1) ಕೊಪ್ಪಳ ನಗರ
ಪೊಲೀಸ್ ಠಾಣೆ ಗುನ್ನೆ ನಂ. 253/2015 ಕಲಂ: 78(3) Karnataka
Police Act.
ದಿನಾಂಕ: 22-12-2015 ರಂದು ರಾತ್ರಿ-10 ಗಂಟೆಗೆ ಫಿರ್ಯಾದಿದಾರರಾದ
ಶ್ರೀ ಸತೀಶ ಪಾಟೀಲ ಪಿ.ಐ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿ: 22-12-2015 ರಂದು ರಾತ್ರಿ
20-30 ಗಂಟೆಗೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಶಾರದಾ ಟಾಕೀಜ್ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಸಾರ್ವಜನಿಕರಿಗೆ 1=00 ರೂಪಾಯಿಗೆ 80=00 ರೂಪಾಯಿ ಕೊಡುತ್ತೇವೆ
ಅಂತಾ ಕೂಗುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಓ.ಸಿ. ಮಟಕಾ ನಂಬರ್ ಬರೆದುಕೊಟ್ಟು ಜನರಿಗೆ ಮೋಸ
ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಹಿಡಿದುಕೊಂಡಿದ್ದು, ಸದರಿ ಆರೋಪಿತರಿಂದ 890=00 ರೂಪಾಯಿ, ಒಂದು
ಮಟಕಾ ನಂಬರ ಬರೇದ ಪಟ್ಟಿ , ಒಂದು ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು
ಇರುತ್ತದೆ. ದಾಳಿ ಕಾಲಕ್ಕೆ ಸಿಕ್ಕ ಆರೋಪಿತರ ಪೈಕಿ ಆರೋಪಿ ನಂ 02 ನೇದ್ದವರಾದ ಶೇಖ ಇಕ್ಬಾಲ್
ಇತನು ತಾನೇ ಮಟಕಾ ನಂಬರ ಪಟ್ಟಿಯನ್ನು ತೆಗೆದುಕೊಳ್ಳುತ್ತೇನೆ ಅಂತಾ ತಿಳಿಸಿದ್ದು ಇರುತ್ತದೆ. ಆದ್ದರಿಂದ
ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸ್ವೀಕೃತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 268/2015 ಕಲಂ: 279, 304(ಎ)
ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ : 22-12-2015 ರಂದು ರಾತ್ರಿ
9-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀನಾಗರಾಜ ತಂದಿ ವಿರುಪಣ್ಣ ಚೌಡ್ಕಿ ವಯ-21 ವರ್ಷ ಜಾ.
ಕುರಬರು ಸಾ. ಯರಡೋಣ ತಾ. ಗಂಗಾವತಿ ಇವರು ಠಾಣೆಗೆ
ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ನಮ್ಮ ತಂದೆಯಾದ ವಿರುಪಣ್ಣ ತಂದಿ ಕರಿಯಪ್ಪ
ಚೌಡ್ಕಿ ವಯಾ-40 ವರ್ಷ ಈತನಿಗೆ ನಾವು ಮೂರು ಜನ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಕ್ಕಳು ಇರುನಮ್ಮ
ತಂದೆ ಒಕ್ಕಲುತನ ಮಾಡಿಕೊಂಡು ನಮ್ಮ ಸಂಸಾರವನ್ನು ನೋಡಿಕೊಳ್ಳುತ್ತಿದ್ದರು ನಮ್ಮ ತಾಯಿ ಕೂಲಿ ಕೆಲಸ
ಮಾಡಿಕೊಂಡಿರುತ್ತಾಳೆ ನಾನು ಅಂಗವಿಕಲನಿರುವುದರಿಂದ ನನ್ನ ಹೇಸರಿನಲ್ಲಿ ನಾನು ತಿರುಗಾಡುವ ಸಲುವಾಗಿ
ಒಂದು ಮೂರು ಗಾಲಿಯ ಮೋಟಾರ್ ಸೈಕಲ್ ಇಟ್ಟುಕೊಂಡಿರುತ್ತೇನೆ. ನಾನೇ ಹಿರಿಯ ಮಗನಿದ್ದು ನಮ್ಮ ತಮ್ಮನವರಾದ
ಬಸವರಾಜ ಮತ್ತು ಉಮೇಶ ಇವರು ಕೂಡಾ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಇಂದು ದಿನಾಂಕ-22-12-2015
ರಂದು ಬೆಳಿಗ್ಗೆ ಕನಕಗಿರಿಯ ಹತ್ತಿರ ಇರುವ ಕನಕಾಪೂರದಲ್ಲಿ ನಮ್ಮ ಸಂಬಂದಿಕರೊಬ್ಬರು ಮೃತಪಟ್ಟ ಬಗ್ಗೆ
ಕರೆಬಂದಿದ್ದರಿಂದ ನಮ್ಮ ತಂದೆ ವಿರುಪಣ್ಣ ಮತ್ತು ನಂದಿಹಳ್ಳಿ ಗ್ರಾಮದ ನಮ್ಮ ಸಂಬಂದಿಕದಲ್ಲಿ ಚಿಕ್ಕಪ್ಪನಾಗುವ
ವಿರೇಶ ತಂದಿ ಸಣ್ಣೆಪ್ಪ ವಯಾ-40 ವರ್ಷ ಸಾ. ನಂದಿಹಳ್ಳಿ ಇಬ್ಬರು ಕೂಡಿ ನಮ್ಮೂರಿನಿಂದ ಬೆಳಿಗ್ಗೆ
10-00 ಗಂಟೆಯ ಸುಮಾರಿಗೆ ನಮ್ಮ ಮೋಟಾರ್ ಸೈಕಲ್ ನಂ ಕೆ.ಎ-37 ಆರ್-8765 ನೆದ್ದರ ಮೇಲೆ ಕನಕಾಪೂರಕ್ಕೆ
ಶ್ರಮಕ್ಕೆ ಹೋಗಿದ್ದರು ನಂತರ ಸಾಯಂಕಾಲ 5-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಗೆ ಕಿರಾಣಿ ತರಲೆಂದು
ನನ್ನ ಮೂರು ಗಾಲಿಯ ಮೋಟಾರ್ ಸೈಕಲ್ ತೆಗೆದುಕೊಂಡು ಮರ್ಲಾನಹಳ್ಳಿಗೆ ಬಂದಿದ್ದೇನು
ನಾನು ಮರ್ಲಾನಹಳ್ಳಿಯಲ್ಲಿ ಇದ್ದಾಗ ಶ್ರಮಕ್ಕೆ ಹೋಗಿದ್ದ ನಮ್ಮ ತಂದೆ ವಿರುಪಣ್ಣ ಮತ್ತು ನಮ್ಮ
ಚಿಕ್ಕಪ್ಪ ವಿರೇಶ ಇಬ್ಬರು ಅಲ್ಲಿಗೆ ಬಂದರು ನಂತರ ನಾವು ಮೂರು ಜನರು ಮರ್ಲಾನಹಳ್ಳಿಯಲ್ಲಿ ಚಹ ಕುಡಿದು
ನಾನು ಕಿರಾಣಿ ತೆಗೆದುಕೊಂಡಿದ್ದರಿಂದ ಮೂರು ಜನರು ಯರಡೋಣಿಗೆ ಹೋಗಲೆಂದು ಸಾಯಂಕಾಲ 6-00 ಗಂಟೆಗೆ ನಾನು
ನನ್ನ ಮೂರು ಗಾಲಿಯ ಮೋಟಾರ್ ಸೈಕಲ್ ಮೇಲೆ ನಮ್ಮ ತಂದೆ ಮತ್ತು ನಮ್ಮ ಚಿಕ್ಕಪ್ಪ ವಿರೇಶ
ಇವರು ಅವರ ಮೋಟಾರ್ ಸೈಕಲ್ ನಂ ಕೆ.ಎ-37 ಆರ್-8765 ನೆದ್ದರ ಮೇಲೆ ಯರಡೋಣ ಕಡೆಗೆ ಹೋರಟೇವು ನಮ್ಮ ತಂದೆ
ಮೋಟಾರ್ ಸೈಕಲ್ ಚಲಾಯಿಸುತ್ತಿದ್ದು ಅವರು ಮೋಟಾರ್ ಸೈಕಲ್ ನನಗಿಂತ ಸ್ವಲ್ಪ ಮುಂದೆ ಹೋರಟಿತ್ತು ನಾನು
ಅವರ ಹಿಂದೆ ನನ್ನ ಮೋಟಾರ್ ಸೈಕಲ್ ಮೇಲೆ ಹೋರಟಿದ್ದೇನು ಮರ್ಲಾನಹಳ್ಳಿ ಯರಡೋಣ ರಸ್ತೆಯ ಮೇಲೆ ಯರಡೋಣ
ಕೆರೆಯ ಸಮೀಪ ಹೋರಟಿದ್ದಾಗ್ಗೆ ನಮ್ಮ ಹಿಂದಿನಿಂದ ಒಬ್ಬ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ಇಂಜಿನ್ ನ್ನು ಅತೀ ವೇಗ ಅಲಕ್ಷತನದಿಂದ
ಅಡ್ಡಾದಿಡ್ಡಿ ಚಲಾಯಿಸಿಕೊಂಡು ನನ್ನನ್ನು ಸೈಡ್ ಹಾಕಿ ಮುಂದೆ ಹೋಗಿ ನಮ್ಮ ತಂದೆ ಮತ್ತು ಚಿಕ್ಕಪ್ಪ
ಇವರು ತಮ್ಮ ಸೈಡಿನಲ್ಲಿ ಹೋರಟಿದ್ದ ಮೋಟಾರ್ ಸೈಕಲ್ ಗೆ ಹಿಂದಿನಿಂದ ಟಕ್ಕರ ಕೊಟ್ಟಿದ್ದರಿಂದ ನಮ್ಮ
ತಂದೆ ಮತ್ತು ನಮ್ಮ ಚಿಕ್ಕಪ್ಪ ರಸ್ತೆಗೆ ಬಿದ್ದರೂ ಟ್ರ್ಯಾಕ್ಟರ್ ಚಾಲಕನು ತನ್ನ ಟ್ಯಾಕ್ಟರ್ ನಿಲ್ಲಿಸದೇ ನಮ್ಮ ತಂದೆಯ ಎಡಗೈ ಮೇಲೆ
ಹತ್ತಿಸಿಕೊಂಡು ಹೋದನು ನಾನು ನನ್ನ ಮೋಟರ್ ಸೈಕಲ್ ನಿಲ್ಲಿಸಿ ಇಳಿದು ಹೋಗಿ ನೊಡುವಷ್ಟರಲ್ಲೆ ನಮ್ಮ
ತಂದೆಗೆ ಮುಖಕ್ಕೆ ತಲೆಗೆ, ಎಡಗೈಗೆ ಗಂಭಿರಗಾಯಗಳಾಗಿ ನಮ್ಮ ಚಿಕ್ಕಪ್ಪನ ವಿರೇಶನಿಗೆ ತಲೆಯ ಹಿಂಭಾಗಕ್ಕೆ
ಗಂಬೀರ ರಕ್ತಗಾಯವಾದ್ದು ರಸ್ತೆ ಮೇಲೆ ರಕ್ತ ಸೋರುತ್ತಿದ್ದು ಇಬ್ಬರು ಸ್ಥಳದಲ್ಲೆ ಮೃತಪಟ್ಟರು ನಾನು,
ಅಪಘಾತಪಡಿಸಿದ ಟ್ರ್ಯಾಕ್ಟರ್ ಇಂಜಿನ್ ನಂಬರ್
ನೋಡಲು ಅದರ ನಂ ಕೆ.ಎ-37ಟಿಬಿ-2187 ಅಂತಾ ಇದ್ದು ಚಾಲಕನು ಟ್ರ್ಯಾಕ್ಟರ್
ನಿಲ್ಲಿಸದೇ ಹೋಗಿದ್ದರಿಂದ ಅದರ ಚಾಲಕರು ಯಾರು ಇದ್ದರು ಅಂತಾ ಗೊತ್ತಾಗಲಿಲ್ಲಾ ನಂತರ ನಾನು
ನಮ್ಮ ಸಂಬಂದಿಕರಿಗೆ ಫೋನ್ ಮಾಡಿ ಕರೆಯಿಸಿಕೊಂಡೆನು ಈ ಘಟನೆಯು ಸಾಯಂಕಾಲ 5-15 ಗಂಟೆಯಿಂದ 5-30 ಗಂಟೆಯ
ಅವಧಿಯಲ್ಲಿ ಆಗಿರುತ್ತದೆ. ಈ ಘಟನೆಯನ್ನು ಅಲ್ಲಿ ಹೊರಟಿದ್ದ ಯಮನೂರಪ್ಪ
ಹೆಚ್. ಬಸವಣ್ಣ ಕ್ಯಾಂಪ್ ತಿರುಪತೆಪ್ಪ ಯರಡೋಣ, ಅಯ್ಯಪ್ಪ ನಾಯಕ ಯರಡೋಣ, ಯಮನೂರಸಿಂಗ್ ಯರಡೋಣ ಮತ್ತು
ಶರಣಪ್ಪ ಚನ್ನಳ್ಳಿ ಯರಡೋಣ ಇವರು ನೋಡಿ ಇವರು ಕೂಡಾ ಸ್ಥಳಕ್ಕೆ ಬಂದು ನಮ್ಮ ತಂದೆ ಮತ್ತು ಚಕ್ಕಪ್ಪ
ಇವರಿಗೆ ನೊಡಿದ್ದು ಇರುತ್ತದೆ. ಈ ಬಗ್ಗೆ ಟ್ರ್ಯಾಕ್ಟರ್ ನಂ ಕೆ.ಎ-37ಟಿಬಿ-2187 ನೆದ್ದರ
ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ
ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
3) ಗಂಗಾವತಿ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ. 363/2015 ಕಲಂ: 279, 338 ಐ.ಪಿ.ಸಿ:.
ದಿನಾಂಕ : 22-12-2015 ರಂದು ರಾತ್ರಿ
11:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಬಸಪ್ಪ ತಂದೆ ಯಮನಪ್ಪ ವಡ್ಡರ, ವಯಸ್ಸು: 54 ವರ್ಷ ಜಾತಿ: ಭೋವಿ, ಉ: ಕೂಲಿಕೆಲಸ ಸಾ: ಸಂಗಾಪೂರ, ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ
ನುಡಿ ಹೇಳಿಕೆ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:
22-12-2015 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನನ್ನ ತಮ್ಮನು ಎಂದಿನಂತೆ ತನ್ನ
ಕೆಲಸಕ್ಕೆಂದು ಸೈಕಲ್ ತಗೆದುಕೊಂಡು ಗಂಗಾವತಿಗೆ ಬಂದಿದ್ದನು. ನಂತರ ರಾತ್ರಿ 9:30 ಗಂಟೆಯ
ಸುಮಾರಿಗೆ ನಾನು ಮನೆಯಲ್ಲಿರುವಾಗ ನನ್ನ ತಮ್ಮನು ಪೋನ್ ಮಾಡಿ ಸಂಗಾಪೂರ ಸೀಮಾ ಕಂಕರ್ ಮಷಿನ್
ಹತ್ತಿರ ರಸ್ತೆ ಅಪಘಾತವಾಗಿದೆ ಅಂತಾ ತಿಳಿಸಿದ್ದು ಕೂಡಲೇ ನಾನು ಸ್ಥಳಕ್ಕೆ ಬಂದು ನೋಡಲಾಗಿ ನನ್ನ
ತಮ್ಮನು ತನ್ನ ಸೈಕಲ್ ಸಮೇತ ರಸ್ತೆಯ ಪಕ್ಕ ಕುಳಿತುಕೊಂಡಿದ್ದು ಅಲ್ಲಿಯೇ ಪಕ್ಕದಲ್ಲಿ ಒಬ್ಬ ಮೋಟಾರ
ಸೈಕಲ್ ಸವಾರನು ಸಹ ತನ್ನ ಮೋಟಾರ ಸೈಕಲ ಸಮೇತ ನಿಂತಿದ್ದು ನಂತರ ನನ್ನ ತಮ್ಮನನ್ನು ವಿಚಾರಿಸಲು
ಆತನು ತಿಳಿಸಿದ್ದೇನಂದರೆ, “ ಇಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಾನು ನನ್ನ ಸೈಕಲ್ ತಗೆದುಕೊಂಡು ಗಂಗಾವತಿಯಿಂದ
ಸಂಗಾಪೂರಕ್ಕೆ ರಸ್ತೆಯ ಎಡಬದಿಯಲ್ಲಿ ನಿಧಾನವಾಗಿ ಹೋಗುತ್ತಿರುವಾಗ ನನ್ನ ಹಿಂಭಾಗದಿಂದ ಅಂದರೆ ಗಂಗಾವತಿ
ಕಡೆಯಿಂದ ಬಂದ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ತೀವ್ರ
ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಸೈಕಲಗೆ ಟಕ್ಕರು ಕೊಟ್ಟು ಅಪಘಾತ ಮಾಡಿದ್ದು
ಇದರಿಂದಾಗಿ ನಾನು ಸೈಕಲ ಸಮೇತ ರಸ್ತೆಯಲ್ಲಿ ಬಿದ್ದೆನು. ಇದರಿಂದಾಗಿ ನನಗೆ ಎಡಗಾಲು ಮೊಣಕಾಲಿಗೆ
ರಕ್ತಗಾಯವಾಗಿ ಎಡ ತೊಡಗೆ ತೀವ್ರ ಒಳೆಪಟ್ಟಾಗಿ ಹಾಗೂ ಎಡಗಡೆ ಮಲಕಿನ ಹತ್ತಿರ ತೆರಚಿದ
ಗಾಯವಾಗಿದ್ದು ನಂತರ ಅಪಘಾತ ಮಾಡಿದ ಮೋಟಾರ ಸೈಕಲ್ ನಂಬರ್ ನೋಡಲಾಗಿ ಹಿರೋ ಕಂಪನಿಯ ಸಿಡಿ ಡೀಲಕ್ಸ್
ಮೋಟಾರ ಸೈಕಲ್ ಇದ್ದು ನಂಬರ್ ಕೆ.ಎ-37/ಆರ್-6256 ಅಂತಾ ಇದ್ದು ಅದರ ಚಾಲಕನ ಹೆಸರು ವಿಚಾರಿಸಲು
ಅಶೋಕ ತಂದೆ ಬಾಲಗಂಗ ಸಾ: ಸಣಾಪೂರ ಅಂತಾ ತಿಳಿಸಿರುವದಾಗಿ ಸ್ಥಳದಲ್ಲಿದ್ದ ಮೋಟಾರ ಸೈಕಲ ಮತ್ತು
ವ್ಯಕ್ತಿಯನ್ನು ತೋರಿಸಿದನು. ಕೂಡಲೇ ಅಲ್ಲಿಂದ ಗಾಯಗೊಂಡ ನನ್ನ ತಮ್ಮನನ್ನು ಯಾವುದೋ ಒಂದು
ಅಟೋದಲ್ಲಿ ಚಿಕಿತ್ಸೆ ಕುರಿತು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು
ಇರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಹಿರೋ ಸಿಡಿ ಡೀಲಕ್ಸ್ ಮೋಟಾರ ಸೈಕಲ್ ನಂಬರ್
ಕೆ.ಎ-37/ಆರ್-6256 ನೇದ್ದರ ಚಾಲಕ ಅಶೋಕ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ
ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಕೊಂಡೆನು.
4) ಕೊಪ್ಪಳ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ. 296/2015 ಕಲಂ: 324, 326, 504, 506 ಸಹಿತ 34 ಐ.ಪಿ.ಸಿ:.
ದಿ:22-12-2015
ರಂದು ರಾತ್ರಿ 09-15 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಹಲ್ಲೆಗೊಳಗಾದವರು
ದಾಖಲಾದ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ
ಫಿರ್ಯಾದಿದಾರರಾದ ವೆಂಕಟೇಶ ತಂದೆ ಗವಿಸಿದ್ದಪ್ಪ ಗ್ಯಾನಪ್ಪನವರ. ಸಾ:ಬಹದ್ದೂರಬಂಡಿ
ತಾ:ಜಿ:ಕೊಪ್ಪಳ ಇವರು ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶವೇನೆಂದರೇ, ದಿ:22-12-15
ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಬಹದ್ದೂರಬಂಡಿ ಗ್ರಾಮದ ತಮ್ಮ
ಮನೆಯಲ್ಲಿರುವಾಗ ಆರೋಪಿತರು ಗುಂಪಾಗಿ ಬಂದು ಫಿರ್ಯಾದಿಯೊಂದಿಗೆ ಶೋಭಾ ಳ ಬಂಗಾರದ ವಿಷಯವಾಗಿ ಹಾಗೂ
ಆರೋಪಿತರ ಮನೆಯಲ್ಲಿ ಬಾಢಿಗೆ ಇರುವ ಫಿರ್ಯಾದಿಯ ಮನೆ ಖಾಲಿ ಮಾಡುವ ವಿಷಯವಾಗಿ ಜಗಳ ತೆಗೆದು
ಅವಾಚ್ಯ ಶಬ್ದಗಳಿಂದ ಬೈಯ್ದು, ಇಳಿಗೆಯಿಂದ ಹಣೆಗೆ ಹೊಡೆದು ಭಾರಿ
ರಕ್ತಗಾಯಗೊಳಿಸಿದ್ದು, ಅಲ್ಲದೇ ಜೀವದ ಭಯ ಹಾಕಿರುವ 1] ಮಾರುತಿ
ತಂದೆ ಬಸಪ್ಪ ತಿರಣಗೇರ, 2] ರವಿ ತಂದೆ ಬಸಪ್ಪ ತಿರಣಗೇರ, 3]
ಬಸಪ್ಪ ತಂದೆ ಸಿಂದೋಗೆಪ್ಪ ತಿರಣಗೇರ. 4] ಶ್ರೀಮತಿ ಹನುಮವ್ವ ಗಂಡ ಬಸಪ್ಪ ತಿರಣಗೇರ, ಎಲ್ಲರೂ
ಸಾ: ಬಹದ್ದೂರಬಂಡಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
5) ಯಲಬುರ್ಗಾ
ಪೊಲೀಸ್ ಠಾಣೆ ಗುನ್ನೆ ನಂ. 138/2015 ಕಲಂ 143, 147, 148, 324, 354, 504, 506
ಸಹಿತ 149 ಐ.ಪಿ.ಸಿ:
ದಿನಾಂಕ: 22-12-215 ರಂದು ಮುಂಜಾನೆ 8 ಗಂಟೆ ಸುಮಾರಿಗೆ
ಪಿರ್ಯಾದಿ ಮತ್ತು ಆತನ ಹೆಂಡತಿ ಗಾಯಾಳು ಶ್ರೀಮತಿ ರೋಣವ್ವ ಮತ್ತು ಆತನ ಮಕ್ಕಳಾದ ಮೈಲಾರಪ್ಪ
ಕಟ್ಟಿಮನಿ, ಮಲ್ಲಪ್ಪ ಕಟ್ಟಿಮನಿ, ಇವರೆಲ್ಲರೂ ತಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತುಕೊಂಡಿದ್ದಾಗ
ಪಿರ್ಯಾದಿದಾರನ ಸೊಸೆಯಾದ ಶ್ರೀಮತಿ ಸಾವಿತ್ರವ್ವ ಕಟ್ಟಿಮನಿ ಈಕೆಯು ತಮ್ಮ ಮನೆಯ ಮುಂದೆ ಸಾರ್ವಜನಿಕ
ರಸ್ತೆ ಮೇಲೆ ಬಟ್ಟೆ ತೋಳೆಯುತ್ತಿರುವಾಗ ಆಕೆಯ ಮಗನಾದ ದಿಲೀಪ್ ವಯ: 1 ವರೆ ವರ್ಷ ಇತನು ಹೊಲಸು ನೀರಿನಲ್ಲಿ
