1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 267/2015 ಕಲಂ: 78(3)
Karnataka Police Act.
ದಿನಾಂಕ-21-12-2015 ರಂದು ರಾತ್ರಿ 8-00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ಮಟ್ಕಾ ಜೂಜಾಟದ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು
ಸದರಿ ವರದಿಯಲ್ಲಿ ಇಂದು ದಿನಾಂಕ- 21-12-2015 ರಂದು ಸಾಯಂಕಾಲ 06-40 ಗಂಟೆಯ ಸುಮಾರಿಗೆ ಠಾಣಾ ವ್ಯಾಪ್ತಿಯ ಸಿದ್ದಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಆರೋಪಿ ನಂ 1 ಕೊಟ್ರಪ್ಪ ತಂದಿ ಶರಣಪ್ಪ ಸಾ. ಸಿದ್ದಾಪೂರ ಮತ್ತು ಆರೋಪಿ ನಂ 2 ಮಂಜುನಾಥ ತಂದಿ ದೊಡ್ಡಪ್ಪ ಇವರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಲು ಆರೋಪಿತರು ಸಿಕ್ಕಿಬಿದ್ದಿದ್ದು
ಸಿಕ್ಕಿಬಿದ್ದ ಆರೋಪಿತನಿಂದ ಮಟ್ಕಾ ಜೂಜಾಟದ ನಗದು ಹಣ ರೂ. 2850/- ಗಳನ್ನು ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸದರಿ ಸಿಕ್ಕಿ ಬಿದ್ದದ ಆರೋಪಿತರಿಗೆ ತಾನು ಬರೆದ ಪಟ್ಟಿಯನ್ನು ಮತ್ತು ಹಣವನ್ನು ಯಾರಿಗೆ ಕೊಡುತ್ತಿರಾ ಅಂತಾ ವಿಚಾರಿಸಲಾಗಿ ಆರೋಪಿತರು ತಾವು ಬರೆದ ಮಟ್ಕಾ ನಂಬರಿನ ಪಟ್ಟಿ ಮತ್ತು ಹಣವನ್ನು ಸಿದ್ದಾಪೂರದ ಈಶಪ್ಪ ತಂದಿ ರಾಮಪ್ಪ ಕೊಪ್ಪಳ ಇತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ವರದಿ ಮತ್ತು ಮೂಲ ಪಂಚನಾಮೆಯನ್ನು ಪಡೆದುಕೊಂಡು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ರಾತ್ರಿ 9-00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರ ವರದಿಯ ಮೇಲೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 252/2015
ಕಲಂ: 78(3) Karnataka Police Act.
ದಿ: 21-12-2015 ರಂದು ರಾತ್ರಿ-10
ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸತೀಶ ಪಾಟೀಲ ಪಿ.ಐ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿ:
21-12-2015 ರಂದು ರಾತ್ರಿ 20-50 ಗಂಟೆಗೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ
ಗವಿಮಠದ ಕೆರೆಯ ದಂಡೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ 1=00 ರೂಪಾಯಿಗೆ
80=00 ರೂಪಾಯಿ ಕೊಡುತ್ತೇನೆ ಅಂತಾ ಕೂಗುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಓ.ಸಿ. ಮಟಕಾ ನಂಬರ್
ಬರೆದುಕೊಟ್ಟು ಜನರಿಗೆ ಮೋಸ ಮಾಡುತ್ತಿದ್ದವನ ಮೇಲೆ ದಾಳಿ ಮಾಡಿ ಹಿಡಿದುಕೊಂಡಿದ್ದು, ಸದರಿ ಆರೋಪಿತನಿಂದ
800=00 ರೂಪಾಯಿ, ಒಂದು ಮಟಕಾ ನಂಬರ ಬರೇದ ಪಟ್ಟಿ , ಒಂದು ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ
ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ದಾಳಿ ಕಾಲಕ್ಕೆ ಸಿಕ್ಕ ಆರೋಪಿತನು ಮಟಕಾ ಪಟ್ಟಿಯನ್ನು ಆರೋಪಿ
ನಂ 02 ನೇದ್ದವರಾದ ಮಹಿಬೂಬಸಾಬ ಲಂಗಡಾ ಸಾ: ದುರ್ಗಮ್ಮನಗುಡಿ ಹತ್ತಿರ ಕೊಪ್ಪಳ ಇವರಿಗೆ ಕೊಡುವುದಾಗಿ
ತಿಳಿಸಿದ್ದು ಇರುತ್ತದೆ. ಆದ್ದರಿಂದ ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರನ್ನು
ಸ್ವೀಕೃತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 251/2015
ಕಲಂ: 498(ಎ) ಐ.ಪಿ.ಸಿ ಮತ್ತು 3 & 4 ಡಿ.ಪಿ. ಕಾಯ್ದೆ:.
ದಿನಾಂಕ 21.12.2015 ರಂದು
ಮಾನ್ಯ ಜಿಲ್ಲಾ ಪೊಲೀಸ ಅಧಿಕ್ಷಕರು ಕೊಪ್ಪಳ ರವರ ಜ್ಞಾಪನಾ ಪತ್ರ ಸಂ ಅಪರಾಧ/1/2015 ದಿನಾಂಕ
11.12.2015 ನೇದ್ದರಲ್ಲಿ ನಮೂದಿಸಿದಂತೆ ಬಳ್ಳಾರಿ ಜಿಲ್ಲೆ ಕೊಟ್ಟೂರು ಪೊಲೀಸ ಠಾಣೆಯ ಗುನ್ನೆ ನಂ
117/2015 ಕಲಂ 498 (ಎ) ಐ.ಪಿ.ಸಿ ಮತ್ತು 3.4 ಡಿ.ಪಿ ಕಾಯ್ದೆ ನೇದ್ದು ಹದ್ದಿ ಪ್ರಯುಕ್ತ ವರ್ಗಾವಣೆಯಾಗಿ
ಬಂದಿದ್ದು ಗುನ್ನೆ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರಿಂದ ಸದರ ಪ್ರಕರಣದ ಕಡತವನ್ನು
ಪರಿಶೀಲಿಸಲಾಗಿ ಅದರ ಸಾರಾಂಶವೇನೆಂದರೆ ದಿನಾಂಕ 06.05.2015 ರಂದು ಫಿರ್ಯಾದಿದಾರಳನ್ನು ಆರೋಪಿ ನಂ
01 ನೇದ್ದವರಿಗೆ ಗುರು-ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿದ್ದು , ಮದುವೆ ಕಾಲಕ್ಕೆ ಫಿರ್ಯಾದಿದಾರಳ
ಮನೆಯವರು ಗಂಡನ ಮನೆಯವರಿಗೆ 2 ಲಕ್ಷ ನಗದು ಮತ್ತು 4 1/2 ತೊಲೆ ಬಂಗಾರದ ಆಭರಣಗಳನ್ನು ಕೊಟ್ಟು ಮದುವೆ
ಮಾಡಿಕೊಟ್ಟಿದ್ದು ಇರುತ್ತದೆ. ನಂತರ ಫಿರ್ಯಾದಿದಾರರು ತನ್ನ ಗಂಡನ ಮನೆಗೆ ಹೋದಾಗ ಹೆಚ್ಚುವರಿಯಾಗಿ
ಇನ್ನೂ 04 ಲಕ್ಷ ರೂಪಾಯಿ ವರದಕ್ಷಿಣೆ ಹಣವನ್ನು ತರುವಂತೆ ಮೇಲ್ಕಂಡ ಆರೋಪಿತರು ಫಿರ್ಯಾದಿದಾರಳಿಗೆ
ಮಾನಸೀಕ ಮತ್ತು ದೈಹಿಕವಾಗಿ ಕಿರುಕುಳ ನೀಡಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment