು ಬಿಡಿಸಲು ಬಂದ ಫಿರ್ಯಾದಿಯ ಹೆಂಡತಿ ಅನ್ನಪೂರ್ಣ ಇವಳಿಗೆ  ಆರೀಫ್ ಈ ಸೂಳೇದು ಬಾಳ ಆಗೈತಲೇ ಅವಳನ್ನು ಬಿಡಬಾಡ್ರಲೇ ಅಂತಾ ಅಂದವನೆ ಹೊಟ್ಟೆಗೆ ಮತ್ತು ಮೈ ಕೈಗೆ ಕೈಯಿಂದ ಮತ್ತು ಕಾಲಿಂದ ಹೊಡೆ ಬಡೆ ಮಾಡಿದ್ದು ಅಲ್ಲದೆ ಸೀರೆ ಹಿಡಿದು ಎಳೆದಾಡಿದ್ದು ಮತ್ತು ತಾಯಿ ಅನಸೂಯಮ್ಮ ಇವಳಿಗೂ ಸಹ ಅವಾಚ್ಯವಾಗಿ ಬೈದು ಕೈಯಿಂದ ಬಾಯಿಗೆ ತಲೆಗೆ ಮತ್ತು ಮೈ ಕೈಗೆ ಎಲ್ಲರೂ ಸೇರಿ ಹೊಡೆ ಬಡೆ ಮಾಡಿ ಕೂದಲು ಹಿಡಿದು ಎಳೆದಾಡಿದ್ದು ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. 

0 comments:

 
Will Smith Visitors
Since 01/02/2008