Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, December 1, 2015

:: ಪತ್ರಿಕಾ ಪ್ರಕಟಣೆ ::
          ದಿನಾಂಕ:28-11-2015 ರಂದು ಕೊಪ್ಪಳ-ಗದಗ ಎನ್.ಹೆಚ್.63 ರಸ್ತೆಯ ಬಾನಾಪುರ ಕ್ರಾಸ್ ಹತ್ತಿರ ಖೋಟಾ ನೋಟು ಚಲಾವಣೆ ಆಗುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ನಿಗಾವಹಿಸಲಾಗಿದ್ದು, ಅದರಂತೆ, ಅಂದು ರಾತ್ರಿ 11-00 ಗಂಟೆಯ ಸುಮಾರಿಗೆ ಲವರಾಜ ಮತ್ತು ದತ್ತಾತ್ರೇಯ ಇವರು ಖೋಟಾ ನೋಟನ್ನು ಚಲಾವಣೆ ಮಾಡುವಾಗ ಓರ್ವ ಲವರಾಜ ಸಿಕ್ಕಿಬಿದ್ದು, ದತ್ತಾತ್ರೇಯನು ಪರಾರಿಯಾಗಿದ್ದು, ಈ ಬಗ್ಗೆ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:158/15 ಕಲಂ:489(ಬಿ) & (ಸಿ) ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ನಂತರ, ಡಿ.ಎಸ್.ಪಿ. ಕೊಪ್ಪಳರವರ ಮಾರ್ಗದರ್ಶನದಲ್ಲಿ ಈ ಪ್ರಕರಣದ ತನಿಖೆಗೆ ಯಲಬುರ್ಗಾ ಸಿಪಿಐ ನಾಗರಾಜ ಕಮ್ಮಾರ ನೇತೃತ್ವದಲ್ಲಿ, ಪಿ.ಎಸ್.ಐ. ವಿಶ್ವನಾಥ ಹಿರೇಗೌಡರ, ಹಾಗೂ ಠಾಣೆಯ ಸಿಬ್ಬಂದಿಯವರಾದ ರವಿ, ವಿನೋದ, ದೊಡ್ಡಯ್ಯ, ವೆಂಕಟೇಶ , ಗಂಗಾರಾಮಸಿಂಗ್, ಮಹಾಂತಗೌಡ, ನಿಸಾರ ಅಹ್ಮದ್,  ಪ್ರಸಾದ, ಶರಣಪ್ಪ, ರಾಜಭಕ್ಷಿ, ಅಶ್ರಫ್ ಅಲಿ, ಗೋವಿಂದ, ಕಲ್ಲಪ್ಪ  ಒಂದು ತಂಡ ರಚಿಸಿದ್ದು, ಅದರಂತೆ, ತನಿಖಾ ತಂಡ ಈ ಪ್ರಕರಣದಲ್ಲಿ ಕೆಳಕಂಡ ಆರೋಪಿತರನ್ನು ದಸ್ತಗಿರಿ ಮಾಡಿ, ಖೋಟಾ ನೋಟು ಹಾಗೂ ಅಸಲಿ ಹಣ,  ಮೊಬೈಲ್ ಗಳನ್ನು,  ಮೊ.ಸೈ.ನ್ನು ವಶಕ್ಕೆ ತೆಗೆದು ಕೊಂಡಿರುತ್ತಾರೆ.  ಆರೋಪಿಗಳು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಆರೋಪಿತರು ಖೋಟಾನೋಟನ್ನು ಪಾನ್ ಬೀಡಾ ಅಂಗಡಿ, ಜನಸಂದಣಿ ಹೋಟಲ್ ಗಳಲ್ಲಿ ಚಲಾವಣೆ ಮಾಡಿ, ಪ್ರತಿಯಾಗಿ ಅಸಲಿ ನೋಟುಗಳನ್ನು ಪಡೆದು ಈ ರೀತಿಯಾಗಿ ಖೋಟಾ ನೋಟುಗಳನ್ನು ವ್ಯವಸ್ಥಿತವಾಗಿ ಚಲಾವಣೆ ಮಾಡುವ ಜಾಲ ಇರುತ್ತದೆ. ಈ ಜಾಲದಲ್ಲಿ ಭಾಗಿಯಾಗಿರುವ ಇತರೇ ಆರೋಪಿತರ ಪತ್ತೆಗಾಗಿ   ತನಿಖೆ ಮುಂದುವರೆದಿರುತ್ತದೆ.      
ಪ್ರಕರಣದಲ್ಲಿ ಭಾಗಿಯಾದ ಆರೋಪಿತರ ವಿವರ:-
1] ಲವರಾಜ ತಂದೆ ವೀರರಾಘವಲು ಟೇಕಿ, ವಯಾ :27ವರ್ಷ, ಸಾ :ಚಾಗಬಾವಿಕ್ಯಾಂಪ್, ಪೊ :ಜಂಬಲದಿನ್ನಿ ತಾ :ಮಾನವಿ, ಜಿ :ರಾಯಚೂರು
2) ದತ್ತಾತ್ರೇಯ ತಂದೆ ರಾಮಬಾಬು ಕೊಂಡಪಲ್ಲಿ, ವ :29ವರ್ಷ, ಉ :ವ್ಯಾಪಾರ, ಸಾ :ಚಾಗಬಾವಿಕ್ಯಾಂಪ್,   ತಾ :ಮಾನವಿ, 
3) ಸತೀಶ ತಂದೆ ಲಕ್ಷ್ಮಯ್ಯ ಆರ್. , ವ :30ವರ್ಷ, ಸಾ :ಚಾಗಬಾವಿಕ್ಯಾಂಪ್,
4) ಮಲ್ಲಿಕಾರ್ಜುನಗೌಡ ತಂದೆ ರಾಮನಗೌಡ , ವಯಾ :43ವರ್ಷ,  ಸಾ :ಚಾಗಬಾವಿ ಗ್ರಾಮ,

ಆರೋಪಿತರಿಂದ  ವಶಪಡಿಸಿಕೊಂಡ ಸ್ವತ್ತು :-
1). ಖೋಟಾನೋಟುಗಳು, 3,01,000-00 ರೂ
2) ಖೋಟಾ ನೋಟು ಚಲಾವಣೆಯಿಂದ ಬಂದ ಹಣ- 28,000-00 ರೂ.
3) ಚಲಾವಣೆಗೆ ಬಳಸಿದ 5 ಮೊಬೈಲ್ –ಅಂ.ಕಿ.10,000-00 ರೂ.
4) ಒಂದು ಮೋಟಾರ್ ಸೈಕಲ್ –ಅಂ.ಕಿ. 25,000-00 ರೂ.
5) 12 ಸಿಗರೇಟ್ ಪ್ಯಾಕ್ ಗಳು ಅಂ.ಕಿ. 1,200-00 ರೂ.

                                                           ಜಿಲ್ಲಾ ಪೊಲೀಸ್ ಅಧೀಕ್ಷಕರು,
                                                                                                      ಕೊಪ್ಪಳ,


0 comments:

 
Will Smith Visitors
Since 01/02/2008