ಮತ್ತು ರಜ್ಜಿನಲ್ಲಿ ಆಡುತ್ತಾ ಬಂದಿದ್ದು ಆಗ ಆಕೆಯು ತನ್ನ ಮಗುವಿಗೆ ಈ ರಾಡ್ಯಾ ಹೊಲಸು ನೀರಿನಲ್ಲಿ
ಬಂತು ಅಂತಾ ಬೈದಿದ್ದು, ಆಗ ಅಲ್ಲಿಯೇ ರಸ್ತೆ ಮೇಲೆ ಹೋಗುತ್ತಿದ್ದ ಇವರ ಜಾತಿಯವನಾದ ಆರೋಪಿ 01 ಇತನು
ಪಿರ್ಯಾದಿದಾರಳ ಸೊಸೆಯು ನನಗೆ ಬೈದಿದ್ದಾಳೆ ಅಂತಾ ತಿಳಿದು ಪಿರ್ಯಾದಿದಾರಳ ಸೊಸೆಗೆ ಅವಾಚ್ಯ ಶಬ್ದಗಳಿಂದ
ಬೈದು ಬಾಯಿಮಾತಿನ ಜಗಳ ಮಾಡುತ್ತಿದ್ದಾಗ ಪಿರ್ಯಾದಿದಾರರು ಆರೋಪಿ ನಂ 01 ಈತನಿಗೆ ಯಾಕೆ ಜಗಳ ಮಾಡುತ್ತಿಯಾ
ಅಂತಾ ಅನ್ನುತ್ತಿದ್ದಾಗ ಆರೋಪಿ ನಂ 01 ನೇದ್ದವನ ಸಂಬಂದಿಕರಾದ ಆರೋಪಿ ನಂ 02 ರಿಂದ 07 ನೇದ್ದವರು
ಅಕ್ರಮಕೂಟ ರಚಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಅವಾಚ್ಚ ಶಭ್ದಗಳಿಂದ ಬೈದು ಆರೋಪಿ ನಂ 01 ಇತನು
ಅಲ್ಲಿಯೇ ಬಿದ್ದಿದ್ದ ಕಟ್ಟಿಗೆ ಬಡಿಗೆ ತೆಗೆದುಕೊಂಡು ಪಿರ್ಯಾದಿದಾರನ ಮುಂದೆಲೆ ಮೇಲೆ ಹೊಡೆದು ರಕ್ತಗಾಯ
ಮಾಡಿದ್ದು, ಆರೋಪಿ ನಂ 02 ಇತನು ಕಟ್ಟಿಗೆ ಬಡಿಗೆಯಿಂದ ಪಿರ್ಯಾದಿದಾರನ ಬೆನ್ನಿಗೆ ಹೊಡೆದು
ದು:ಖಾಪತ್ ಗೊಳಿಸಿದ್ದು, ಆರೋಪಿ ನಂ 03 ಈತನು ಪಿರ್ಯಾದಿಯ ಹೆಂಡತಿಗೆ ಈ ಸೂಳೆದೆ ಸೊಕ್ಕು ಜಾಸ್ತಿಯಾಗಿದೆ
ಅಂತಾ ಆವಾಚ್ಚ ಶಬ್ದಗಳಿಂದ ಬೈಯ್ದು ಕಟ್ಟಿಗೆ ಬಡಿಗೆಯಿಂದ ಅವಳ ಹಣೆಗೆ ಹೊಡೆದು ರಕ್ತಗಾಯ ಮಾಡಿ ಅವಳ
ಸೀರೆ ಹಿಡಿದು ಜಗ್ಗಾಡಿದ್ದು ಇರುತ್ತದೆ. ಪಿರ್ಯಾದಿದಾರನ ಮಗನಾದ ಮೈಲಾರಪ್ಪನಿಗೆ ಆರೋಪಿ ನಂ 04 ಈತನು
ಕಟ್ಟಿಗೆ ಬಡಿಗೆಯಿಂದ ಮುಂದಲೇ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು, ಆರೋಪಿ ನಂ 05 ಈತನು ಕೂಡಾ ಸದರಿ
ಮೈಲಾರಪ್ಪನಿಗೆ ಕಟ್ಟಿಗೆ ಬಡಿಗೆಯಿಂದ ಬೆನ್ನಿಗೆ ಹೊಡೆದು ದು:ಖಾಪತ್ ಗೊಳಿಸಿದ್ದು ಇರುತ್ತದೆ. ಪಿರ್ಯಾದಿದಾರನ
ಇನ್ನೊಬ್ಬ ಮಗನಾದ ಮಲ್ಲಪ್ಪನಿಗೆ ಆರೋಪಿ ನಂ 06 ಈತನು ಕಟ್ಟಿಗೆ ಬಡಿಗೆಯಿಂದ ಬಲಗಾಲ ಮೋಣಕಾಲ ಚಿಪ್ಪಿನ
ಹತ್ತಿರ ಹೊಡೆದು ರಕ್ತಗಾಯ ಮಾಡಿದ್ದು, ಸದರಿ ಮಲ್ಲಪ್ಪನಿಗೆ ಆರೋಪಿ ನಂ 07 ಈತನು ಕಟ್ಟಿಗೆ ಬಡಿಗೆಯಿಂದ
ಅವನ ಎಡಗೈ ಮೋಣಕೈ ಚಿಪ್ಪಿನ ಹತ್ತಿರ ಚಿಪ್ಪಿನ ಕತ್ತಿರ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ.
ನಂತರ
ಆರೋಪಿತರೆಲ್ಲರೂ ಜೀವಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ
ಸಾರಾಂಶದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡೆನು.
6) ಯಲಬುರ್ಗಾ
ಪೊಲೀಸ್ ಠಾಣೆ ಗುನ್ನೆ ನಂ. 139/2015 ಕಲಂ 143, 147, 447, 341, 323, 324, 504,
506 ಸಹಿತ 149 ಐ.ಪಿ.ಸಿ:
ದಿನಾಂಕ: 22-12-215 ರಂದು
ಮುಂಜಾನೆ 8-30 ಗಂಟೆ ಸುಮಾರಿಗೆ ಪಿರ್ಯಾದಿಯು ತಮ್ಮ ಗ್ರಾಮದ ಸಿದ್ದಪ್ಪ ತಂದೆ ಗದಿಗೆಪ್ಪ ದೊಡ್ಡಮನಿಯೊಂದಿಗೆ
ಆರೋಪಿತ ನಂ 01 ಈತನ ಮನೆಯ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ನಂ 01 ಈತನು ಪಿರ್ಯಾದಿಗೆ
ಲೇ ಬೋಸೂಡಿ ಸೂಳೆ ಮಗನೇ, ನೀನು ನನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಯಾಕೆ ಬೈದಾಡಿರುತ್ತೀ, ಅಂತಾ
ಪಿರ್ಯಾದಿಯನ್ನು ಮುಂದೆ ಹೊಗದಂತೆ ತಡೆದು ನಿಲ್ಲಿಸಿದ್ದು ಆ ಕಾಲಕ್ಕೆ ಉಳಿದ ಆರೋಪಿತರು ಅಕ್ರಮ ಕೂಟ
ರಚಿಸಿಕೊಡು ಬಂದು ಪಿರ್ಯಾದಿಗೆ ಈ ಸೂಳೆ ಮಗಂದು ಸೊಕ್ಕು ಜಾಸ್ತಿಯಾಗಿದೆ. ಅಂತಾ ಬೈದಿದ್ದು
ಆಗ ಆರೋಪಿ ನಂ 01 ಈತನು ಕಟ್ಟಿಗೆ ಬಡಿಗೆಯಿಂದ ಪಿರ್ಯಾದಿಯ ಬಲಗೈ ಉಂಗುರ ಬೆರಳಿಗೆ ಹೊಡೆದು ರಕ್ತ ಗಾಯ
ಮಾಡಿದ್ದು, ಆರೋಪಿ ನಂ 02 ಈತನು ಹಿಡಿಗಾತ್ರದ ಕಲ್ಲಿನಿಂದ ಪಿರ್ಯಾದಿಯ ಬಲಗೈ ಮೊಣಕೈ ಚಿಪ್ಪಿಗೆ ಹೊಡೆದು
ರಕ್ತ ಗಾಯ ಮಾಡಿದ್ದು, ಆರೋಪಿ ನಂ 03 ಈತನು ಪಿರ್ಯಾದಿಗೆ ಕೈಮುಷ್ಟಿ ಮಾಡಿ ಬೆನ್ನಿಗೆ ಗುದ್ದಿದ್ದು,
ಆರೋಪಿ ನಂ 04 ಈತನು ತನ್ನ ಬಲಗಾಲಿನಿಂದ ಪಿರ್ಯಾದಿಯ ಎಡ ಚಪ್ಪಿಗೆ ಒದ್ದಿದ್ದು , ಆರೋಪಿ ನಂ 05 ಈತನು
ಕೈಯಿಂದ ಪಿರ್ಯಾದಿಯ ಎಡಕಪಾಳಕ್ಕೆ ಹೊಡೆದಿದ್ದು, ಆರೋಪಿ ನಂ 06 ಹಾಗೂ 07 ಇವರು ಕೈಯಿಂದ ಪಿರ್ಯಾದಿಗೆ
ಹೊಡೆ ಬಡಿ ಮಾಡಿ ದುಖಾಃಪಾತಗೊಳಿಸಿ ನಂತರ ಆರೋಪಿತರೆಲ್ಲರೂ
ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ
ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment