1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 360/2015 ಕಲಂ: 279,
337, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ:
20-12-2015 ರಂದು ರಾತ್ರಿ 11:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ನಾರಾಯಣ ತಂದೆ ಅಡಿವೆಪ್ಪ
ವಯಸ್ಸು: 29 ವರ್ಷ ಸಾ: ಗುಂತಕಲ್ ಕ್ಯಾಂಪ್,
( ಶ್ರೀರಾಮನಗರ ) ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು
ಸಲ್ಲಿಸಿದ್ದು ಅದರ ಸಾರಾಂಶ ಏನಂದರೆ,
ಇಂದು ದಿನಾಂಕ: 20-12-2015 ರಂದು ಸಂಜೆ 7:00 ಗಂಟೆಯ ಸುಮಾರಿಗೆ ನಮ್ಮ ತಮ್ಮ ಮತ್ತು ಪಕ್ಕದ
ಮನೆಯ ಕೃಷ್ಣ ತಂದೆ ಮಸ್ತಾನಪ್ಪ 30 ವರ್ಷ ಇಬ್ಬರೂ ಕೂಡಿ ನನ್ನ ತಮ್ಮನು ಕೆಲಸ ಮಾಡುತ್ತಿದ್ದ
ಶರಣಪ್ಪ ಮೇಸ್ತ್ರಿ ಎಂಬುವರ ಹಿರೋ ಹೊಂಡಾ ಸ್ಪ್ಲೆಂಡರ್ + ಮೋಟಾರ ಸೈಕಲ ನಂ: ಕೆ.ಎ-37/ಕೆ-182
ನೇದ್ದರಲ್ಲಿ ಪ್ರಗತಿನಗರಕ್ಕೆ ಹೋಗಿದ್ದರು. ನಂತರ ರಾತ್ರಿ 8:30 ಗಂಟೆಯ ಸುಮಾರಿಗೆ ನಾನು
ಮನೆಯಲ್ಲಿರುವಾಗ ಪ್ರಗತಿನಗರದ ಸಾಯಿ ಧ್ಯಾನ್ ಮಂದಿರದ ಹತ್ತಿರ ಅಪಘಾತವಾಗಿದೆ ಅಂತಾ ಕೃಷ್ಣನು
ಪೋನ್ ಮಾಡಿ ತಿಳಿಸಿದ್ದು ಕೂಡಲೇ ನಾನು ಮತ್ತು ನನ್ನ ಅಳಿಯ ಪ್ರಸಾಧ ಹಾಗೂ ಪಕ್ಕದ ಮನೆಯವರಾದ
ರಾಮಾಂಜನೇಯಲು ಎಲ್ಲರೂ ಕೂಡಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಮ್ಮನು ನಡೆಸುತ್ತಿದ್ದ ಮೋಟಾರ
ಸೈಕಲ ಬ್ರಿಡ್ಜ್ ಮೇಲೆ ಬಿದ್ದಿದ್ದು ಪಕ್ಕದಲ್ಲಿ ಕೇನಾಲ್ ರಸ್ತೆಯ ಮೇಲೆ ಟ್ರಾಕ್ಟರ್ ಹಾಗೂ
ಟ್ರಾಲಿ ನಿಂತಿದ್ದು ಟ್ರಾಕ್ಟರ್ ನಂಬರ್ ಕೆ.ಎ—37/ಟಿಬಿ-0310 ಟ್ರಾಲಿ ನಂಬರ್ ಕೆ.ಎ-36/ಟಿಬಿ-3242 ಅಂತಾ
ಇರುತ್ತದೆ. ನಂತರ ಗಾಯಗೊಂಡ ಕೃಷ್ಣನನ್ನು ವಿಚಾರಿಸಲು ಆತನು ತಿಳಿಸಿದ್ದೇನಂದರೆ, “ ನಾನು ಮತ್ತು ಸುರೇಶ
ಇಬ್ಬರೂ ಕೂಡಿ ಪ್ರಗತಿನಗರದಿಂದ ಕೂಲಿ ಹಣ ತಗೆದುಕೊಂಡು ಬರುತ್ತಿರುವಾಗ ಮೋಟಾರ ಸೈಕಲನ್ನು ಸುರೇಶ
ಈತನು ನಡೆಸುತ್ತಿದ್ದು ನಾನು ಹಿಂಭಾಗ ಕುಳಿತುಕೊಂಡಿದ್ದು ಸಾಯಿ ದ್ಯಾನ ಮಂದಿರದ ಹತ್ತಿರ
ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ರಾತ್ರಿ 8:00 ಗಂಟೆಯ ಸುಮಾರಿಗೆ ಕೇನಾಲ ರಸ್ತೆಯ
ಕಡೆಯಿಂದ ಬಂದ ಒಬ್ಬ ಟ್ರಾಕ್ಟರ್ ಹಾಗೂ ಟ್ರಾಲಿ ನೇದ್ದರ ಚಾಲಕನು ಅತಿವೇಗ ಹಾಗೂ ತೀವ್ರ
ನಿರ್ಲಕ್ಷತನದಿಂದ ನಡೆಯಿಸಿಕೊಂಡು ರಸ್ತೆಯಲ್ಲಿ ಹೋಗಿ ಬರುತ್ತಿದ್ದ ಯಾವುದೇ ವಾಹನಗಳಿಗೆ ಕೈ
ಸನ್ನೆ ಮಾಡದೇ ರಸ್ತೆಯ ಮೇಲೆ ಬಂದು ನಿಧಾನವಾಗಿ ಹೊರಟಿದ್ದ ನಮ್ಮ ಮೋಟಾರ ಸೈಕಲಗೆ ಟಕ್ಕರು ಕೊಟ್ಟು
ಅಪಘಾತ ಮಾಡಿದ್ದು ಇದರಿಂದಾಗಿ ನನಗೆ ಎಡಗಡೆ ಹಣೆಗೆ ರಕ್ತ ಗಾಯವಾಗಿ, ಬಲಗಡೆ ತೊಡೆಗೆ
ಮತ್ತು ಬಲಗಡೆ ಬುಜಕ್ಕೆ ಒಳಪೆಟ್ಟಾಗಿ,
ಸುರೇಶ ಈತನಿಗೆ ತಲೆಗೆ ಮತ್ತು ಗದ್ದದ ಹತ್ತಿರ ತೀವ್ರ ರಕ್ತ ಗಾಯವಾಗಿ ಸ್ಥಳದಲ್ಲಿಯೇ
ಮೃತಪಟ್ಟಿದ್ದನು. ಅಪಘಾತದ ನಂತರ ಟ್ರಾಕ್ಟರ್ ಚಾಲಕನು ಟ್ರಾಕ್ಟರ ಹಾಗೂ ಟ್ರಾಲಿಯನ್ನು
ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನೋಡಿದಲ್ಲಿ ಆತನನ್ನು ಗುರುತಿಸುತ್ತೇನೆ ” ಅಂತಾ ತಿಳಿಸಿದನು.
ಆಗ ರಸ್ತೆಯಲ್ಲಿ ಹೊರಟಿದ್ದ ಯಾರೋ ಅಂಬ್ಯುಲೆನ್ಸ್ ಗೆ ಪೋನ್ ಮಾಡಿದ್ದು ಅಂಬ್ಯುಲೆನ್ಸ್
ವಾಹನದಲ್ಲಿ ಚಿಕಿತ್ಸೆ ಕುರಿತು ಕೃಷ್ಣ ಈತನನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ
ಕಳುಹಿಸಿಕೊಟ್ಟಿದ್ದು ಇರುತ್ತದೆ. ನಂತರ ನನ್ನ
ತಮ್ಮನ ಮೃತ ದೇಹವನ್ನು ಯಾವುದೋ ಒಂದು ಅಟೋದಲ್ಲಿ ಗಂಗಾವತಿ ಸರಕಾರಿ ಆಸ್ಪತ್ರೆಯ ಶವಗಾರ
ಕೋಣೆಯಲ್ಲಿ ಹಾಕಿ ಈಗ ತಡವಾಗಿ ಠಾಣೆಗೆ ಬಂದು ಈ ನನ್ನ ನುಡಿ ಹೇಳಿಕೆ ದೂರನ್ನು
ಸಲ್ಲಿಸಿರುತ್ತೇನೆ. ಕಾರಣ ಮಾನ್ಯರು ಈ ಅಪಘಾತ ಮಾಡಿ ಓಡಿ ಹೋದ ಟ್ರಾಕ್ಟರ್ ನಂಬರ್ ಕೆ.ಎ—37/ಟಿಬಿ-0310 ಹಾಗೂ
ಟ್ರಾಲಿ ನಂಬರ್ ಕೆ.ಎ-36/ಟಿಬಿ-3242 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 104/15 ಕಲಂ: 143,
147, 323, 504, 506 ಸಹಿತ ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ
ಪಿ.ಎ. ಕಾಯ್ದೆ 1989.
ದಿನಾಂಕ: 16.12.2015 ರಂದು ಮ್ಯಾದನೇರಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ
ಕಾತಿರ್ಿಕೋತ್ಸವ ಅಂಗವಾಗಿ ಪಿರ್ಯಾಧಿದಾರರು ಶ್ರೀ ಮಹಷರ್ಿ ವಾಲ್ಮೀಕಿ ಸಂಸ್ಕೃತಿಕ ಮತ್ತು ಜನಪದ ಕಲಾ
ಸಂಘದಿಂದ ವಿವಿಧ ಕಲಾವಿಧರಿಂದ ಜನಪದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ವಿಷಯದ ಬಗ್ಗೆ
ಪಿಯರ್ಾದಿದಾರನು ದಿನ ಪತ್ರಿಕೆಯಲ್ಲಿ ಪ್ರಕಟಿಸಿದ್ದು ಇರುತ್ತದೆ. ನಂತರ ದಿನಾಂಕ:20.12.2015 ರಂದು
ರಾತ್ರಿ 8:00 ಗಂಟೆ ಸುಮಾರಿಗೆ ದಳಪತಿ ರಾಮನಗೌಡರವರ ಮನೆಯ ಮುಂದುಗಡೆ ಆರೋಪಿತರೆಲ್ಲರೂ ಸೇರಿ ಪಿಯರ್ಾದಿದಾರನಿಗೆ
ಆರೋಪಿ ನಂ 1 ಶರಣಪ್ಪ ಗ್ರಾಮ ಪಂಚಾಯತಿ ಸದಸ್ಯನ ಹೆಸರನ್ನು ದಿನಪತ್ರಿಕೆಯಲ್ಲಿ ಯಾಕೆ ಹಾಕಿಸಿಲ್ಲಾ
ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಬ್ಯಾಡ ಸುಳೆ ಮಗನೆ ಅಂತಾ ಜಾತಿ ನಿಂದನೆ ಮಾಡಿ ಆರೋಪಿತರ ಪೈಕಿ
ಶರಣಪ್ಪ ಮೇಟಿ, ನೀಲಪ್ಪ ಕುದ್ರಿಕೊಟಗಿ, ಚನ್ನಬಸಪ್ಪ ಕುದ್ರಿಕೊಟಗಿ, ಶಂಕ್ರಪ್ಪ ಮೇಟಿ, ಮಹೇಶ ಮೇಟಿ
ಇವರೆಲ್ಲರೂ ಪಿಯರ್ಾದಿದಾರನಿಗೆ ಕೈಯಿಂದ, ಕಾಲಿನಿಂದ ಹೊಡೆ ಬಡಿದ್ದು ಉಳಿದ ಆರೋಪಿತರೆಲ್ಲರೂ ಪಿಯರ್ಾದಿದಾರನಿಗೆ
ಅವಾಚ್ಯ ಶಬ್ದಗಳಿಂದ ಬೈದಾಡಿ ಬ್ಯಾಡ ಸುಳೆ ಮಗನೆ ಅಂತಾ ಜಾತಿ ನಿಂದನೆ ಮಾಡಿ ಜೀವದ ಬೇದರಿಕೆ ಹಾಕಿದ್ದು
ಇರುತ್ತದೆ.
0 comments:
Post a Comment