Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, December 3, 2015

1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 115/2015  ಕಲಂ. 363, 302, 201 ಐ.ಪಿ.ಸಿ:
ದಿನಾಂಕ: 02-12-2015 ರಂದು ಮದ್ಯಾಹ್ನ 01-00 ಗಂಟೆಗೆ ಜಿಲ್ಲಾ ನಿಸ್ತಂತು ಕೇಂದ್ರದಿಂದ ಕೊಪ್ಪಳದ ಕುಷ್ಞಗಿ ರಸ್ತೆಯಲ್ಲಿ ಓಜನಹಳ್ಳಿ ಕಾಲುವೆ ಹತ್ತಿರ ಹೊಲವೊಂದ ನೀರಿಲ್ಲದ ಪಾಳು ಬಿದ್ದ ಬಾವಿಯಲ್ಲಿ ಅಪರಿಚಿತ ಶವವು ದೊರಕಿದ ಬಗ್ಗೆ ಮಾಹಿತಿ ತಿಳಿಸಿದ ಮೇರೆಗೆ ನಮ್ಮ ಠಾಣೆಯಲ್ಲಿ ದಾಖಲಾದ ಗುನ್ನೆ ನಂ: 115/2015 ಕಲಂ 363 ಐ.ಪಿ.ಸಿ. ಪ್ರಕರಣದಲ್ಲಿ ಅಪಹರಣಕ್ಕೊಳಗಾದ ವ್ಯಕ್ತಿಯ ಪತ್ತೆ ಕುರಿತು, ಬೂದಿಹಾಳ ಗ್ರಾಮಕ್ಕೆ ಹೋಗಿ ಸದರ ಅಪಹರಣಗೊಂಡ ವ್ಯಕ್ತಿಯ ಅಣ್ಣನಾದ ಫಿರ್ಯಾದಿ ಲಕ್ಕಪ್ಪ ತಂದಿ ಶಿವಪ್ಪ, ಹಳ್ಳಿ ಸಾ: ಬೂದಿಹಾಳ ಇವನನ್ನು ಕರೆದುಕೊಂಡು ಕೊಪ್ಪಳಕ್ಕೆ ಹೋಗಿ, ಸ್ಥಳಕ್ಕೆ ಭೇಟಿ ನೀಡಿದಾಗ, ಸದರ ಫಿರ್ಯಾದಿಯು ನೀರಿಲ್ಲದ ಪಾಳು ಬಾವಿಯಲ್ಲಿ ಬಿದ್ದ ಶವದ ಹತ್ತಿರ ಇದ್ದ ಬಟ್ಟೆಗಳನ್ನು ನೋಡಿ ತನ್ನ ತಮ್ಮನಾದ ಕರಿಯಪ್ಪನದೆ ಬಟ್ಟೆಗಳು ಅಂತ ಗುರುತಿಸಿದ್ದು, ನಂತರ ಸೇರಿದ್ದ ಜನರು ಬಾವಿಯಲ್ಲಿದ್ದ ಶವವನ್ನು ಮೇಲಕ್ಕೆ ತಂದು ನೆಲದ ಮೇಲೆ ಹಾಕಿದ್ದು, ಸದರ ಫಿರ್ಯಾದಿಯು ಶವವನ್ನು ನೋಡಿ, ಈ ಶವವು ತನ್ನ ತಮ್ಮ ಸದರ ಕರಿಯಪ್ಪನದೆ ಅಂತ ಗುರುತಿಸಿ, ಶವವನ್ನು ಪರಿಶೀಲಿಸಿ, ನಂತರದ ಅವನು ತನ್ನ ತಮ್ಮನ ಮರಣದ ಬಗ್ಗೆ ಲಿಖಿತವಾಗಿ ಫಿರ್ಯಾದಿ ಕೊಟ್ಟಿದ್ದು, ಸದರ ಫಿರ್ಯಾದಿಯಲ್ಲಿ ತಾನು ದಿನಾಂಕ: 30-11-2015 ರಂದು ತನ್ನ ತಮ್ಮ ಕರಿಯಪ್ಪ ಇವನನ್ನು ತಮ್ಮ ಗ್ರಾಮದ ಮಲ್ಲಿಕಾರ್ಜುನ ತಾಯಿ ಸೋಮವ್ವ, ಹರಿಜನ ಇವನು ಅಪಹರಣ ಮಾಡಿಕೊಂಡು ಹೋದ ಬಗ್ಗೆ ಕೇಸ್ ಮಾಡಿಸಿದ್ದು, ಇಂದು ದಿನಾಂಕ: 02-12-2015 ರಂದು ಮದ್ಯಾಹ್ನ 03-00 ಗಂಟೆಗೆ ನಾನು ಮನೆಯಲ್ಲಿದ್ದಾಗ, ಅಳವಂಡಿ ಪೊಲೀಸರು ಬಂದು ಕೊಪ್ಪಳದಲ್ಲಿ ಒಬ್ಬ ಮನುಷ್ಯನ ದೇಹ ಸಿಕ್ಕಿರುತ್ತದೆ, ಆ ಮನುಷ್ಯನ ದೇಹವನ್ನು ಗುರುತಿಸಲು ಕರೆದಿದ್ದರಿಂದ ನಾನು ಪೊಲೀಸರೊಂದಿಗೆ ಕೊಪ್ಪಳದ ಕುಷ್ಟಗಿ ರಸ್ತೆಯಲ್ಲಿ ಬರುವ ಓಜನಹಳ್ಳಿ ಕೆನಾಲ್ ಹತ್ತಿರ ಹೊಲವೊಂದರ ನೀರಿಲ್ಲದ ಪಾಳು ಬಿದ್ದ ಬಾವಿಯಲ್ಲಿ ಒಬ್ಬ ವ್ಯಕ್ತಿಯ ಶವವನ್ನು ನೋಡಿದ್ದು, ಆ ಶವದ ಹತ್ತಿರ ಬಟ್ಟೆಗಳು ಬಿದ್ದಿದ್ದು, ನೋಡಲು ಆ ಬಟ್ಟೆಗಳು ಅಪಹರಣಗೊಂಡ ನನ್ನ ತಮ್ಮ ಕರಿಯಪ್ಪನದೆ ಅಂತ ಗುರುತಿಸಿದ್ದು, ನಂತರ ಶವವನ್ನು ಬಾವಿಯಿಂದ ಹೊರಗೆ ತೆಗೆದಿದ್ದು, ನೋಡಲು ಶವವು ಸಹ ನನ್ನ ತಮ್ಮನದೇ ಇದ್ದು,  ಅವನ ದೇಹವನ್ನು ಪರಿಶೀಲಿಸಿ ನೋಡಲು ಅವನ ಎಡಗಡೆ ತಲೆಯ ಭಾಗಕ್ಕೆ ಭಾರಿ ಹೊಡೆತ ಬಿದ್ದು ತಲೆ ಒಡೆದು ಹೋಗಿದ್ದು, ಬಲ ತೋಳಿಗೆ ಪೆಟ್ಟು ಬಿದ್ದ ಗಾಯದ ಕಲೆಗಳು ಇದ್ದು, ನನ್ನ ತಮ್ಮನಿಗೆ ಈ ರೀತಿ ಆಗಿರುವದನ್ನು ನೋಡಿದರೆ, ನನ್ನ ತಮ್ಮನನ್ನು ಅಪಹರಣ ಮಾಡಿಕೊಂಡ ಹೋದ ನಮ್ಮೂರ ಮಲ್ಲಿಕಾರ್ಜುನ ತಾಯಿ ಸೋಮವ್ವ, ಹರಿಜನ ಇವನು ಹಾಗೂ ಇನ್ನಿತರೊಂದಿಗೆ ಸೇರಿಕೊಂಡು ಯಾವುದೋ ಉದ್ದೇಶದಿಂದ ಹೊಡೆದು ಕೊಲೆ ಮಾಡಿ, ಮಾಡಿದ ಕೊಲೆಯನ್ನು ಮುಚ್ಚಿ ಹಾಕಲು ಶವವನ್ನು ನೀರಿಲ್ಲದ ಪಾಳು ಬಿದ್ದ ಬಾವಿಯಲ್ಲಿ ಹಾಕಿದ್ದು ಇರುತ್ತದೆ ಅಂತಾ ವಗೈರೆಯಾಗಿ ಕೊಟ್ಟಿದ್ದರ ಮೇಲಿಂದ ಸದರ ಪ್ರಕರಣದಲ್ಲಿ ಕಲಂ 302, 201 ಐ.ಪಿ.ಸಿ. ನೇದ್ದವುಗಳನ್ನು ಸೇರ್ಪಡೆ ಮಾಡಿಕೊಳ್ಳಲು ಮಾನ್ಯರವರಲ್ಲಿ ವಿನಂತಿ ಅಂತಾ ಮುಂತಾಗಿ ಸಾರಾಂಶದ ಮೆಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 182/2015  ಕಲಂ. 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 02-12-2015 ರಂದು ರಾತ್ರಿ 8-30 ಗಂಟೆಗೆ ಫಿರ್ಯಾಧಿದಾರನಾದ ಶ್ರೀ ಬೆಟ್ಟಪ್ಪ ತಂದೆ ಭೀಮಪ್ಪ ದಂಡಿನ, ವಯಾ 65 ವರ್ಷ ಜಾತಿ ಕುರುಬರು ಉ : ಹೊಟೇಲ್ ಕೆಲಸ ಮತ್ತು ಒಕ್ಕಲುತನ ಸಾ : ಕನಕಾಪೂರ ತಾ : ಗಂಗಾವತಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೇನೆಂದರೆ, ನಾನು ನಮ್ಮೂರ ಕ್ರಾಸ್ದಲ್ಲಿ ಕನಕಗಿರಿ-ತಾವರಗೇರಾ ರಸ್ತೆಯ ಪಕ್ಕದಲ್ಲಿ ಹೊಟೇಲ್ ಮತ್ತು ಪಾನ್ ಶಾಪ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತೇನೆ. ನನ್ನಂತೆ ನಮ್ಮ 2 ನೇ ಅಣ್ಣ-ತಮ್ಮಂದಿರ ಪೈಕಿ ಲಕ್ಷ್ಮಣ ತಂದೆ ನಿಂಗಪ್ಪ ದಂಡಿನ ಈತನು ಸಹಾ ನಮ್ಮ ಎದುರುಗಡೆ ಕನಕಗಿರಿ-ತಾವರಗೇರಾ ರಸ್ತೆಯ ಪಕ್ಕದಲ್ಲಿ ಕನಕಾಪೂರ ಕ್ರಾಸ್ದಲ್ಲಿ ಹೊಟೇಲ್ ಮತ್ತು ಸಣ್ಣ ಕಪಾಟು ಇಟ್ಟುಕೊಂಡು ತನ್ನ ಹೆಂಡತಿ ಗಂಗಮ್ಮ ಮತ್ತು ಮಕ್ಕಳೊಂದಿಗೆ ಜೀವನ ನಡೆಸುತ್ತಾನೆ. ದಿನಾಂಕ 02-12-2015 ರಂದು ಸಂಜೆ 7-00 ಗಂಟೆಯ ಸುಮಾರಿಗೆ ನಮ್ಮ ಪಾನ್ಶಾಪ್ ಅಂಗಡಿಯಲ್ಲಿ ಇದ್ದೇನು, ನಮ್ಮ ಅಂಗಡಿಯ ಮುಂದೆ ಲಕ್ಷ್ಮಣ ದಂಡಿನ ಈತನ ಹೆಂಡತಿ ಗಂಗಮ್ಮ ಈಕೆಯು ತನ್ನ 5 ವರ್ಷ ಮಗ ಮಾಳಪ್ಪನೊಂದಿಗೆ ತಮ್ಮ ಹೊಟೇಲ್ ಪಕ್ಕದಲ್ಲಿರುವ ಕಟ್ಟಿಗೆ ಕಪಾಟದಲ್ಲಿ ವ್ಯಾಪಾರ ಮಾಡುತ್ತಾ ಕುಳಿತುಕೊಂಡಿದ್ದಳು. ಸಂಜೆ 7-20 ಗಂಟೆಯ ಸುಮಾರಿಗೆ ಕನಕಗಿರಿ ಕಡೆಯಿಂದ ಅಶೋಕ ಲೀಲ್ಯಾಂಡ್ ಲಾರಿ ನಂ.ಕೆಎ-09/9176 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ಕನಕಾಪೂರ ಕ್ರಾಸ್ದಲ್ಲಿರುವ ರೋಡ್ ಹಂಪ್ಸ್ಗಳನ್ನು ಇದ್ದರೂ ಅದನ್ನು ಲೆಕ್ಕಸದೇ ಅತೀ ವೇಗವಾಗಿ ಬಂದು ರಸ್ತೆಯ ಪಕ್ಕದಲ್ಲಿರುವ ಲಕ್ಷ್ಮಣ ದಂಡಿನ ಇವರ ಹೊಟೇಲ್ ಪಕ್ಕದಲ್ಲಿರುವ ಕಪಾಟಿಗೆ ಜೋರಾಗಿ ಟಕ್ಕರ್ ಕೊಟ್ಟು ಕಪಾಟು ಸಮೇತ ಮುಂದುಕ್ಕೆ ನೂಕಿಕೊಂಡು ಮನೆಯೊಳಗೆ ನುಗ್ಗಿದ್ದು, ಇದರಿಂದ ಕಪಾಟಿನಲ್ಲಿದ್ದ ಗಂಗಮ್ಮಳ ತಲೆಗೆ, ಬಲಗಡೆ ಕಿವಿಗೆ ಭಾರಿ ಪೆಟ್ಟಾಗಿದ್ದು 2 ಮೊಣಕೈಗಳಿಗೆ ಭಾರಿ ಪೆಟ್ಟಾಗಿ ಮುರಿದಿದ್ದು, ಇದರಿಂದ ಗಂಗಮ್ಮಳ ರಕ್ತ ಸ್ರಾವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾಳೆ. ಮತ್ತು ಅವಳ ಹತ್ತಿರ ಇದ್ದ 5 ವರ್ಷ ಮಗ ಮಾಳಪ್ಪನಿಗೆ ಕಪಾಟಕ್ಕೆ, ತಲೆಗೆ ಪೆಟ್ಟಾಗಿದ್ದು, ಈ  ಅಪಘತ ಮಾಡಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತೇನೆ ಕ್ಲೀನರ್ ಮಾತ್ರ ಇರುತ್ತಾನೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 251/2015  ಕಲಂ. 379 ಐ.ಪಿ.ಸಿ:. 
ದಿನಾಂಕಃ 02-12-2015 ರಂದು 2-25pm ಗಂಟೆಯ ಪಿರ್ಯಾದಿದಾರರಾದ ತಿಮ್ಮಣ್ಣ ತಂದಿ ದೊಡ್ಡಪ್ಪ ಉಪ್ಪಾರ ವಯ-32 ವರ್ಷ ಜಾ. ಉಪ್ಪಾರ ಸಾ. ಸೋಮನಾಳ ಠಾಣೆಗೆ ಹಾಜರಾಗಿ ಒಂದು ಪಿರ್ಯಾದಿ ಹಾಜರಾಗಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ.ದಿನಾಂಕ-19-09-2015 ರಂದು ನನ್ನ ಅಣ್ಣನ ಮಗನಾದ ಮುದಿಯಪ್ಪ ತಂದಿ ಬಸಪ್ಪ ಉಪ್ಪಾರ ಈತನಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ಆತನಿಗೆ ಕಾರಟಗಿಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಮಾಡಿಸಲೇಂದು ಕರೆದುಕೊಂಡು ಬಂದಿದ್ದೇನು ಅಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ನನ್ನ ಮೋಟಾರ್ ಸೈಕಲ್ ನ್ನು ಕಾರಟಗಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಬಿಟ್ಟು ಆಸ್ಪತ್ರೆಯ ಒಳಗಡೆ ಹೋಗಿ ಚಿಕಿತ್ಸೆ ಕುರಿತು ನಮ್ಮ ಅಣ್ಣನ ಮಗನಿಗೆ ದಾಖಲು ಮಾಡಿ ಮದ್ಯಾಹ್ನ 12-30 ಗಂಟೆಗೆ ಆಸ್ಪತ್ರೆಯ ಹೋರಗಡೆ ಬಂದು ನೋಡಲು ನಾನು ನಿಲ್ಲಿಸಿದ್ದ ನನ್ನ ಮೋಟಾರ್ ಸೈಕಲ್ ನಂ ಕೆ.ಎ-37 ಎಕ್ಷ್ 4138  ನೆದ್ದು ಕಾಣಲಿಲ್ಲಾ ನಂತರ ನಾನು ನಮ್ಮ ಸಂಬಂದಿಕರಿಗೆ ಎಲ್ಲರಿಗೂ ನಮ್ಮ ಗೆಳೆಯರಿಗೆ ಎಲ್ಲರಿಗೂ ವಿಚಾರಿಸಿ ನೋಡಿದ್ದು ಎಲ್ಲಿಯೂ ಮಾಹಿತಿ ಸಿಕ್ಸಿರುವುದಿಲ್ಲಾ ಸದರಿ ನನ್ನ ಮೋಟಾರ್ ಸೈಕಲ್ ನ್ನು ಗಂಗಾವತಿ ಸಿಂಧನೂರು ರಾಯಚೂರು, ಕುಷ್ಟಗಿ ಸಿರಗುಪ್ಪಾ ಕೊಪ್ಪಳ ಕಡೆಗಳಲ್ಲಿ ನಾನು ಮತ್ತು ನಮ್ಮ ಗೆಳೆಯ ಮೌಲಾ ಹುಸೇನ್ ತಂದಿ ಇಮಾಮ್ ಸಾಬ ಮುಜಾವರ ವಯಾ-38 ವರ್ಷ ಇಬ್ಬರು ಕೂಡಿ ಹುಡುಕಾಡಲು ಎಲ್ಲಿಯೊ ಸಿಗದ ಕಾರಣ ಇಂದು ಠಾಣೆಗೆ ಬಂದು ಈ ದೂರು ನೀಡುತ್ತಿದ್ದೆನೆ ಸದರಿ ನನ್ನ ಹೊಂಡಾ ಶೈನ್ ಮೋಟಾರ್ ಸೈಕಲ್ ಇದ್ದು ಇದರ ನಂ ಕೆ.ಎ-37 ಎಕ್ಷ್ 4138  ENGINE NUMBER- JC36ET7076623 CHASSISS NO- ME4JC36JEET044866  ಅಂತಾ ಇದ್ದು ಅದು ಗ್ರೆ ಬಣ್ಣ ದಿರುತ್ತದೆ ಅದರ ಅಂದಾಜು ಕಿಮ್ಮತ್ತು 25,000=00 ಆಗುತ್ತಿತ್ತು ಸದರಿ ನನ್ನ ಮೋಟಾರ್ ಸೈಕಲ್ ನ್ನು ದಿನಾಂಕ-19-09-2015 ರಂದು ಮದ್ಯಹ್ನಾ 12-00 ಗಂಟೆಯಿಂದ 12-30 ಗಂಟೆಯ ಅವಧಿಯಲ್ಲಿ ಸರಕಾರಿ ಆಸ್ಪತ್ರೆ ಕಾರಟಗಿಯ ಆವರಣದಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 346/2015  ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ:- 02-12-2015 ರಂದು ಮಧ್ಯಾಹ್ನ 12:30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಬೇಗಂ ಗಂಡ ಚಮನಸಾಬ ವಯಸ್ಸು: 50 ವರ್ಷ ಜಾತಿ: ಮುಸ್ಲಿಂ, ಉ: ಮನೆಕೆಲಸ ಸಾ: ಕಾಕಡರ ಓಣಿ, 9ನೇ ವಾರ್ಡ, ಸರಕಾರಿ ಆಸ್ಪತ್ರೆ ಎದುರಿಗೆ, ಕಂಪ್ಲಿ ತಾ: ಹೊಸಪೇಟೆ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫೀರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಕಂಪ್ಲಿ ನಿವಾಸಿ ಇದ್ದು ಮನೆಕೆಲಸ ಕೆಲಸ ಮಾಡಿಕೊಂಡಿರುತ್ತೇನೆ. ನನ್ನ ಗಂಡನಾದ ಚಮನಸಾಬ ತಂದೆ ಹುಸೇನಸಾಬ 55 ವರ್ಷ ಈತನು ಟಂಟಂ ವಾಹನ ನಡೆಸಿಕೊಂಡಿದ್ದನು. ಆದರೆ ಇತ್ತಿಚಿಗೆ ಕೆಲಸವನ್ನು ಬಿಟ್ಟಿದ್ದು ಕೆಲಸಕ್ಕಾಗಿ ಅಲ್ಲಿ ಇಲ್ಲಿ ತಿರುಗಾಡಿಕೊಂಡು ಹೋಗಿ ಬಂದು ಮಾಡುತ್ತಿದ್ದನು. ಬೇರೆ ಬೇರೆಯವರ ಗಾಡಿಗಳಲ್ಲಿ ಕೆಲಸ ಮಾಡುತ್ತಿದ್ದನು.   ಅದೆ ಪ್ರಕಾರ ನಿನ್ನೆ ದಿನಾಂಕ:  01-12-2015 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ನನ್ನ ಗಂಡನು ಕೆಲಸಕ್ಕಾಗಿ ಗಂಗಾವತಿಯಲ್ಲಿರುವ ನನ್ನ ತಮ್ಮನಾದ ಖಾಸೀಮಬಾಬ ತಂದೆ ಖಾಜಾಹುಸೇನಸಾಬ 45 ವರ್ಷ ಇವರ ಮನೆಗೆ ಹೋಗಿದ್ದನು. ನಂತರ ಇಂದು ದಿನಾಂಕ: 02-12-2015 ರಂದು ಮುಂಜಾನೆ 11:00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನನ್ನ ಗಂಡನ ಅಣ್ಣನ ಮಗನಾದ ನೂರಪಾಷಾ ತಂದೆ ನನ್ನೆಸಾಬ 35 ವರ್ಷ ಸಾ: ಕಂಪ್ಲಿ ಈತನು ಬಂದು ತಿಳಿಸಿದ್ದೇನಂದರೆ, “ನನ್ನ ಗಂಡನಾದ ಚಮನಸಾಬನಿಗೆ ಪ್ರಗತಿನಗರದಲ್ಲಿ ಒಂದು ಲಾರಿ ಅಪಘಾತ ಮಾಡಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಆತನ ಶವವನ್ನು ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿರುವದಾಗಿ ಜಂಗಮರ ಕಲ್ಗುಡಿ ಯ ಉಸ್ಮಾನ ಎಂಬುವರು ಪೋನ್ ಮಾಡಿ ತಿಳಿಸಿರುತ್ತಾರೆಅಂತಾ ಹೇಳಿದನು. ಕೂಡಲೇ ನಾವು ಆಸ್ಪತ್ರೆಗೆ ಬಂದು ನೋಡಲಾಗಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ನನ್ನ ಗಂಡನೆ ಇದ್ದು ಅಲ್ಲಿದ್ದ ಎಸ್.ಶರಣಪ್ಪ ತಂದೆ ಲಕ್ಷ್ನಣ ಸಾ: ಪ್ರಗತಿನಗರ ಮತ್ತು ಹೊನ್ನೂರಪ್ಪ ತಂದೆ ಆಂಜನಪ್ಪ ತಬಲ ಸಾ: ಪ್ರಗತಿನಗರ ಎಂಬುವವರು ತಿಳಿಸಿದ್ದೇನಂದರೆ, “ ಇಂದು ಬೆಳಿಗ್ಗೆ 8:20 ಗಂಟೆಯ ಸುಮಾರಿಗೆ ನಿಮ್ಮ ಗಂಡ ಚಮನಸಾಬನು ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯ ಎಡಗಡೆ ಇದ್ದ ಸಮಯದಲ್ಲಿ ಸಿಂಧನೂರ ಕಡೆಯಿಂದ ಬಂದ ಲಾರಿ ಚಾಲಕನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ  ಅಪಾಯಕರವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಚಮನಸಾಬನಿಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿದ್ದರಿಂದ ಲಾರಿಯ ಹಿಂದಿನ ಗಾಲಿ ಮೈಮೇಲೆ ಹಾಯ್ದು ಹೊಟ್ಟೆ ಹಾಗೂ ಸೊಂಟಕ್ಕೆ ತೀವ್ರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟನು. ಅಪಘಾತ ಮಾಡಿದ ಲಾರಿ ನೋಡಲು ಅದರ ನಂಬರ್ ಕೆ.ಎ-25/ಬಿ-6889 ಅಂತಾ ಇದ್ದು ಅದರ ಚಾಲಕನ ಹೆಸರು ವಿಚಾರಿಸಲು ಗೋಪಾಲ ತಂದೆ ಯಲ್ಲಪ್ಪ ವಯಸ್ಸು: 41 ವರ್ಷ ಸಾ: ಕುಡತನಿ ತಾ: ಬಳ್ಳಾರಿ ಹಾ:ವ: ರಾಮಸಾಗರ,ತಾ: ಹೊಸಪೇಟೆ ಅಂತಾ ತಿಳಿಸಿದನು. ನಂತರ ರಸ್ತೆಯಲ್ಲಿ ಹೊರಟಿದ್ದ ದನದ ವ್ಯಾಪಾರ ಮಾಡುವ ಉಸ್ಮಾನ ಸಾ: ಜಂಗಮರ ಕಲ್ಗುಡಿ ಎಂಬುವವರು ನಿಮ್ಮ ಗಂಡನನ್ನು ನೋಡಿ ಗುರುತಿಸಿ ಕಂಪ್ಲಿಗೆ ಪೋನ್ ಮಾಡಿ ತಿಳಿಸಿರುತ್ತಾರೆಅಂತಾ ಹೇಳಿದರು. ನಂತರ  ನಾನು ಈಗ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ಅಂತಾ ಮುಂತಾಗಿ ನೀಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
5) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 159/2015  ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.

ದಿನಾಂಕ:02-12-2015 ರಂದು 8-30 ಪಿಎಂಕ್ಕೆ ಕುಕನೂರ ಸರ್ಕಾರೀ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, 8-40 ಪಿಎಂದಿಂದ 9-20 ಪಿಎಂದವರೆಗೆ ಗಾಯಾಳುವಿನ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನು ಕುಕನೂರಿಗೆ ಟೈರ್ ಖರೀದಿಸಲು ಬಂದು, ಟೈರ್ ಸಿಗದ ಕಾರಣ, ವಾಪಸ್ ಊರಿಗೆ ಹೋಗಲು ಅಂತಾ ತಾನು ಚಲಾಯಿಸುತ್ತಿದ್ದ  ತನ್ನ ಮೋ.ಸೈ. ನಂ:ಜಿಎ-04 ಕೆ-8932 ನೇದ್ದರಲ್ಲಿ ಹಿಂದೆ ಬಾಳಪ್ಪ ಹೊಸಮನಿ ಈತನಿಗೆ ಕೂಡ್ರಿಸಿಕೊಂಡು ಕುಕನೂರ ಕಡೆಯಿಂದ ರಾಜೂರು ಕಡೆಗೆ ಹೊರಟಾಗ, ಹಿಂದುಗಡೆಯಿಂದ ಒಂದು ನಂಬರ್ ಇರದ ಹೊಸ ಟಾಂ ಟಾಂ ವಾಹನದ ಚಾಲಕ ತನ್ನ ವಾಹವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಪಿರ್ಯಾದಿಯ ಮೋ.,ಸೈ. ಓವರ್ ಟೇಕ್ ಮಾಡಲು ಪಿರ್ಯಾದಿದಾರನ ಮೋ.ಸೈ. ಮುಂದೆ ಬಂದು ಒಮ್ಮೇಲೆ ಕಟ್ ಮಾಡಿ, ಪಿರ್ಯಾದಿದಾರನ ಮೋ.ಸೈ. ಬಲಗಡೆ ಹ್ಯಾಂಡಲ್ ಗೆ ಟಕ್ಕರ್ ಕೊಟ್ಟು, ವಾಹನ ನಿಲ್ಲಿಸದೇ ಹಾಗೆಯೇ ಹೋಗಿದ್ದು, ಈ ಅಪಘಾತದಿಂದ ತನಗೆ ಹಾಗೂ ಬಾಳಪ್ಪನಿಗೆ ಸಾದಾ ಹಾಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು ಅದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008